ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಗೊರೆಯಲ್ಲಿ ಪ್ರೇಮಿನಾ ಅಳೆಯದಿರು ಪ್ರೀತಿಯೇ

|
Google Oneindia Kannada News

Valentine's Day
ಪ್ರೇಮಿಗಳ ಹೃದಯದ ಪಿಸುಮಾತು, ಹೃದಯದ ಬಡಿತ ಹೆಚ್ಚಿಸುವ ವ್ಯಾಲೆಂಟೈನ್ಸ್ ಡೇ ಹತ್ತಿರದಲ್ಲಿದೆ. ಪ್ರಪ್ರಥಮ ಬಾರಿಗೆ ಐ ಲವ್ಯೂ ಹೇಳಬೇಕೆನ್ನುವರ ಎದೆಯ ಬಡಿತವೂ ನಗರಿಯಂತೆ ಹೊಡೆದುಕೊಳ್ಳುತ್ತಿರಬಹುದು. ಈಗಾಗಲೇ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕವರು ಗಿಫ್ಟ್ ಕುರಿತು ಚಿಂತಿಸಬೇಕಾದ ಸಮಯವಿದು.

ಒಲವಿನ ಲವ್ವಿಗೆ ಯಾವ ಗಿಫ್ಟ್ ಕೊಡುವುದೆಂದು ಕನ್ ಫ್ಯೂಸ್ ನಲ್ಲಿ ಪ್ರೇಮಿಗಳಿರಬಹುದು. ನಿಮ್ಮ ಮುದ್ದಿನ ನಲ್ಲೆಗೆ ವಜ್ರದ ಆಭರಣ ಕೊಟ್ಟರು ಕೂಡ ಕಮ್ಮಿಯೆ ಅಂತ ಅನಿಸುತ್ತದೆ. ಹಾಗಂತ ದುಬಾರಿ ಉಡುಗೊರೆ ಕೊಡಲು ಬಜೆಟ್ ಸಾಕಾಗುತ್ತಿಲ್ಲ ಅನ್ನುವ ಚಿಂತೆ ಬೇಡ. ಉಡುಗೊರೆ ಕುರಿತು ಇಲ್ಲೊಂದಿಷ್ಟು ಸಲಹೆಗಳಿವೆ.

ಬಜೆಟ್ ಗೆ ಹೊಂದುವ ಗಿಫ್ಟ್: ನಿಮ್ಮ ಬಜೆಟ್ ಗೆ ಸರಿಹೊಂದುವ ಪ್ರೀತಿಯ ಉಡುಗೊರೆ ಕೊಡಬಹುದು. ಈ ರೀತಿ ಕೊಡುವಾಗ ಮೊದಲು ಅವಳ ಇಷ್ಟವಾದ ವಸ್ತುಗಳು ಯಾವುದೆಂದು ತಿಳಿದುಕೊಂಡು ಅಂತಹ ವಸ್ತುಗಳನ್ನು ನೀಡಿ. ಆಗ ಅವರಿಗೆ ಇಷ್ಟವಾಗುತ್ತಾದಾ? ಎಂಬ ಸಂಶಯವಿರುವುದಿಲ್ಲ. ದುಡ್ಡಿಲ್ಲದಿದ್ದರೆ ಚಿಂತಿಸಬೇಡಿ. ಹೂಕುಂಡದಲ್ಲಿ ಬೆಳೆದ ಗುಲಾಬಿಯನ್ನೇ ಕೊಟ್ಟು ನೋಡಿ. ಅವಳ ಮುಖ ಅರಳದಿದ್ದರೆ ಹೇಳಿ..

ಪ್ರೀತಿಯ ಕಾಣಿಕೆ: ಪ್ರೀತಿಯಿಂದ ಕೊಟ್ಟ ಯಾವುದೇ ಉಡುಗೊರೆಗೆ ಬೆಲೆಕಟ್ಟಲಾಗದು. ಕೊಟ್ಟ ವಸ್ತುವಿನ ಬೆಲೆಗಿಂತ ಅಲ್ಲಿ ಪ್ರೀತಿಯ ಆಳ ನೋಡಿ.

ಹೋಲಿಸುವುದು ಬೇಡ: ನಿಮ್ಮ ಗೆಳತಿಯ ಹುಡುಗ ಅವಳಿಗೆ ಚಿನ್ನದ ಉಂಗುರ ಕೊಡಿಸಿದ, ನಿಮ್ಮ ಹುಡುಗ ಒಂದು ಡ್ರೆಸ್ ಮಾತ್ರ ಕೊಡಿಸಿದ ಎಂದೇಲ್ಲ ಹೋಲಿಸಿ ಕೊರಗದಿರಿ. ನಿಮ್ಮ ನಲ್ಲ/ನಲ್ಲೆ ಕೊಟ್ಟ ಉಡುಗೊರೆಯನ್ನು ಪ್ರೀತಿಸಿ. ಉಡುಗೊರೆಗಿಂತ ಕೊಡುವರ ಮನಸ್ಸು ಮುಖ್ಯ. ನೆನಪಿರಲಿ.

ಹೆಚ್ಚಿನ ಸಮಯ ಕಳೆಯಿರಿ: ಪ್ರೇಮಿಗಳ ದಿನದಂದು ಸಾಧ್ಯವಾದರೆ ನಿಮ್ಮ ಗೆಳಯ ಅಥವಾ ಗೆಳತಿ ಜೊತೆ ಸಾಕಷ್ಟು ಸಮಯ ಕಳೆಯಿರಿ. ಹೊರಗೆ ತಿನ್ನುವ ಬದಲು ನೀವೇ ಕೈಯಾರೆ ಅಡುಗೆ ಮಾಡಿ ತಿಂದರೆ ಮತ್ತಷ್ಟು ರುಚಿಕರವಾಗಿರುತ್ತದೆ. ಪ್ರೀತಿಯೆಂಬುದು ಅ ದಿನಕ್ಕಷ್ಟೆ ತೋರಿಸುವ ಆಡಂಬರವಾಗದೆ ಜೀವನದ ಸೆಲೆಯಾಗಲಿ.

ವಿ. ಸೂ: ಪ್ರೇಮಿಗಳ ದಿನ ಐ ಲವ್ಯೂ ಅನ್ನಲು ಮರೆಯದಿರಿ.

English summary
Valentine's Day is a day of lover's. Everyone have their own idea to celebrate v'day. v'day is not simply mean that gifting each other apart from this one should know the way to experience a real love. Here there are simple tips to enjoy v'day. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X