ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇವು-ಬೆಲ್ಲದ ಯುಗಾದಿ: ಆಚರಣೆ ಭಿನ್ನ... ಸಂಭ್ರಮ ಎಲ್ಲೆಲ್ಲೂ ಒಂದೇ!

By ವಿಶ್ವಾಸ ಸೋಹೋನಿ
|
Google Oneindia Kannada News

ಹಿಂದುಗಳ ಪಾಲಿಗೆ ಹೊಸ ವರ್ಷದ ಆರಂಭವಾದ ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ.

ಯುಗಾದಿಯಂದು ಎಲ್ಲೆಡೆಯೂ ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು. ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು. ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ? ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ಗುಜರಾತ್, ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯ ದಿನ ಪ್ರತಿಯೊಂದು ಮನೆಯ ಮುಂದೆಯೂ ಗುಢಿಯನ್ನು ನಿಲ್ಲಿಸುವ ಪದ್ಧತಿ ಇರುವುದರಿಂದ ಯುಗಾದಿಯನ್ನು 'ಗುಢಿಪಾಡವಾ' ಎಂದು ಕರೆಯುವರು. ಗುಢಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟ ಏರಿಸಿ, ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು ಕಟ್ಟಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ.

ಬಾಯಿ ನೀರೂರಿಸುವ ಖಾದ್ಯಗಳು

ಬಾಯಿ ನೀರೂರಿಸುವ ಖಾದ್ಯಗಳು

ಅಂದು 'ಪುರಣಪೋಳಿ' ಸಿಹಿಯನ್ನು ಮಾಡುವರು. ಕರ್ನಾಟಕದಲ್ಲಿ ಹೊಳಿಗೆ, ಆಂಧ್ರದಲ್ಲಿ ಒಬ್ಬಟ್ಟು ಮಾಡುವ ಪದ್ಧತಿ ಇದೆ. ಕರಾವಳಿಯಲ್ಲಿ ಖಣಿ ಇಡುವ ಸಂಪ್ರದಾಯವಿದೆ. ಬಾಳೆಎಲೆಯ ಮೇಲೆ ಅಕ್ಕಿ ಹಾಕಿ ತೆಂಗಿನಕಾಯಿ, ಸೌತೆಕಾಯಿ, ಹೊಸ ಬಟ್ಟೆ, ರವಿಕೆ ಖಣ, ಚಿನ್ನ, ಭತ್ತದ ತೆನೆ, ಹಣ್ಣ್ಣು ಹಂಪಲು, ದೇವರ ಪ್ರತಿಮೆ ಜೋಡಿಸಿ ಒಂದು ಕನ್ನಡಿ ಮುಂದೆ, ದೇವರು ಸಮೇತ ಎಲ್ಲವೂ ಕಾಣುವ ಹಾಗೆ ಇಡುತ್ತಾರೆ. ಯುಗಾದಿಯ ಹಬ್ಬದಂದು ಬೆಳಿಗ್ಗೆ ಎದ್ದು ಪೂಜೆ ಮಾಡಿ, ಕನ್ನಡಿಯಲ್ಲಿ ದೇವರ ದರ್ಶನ ಪಡೆಯುತ್ತಾರೆ. ತದನಂತರ ದೇಗುಲಕ್ಕೆಹೋಗುವರು, ಸಿಹಿ ಊಟ, ಗುರು ಹಿರಿಯರ ಭೇಟಿ, ಪಂಚಾಂಗ ಶ್ರವಣ ಮಾಡುತ್ತಾರೆ.

ಹೊಸ ವರುಷದ ಸಂಭ್ರಮ ಹೊತ್ತು ತಂದ ಯುಗಾದಿ ಹೊಸ ವರುಷದ ಸಂಭ್ರಮ ಹೊತ್ತು ತಂದ ಯುಗಾದಿ

ವರ್ಷ ತೊಡಕು ಎಂದರೇನು?

ವರ್ಷ ತೊಡಕು ಎಂದರೇನು?

ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುವರು. ಅಂದು 'ವರ್ಷ ತೊಡಕು' ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆ ಏನನ್ನು ಪಡೆಯುವರೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಅಂದು ಬಿದಿಗೆಯ ದಿನ ಚಂದ್ರದರ್ಶನ ಮಾಡುವರು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಯುಗಾದಿ ಎಂದರೆ....

ಯುಗಾದಿ ಎಂದರೆ....

ಯುಗಾದಿ' ಎಂಬ ಶಬ್ದವು ಸಂಸ್ಕೃದ ಯುಗ' ಮತ್ತು ಆದಿ' ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ಆದಿ' ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ.

ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ ಜ್ಞಾನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ಯುಗಾದಿ'. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು. ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ ಸತ್ಯ ಜ್ಞಾನವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷ್ಮೀ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ತ್ಯಯುಗದ ಆರಂಭದ ಸಮಯ

ತ್ಯಯುಗದ ಆರಂಭದ ಸಮಯ

ನಿಜವಾಗಿ ಸತ್ಯ ಯುಗಾದಿ', ಸಂಗಮ ಯುಗ. ಈ ಯುಗ ಬರುವುದು ಕಲ್ಪಕ್ಕೊಮ್ಮೆ ಮಾತ್ರ. ಅನೇಕ ಕಾಲಚಕ್ರಗಳು ಅನಾದಿ ಕಾಲದಿಂದ ನಡೆಯತ್ತಾ ಬಂದಿದೆ. ಉದಾಹರಣೆಗೆ 60 ಸೆಕೆಂಡಿಗೆ 1 ನಿಮಿಷ, 60 ನಿಮಿಷಕ್ಕೆ 1 ಗಂಟೆ, 24 ಗಂಟೆಗೆ 1 ದಿನ, 7 ದಿನಗಳಿಗೆ 1 ವಾರ, 30 ದಿನಗಳಿಗೆ 1 ತಿಂಗಳ, 12 ತಿಂಗಳಿಗೆ 1 ವರ್ಷದಂತೆ, ಈ ಸೃಷ್ಟಿ ನಾಟಕವು 5000 ವರ್ಷದ್ದಾಗಿದೆ. ಈಶ್ವರೀಯ ಜ್ಞಾನದ ಪ್ರಕಾರ ಸತ್ಯಯುಗ 1250 ವರ್ಷ, ತ್ರೇತಾಯುಗ 1250 ವರ್ಷ, ದ್ವಾಪರಯುಗ 1250 ವರ್ಷ, ಕಲಿಯುಗ 1250 ವರ್ಷ. ಈ ರೀತಿ ನಾಲ್ಕು ಯುಗಗಳನ್ನು ಸೇರಿ ಒಂದು ಕಲ್ಪ ಆಗುತ್ತದೆ. ಈ ಕಾಲಚಕ್ರ 5000 ವರ್ಷಕ್ಕೊಮ್ಮೆ ಪುನರಾವೃತ್ತಿಯಾಗುತ್ತದೆ. ಪರಮಪಿತ ಶಿವನು ಸಂಗಮಯುಗದಲ್ಲಿ, [ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ಸಮಯ] ಒಮ್ಮೆ ಮಾತ್ರ ಈ ಭೂಮಿಗೆ ಬಂದು ವಿಶ್ವಪರಿವರ್ತನೆ ಮಾಡುತ್ತಾರೆ. ಅದರ ಸ್ಮಾರಕವಾಗಿಯೇ ಯುಗಾದಿ'ಯನ್ನು ವರುಷ-ವರುಷ ಆಚರಿಸುತ್ತಾರೆ.

ಬೇಂದ್ರೆಯವರ ನೆನೆಯುತ್ತ...

ಬೇಂದ್ರೆಯವರ ನೆನೆಯುತ್ತ...

ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ. ಹೀಗೆ ಯುಗಾದಿಯು ಭಕ್ತರಿಗಾಗಿ, ವಿಶಾಲ ಹೃದಯದ ಶಿವ ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ' ಎಂಬ ಪರಮ ಸಂದೇಶವನ್ನು ನೀಡುವ ಮಹಾನ ಪರ್ವವಾಗಿದೆ.
"ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ"
ಎಂದು ದ.ರಾ.ಬೇಂದ್ರೆ ಯವರ ಕವಿತೆಯನ್ನು
ಹೇಳುತ್ತಾ ನಾವು ಎಲ್ಲರೂ ಯುಗಾದಿಯ ನಿಜ ಅರ್ಥ ತಿಳಿದು ಆಚರಿಸೋಣ.

English summary
Ugadi is one of the most important festivals in Hindhu religion. Aaccording to Hindu tradition Ugadi is the new year for Hindhus. People across India celebrates Ugadi in their own different way,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X