• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ?

|

ಆತ ತಂಗಿಗಾಗಿ ತನ್ನ ಪ್ರಾಣ ನೀಡುವುದಕ್ಕೂ ಸಿದ್ಧನಾಗಿರುವ ಅಣ್ಣ. ತಂಗಿಯ ತುಂಟಾಟ, ಕೋಪ, ಪ್ರೀತಿ, ಮುದ್ದು, ಸಂತೋಷ, ದುಃಖ ಎಲ್ಲದಕ್ಕೂ ಮೊದಲ ಕಿವಿ ಅವನೇ! ಮೊದಲ ಸಾಂತ್ವನವೂ, ಮೊದಲ ಪ್ರತಿಕ್ರಿಯೆಯೂ ಅವನದೇ! ಅದೆಷ್ಟೇ ಕಿತ್ತಾಡಿದರೂ, ರಂಪ ಮಾಡಿದರೂ, ಒಂದು ದಿನ ಮಾತಿಲ್ಲದೆ ಕಳೆದರೂ, ಒಂದು ಕ್ಷಣ ಅಣ್ಣನನ್ನು ಬಿಟ್ಟಿರುವುದೂ ತಂಗಿಗೆ ಅಪಥ್ಯ! ಅಣ್ಣನಿಗೂ ಹಾಗೇ. ಒಟ್ಟಿನಲ್ಲಿ ಅವರಿಬ್ಬರ ಸಂಬಂಧ ರಕ್ಷೆಯಲ್ಲಿ ಬೆಸೆದ ದಾರಗಳ ಹಾಗೇ ಒಂದನ್ನೊಂದು ಬಿಟ್ಟಿರದ ಬೆಸುಗೆ!

ಮತ್ತೆ ರಕ್ಷಾಬಂಧನ ಬಂದಿದೆ. ಅಣ್ಣ-ತಂಗಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವ ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹಲವು ವಿಭಿನ್ನ ಆಚರಣೆಗಳಿಂದಾಗಿಯೇ ಉಳಿದೆಲ್ಲ ಸಂಸ್ಕೃತಿಗಳಿಗಿಂತ ಔನತ್ಯದ ಸ್ಥಾನದಲ್ಲಿರುವ ಭಾರತೀಯ ಸಂಸ್ಕೃತಿಯಲ್ಲಿ ಭ್ರಾತೃತ್ವದ ಸಂಕೇತವಾದ ರಕ್ಷಾಬಂಧನ ಮಹತ್ವದ ಸ್ಥಾನ ಪಡೆದಿದೆ. ಭಾರತದೊಂದಿಗೆ ನೇಪಾಳದ ಕೆಲವೆಡೆಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಸ್ನೇಹದ ಅನುಬಂಧಕ್ಕೆ ಈ ಫ್ರೆಂಡ್ ಶಿಪ್ ರಾಖಿ

ಇಂದು(ಆಗಸ್ಟ್ 7) ಭಾರತದಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಈ ರಕ್ಷಾಬಂಧನದ ಮಹತ್ವವೇನು? ಈ ಆಚರಣೆಯ ಹಿಂದಿನ ಉದ್ದೇಶವೇನು? ಭಾರತದಲ್ಲಿ ಈ ಹಬ್ಬವನ್ನು ಹೇಗೆಲ್ಲ ಆಚರಿಸಲಾಗುತ್ತಿದೆ? ಇಲ್ಲಿದೆ ಉತ್ತರ...

ರಾಖಿ ಹಿಂದೆ ಪುರಾಣ ಕತೆ

ರಾಖಿ ಹಿಂದೆ ಪುರಾಣ ಕತೆ

ರಾಖಿ ಹಬ್ಬದ ಹಿಂದೆ ಹಲವು ಪುರಾಣ ಮತ್ತು ಐತಿಹಾಸಿಕ ಕತೆಗಳಿವೆ. ಶಿಶುಪಾಲನನ್ನು ಕೊಲ್ಲುವುದಕ್ಕೆಂದು ಸುದರ್ಶನ ಚಕ್ರ ಬಳಸಲು ಹೊರಟ ಕೃಷ್ಣನ ಕೈ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನೇ ಹರಿದು ಆತನ ಕೈಬೆರಳಿಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ದುಶ್ಶಾಸನ ದ್ರೌಪದಿಯ ಸೀರೆ ಎಳೆಯುವಾಗ ಶ್ರೀಕೃಷ್ಣ ದ್ರೌಪದಿಗೆ ಸೀರೆಯನ್ನು ದಯಪಾಲಿಸುತ್ತಾನೆ.

ರಕ್ಷಾಬಂಧನದಂದು ಮಾಡಿಕೊಂಡ ಎಡವಟ್ಟು!

ಶ್ರೀಕೃಷ್ಣನಂಥ ಅಣ್ಣ ಸಿಗಲಿ

ಶ್ರೀಕೃಷ್ಣನಂಥ ಅಣ್ಣ ಸಿಗಲಿ

ದ್ರೌಪದಿ ಕಟ್ಟಿದ ಸೀರೆಯ ತುಂಡನ್ನೇ ಕೃಷ್ಣ ರಕ್ಷೆ ಎಂದುಕೊಂಡು ಆಕೆಯನ್ನು ತಂಗಿ ಎಂದು ಸ್ವೀಕರಿಸುವ ಕೃಷ್ಣ, ಮುಂದೆ ಆಕೆಯ ರಕ್ಷಣೆಗೆ ಬದ್ಧನಾಗುತ್ತಾನೆ. ಹೀಗೇ ರಕ್ಷಾಬಂಧನದ ಆಚರಣೆ ಆರಂಭವಾಯ್ತು ಎಂಬುದು ಪುರಾಣದ ಒಂದು ಕತೆ. ತಮಗೂ ಶ್ರೀಕೃಷ್ಣನಂತೇ ರಕ್ಷಣೆ ನೀಡುವ ಅಣ್ಣ ಸಿಗಲಿ ಎಂಬ ಉದ್ದೇಶದಿಂದ ಇಂದಿಗೂ ಸಹೋದರಿಯರು ತಮ್ಮ ಅಣ್ಣ, ತಮ್ಮಂದಿರಿಗೆ ರಕ್ಷೆ ಕಟ್ಟುತ್ತಾರೆ.

ಚಿನ್ನದಂಥ ಸಂಬಂಧಕ್ಕೆ ಮುತ್ತಿನ ರಾಖಿ

ಹುಮಾಯುನ್ ಮತ್ತು ರಾಖಿ

ಹುಮಾಯುನ್ ಮತ್ತು ರಾಖಿ

ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಆತನಿಗೆ ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಉಂಟುಮಾಡಬೇಡಿ ಎಂದು ಆತನ ಪತ್ನಿ ರೊಕ್ಸಾನಾ, ಪೌರವ ರಾಜ ಪುರು ವಿಗೆ ರಾಖಿ ಕಳಿಸುತ್ತಾಳೆ. ಇನ್ನೊಂದು ಕತೆಯಂತೆ ಚಿತ್ತೂರಿನ ರಾಣಿ ಕರ್ಣಾವತಿ ಗುಜರಾತಿನ ಸುಲ್ತಾನರಿಂದ ತಮಗೆ ರಕ್ಷಣೆ ಬೇಕೆಂದು ಮೊಘಲ್ ದೊರೆ ಹುಮಾಯುನ್ ಗೆ ರಾಖಿ ಕಳಿಸುತ್ತಾಳೆ.

ರವೀಂದ್ರನಾಥ್ ಟ್ಯಾಗೂರ್ ಮತ್ತು ರಕ್ಷಾಬಂಧನ

ರವೀಂದ್ರನಾಥ್ ಟ್ಯಾಗೂರ್ ಮತ್ತು ರಕ್ಷಾಬಂಧನ

ಬಂಗಾಳ ವಿಭಜನೆ(1905)ಯ ಸಮಯದಲ್ಲಿ ಹಿಂದು- ಮುಸ್ಲಿಮರ ನಡುವಿನ ಬಾಂಧವ್ಯ ಮತ್ತು ಒಗ್ಗಟ್ಟನ್ನು ಬ್ರಿಟಿಷರೆದುರು ವ್ಯಕ್ತಪಡಿಸುವುದಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೂರ್ ರಕ್ಷಾಬಂಧನ ಸಮಾರಂಭವನ್ನು ಆಚರಿಸಿದ್ದರು ಎಂಬ ಉಲ್ಲೇಖವೂ ಇತಿಹಾಸದ ಪುಟಗಳಲ್ಲಿದೆ. ಇತಿಹಾಸದಿದ್ದಕ್ಕೂ, ರಾಖಿಯ ಮಹಿಮೆಯನ್ನು ಸಾರುವ ಸಾಕಷ್ಟು ಕತೆಗಳು ಸಿಕ್ಕುತ್ತವೆ.

ರಾಖಿ ಕೇವಲ ದಾರವಲ್ಲ, ಪವಿತ್ರ ಬಂಧ

ರಾಖಿ ಕೇವಲ ದಾರವಲ್ಲ, ಪವಿತ್ರ ಬಂಧ

ಇಂದು ಮಾರುಕಟ್ಟೆಗೆ ತರಹೇವಾರಿ ರಾಖಿಗಳು ಬಂದಿವೆ. ಒಂದು ರೂಪಾಯಿ ರಾಖಿಯಿಂದ ಹಿಡಿದು, ಅಣ್ಣನಿಗಾಗಿ ಲಕ್ಷಾಂತರ ರೂ. ಬೆಲೆಬಾಳುವ ವಜ್ರದ ರಾಖಿಯನ್ನೇ ಕಟ್ಟುವವರೂ ಇದ್ದಿರಬಹುದು. ಅವೆಲ್ಲವೂ ಅವರವರ ಅನುಕೂಲ. ಆದರೆ ಅಣ್ಣನಿಂದ ಸಿಗುವ ಉಡುಗೊರೆಯನ್ನೋ, ದುಬಾರಿ ವಸ್ತುವನ್ನೋ ನಿರೀಕ್ಷಿಸಿ ಕಟ್ಟುವ ದು ಬಾರಿ ರಾಖಿಗಿಂತ, ಶುದ್ಧ ಮನಸ್ಸಿನಿಂದ, ಪ್ರೀತಿಯಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟ ಅರ್ಥವಿದೆ. ಅಣ್ಣನಿಗೆ ಆರತಿ ಮಾಡಿ, ಸಿಹಿ ತಿನ್ನಿಸಿ, ನಿಶ್ಕಲ್ಮಶ ಮನಸ್ಸಿನಿಂದ ರಾಖಿ ಕಟ್ಟಬೇಕು. ಅಣ್ಣ ಅಥವಾ ತಮ್ಮನಿಗೆ ದೀರ್ಘಾಯುರಾರೋಗ್ಯ ನೀಡುವಂತೆ ದೇವರನ್ನು ಬೇಡಿ, ತನಗೆ ಸದಾ ರಕ್ಷಣೆ ನೀಡುವಂತೆ ಅಣ್ಣನನ್ನು ಕೇಳಿಕೊಳ್ಳುವ ಸಾಕೇಂತಿಕ ಆಚರಣೆ ಈಇ ರಕ್ಷಾಬಂಧನ.

ನೀವೇ ನಮ್ಮ ನಿಜವಾದ ರಕ್ಷಕರು

ಇಂದು ದೇಶದಾದ್ಯಂತ ರಾಖಿ ಹಬ್ಬ ಆಚರಿಸಲಾಗುತ್ತಿದ್ದು, ಜಮ್ಮು ಕಾಶ್ಮೀರದ ಹಲವೆಡೆ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ಭಾರತೀಯ ಮಹಿಳೆಯರು ತಮ್ಮ ನಿಜವಾದ ರಕ್ಷಕರಿಗೆ ರಅಖಿ ಹಬ್ಬದ ಶುಭ ಕೋರುತ್ತಿದ್ದಾರೆ.

ವೃಕ್ಷೋ ರಕ್ಷತಿ ರಕ್ಷಿತಃ...

ಜಾರ್ಖಂಡ್ ನ ಬುಡಕಟ್ಟು ಮಹಿಳೆಯರು ಮರಕ್ಕೆ ರಾಖಿ ಕಟ್ಟುವ ಮೂಲಕ ತಮ್ಮನ್ನು ರಕ್ಷಿಸುವಂತೆ ಮೇಡಿಕೊಂಡಿದ್ದಾರೆ. ಮರವನ್ನು ರಕ್ಷಿಸಿದರೆ, ಮರ ನಮ್ಮನ್ನು ರಕ್ಷಿಸುತ್ತದೆ ಎಂಬ ಅವರ ಉನ್ನತ ಪರಿಜ್ಞಾನಕ್ಕೆ ತಲೆಬಾಗದಿದ್ದರೆ ಹೇಗೆ?

ಚೀನೀ ರಾಖಿ ಬೇಡ

ಮೇಡ್ ಇನ್ ಇಂಡಿಯಾ ಎಂಬ ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಭಾಷಣ ಮಾಡಿದರೂ, ಚೀನಾ ವಸ್ತುಗಳನ್ನೇ ಬಳಸುವವರಿಗೆ ಜಮ್ಮು ಕಾಶ್ಮೀರದ ಇಬ್ಬರು ಮಕ್ಕಳು ಉತ್ತರ ನೀಡಿದ್ದಾರೆ. ಭಾರತದ ಮಾರುಕಟ್ಟೆಗೆ ಬಂದಿರುವ ಬಹುಪಾಲು ಎಲ್ಲ ರಾಖಿಗಳೂ ಚೀನಾ ದಿಂದ ಆಮದು ಮಾಡಿಕೊಂಡವು. ಚೀನಾ ವಸ್ತುಗಳು ನಮಗೆ ಬೇಡ. ನಾವೇ ರಾಖಿ ತಯಾರಿಸುತ್ತೇವೆಂದು, ಈ ಮಕ್ಕಳು ತಾವೇ ರಾಖಿ ತಯಾರಿಸುತ್ತಿದ್ದಾರೆ!

English summary
Raksha Bandhan, or simply Rakhi is a Hindu festival, celebrated in many parts of the Indian subcontinent, notably India and Nepal. Raksha bandhan means "bond of protection". It is observed on the full moon day of the Hindu luni-solar calendar month of Shravana, which falls on August 7th in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X