ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ : ಯುಗದ ಸಂಭ್ರಮ ಬರೀ ಭ್ರಮೆ

By * ಎಸ್.ಎಲ್. ಸುರೇಂದ್ರಕುಮಾರ್, ತುಮಕೂರು
|
Google Oneindia Kannada News

Ugadi, a kannada poem by SLS Kumar
ಯುಗದ ಹಾದಿ ಹಿಡಿದು ಬಂದಿದೆ ಯುಗಾದಿ
ಯುಗ ಯುಗದಿಂದ ಮತ್ತೆ ಬಂದಿದೆ ಯುಗಾದಿ

ಯಾವ ಸಂಭ್ರಮ ಯಾಕೆ ಸಂಭ್ರಮ ಏನು ಸಂಭ್ರಮ
ಸಂಭ್ರಮವೆಂಬುದು ಇಲ್ಲೀಗ ಭ್ರಮೆಯಾಗಿದೆ
ಬೇವು ಬೆಲ್ಲವು ಜೊತೆ ಎಂಬುದೆಲ್ಲ ಸತ್ಯ ನುಡಿಯೊಳಗೆ
ನಿತ್ಯವು ಬದುಕು ಕಹಿಯಾಗಿಯೆ ಇರಲು ಜಗದೊಳಗೆ
ಸತ್ಯಯಾವುದು ಮಿಥ್ಯ ಯಾವುದು ನಿತ್ಯಕಾಣುವುದಲ್ಲವೆ

ಹಳ್ಳಿಗಳಲಿ ಹಬ್ಬದ ಸೊಗಡೆಲ್ಲ ಸರಿದೋಗಿದೆ
ಹಬ್ಬಗಳಾದರು ಏತಕೆ ಬರುತಾವೊ ಎಂಬಂತಾಗಿದೆ
ಹೀಗಿರಲು ನೈಜತೆ, ಹಬ್ಬವಾದರು ದಿನವಾದರು ವ್ಯತ್ಯಾಸವೇನಿಲ್ಲವಾಗಿದೆ
ಮುಂಗಾರು ಮಳೆ ಇಲ್ಲ ಹಿಂಗಾರು ಮಳೆ ಇಲ್ಲ
ಬೆಳೆ ಬೆಳೆವ ಮಾತಿನ್ನೆಲ್ಲಿ ಕುಡಿಯುಲು ನೀರಿಲ್ಲವಾಗಿರಲು
ಹಳ್ಳಿಗಳಲೆಲ್ಲ ಕರಾಳತೆಯ ಸ್ಮಶಾನಮೌನ ಹೊದ್ದಿದೆ

ಮನುಜನಾದರು ಮೌನ ಒಡೆದು ನಡೆವನು ಹುಡುಕುತ
ಮೌನ ಒಡೆಯದ ಪ್ರಾಣಿಪಕ್ಷಿಗಳ ಮೂಕವೇದನೆಯನಾಲಿಸುವರಾರು
ಬರಗಾಲ ಬಂದರೆಗಿ ಬರುಡಾಗಿದೆ ಭೂಮಿ ಭಾನು ಎಲ್ಲ
ಬರಗಾಲಕು ಬರುಡಿಗು ಕಾರಣರು ಕೂಡ ನಾವೆಲ್ಲವೆ
ಮರಕಡಿದರೆ ನಾವು ಈ ಧರೆಗೆ ಸಾವು ಎಲ್ಲಾ ಬರೆದಿಹೆವು
ಗೋಡೆಗಳ ಮೇಲೆ ಘೋಷವಾಕ್ಯ ಸಾಕ್ಷ್ಯಚಿತ್ರದ ಚಿತ್ತಾರವನು

ಯಾರು ಬರೆಯಲಾಗಲಿಲ್ಲ ಎಲ್ಲರೆದೆಯ ಮೇಲು
ನೀತಿ ನಿಯಮಗಳನೆಲ್ಲ ಹರಿದು ಹಾರಿಬಿಟ್ಟೆವು ಗಾಳಿಗೆ
ನಮ್ಮಗಳ ಗೋಳಿನ ಗುಂಡಿಗಳನು ನಾವೆ ತೋಡುತಿಹೆವು
ಹೀಗಿರಲು ಸಂಭ್ರಮದ ಯುಗಾದಿಯನು ಆಚರಿಸುವುದಾದರು ಹೇಗೆ
ಬಂದಿದೆಯಷ್ಟೆ ಹಾದಿ ತಪ್ಪಿದಂತೆ ಮಾಮೂಲಾಗಿ ಯುಗಾದಿ

ಯುಗದ ಹಾದಿ ಹಿಡಿದು ಬಂದಿದೆ ಯುಗಾದಿ
ಯುಗ ಯುಗಗಳಿಂದ ಮತ್ತೆ ಬಂದಿದೆ ಯುಗಾದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X