ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸ್ತೋಮದ ಹಸಿರ ನಡುವೆ ಬಾಂಧವ್ಯದ ಹೂಗಳರಳಿ

By ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Ugadi portrayal in Kannada poems
ಕವಿ ಡಾ. ಸಿದ್ಧಲಿಂಗಯ್ಯನವರ "ಯುಗಾದಿ" ಕವಿತೆಯಲ್ಲಿ

ಈ ಸಲದ ಯುಗಾದಿ
ಮಧ್ಯ ಮಯಸ್ಕನ ಉದ್ಯೋಗದ ಕನಸಿನಂತೆ
ಲಂಚಕೋರನ ಮೃದುವಾದ ಮಾತಿನಂತೆ
ಏರುವ ಬೆಲೆ, ಇಳಿಯುವ ಘನತೆಯಂತೆ
ಚಿಂತಾಜನಕವಾಗದಿರಲಿ

ಜನಸ್ತೋಮದ ಹಸಿರ ನಡುವೆ
ಬಾಂಧವ್ಯದ ಹೂಗಳರಳಿ
ಸಮಾನತೆಯ ಸಂತಸವನು
ಋತುವಸಂತ ಸಾರಲಿ

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಯುಗಾದಿ ಕುರಿತು

ಒಳಿತು ಕೆಡಕು"
ಏನು ಬಂದರೂ
ಇರಲಿ ಎಲ್ಲಕ್ಕೂ ಸ್ವಾಗತ
ಯುಗ ಯುಗಾದಿಗೆ
ಹೊಸತು ವರ್ಷವು
ಬರಲಿ, ಬಾರದೆ ಹೋಗಲಿ
ಬಂದ ಚೈತ್ರ ಚಿಗುರಿನಂದದ
ಮಂದ ಹಾಸವೇ ಉಳಿಯಲಿ!

ಮತ್ತೆ ಬಂದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ, ಸ್ವೀಕರಿಸುವುದಷ್ಟೇ ನಮ್ಮ ಕೆಲಸ ಎಂಬ ಕವಿವಾಣಿಯಂತೆ ಹಳತನ್ನು ಅಳಿಸಿಹಾಕುತ್ತಾ, ಹೊಸತನ್ನು ತರುವ ಯುಗದ ಆದಿ - ಯುಗಾದಿ. ಈ ಬಾರಿ "ಬೇವು-ಬೆಲ್ಲ" -ಹಬ್ಬದೂಟ, ಹೊಸ ಬಟ್ಟೆ, ನವೋಲ್ಲಸಗಳ ಜೊತೆಗೆ ಕವನ ಸಾಹಿತ್ಯದ "ಯುಗಾದಿ" ಕವನಗಳ ರಸದೌತಣವ ಸವಿಯೋಣ. ಹೊಸವರುಷಕ್ಕೆಂದೇ ಕವನಗಳ ಅಮೂಲ್ಯ ಕಾಣಿಕೆಯನಿತ್ತ ಕವಿಗಳಿಗೆ ನಮ್ಮ-ನಿಮ್ಮೆಲ್ಲರ ಹೃತ್ಪೂರ್ವಕ ನಮನ ಸಲ್ಲಿಸೋಣ.

ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗಳು ಬಡವ-ಬಲ್ಲಿದರೆಂಬ ಭೇಧಭಾವವಿಲ್ಲದ ಸಾರ್ವತ್ರಿಕತೆ, ಭಾವುಕತೆಗಳ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮೀಕತೆಯ ನಡುವೆ ಜನ ಸಮುದಾಯಗಳ ಜೀವನ ಶೈಲಿಯೂ ಹಬ್ಬಗಳ ವೈಭವವನ್ನು ಸಾರುವುದು. ರಸಋಷಿ ಕುವೆಂಪು ಅವರು ಹೇಳಿರುವಂತೆ ತೊಲಗಲಿ ದುಃಖ, ತೊಲಗಲಿ ಮತ್ಸರ| ಪ್ರೇಮಕೆ ಮೀಸಲು ನವ ಸಂವತ್ಸರ...ಈ ವಿಜಯ ನಾಮ ಸಂವತ್ಸರ ಎಲ್ಲರಿಗೂ ಶುಭತರಲಿ.

(ಕೃಪೆ: ಅಂತರ್ಜಾಲ, ಪ್ರೊ. ನಿಸಾರ್ ಅಹಮದ್, ರಸಋಷಿ ಕುವೆಂಪು ಅವರುಗಳ ಸಮಗ್ರ ಕವನ ಸಂಗ್ರಹಗಳಿಂದ ಆಯ್ದದ್ದು)

English summary
Wish you all Happy and Prosperous New Year, Ugadi. On the occasion of Vijaya nama samvatsara Vani Ramdas from Singapore recalls the portrayal of Ugadi, hindu new year, by eminent poets of Karnataka Da Ra Bendre, Kuvempu, Putina, Shivarudrappa etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X