ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ ಸೋಮವಾರ 2021: ಉಪವಾಸ, ಪೂಜೆ, ಮಹತ್ವದ ಬಗ್ಗೆ ಮಾಹಿತಿ

|
Google Oneindia Kannada News

ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಶ್ರೇಷ್ಠ ಮಾಸವಾಗಿದೆ, ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲ ದೊರೆಯುವುದು ಎಂಬ ನಂಬಿಕೆ ಇದೆ.

ಶ್ರಾವಣ ಸೋಮವಾರ ಯಾರು ವಿಧಿ ವಿಧಾನದಿಂದ ಶಿವನ ಪೂಜೆ ಮಾಡುತ್ತಾರೋ ಅವರಿಗೆ ವಿಶೇಷ ಫಲ ಲಭಿಸುತ್ತದೆ. ವೃತದಿಂದಾಗಿ ಪ್ರತಿಯೊಂದು ದುಃಖ ಕಷ್ಟ, ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ಉತ್ತರ ಭಾರತದಲ್ಲಿ ಶ್ರಾವಣ ಸೋಮವಾರ, ದೋಷ ನಿವಾರಣೆಗೆ ಪೊರಕೆ ದಾನಉತ್ತರ ಭಾರತದಲ್ಲಿ ಶ್ರಾವಣ ಸೋಮವಾರ, ದೋಷ ನಿವಾರಣೆಗೆ ಪೊರಕೆ ದಾನ

ಸುಖಿ, ನಿರೋಗಿ ಹಾಗೂ ಸಮೃದ್ಧಿಯ ಜೀವನ ಸಾಗಿಸುತ್ತಾರೆ. ಈ ದಿನ ವ್ರತ ಮಾಡುವುದರಿಂದ ಮಕ್ಕಳ ರೋಗ ಗುಣಮುಖವಾಗುತ್ತದೆ. ದುರ್ಘಟನೆ ಹಾಗೂ ಅಕಾಲ ಮೃತ್ಯುವಿನಿಂದಮುಕ್ತಿ ಸಿಗುತ್ತದೆ, ವೈವಾಹಿಕ ಜೀವನದಲ್ಲಿ ಕಂಡು ಬರುವ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.

Shravan Somvar 2021 Start & End Dates: List Of Fasting Days And Significance

ಈ ಬಾರಿ ಶ್ರಾವಣದಲ್ಲಿ 4 ಸೋಮವಾರಗಳು ಬರುತ್ತವೆ. ಶ್ರಾವಣ ಮಾಸದ ಮೊದಲ ಸೋಮವಾರ ವ್ರತವು ಆಗಸ್ಟ್‌ 9 ರಂದು. ಎರಡನೇ ಶ್ರಾವಣ ಸೋಮವಾರ ವ್ರತ ಆಗಸ್ಟ್ 16 ರಂದು ಮತ್ತು ಮೂರನೇ ಶ್ರಾವಣ ಸೋಮವಾರ ವ್ರತ ಆಗಸ್ಟ್ 23 ರಂದು. ನಾಲ್ಕನೇ ಮತ್ತು ಕೊನೆಯ ಶ್ರಾವಣ ಸೋಮವಾರ ವ್ರತವು ಆಗಸ್ಟ್ 30 ರಂದು ಬರಲಿದೆ.

ಶ್ರಾವಣ ಸೋಮವಾರದ ಉಪವಾಸವನ್ನು ಆಚರಿಸುವ ಮೂಲಕ, ಭೋಲೇನಾಥ ಮತ್ತು ಮಾತಾ ಪಾರ್ವತಿಯ ಆಶೀರ್ವಾದವು ಭಕ್ತರ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಉಳಿಯುತ್ತದೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯೂ ಇರುತ್ತದೆ. ಈ ಕಾರಣದಿಂದ ಶ್ರಾವಣ ಮಾಸಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಶಂಕರ ದೇವರನ್ನು ಪೂಜಿಸಲು ಶ್ರಾವಣ ತಿಂಗಳು ಅತ್ಯುತ್ತಮವಾದುದು ಎನ್ನುವ ನಂಬಿಕೆಯಿದೆ.

ಶ್ರಾವಣ ಮಾಸದ ಮೊದಲ ಸೋಮವಾರ, ಉತ್ತರಕ್ಕೆ ಮುಖ ಮಾಡಿ ಶಿವನನ್ನು ಆರಾಧಿಸಿ. ಇದರಿಂದ ಅವನಿಗೆ ತುಂಬಾ ಸಂತೋಷವಾಗುತ್ತದೆ. ಶ್ರಾವಣದ ಪ್ರತಿ ಸೋಮವಾರದಂದು ಭಕ್ತನು ನಿಯಮಿತವಾಗಿ ಶಿವ ಮಂತ್ರವಾದ 'ಓಂ ನಮಃ ಶಿವಾಯ' ಮಂತ್ರವನ್ನು 11, 21, 51 ಅಥವಾ 108 ಬಾರಿ ಉತ್ತರ ದಿಕ್ಕಿಗೆ ಎದುರಾಗಿ ಕುಳಿತು ಪಠಿಸಬೇಕು.

ವ್ರತ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ವ್ರತದ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಕಪ್ಪು ಎಳ್ಳನ್ನು ಹಾಕಿ ಸ್ನಾನ ಮಾಡಬೇಕು.

ಭಗವಂತ ಶಿವನ ಅಭಿಷೇಕ ನೀರು ಹಾಗೂ ಗಂಗಾಜಲದಲ್ಲಾಗುತ್ತದೆ, ವಿಶೇಷ ಫಲ ಪ್ರಾಪ್ತಿಗಾಗಿ ಹಾಲು, ತುಪ್ಪ, ಮೊಸರು, ಜೇನು, ಸಾಸಿವೆ, ಕಪ್ಪು ಎಳ್ಳಿನಿಂದ ಮಾಡುತ್ತಾರೆ.
ಓಂ ನಮಃಶಿವಾಯ ಮಂತ್ರದ ಜತೆಗೆ ದೇವರಿಗೆ ಬಿಳಿ ಹೂವು, ಬಿಳಿ ಅಕ್ಕಿ, ಪಂಚಾಮೃತ, ಅಡಿಕೆ, ಹಣ್ಣು ಹಾಗೂ ಗಂಗಾಜಲ ಅಥವಾ ಶುದ್ಧ ನೀರಿನಿಂದ ದೇವರ ಪೂಜೆ ಮಾಡಬೇಕು.

ಸೋಮವಾರ ಮಾಡುವ ವ್ರತವು‌ ಶಿವನಿಗೆ ಅರ್ಪಿಸಲಾಗಿದೆ. ನಾವು ಸೋಮವಾರ ಶಿವನನ್ನು ಪೂಜಿಸಿದರೆ, ಆಗ ಶಿವನು ಸಂತಸಗೊಂಡು ನಮಗೆ ಬೇಕಾದ ಆಶೀರ್ವಾದವನ್ನು ನೀಡುತ್ತಾನೆ.

ಹೊಸ ಮನೆಗೆ ಪ್ರವೇಶಿಸಲು ಮತ್ತು ಮದುವೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲು ಮತ್ತು ಕ್ರೀಡಾ ಸಂಬಂಧಿತ ಕೆಲಸಗಳಿಗೆ ಸೋಮವಾರ ಅತ್ಯಂತ ಸೂಕ್ತ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ಉಪವಾಸ ಅಥವಾ ಪೂಜೆಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡಲಾಗುತ್ತದೆ.

​ಸೋಮವಾರ ವ್ರತ: ಸೋಮವಾರದಂದು ಭಗವಾನ್‌ ಶಿವನನ್ನು ಪೂಜಿಸಿ ಉಪವಾಸ(Fasting) ವ್ರತವನ್ನು ಆಚರಿಸುವ ಮೂಲಕ ಓರ್ವ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ ಮತ್ತು ವ್ಯಕ್ತಿಯು ಸದ್ಭಾವನೆ ಪಡೆಯುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಹೆಚ್ಚಿನ ಜನರು ಸೋಮವಾರ ವ್ರತವನ್ನು ಆಚರಿಸುತ್ತಾರೆ.

Recommended Video

ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! | Oneindia Kannada

ಸೋಮವಾರ ಶಿವ ಪೂಜೆ: ಶಿವ ಭಕ್ತರು ಸೋಮವಾರದ ದಿನದಂದು ಪಾರ್ವತಿ ದೇವಿಯನ್ನು ಮತ್ತು ಭಗವಾನ್ ಶಿವನನ್ನು ಪೂಜಿಸಲು ಇಷ್ಟಪಡುತ್ತಾರೆ. ಶ್ರಾವಣ ತಿಂಗಳಲ್ಲಿ ಸೋಮವಾರ ಉಪವಾಸವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಸೋಮವಾರ ಶಿವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಮನದಾಸೆಯು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

English summary
Shravan Somvar 2021 Start & End Dates: List of Fasting Days, Shravan Vrat and Significance of Observing Fast on Mondays for Lord Shiva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X