ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರೀತಿ' ವ್ಯಕ್ತಿಯ ಜೀವನದಲ್ಲಿ ಜೀವ ತುಂಬುವ ಸಂಜೀವಿನಿ

Google Oneindia Kannada News

ಜೀವನವು ಪ್ರೀತಿಯಿಂದ ಆರಂಭವಾಗುವುದು. ಪ್ರೀತಿ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಒಂದು ಸಂಜೀವಿನಿ ಇದ್ದಂತೆ. ಬಹುತೇಕ ಮಂದಿ ಪ್ರೀತಿ ಎಂದರೆ ಪರಸ್ಪರ ಒಂದು ಜೋಡಿಗಳ ನಡುವೆ ಇರುವ ಸೆಳೆತ, ಪ್ರೇಮ ಎಂದು ತಪ್ಪುಕಲ್ಪನೆಯನ್ನು ಹೊಂದಿದ್ದಾರೆ.

ಪ್ರೀತಿ ಎನ್ನುವುದು ಎಲ್ಲಕ್ಕಿಂತ ಮಿಗಿಲಾದದ್ದು. ಪ್ರೀತಿಯನ್ನು ಪ್ರಕೃತಿ, ಉನ್ನತ ಶಕ್ತಿ, ಮರಗಳು, ಪಕ್ಷಿ, ಪ್ರಾಣಿ, ಮಕ್ಕಳು, ಹೆತ್ತವರು, ಸ್ನೇಹಿತರು ಸೇರಿದಂತೆ ಎಲ್ಲಾ ಜೀವ ಸಮೂಹಗಳ ನಡುವೆ ಇರುವ ಬಾಂಧವ್ಯವೇ ಪ್ರೀತಿ. ಪ್ರೀತಿಯ ಭಾವನೆಯ ಆಚರಣೆಯು ಹೆಚ್ಚು ಉತ್ಸಾಹ ಹಾಗೂ ಖುಷಿಯನ್ನು ನೀಡುತ್ತದೆ.

ಪ್ರೇಮಿಗಳ ದಿನಾಚರಣೆಯನ್ನು ಹೆಚ್ಚಿನ ಜನರು ದಂಪತಿಗಳ ನಡುವಿನ ಪ್ರೀತಿ ಅಥವಾ ಜೋಡಿಯ ನಡುವಿನ ಪ್ರೀತಿ ಎಂದು ಭಾವಿಸುತ್ತಾರೆ. ಆದರೆ ನೆನಪಿಡಿ, ಈ ದಿನ ಇಬ್ಬರ ನಡುವಿನ ಪ್ರೇಮದ ಆಕರ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ವಿಶಾಲವಾದ ವ್ಯಾಪ್ತಿ ಹೊಂದಿದೆ. ಅದನ್ನು ಒಂದು ವ್ಯಾಪ್ತಿಯೊಳಗೆ ವಿವರಿಸುವುದು ಕೂಡ ಸುಲಭವಲ್ಲ.

This Valentine’s Day, While We Dine And Wine, Let’s Do Something That Matters

ಹಿಂದಿನ ಪ್ರೇಮಿಗಳ ದಿನದ ಸಂದರ್ಭದಲ್ಲಿ ಸೀಮಾ ತನ್ನ ಗೆಳೆಯನೊಂದಿಗೆ ಅತ್ಯಂತ ಸುಂದರವಾದ ಸಮಯವನ್ನು ಕಳೆದಿದ್ದಳು. ಆಕೆ ಪಡೆದ ಕೆಲವು ಉಡುಗೊರೆಗಳು ಆಕೆಯನ್ನು ಸಂತಸದ ಕಡಲಲ್ಲಿ ತೇಲಿಸಿದ್ದವು. ವಜ್ರದ ಉಡುಗೊರೆ ನೀಡುವುದರ ಮೂಲಕ ಆತ ಅಚ್ಚರಿಯ ನಿಶ್ಚಿತಾರ್ಥವನ್ನು ಘೋಷಿಸಿದ್ದ. ನಿರೀಕ್ಷೆಯೂ ಇಲ್ಲದ ರೀತಿಯಲ್ಲಿ ಹಲವಾರು ಸಂಗತಿಗಳು ಆಕಸ್ಮಿಕವಾಗಿ ಜರುಗಿದ್ದವು.

ಖುಷಿ-ಖುಷಿಯಾಗಿ ಇಬ್ಬರೂ ಸಂಜೆಯ ವೇಳೆ ಹಾಗೇ ವಿಹರಿಸುತ್ತಿದ್ದರು. ಹೀಗೆ ಸಾಗುವಾಗ ರಸ್ತೆ ಬದಿಯಲ್ಲಿ ನಡೆದ ಕೆಲವು ದೃಶ್ಯಗಳು ಸೀಮಾಳ ಮನಸ್ಸಿನಲ್ಲಿ ಗಾಢವಾಗಿ ಉಳಿದುಕೊಂಡಿತ್ತು. ಒಂದು ಮೂಲೆಯಲ್ಲಿ ಮಗುವೊಂದು ಧೂಳಿನ ಬುಟ್ಟಿಯೊಂದರಲ್ಲಿ ಆಹಾರವನ್ನು ಹುಡುಕಿಕೊಂಡು ತಿನ್ನುತ್ತಿತ್ತು. ತಾನನುಭವಿಸುತ್ತಿದ್ದ ಎಲ್ಲ ಸಂತೋಷ ಹಾಗೂ ಪ್ರೀತಿಯು, ಒಂದು ತುತ್ತು ಊಟ ಸಿಗದ ಬಡತನ ಹಾಗೂ ಅಸಹಾಯಕತೆಯ ಮುಂದೆ ಸಣ್ಣದು ಎಂದು ಭಾವಿಸಿದಳು.

ಆ ಸನ್ನಿವೇಶವು ಅವಳ ಮನದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆ ದೃಶ್ಯ ನೋಡುತ್ತಿದ್ದಂತೆ ಆಕೆಯ ಕಣ್ಣುಗಳಲ್ಲಿ ನೀರು ಜಿನಗಲು ಆರಂಭಿಸಿತು. ಅಂಥ ಕಷ್ಟಗಳು ಯಾವ ವ್ಯಕ್ತಿಗೂ ಬರಬಾರದು ಎಂದು ಮನಸ್ಸಿನಲ್ಲಿ ಅಂದುಕೊಂಡಳು. ತನ್ನನ್ನು ಅತಿಯಾಗಿ ಪ್ರೀತಿಸುವ ಗೆಳೆಯನ ಪ್ರೀತಿಯು ಯೋಗ್ಯವಾಗಿದೆಯೇ? ಯಾರಾದರೂ ಈ ರೀತಿಯ ಪ್ರೀತಿಯನ್ನು ತೋರುತ್ತಾರೆಯೇ? ಎನ್ನುವಂಥ ಸಾವಿರಾರು ಪ್ರಶ್ನೆಗಳು ಅವಳ ಮನಸ್ಸನ್ನು ಕಾಡಲು ಆರಂಭಿಸಿದವು.

ಸಮಾಜದ ಕಡೆಗೆ ಪ್ರೀತಿಯ ದೊಡ್ಡ ಜವಾಬ್ದಾರಿ ಇಲ್ಲವೇ? ಆ ಮಗು ಧೂಳಿನ ಬುಟ್ಟಿಯಲ್ಲಿ ಆಹಾರವನ್ನು ಹುಡುಕುತ್ತಿಲ್ಲವೇ? ನಾವು ಅಂತಹವರ ಮೇಲೆ ಸ್ವಲ್ಪ ಪ್ರೀತಿಯನ್ನು ತೋರಬೇಕು. ಅವರಿಗೆ ಆಹಾರವನ್ನು ನೀಡುವ ಅಗತ್ಯವಿದೆ. ಅಂತಹ ಮಕ್ಕಳು ಸಹ ಹೊಟ್ಟೆ ತುಂಬಾ ಊಟ ಹಾಗೂ ಹಿಡಿ ಪ್ರೀತಿಯನ್ನು ಬಯಸುವುದಿಲ್ಲವೇ? ಎನ್ನುವಂತಹ ಭಾವನೆಗಳು ಅವಳನ್ನು ಕಾಡಲು ಪ್ರಾರಂಭಿಸಿದವು.

ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಸಮಯದಲ್ಲಿ ಆಕೆಗೆ ಸೂಕ್ತ ಉತ್ತರವು ದೊರೆತಿರಲಿಲ್ಲ. ಆದರೆ ನಂತರ ಆ ಮಗುವಿಗೆ ಹತ್ತಿರದ ಹೋಟೆಲ್ ಒಂದರಿಂದ ಊಟವನ್ನು ಕೊಡಿಸಲು ನಿರ್ಧರಿಸಿದರು. ನಂತರ ಹತ್ತಿರದ ರೆಸ್ಟೋರೆಂಟ್ ಒಂದರಲ್ಲಿ ಊಟವನ್ನು ಕೊಡಿಸುವಾಗ ಆ ಮಗುವಿನ ಪೋಷಕರ ಬಗ್ಗೆ ತಿಳಿದುಕೊಂಡರು. ಸಮೀಪದ ಕೊಳೆಗೇರಿಯಲ್ಲಿ ಅವರು ವಾಸಿಸುತ್ತಾರೆ. ಮೂರು ಸಹೋದರಿಯರು ಹಾಗೂ 2 ಸಹೋದರರು ಇದ್ದಾರೆ ಎನ್ನುವುದನ್ನು ಸಹ ಅರಿತಳು. ರಾಜು ಎನ್ನುವ ಆ ಮಗುವಿಗೆ ಹಾಗೂ ಅವನ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಸೀಮಾ ನಿರ್ಧರಿಸಿದಳು. ನಂತರ ಅಲ್ಲಿಯೇ ಸಮೀಪ ಇರುವ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟವನ್ನು ಅನ್ನಾಮೃತ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ ಎನ್ನುವುದನ್ನು ತಿಳಿದಳು. ನಂತರ ಆ ಮಕ್ಕಳನ್ನು ಅಲ್ಲಿಗೆ ಸೇರಿಸಿದಳು.

ರಾಜುವಿನಂತಹ ಅನೇಕ ಮಕ್ಕಳು ಬಡತನದ ಸರಪಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಕುಟುಂಬದವರು ದೈನಂದಿನ ಅಗತ್ಯತೆಯನ್ನು ಪೂರೈಸಿಕೊಳ್ಳಲು ದಿನಕೂಲಿಯ ಕೆಲಸ ಮಾಡಬೇಕು. ಶಾಲೆಯಲ್ಲಿ ಊಟ ಸಿಗುತ್ತದೆ ಎಂದಾದರೆ ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಾರೆ. ಬಾಲ ಕಾರ್ಮಿಕ ಯೋಜನೆಯ ಅಡಿಯಲ್ಲಿ ಶಾಲೆಯಲ್ಲಿ ಸೇರಿಸಲಾಗುತ್ತದೆ. ಅನ್ನಾಮೃತ ಯೋಜನೆಯಡಿಯಲ್ಲಿ ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ಒಂದು ಹೊತ್ತಿನ ಪೋಷಕಾಂಶಯುಕ್ತ ಊಟವಾದರೂ ದೊರೆಯುತ್ತದೆ.

ಈ ಬಾರಿಯ ಪ್ರೇಮಿಗಳ ದಿನವನ್ನು ನಮ್ಮಿಂದ ಪ್ರೀತಿಯನ್ನು ಹಂಬಲಿಸುವ ಮಕ್ಕಳೊಂದಿಗೆ ಆಚರಿಸುತ್ತಿದ್ದೇವೆ. ಪ್ರೀತಿಯ ಶುದ್ಧ ರೂಪವನ್ನು ಮಾತ್ರ ಅರ್ಥ ಮಾಡಿಕೊಳ್ಳುವ ಈ ಸುಂದರ ಆತ್ಮಗಳು ಶುದ್ಧ ಭಾವನೆಗಳೊಂದಿಗೆ ಆನಂದವನ್ನು ಅನುಭವಿಸುವರು. ಅವರ ಆ ಮುಗ್ಧ ಭಾವನೆಗಳಿಗೆ ಪ್ರೇಮಿಗಳ ದಿನದ ಅಂಗವಾಗಿ ಒಂದು ಪ್ರತಿಜ್ಞೆಯನ್ನು ಮಾಡೋಣ. ನಮ್ಮ ಪ್ರೀತಿಗಾಗಿ ಹಂಬಲಿಸುವ ದುರ್ಬಲ ಮಕ್ಕಳಿಗಾಗಿ ಒಂದಿಷ್ಟು ಪ್ರೀತಿಯನ್ನು ನೀಡೋಣ.

ಪ್ರತಿದಿನ ಅಂತಹ ಮಕ್ಕಳನ್ನು ನಾವು ದೈನಂದಿನ ಜೀವನದಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಅದು ವಾಸ್ತವಿಕವಾಗಿ ಒಂದಿಷ್ಟು ನೋವುಂಟಾಗುವುದು ಸುಳ್ಳಲ್ಲ. ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಏನನ್ನಾದರೂ ಒಂದಿಷ್ಟು ದಾನವನ್ನು ಮಾಡೋಣ. ನಿಮ್ಮ ಕೈಲಾದ ಒಂದಿಷ್ಟು ಸಹಾಯವು ಸಾಕಷ್ಟು ಮಕ್ಕಳಿಗೆ ಹಸಿವನ್ನು ನೀಗಿಸುವುದು.

ಅನ್ನಾಮೃತ ಎನ್ನುವುದು ಒಂದು ಅತ್ಯುತ್ತಮವಾದ ಸಂಘಟನೆಯಾಗಿದೆ. "ಶಿಕ್ಷಣಕ್ಕಾಗಿ ಅನಿಯಮಿತ ಆಹಾರ" ಒದಗಿಸಲು ಶ್ರಮಿಸುತ್ತಿದೆ. ಹೆಚ್ಚು ಹೆಚ್ಚು ಮಕ್ಕಳನ್ನು ಶಾಲೆಗೆ ತೆರಳುವಂತೆ ಪ್ರೋತ್ಸಾಹ ಹಾಗೂ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಭಾರತದಾದ್ಯಂತ ಹಸಿವು ಮತ್ತು ಅನಕ್ಷರತೆಗಳನ್ನು ನಿರ್ಮೂಲನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವು ಹುಟ್ಟಿಕೊಂಡಿದೆ. ಆರೋಗ್ಯಕರ, ಪೌಷ್ಟಿಕಾಂಶ ಮತ್ತು ಶುದ್ಧ ಆಹಾರವನ್ನು ಒದಗಿಸುವ ಉದ್ದೇಶವನ್ನು ಸಂಘ ಹೊಂದಿದೆ.

ಆರೋಗ್ಯಕರವಾದ ಊಟವನ್ನು ಪಡೆದುಕೊಳ್ಳುವ ಉದ್ದೇಶಕ್ಕಾಗಿ ಮಗುವು ಶಾಲೆಗೆ ಹಾಜರಾಗುತ್ತದೆ. ಅಲ್ಲದೆ ಶಿಕ್ಷಣವನ್ನು ಪಡೆದುಕೊಳ್ಳುತ್ತದೆ. ದೇಶದ ಭವಿಷ್ಯಕ್ಕೆ ಒಂದು ಕಾರ್ಯಸಾಧ್ಯವಾದ ಆಸ್ತಿ, ಹೆಚ್ಚುತ್ತಿರುವ ಶಾಲಾ ದಾಖಲಾತಿ, ಹಾಜರಾತಿಯನ್ನು ಉತ್ತೇಜಿಸುವುದು ಮತ್ತು ವರ್ಗದ ಕಾರ್ಯಕ್ಷಮತೆ ಉದ್ದೇಶವನ್ನು ಪಡೆದುಕೊಂಡಿದೆ. ನೀವು ದಾನ ಮಾಡಿದ ಪ್ರತಿ ಹಣವು ರಾಜುವಿನಂತಹ ಮಕ್ಕಳ ಆಹಾರ ಹಾಗೂ ಅಗತ್ಯತೆಗಳನ್ನು ಪೂರೈಸಲು ಉಪಯೋಗಿಸಲಾಗುವುದು.

ಪ್ರೇಮಿಗಳ ದಿನವು ಸೀಮಾಳಂತಹವರಿಗೆ ಪ್ರೀತಿಯ ಅಗತ್ಯ ಹಾಗೂ ಅವಶ್ಯಕತೆಯ ಬಗ್ಗೆ ಅರಿವನ್ನು ಮೂಡಿಸಲಿ. ಮುಗ್ಧ ಮಕ್ಕಳ ಮೇಲೆ ಪ್ರೀತಿಯ ಸುರಿಮಳೆ ಸುರಿಯಲಿ. ಜಗತ್ತು ಎಲ್ಲರಿಗೂ ಪ್ರೀತಿಯನ್ನು ನೀಡುತ್ತದೆ ಎನ್ನುವ ಸಂಗತಿಯು ಎಲ್ಲೆಡೆಯೂ ಹರಡಲಿ. ಎಲ್ಲರಿಗೂ ಪ್ರೀತಿ ದೊರೆಯಲಿ ಎಂದು ಆಶಿಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X