ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನಕ್ಕೆ ಭಿನ್ನವಿಭಿನ್ನ ಗಿಫ್ಟ್ ಐಡಿಯಾಸ್

By * ಯಶ್
|
Google Oneindia Kannada News

Valentine's Day gifts ideas
ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಇಂಥ ಆಚರಣೆಗಳ ಮೇಲೆ ನಂಬಿಕೆ ಇರಲಿ, ಬಿಡಲಿ ಪ್ರೇಮದ ಬಾವಿಯಲ್ಲಿ ಬಿದ್ದವರ ಹೊಟ್ಟೆಯಲ್ಲಿ ಬಣ್ಣದ ಚಿಟ್ಟೆಗಳು ಹಾರಾಡಲು ಪ್ರಾರಂಭಿಸುತ್ತವೆ. ಇಲ್ಲವೇ ಇಲ್ಲ ಅಂತ ಎದೆ ತಟ್ಟಿಕೊಂಡು ಹೇಳಿ ನೋಡೋಣ!

'ಪ್ರೀತಿಯಲ್ಲಿ ಬೀಳಬೇಡ್ವೆ ಹಾಳಾಗಿ ಹೋಗ್ತೀಯಾ' ಅಂತ ಹಿತೈಷಿಗಳು ಬೊಂಬಡಾ ಹೊಡೆಯುತ್ತಿದ್ದರೂ ಕೇಳುವ ಹುಡುಗಿಗೆ ಕಿವಿಯೇ ಇರುವುದಿಲ್ಲ. ರಸ್ತೆ ಮೇಲೆ ನಲ್ಲನ ಹೊರತಾಗಿ ಬೇರೇನೂ ಕಾಣುವುದೂ ಇಲ್ಲ. ಅಸಲಿಗೆ, ನೆಲ ಕಾಣದ ಹುಡುಗಿಯ ಕಾಲು ನೆಲದ ಮೇಲೆಯೇ ಇರುವುದಿಲ್ಲ. ಅವನದೇ ಧ್ಯಾನ, ಅವನದೇ ನೆನಪು... ಹುಚ್ಚು ಹುಡುಗ ಸರಿಯಾಗಿ ನಿದ್ದೆ ಮಾಡಲೂ ಬಿಡುವುದಿಲ್ಲ.

ವ್ಯಾಲಂಟೈನ್ಸ್ ದಿನ ಯಾವ ದಿರಿಸು ಹಾಕಿಕೊಳ್ಳಲಿ. ಹೊಸದೇ ಕೊಂಡರೆ ಚೆನ್ನಾಗಿರುತ್ತದೆ, ಅದರಲ್ಲೂ ಪಿಂಕ್, ವಾಹ್! ನ್ಯಾಸ್ಟಿ ಫೆಲೊ, ಕಳೆದ ಬಾರಿ ರೆಡ್ ರೋಸ್ ಹೊರತಾಗಿ ಒಂದು ಹೂಮುತ್ತನ್ನೂ ಇಡಲಿಲ್ಲ. ಈ ಬಾರಿ ಇಡಬಹುದಾ? ಜೊತೆಗೆ ಯಾವುದಾದರೂ ನೆನಪಿನಲ್ಲುಳಿಯಬಹುದಾದ ಗಿಫ್ಟ್ ಕೊಟ್ಟರೂ ಬೊಂಬಾಟಾಗಿರುತ್ತದೆ, ಎಂಎನ್ಸಿಯಲ್ಲಿ ಕೆಲಸ ಬೇರೆ ಸಿಕ್ಕಿದೆಯಲ್ಲ!

ಮಿಡಿ ತೊಡುವ ಹುಡುಗಿಯರಿಗಾಗಿಲಿ, ಮೀಸೆ ಚಿಗುರಿದ ಹುಡುಗರಿಗಾಗಲಿ ಬರೀ ಇದೇ ಧ್ಯಾನ. ಆತ ಅಥವಾ ಆಕೆ ನನಗೇನು ಉಡುಗೊರೆ ಕೊಡಬಹುದು? ಹುಚ್ಚು ಮನಸ್ಸಿಗೆ, ಈ ಬಾರಿ ನಾನೇನು ಕೊಡಬಹುದು ಎಂಬುದು ಗಮನದಲ್ಲಿಯೇ ಇರುವುದಿಲ್ಲ. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೂ ಮಜಾ ಇದೆ ಎನ್ನುವುದು ಅಂತರಂಗದಲ್ಲಿ ಇಳಿದಿರುವುದೇ ಇಲ್ಲ.

ಯಾವ ಗಿಫ್ಟ್ ಅಂಗಡಿ ಹೋದ್ರೂ ಇದ್ದದ್ದೇ. ಅದೇ, ಗ್ರೀಟಿಂಗ್ ಕಾರ್ಡ್ಸ್, ರೆಡ್ ರೋಸು, ಟೆಡ್ಡಿ ಬೇರು, ಪೆನ್ನು... ದುಡ್ಡಿಲ್ಲದೇ ಹೋದರೆ ಒಂದೇ ಒಂದು ಸಾದಾ ಮುತ್ತು, ಅದು ಅವಳೊಪ್ಪಿದರೆ! ಯಾವನೋ ಒಬ್ಬ ಹುಚ್ಚು ಪ್ರೇಮಿ ತನ್ನ ಪ್ರಿಯತಮೆಗೆ ಪ್ರೇಮಿಗಳ ದಿನದಂದು ಪಿಂಕ್ ಬ್ರಾ ಕೊಡಲು ಹೋಗಿ ಕಪಾಳಕ್ಕೆ ಏಟು ತಿಂದ ಕಥೆ ಎಂದೋ ಓದಿದ ನೆನಪು. ಕಳೆದ ವರ್ಷವಂತೂ ಪ್ರೇಮಿಗಳ ದ್ವೇಷಿ ಪ್ರಮೋದ್ ಮುತಾಲಿಕ್ ರಿಗೆ ಪಿಂಕ್ ಚಡ್ಡಿ ಕೊಟ್ಟು ಮರ್ಯಾದೆ ಕಳೆದುಕೊಂಡಿದ್ದವು ಕೆಲ ನಾರ್ತಿ ಹುಚ್ಚು ಖೋಡಿಗಳು.

ಈ ಬಾರಿಯಾದರೂ ಡಿಫರೆಂಟ್ ಆಗಿ ಯೋಚನೆ ಮಾಡ್ತೀರಾ? ಅವನಿಗೆ ಅಥವಾ ಅವಳಿಗೆ ಏನಾದ್ರೂ ದುಬಾರಿ ಗಿಫ್ಟ್ ಕೊಟ್ಟರೂ ಮದುವೆಯಾದ ಮೇಲೆ ತನಗೇ ಸೇರುತ್ತದೆ ಎಂಬ ಸ್ವಾರ್ಥದಿಂದಲಾದರೂ ಮನಸು ಮಾಡಿ ಪರ್ಸು ಬಿಚ್ಚಿ. ಒಂದು ಮಾತ್ರ ನೆನಪಿನಲ್ಲಿರಲಿ, ಅಗತ್ಯಗಳನ್ನು ಅಥವಾ ಟೇಸ್ಟ್ ಗಳನ್ನು ನೋಡಿಕೊಂಡು ಗಿಫ್ಟ್ ಮಾಡಿದರೆ ಅವನೂ ಖುಷ್ ಅವಳಂತೂ ಇನ್ನೂ ಖುಷ್.

* ನಿನಗೆ ಟೈಂ ಸೆನ್ಸೇ ಇಲ್ಲ, ಹೇಳಿದ ಟೈಮಿಗೆ ಸರಿಯಾಗಿ ಬರುವುದಿಲ್ಲವೇ ಇಲ್ಲ ಎಂದು ನಿಮ್ಮ ಮುದ್ದುಕೋತಿಗೆ ಬೈಯುವ ಬದಲು ಒಂದು ವಾಚ್ ಕೊಡಿಸಿದರೆ ಹೇಗೆ? ಸಮಯ ಎಷ್ಟು ಅಮೂಲ್ಯವಾದುದು ಎಂದು ತಿಳಿಯಪಡಿಸಲು ಇದು ಸಾಕಲ್ಲವೆ?

* ಇದು ಮೊಬೈಲ್ ಜಮಾನಾ. ಯಾರ ಕೈಯಲ್ಲಿ ನೋಡಿದರೂ ಮೊಬೈಲ್. ಬರೀ ಮಾತಾಡುವ, ಎಸ್ಎಮ್ಎಸ್ ಕಳಿಸುವ ಸಾಧನವಾಗಿ ಮೊಬೈಲ್ ಉಳಿದಿಲ್ಲ. ನಿಮ್ಮ ಭಾಷೆಯಲ್ಲಿ, ಅಂದರೆ ಕನ್ನಡದಲ್ಲಿಯೇ ಸುದ್ದಿಗಳನ್ನು ಓದಬಹುದು. ಇಂಟರ್ನೆಟ್ ನಿಮ್ಮ ಮುಷ್ಟಿಯಲ್ಲಿಯೇ. ಮೊಬೈಲಲ್ಲೇ ಎಸ್ಎಮ್ಎಸ್, ಟ್ವಿಟ್ಟರ್, ಫೇಸ್ ಬುಕ್, ನ್ಯೂಸ್ ಹಂಟ್, ಈ-ಮೇಲ್... ಇದೆಲ್ಲ ಸ್ಮಾರ್ಟ್ ಫೋನಲ್ಲಿ ಲಭ್ಯ. ಹೀಗಿರುವಾಗ, ಗೆಣೆಕಾರನೀಗೆ ಸ್ಮಾರ್ಟ್ ಫೋನ್ ಗಿಫ್ಟ್ ಏಕೆ ಮಾಡಬಾರದು? ಯೋಚಿಸಿ.

* ಅಮೆರಿಕದಾದ್ಯಂತ ಹಂಗಾಮಾ ಮಾಡುತ್ತಿರುವ ಐಪ್ಯಾಡ್ ಭಾರತಕ್ಕೂ ಕಾಲಿರಿಸಿದೆ. ಕನ್ನಡ ಸೇರಿದಂತೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಯಲ್ಲಿನ ಇಂಟರ್ನೆಟ್ ಮಾಹಿತಿಯನ್ನು ಸರಾಗವಾಗಿ ಓದಬಹುದಾಗಿದೆ. ನಿಮ್ಮ ಪ್ರಿಯತಮೆಗೆ ಒಂದು ಐಪ್ಯಾಡ್ ಸರ್ಪ್ರೈಸಾಗಿ ಉಡುಗೊರೆಯಾಗಿ ನೀಡಿ ನೋಡಿ, ಪ್ರೀತಿ ತ್ರಿಗುಣವಾಗದಿದ್ದರೆ ಕೇಳಿ.

* ಈ ದುಬಾರಿಯ ಕಾಲದಲ್ಲಿ ದುಬಾರಿ ಗಿಫ್ಟು ಯಾವೋನು ಕೊಡ್ತಾನೆ ಅಂತ ಯೋಚಿಸುತ್ತಿದ್ದರೆ, ಒಂದು ಪೆನ್ ಡ್ರೈವ್, ಒಂದು ಈ-ಬುಕ್ ರೀಡರ್, ಒಂದು ಸಿನೆಮಾ ಸಿಡಿ... ನಿಮಗೆ ತೋಚಿದ್ದನ್ನು ಉಡುಗೊರೆಯಾಗಿ ನೀಡಿ. ಆದರೆ, ಉಡುಗೊರೆ ಮಾತ್ರ ಡಿಫರೆಂಟಾಗಿರಲಿ.

* ಇನ್ನೊಂದು ಸೂರಪ್ ಗಿಫ್ಟ್ ಐಡಿಯಾ ಅಂದ್ರೆ, ಮೈಟುಡೆ ಎಸ್ಎಮ್ಎಸ್ ತಾಣದಲ್ಲಿ ನಿಮ್ಮ ಅಕೌಂಟಲ್ಲಿರುವ ಹಣವನ್ನು ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಿ. ಇದು ಸುಲಭ ಕೂಡ. ಪ್ರೀತಿಪಾತ್ರರು ಅಂದರೆ, ಪ್ರಿಯತಮೆಯೇ ಆಗಿರಬೇಕಿಲ್ಲ. ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪ, ಅಮ್ಮ... ಗೆಳತಿ ಯಾರಾದರೂ ಆಗಿರಬಹುದು.

ಜೀವನ ಪ್ರತಿದಿನ ಬದಲಾಗುತ್ತಿರುತ್ತದೆ. ಹೊಸಹೊಸ ಆವಿಷ್ಕಾರಗಳಾಗುತ್ತಿರುತ್ತವೆ. ಇಂಟರ್ನೆಟ್ ಕಾರಣದಿಂದಾಗಿ ಪ್ರಪಂಚವೇ ಗ್ರಾಮವಾಗಿ ಪರಿವರ್ತಿತವಾಗುತ್ತಿದೆ. ಸಂಪರ್ಕ ಸಾಧನಗಳು ಕೈಗೊಂದು ಕಾಲಿಗೊಂದು ಲಭಿಸುತ್ತಿವೆ. ಹೀಗಿರುವಾಗ, ನಾವೇಕೆ ಬದಲಾಗಬಾರದು? [ಪ್ರೇಮಿಗಳ ದಿನ]

English summary
Valentine's day gifts ideas. Think different and act different. Gift gadget iPad to your love on valentine's day. Make the Valentine's day celebration a memorable one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X