ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಂದ್ರಮಾನ ಪಂಚಾಂಗ ಡೌನ್ ಲೋಡ್ ಮಾಡಿಕೊಳ್ಳಿ

By * ಮಲೆನಾಡಿಗ
|
Google Oneindia Kannada News

Download Hindu Lunar Calender
ಹಿಂದೂಗಳಿಗೆ ಪಂಚಾಂಗ ಬಹುಮುಖ್ಯ ಧಾರ್ಮಿಕ ಕೈಪಿಡಿ. ಮಂತ್ರಾಲಯದ ರಾಘವೇಂದ್ರ ಮಠವು ಪ್ರತಿವರ್ಷ ಯುಗಾದಿ ಸಂದರ್ಭ(ಈ ಬಾರಿ ಏಪ್ರಿಲ್ 4, 2011)ದಲ್ಲಿ ಸುಮಾರು 8 ರಿಂದ 10 ಸಾವಿರ ಪಂಚಾಂಗಗಳನ್ನು ಮುದ್ರಿಸಿ ಉಚಿತವಾಗಿ ಹಂಚುತ್ತಿದೆ. ಜನಪ್ರಿಯವಾಗಿರುವ ಈ ಪಂಚಾಂಗವು ರಾಯರ ಎಲ್ಲ ಭಕ್ತರಿಗೂ ದೊರೆಯುವಂತೆ ಮಾಡಲು ರಾಘವೇಂದ್ರ ಮಠ ವೆಬ್ ಸೈಟಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ನೊಂದಾಯಿತ ಆಸ್ತಿಕರು ಕನ್ನಡ, ಇಂಗ್ಲೀಷ್, ತಮಿಳು, ಸಂಸ್ಕೃತ, ತೆಲುಗು ಭಾಷೆಗಳಲ್ಲಿನ ಪಂಚಾಂಗವನ್ನು ಪಡೆಯಬಹುದು.

ಮದುವೆ, ಉಪನಯನ, ಅನ್ನಪ್ರಾಶನ, ನಾಮಕರಣ, ಗೃಹಪ್ರವೇಶ, ಪ್ರಯಾಣ..ಇತ್ಯಾದಿ ಶುಭ ಕಾರ್ಯಗಳಿಗೆ ಅಥವಾ ಕೆಟ್ಟ ನಕ್ಷತ್ರದಲ್ಲಿ ಮರಣ ಹೊಂದಿದ್ದರಿಂದ ಮನೆ ತೊರೆಯುವುದು, ರಾಹುಕಾಲ, ಗುಳಿಕಾಲ ಲೆಕ್ಕಾಚಾರ, ದೋಷ, ಪ್ರದೋಷ, ಗ್ರಹಣ, ಗ್ರಹಚಾರ ಫಲಾಫಲಗಳ ವಿವೇಚನೆ, ಆಚರಣೆ ಎಲ್ಲಕ್ಕೂ ಪಂಚಾಂಗ ನೋಡುವುದು ಮಾಮೂಲಿ. ಸೌರಮಾನ, ಚಾಂದ್ರಮಾನ ಪದ್ಧತಿಗನುಸಾರವಾಗಿ ಪಂಚಾಂಗಗಳಿವೆ. ಒಂಟಿಕೊಪ್ಪಲ್ ಪಂಚಾಂಗ, ಶೃಂಗೇರಿ ಮಠದ ಪಂಚಾಂಗ ಪ್ರಸಿದ್ಧವಾಗಿದೆ. ಇದರಂತೆ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಚಾಂದ್ರಮಾನ ಪಂಚಾಂಗದ ಲಭ್ಯತೆಯನ್ನು ಎಲ್ಲಾ ಆಸ್ತಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಮ್ಮಿಕೊಂಡಿದೆ.

ಪ್ರತಿ ವರ್ಷ ಪಂಚಾಂಗಗಳನ್ನು ಮುದ್ರಿಸಿ, ಶ್ರೀಮಠದ ಕಚೇರಿಗಳಲ್ಲಿ, ಮಧ್ವ ಸಂಘಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ನೀಡುತ್ತಾ ಬರಲಾಗಿದೆ. ವೆಬ್ ಲೋಕ ನೆಚ್ಚಿಕೊಂಡಿರುವವರ ಅನುಕೂಲಕ್ಕೆ ರಾಯರಮಠದ ವೆಬ್ ತಾಣದಲ್ಲಿ (ಶ್ರೀಖರ ನಾಮ ಸಂವತ್ಸರ) ಪಂಚಾಂಗವನ್ನು ಡೌನ್ ಲೋಡ್ಗೆ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
The Principal,
Sri Gurusarvabhouma Sanskrit Vidyapeetha
Sri Raghavendra Swamy Matha,
Mantralayam - 518345
Ph: (08512)279 496

ಮಂತ್ರಾಲಯ ರಾಯರ ಮಠದ ಈ ವೆಬ್ ತಾಣದಲ್ಲಿ ಮಂತ್ರಾಲಯ ಸೇರಿದಂತೆ ಹಲವು ಶಾಖಾ ಮಠಗಳಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರವಿದೆ. ಇದಕ್ಕಿಂತ ಹೆಚ್ಚಾಗಿ ಮಂತ್ರಾಲಯಕ್ಕೆ ಬರಲಿಚ್ಛಿಸುವ ಆಸ್ತಿಕರಿಗೆ ಮಾರ್ಗಸೂಚಿ, ವಸತಿ ವ್ಯವಸ್ಥೆ, ಸೇವಾ ವಿವರಗಳು ಬೆರಳು ತುದಿಯಲ್ಲಿ ಲಭ್ಯವಿದೆ. ರಾಯರ ಪೂಜಾ ಕೈಂಕರ್ಯಗಳ ಸಚಿತ್ರಗಳ ಜೊತೆ, ಮಠ ನಡೆಸುತ್ತಿರುವ ಶಾಲೆಗಳು, ತಿರುಪತಿಯ ವೈದಿಕ ಸಂಶೋಧನಾ ಕೇಂದ್ರ, ವಧು ವರರ ಅನ್ವೇಷಣಾ ಕೇಂದ್ರದ ಬಗ್ಗೆ ಕೂಡ ಮಾಹಿತಿ ಇದೆ.

English summary
srsmutt website maintained by Sri Raghavendra Swamy Matha, Mantralyam is offering Chandramana Panchanga for devotees in five languages for free. (Sanskrit, Kannada, Telugu, Tamil and Hindi) Devotees can download Hindu lunar almanac for Sri Khara Nama Samvatsara. The Hindu new year (Yugadi) begins from 4th April 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X