• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮ ಗುರು ವ್ಯಾಲೆಂಟೈನ್ ನೆನಪಾಗುವುದೇಕೆ?

By ಬಿ.ಎಂ.ಲವಕುಮಾರ್
|
ಫೆಬ್ರವರಿ 14: ಪ್ರೇಮ ಅಂದ್ರೆ ಸುಮ್ನೆನಾ..? ಎಲ್ಲ ಹೃದಯಕ್ಕೂ ಪ್ರೇಮದ ತಂತಿ ಮೀಟಿದ ಅನುಭವವಾಗಿರುತ್ತದೆ.. ಬಹಳಷ್ಟು ಜನರ ಬದುಕಿನಲ್ಲೂ ಪ್ರೇಮದ ಕಥೆಯೊಂದು ಗಿರಕಿ ಹೊಡೆದಿರುತ್ತದೆ..

ಇಲ್ಲಿ ಪ್ರೀತಿಸಿ ಗೆದ್ದವರು... ಪ್ರೀತಿಸಿ ಸೋತವರು.. ಪ್ರೀತಿಯಲ್ಲೇ ಮಿಂದೇಳುತ್ತಿರುವವರು ಇದ್ದೇ ಇದ್ದಾರೆ. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ... ಬಹುಶಃ ಈ ಪ್ರೇಮಲೋಕದಲ್ಲಿ ಪ್ರೀತಿಗೆ ಸೋಲದ ಹೃದಯಗಳೇ ಇಲ್ಲವೇನೋ..[ಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನ]

ಹಾಗೆ ನೋಡಿದರೆ ಫೆ.14 ಅಂದ್ರೆ ಒಳಗೆ ಸುಪ್ತವಾಗಿದ್ದ ಪ್ರೇಮ ಕಾರಂಜಿಯಾಗಿ ಚಿಮ್ಮುವ ದಿನ. ಹೀಗಾಗಿ ಜಗತ್ತಿನಾದ್ಯಂತ ಪ್ರೇಮಿಗಳಿಗೆ ನೆನಪಾಗುವ ವ್ಯಕ್ತಿ ಎಂದರೆ ಪಾದ್ರಿ ವ್ಯಾಲೆಂಟೈನ್. ಆತ ಪ್ರೇಮಿಗಳ ಗುರು. ಆತನ ನೆನಪಿಸಿಕೊಳ್ಳದೆ ಹೋದರೆ ವ್ಯಾಲೆಂಟೈನ್ ಡೇಗೆ ಅರ್ಥವೇ ಬಾರದೇನೋ...?[ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?]

ಪ್ರೇಮಾಚರಣೆಗೆ ಮೀಸಲು

ಪ್ರೇಮಾಚರಣೆಗೆ ಮೀಸಲು

ಹಾಗೆನೋಡಿದರೆ ಜಗತ್ತಿನಾದ್ಯಂತ ಆಚರಣೆ ಮಾಡೋದಕ್ಕೆ ಎಲ್ಲದಕ್ಕೂ ಒಂದೊಂದು ದಿನವಿದೆ. ಜತೆಗೆ ಕಾರಣಗಳೂ ಇವೆ. ಹಾಗೆಯೋ ಪ್ರೇಮಾಚರಣೆಗೆ ಈ ದಿನ ಮೀಸಲಾಗಿದೆ. ಒಟ್ಟಿಗೆ ಕಲೆತು ಸಂಭ್ರಮಿಸೋಕೆ ನಲ್ಲ-ನಲ್ಲೆಯರ ಕಿವಿಯಲ್ಲಿ ಲವ್‍ಯೂ ಎಂದು ಉಸುರೋಕೆ, ಗುಲಾಬಿ ನೀಡಿ ಪ್ರೇಮ ನಿವೇದನೆಗೆ, ಮಡಿಲ ಮೇಲೆ ತಲೆಯಿಟ್ಟು ಮೈಮರೆಯೋಕೆ, ಕೈಕೈ ಹಿಡಿದು ಖುಷಿಯಾಗಿ ಓಡಾಡೋಕೆ, ಮೈಮೈ ಬೆಸೆಯೋಕೆ ಹೀಗೆ ಒಂದೇ ಎರಡೇ ಬಹಿರಂಗ ಪ್ರೇಮ ಶೃಂಗಾರಕ್ಕೆ ನೂರಾರು ಆಯ್ಕೆಗಳು.. ಇವತ್ತು ಏನೇ ಮಾಡಿದರೂ ಅದು ಖುಷಿ ಕೊಡುತ್ತದೆ. ಅದಕ್ಕೆ ಕಾರಣ ವ್ಯಾಲೆಂಟೈನ್.

ಪ್ರೇಮ ಪೂಜಾರಿ

ಪ್ರೇಮ ಪೂಜಾರಿ

ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಪ್ರೇಮ ಪೂಜಾರಿ ವ್ಯಾಲೆಂಟೈನ್ ಸಿಗುತ್ತಾನೆ. ಆತ ತನ್ನ ಹೆಸರನ್ನು ಜಗತ್ತಿಗೆ ಅದರಲ್ಲೂ ಪ್ರೇಮಿಗಳಿಗೆ ಧಾರೆ ಎರೆದು ಹೋದ ಘಟನೆಯೊಂದು ಹೃದಯ ಹಿಂಡುತ್ತದೆ.

ಮದುವೆಯಾಗುವುದೇ ಅಪರಾಧ

ಮದುವೆಯಾಗುವುದೇ ಅಪರಾಧ

ಅದು ಕ್ರಿ.ಶ. 269ನೇ ಇಸವಿಯ ದಿನಗಳು... ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾ ಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾ ಅಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‍ನ ಹುಚ್ಚುವಾದವಾಗಿತ್ತು.

ಮದುವೆಗೆ ಗಲ್ಲು ಶಿಕ್ಷೆ

ಮದುವೆಗೆ ಗಲ್ಲು ಶಿಕ್ಷೆ

ಹಾಗಾಗಿ ಆತ ಮದುವೆ ಎಂದರೆ ಕೆಂಡಾ ಮಂಡಲವಾಗುತ್ತಿದ್ದನು. ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು. ಹೀಗಿರುವಾಗ ಪ್ರೀತಿ, ಪ್ರೇಮಕ್ಕೆ ಅವಕಾಶವೇ ಇಲ್ಲ ಬಿಡಿ.

ನೊಂದ ಪಾದ್ರಿ

ನೊಂದ ಪಾದ್ರಿ

ದೊರೆ ಕ್ಲಾಡಿಯಸ್‍ನ ಈ ಹುಚ್ಚಾಟ ನೋಡಿದ ಪಾದ್ರಿಯೊಬ್ಬರ ಮನಸ್ಸು ನೊಂದಿತ್ತು. ದೊರೆಯ ಈ ವಿಚಿತ್ರ ನೀತಿ ಆ ಪಾದ್ರಿಗೆ ಹಿಡಿಸಲಿಲ್ಲ. ಪ್ರೀತಿ, ಪ್ರೇಮಕ್ಕೆ ಅಡ್ಡಿ ಪಡಿಸಿ, ಮದುವೆಯನ್ನೇ ತಡೆದರೆ ಸಂತತಿ ಬೆಳೆಯುವುದಾದರೂ ಹೇಗೆ? ಹೆಣ್ಣು-ಗಂಡು ಕಲೆತು ಬಾಳುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಆ ಪಾದ್ರಿಯನ್ನು ಕೊರೆಯಲಾರಂಭಿಸಿದವು.

ಪ್ರೀತಿಗಾಗಿ ಹೋರಾಟ

ಪ್ರೀತಿಗಾಗಿ ಹೋರಾಟ

ಹೃದಯದ ತುಡಿತವನ್ನು ಅದುಮಿಡಲಾಗದೆ ಹೊರ ಹಾಕಿ ಸಿಕ್ಕಿ ಬೀಳುತ್ತಿದ್ದ ಪ್ರೇಮಿಗಳಿಗೆ ದೊರೆ ಕ್ಲಾಡಿಯಸ್ ಕಣ್ಣ ಮುಂದೆ ನೀಡುತ್ತಿದ್ದ ಕ್ರೂರ ಶಿಕ್ಷೆಗಳು ಪಾದ್ರಿಯನ್ನು ಕೆರಳಿಸಿತ್ತು. ಇನ್ನು ಮುಂದೆ ನಾನು ಕೈಕಟ್ಟಿ ಕೂರಬಾರದು. ದೊರೆಯ ಈ ಕೆಟ್ಟ ಸಂಪ್ರದಾಯಕ್ಕೆ ವಿರಾಮ ಹಾಡಲೇ ಬೇಕೆಂಬ ತೀರ್ಮಾನಕ್ಕೆ ಪಾದ್ರಿ ಬಂದರು.

ಗುಪ್ತ ಮದುವೆ

ಗುಪ್ತ ಮದುವೆ

ದೊರೆ ಕ್ಲಾಡಿಯಸ್ ರಾಜ್ಯದಲ್ಲಿ ಪ್ರೀತಿ, ಪ್ರೇಮ ಮಾಡಬಾರದು, ಮದುವೆಯಾಗಬಾರದು ಎಂಬ ರಾಜಾಜ್ಞೆಯನ್ನು ಖಂಡಿಸಿದ ಪಾದ್ರಿ ಅದರ ವಿರುದ್ಧವೇ ತಿರುಗಿ ಬಿದ್ದರು. ನನ್ನ ತಲೆ ತೆಗೆದರೂ ತೊಂದರೆಯಿಲ್ಲ. ಈ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲೇ ಬೇಕೆಂಬ ಹಠಕ್ಕೆ ಬಿದ್ದರು. ದೊರೆ ಕ್ಲಾಡಿಯಸ್‍ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದರು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ದೊರೆ ಕ್ಲಾಡಿಯಸ್‍ನ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ಪಾದ್ರಿಯ ಮೇಲೆ ಕೆಂಡಾ ಮಂಡಲನಾದನಲ್ಲದೆ, ಪಾದ್ರಿಗೆ ಮರಣದಂಡನೆಯನ್ನು ವಿಧಿಸಿದ ಕ್ಲಾಡಿಯಸ್.

ಗಲ್ಲಿಗೇರಿದ ದಿನ

ಗಲ್ಲಿಗೇರಿದ ದಿನ

ಅದರಂತೆ ಫೆಬ್ರವರಿ 14ರಂದು ಆ ಪಾದ್ರಿಯನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಆ ಪಾದ್ರಿಯೇ ವ್ಯಾಲೆಂಟೈನ್. ಪ್ರೇಮಿಗಳನ್ನು ಒಗ್ಗೂಡಿಸಿ ಮದುವೆಯ ಮಧುರ ಬಂಧಕ್ಕೆ ಸೇರಿಸುತ್ತಿದ್ದ ಪಾದ್ರಿ ವ್ಯಾಲೆಂಟೈನ್‍ನ ಸ್ಮರಣೆಗಾಗಿ ಗಲ್ಲಿಗೇರಿಸಿದ ಆ ದಿನವನ್ನು ವ್ಯಾಲೆಂಟೈನ್ ಡೇ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರೇಮಲೋಕ

ಪ್ರೇಮಲೋಕ

ವ್ಯಾಲೆಂಟೈನ್ ಡೇಯನ್ನು ಪಾಶ್ಚಿಮಾತ್ಯರು ಹಬ್ಬದಂತೆ ಆಚರಿಸುತ್ತಾರೆ. ಶುಭಾಷಯದ ವಿನಿಮಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಾರೆ. ಒಂದೆಡೆ ಪ್ರೇಮಿಗಳು ಒಟ್ಟಾಗಿ ಕಲೆತು ಮೋಜು ಮಸ್ತಿಯಲ್ಲಿ ತೊಡಗುವುದರ ಮೂಲಕ ಪ್ರೇಮಲೋಕದಲ್ಲಿ ವಿಹರಿಸುತ್ತಾ ಮೈಮರೆತು ತೇಲಾಡುತ್ತಾರೆ.

ಕೃಷ್ಣ ರುಕ್ಮಿಣಿಯಂತಿರಲಿ

ಕೃಷ್ಣ ರುಕ್ಮಿಣಿಯಂತಿರಲಿ

ಪಾಶ್ಚಿಮಾತ್ಯರಿಗೆ ಹೋಲಿಸಿದರೆ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಪ್ರೀತಿ, ಪ್ರೇಮಕ್ಕೆ ಗೌರವಿದೆ. ಹಾಗಾಗಿ ಅದಕ್ಕೆ ಕಾಮದ ವಾಸನೆ ಬೆರೆಸದೆ, ಮೈಮರೆತು ಪ್ರಮಾದ ಮಾಡಿಕೊಳ್ಳದೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಿ..

ನಿಮ್ಮ ಪ್ರೇಮ ರೋಮಿಯೋ-ಜೂಲಿಯಟ್‍ನಂತೆ ದುರಂತ ಅಂತ್ಯ ಕಾಣದೆ ಕೃಷ್ಣ-ರುಕ್ಮಿಣಿಯಂತೆ ನವೀರಾಗಿರಲಿ...

English summary
Valentine's Day or Saint Valentine's Day is annually celebrated on February 14. It was originated as honoring one for saint named ‘Valentin’, Who fought for love in early AD 290, at Rome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X