ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ನಿಮಿತ್ತ ಮೈಸೂರಲ್ಲಿ ಸಂಗೀತ ಲಹರಿ

By Staff
|
Google Oneindia Kannada News

Cultural programmes in Mysuru during Ugadi
ಮೈಸೂರು, ಮಾ. 24 : 2008-09ನೇ ಸಾಲಿನ ಯುಗಾದಿ ಹಬ್ಬದ ಸಲುವಾಗಿ ದಿನಾಂಕ: ಮಾರ್ಚ್ 27ರಿಂದ 29ರವರೆಗೆ 3 ದಿನ ಸಂಜೆ 6.45ರಿಂದ 8.45 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಅರಮನೆಯ ಎಲ್ಲಾ ಮುಖ್ಯ ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಹಾಗೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ. ಕೇಳುಗರು ಕಾರ್ಯಕ್ರಮಗಳನ್ನು ಆಲಿಸಲು ಅರಮನೆಯ ಮುಂಭಾಗದಲ್ಲಿ ಧ್ವನಿವರ್ಧಕಗಳ ವ್ಯವಸ್ಥೆಯನ್ನು ಮಾಡಲಾಗುವುದು.

ಸಂಗೀತ ಕಾರ್ಯಕ್ರಮಗಳ ಸಲುವಾಗಿ ದಿನಾಂಕ 27ರಿಂದ 29ರವರೆಗೆ ಸಂಜೆ 7ರಿಂದ 8 ಗಂಟೆಯವರೆಗೆ ಅರಮನೆಗೆ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೈಸೂರು ಅರಮನೆ ಮಂಡಳಿ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದ ವಿವರ ಇಂತಿದೆ:

27ರಂದು ಸಂಜೆ 6.45ಕ್ಕೆ ಕೆ ಗುರುಪ್ರಸಾದ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7.45ಕ್ಕೆ ಆರ್. ಮೋಹನ್ ಅವರಿಂದ ಕ್ಲಾರಿಯೋನೆಟ್ ಕಾರ್ಯಕ್ರಮ.
28ರಂದು ಸಂಜೆ 6.45ಕ್ಕೆ ಎಚ್ ಎಲ್ ಶಿವಶಂಕರ್ ಸ್ವಾಮಿ ಮತ್ತು ತಂಡದವರಿಂದ ಲಯ ಲಹರಿ, 7.45ಕ್ಕೆ ಸೋರಟ್ ಜ್ಯೋತಿ ಅವರಿಂದ ಸುಗಮ ಸಂಗೀತ.
29ರಂದು ಸಂಜೆ 6.45ಕ್ಕೆ ಜೆ. ನಿರಂಜನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 7.45ಕ್ಕೆ ಪೂರ್ವಜ್ ವಿಶ್ವನಾಥ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X