ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯದಲ್ಲವ ಮರೆಯಿರೈ ಹೊಸತು ಬಾಳ ತೆರೆಯಿರೈ

By ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Ugadi portrayal in Kannada poems
"ಹಳೆಯದಲ್ಲವ ಮರೆಯಿರೈ
ಹೊಸತು ಬಾಳ ತೆರೆಯಿರೈ
ಮುಪ್ಪು ಹರೆಯ ಮರೆಯುತ
ಬೆಪ್ಪು - ಜಾಣ ಬೆರೆಯುತ
ಲಗ್ಗೆ - ಚೆಂಡು, ಚಿಣ್ಣಿದಾಂಡು
ಏಣಿ ಉಯ್ಯಾಲೆ ಆಡಿರೈ"
(ಹಿರಿಯ ಕವಿ ಪು.ತಿ.ನರಸಿಂಹಾಚಾರ್)

ಜೀವನದಲ್ಲಿ ಕಹಿ, ಕೆಟ್ಟ ಘಳಿಗೆಗಳನ್ನು ಮರೆತು, ಮತ್ತೋರ್ವರ ಕಷ್ಟ-ಸುಖಗಳಿಗೆ ಪ್ರತಿಸ್ಪಂದಿಸುವ ಭಾವನೆ ಬೆಳೆಸಿಕೊಳ್ಳಿ ಎಂಬುದಕ್ಕೆ ಸಂಕೇತವಾಗಿಯೇ ಇರುವುದು ಬೇವು ಬೆಲ್ಲ ಹಂಚಿ ತಿನ್ನುವ ಸಂಪ್ರದಾಯ. ಬಾಳಿನಲ್ಲಿ ಸಿಹಿಯೇ ಮುಖ್ಯವಲ್ಲವಲ್ಲ, ಕಷ್ಣಸಹಿಷ್ಣುತೆಯೂ ಬಾಳಿನಲ್ಲಿ ಬೆರೆತಿರಬೇಕು. ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ನಮ್ಮ ಜೀವನದಲ್ಲೂ ಬದಲಾವಣೆಗಳನ್ನು ಸ್ವೀಕರಿಸಿ ಎಂದೆನ್ನುತ್ತಾ ಮತ್ತೊಂದು ಕವನದಲ್ಲಿ ....

ಹೊಸವರುಷವು ಬಹುದೆಂದಿಗೆ
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ....

ಜಾಣ ಜಿತೇಂದ್ರಿಯ ಧೀರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ||

ಇಂದು ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳು ಯುಗದ ಆದಿಯೋ ಅಥವಾ ಯುಗದ ಅಂತ್ಯವೋ ಎಂಬ ಅನುಮಾನ ತರುತ್ತಿದೆ. ಅಂತಿಂಥವರಿಂದ ಕಲುಷಿತಗೊಳ್ಳುತ್ತಿರುವ ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಗುರುತರ ಹೊಣೆಗಾರಿಕೆ ಹೊರುವ ವಿದ್ಯಾವಂತರು (ಜಾಣ), ನಿಷ್ಠಾವಂತರು, ಲಂಪಟತನ, ಭ್ರಷ್ಟಾಚಾರ ಎದುರಿಸುವ ಜಿತೇಂದ್ರಿಯರು ಬಂದಲ್ಲಿ ಜನಸಾಮಾನ್ಯರಿಗೆ ಸಿಗುವುದು ಹೊಸ ಹರುಷ ಇಲ್ಲದಿದ್ದಲ್ಲಿ ಯಥಾಸ್ಥಿತಿ "ಅಂಥಿಂಥವರಿಂ ಬಲು ಕಲುಷ"||

English summary
Wish you all Happy and Prosperous New Year, Ugadi. On the occasion of Vijaya nama samvatsara Vani Ramdas from Singapore recalls the portrayal of Ugadi, hindu new year, by eminent poets of Karnataka Da Ra Bendre, Kuvempu, Putina, Shivarudrappa etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X