ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nag Panchami 2021: ನಾಗರ ಪಂಚಮಿ ಪೂಜಾ ವಿಧಾನ ಮತ್ತು ಮಹತ್ವ

|
Google Oneindia Kannada News

ನಾಗರ ಪಂಚಮಿಯನ್ನು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯ 5ನೇ ದಿನದಂದು ಆಚರಿಸಲಾಗುತ್ತದೆ. ಅಂದರೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದೆ. ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ.

ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವುಗಳ ವಾಸಸ್ಥಾನವಾಗಿದ್ದು, ನಾಗರ ಪಂಚಮಿಯಂದು ಬೆಳ್ಳಿಗ ನಾಗನಿಗೆ, ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆಯಿದೆ.

ಈ ಬಾರಿ ಆಗಸ್ಟ್ 13 ರಂದು ನಾಗರಪಂಚಮಿ ಹಬ್ಬ ನಡೆಯಲಿದೆ. ನಾಗರ ಪಂಚಮಿ ದಿನದಂದು ನಾಗಗಳನ್ನು ಪೂಜಿಸುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವುದು. ನಾಗರ ಪಂಚಮಿ ದಿನದಂದು ನಾಗಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವುದು ಮಾತ್ರವಲ್ಲ, ಉಪವಾಸ ವ್ರತವನ್ನು ಕೂಡ ಕೈಗೊಳ್ಳಲಾಗುತ್ತದೆ.

ದೇವಿ ಭಾಗವತ ಪುರಾಣದಲ್ಲಿ ನಾವು ಕೆಲವೊಂದು ಸರ್ಪಗಳ ಹೆಸರುಗಳನ್ನು ಕೇಳಬಹುದು. ನಾಗರ ಪಂಚಮಿ ಹಬ್ಬವನ್ನು ಕೇವಲ ಹಾವುಗಳನ್ನು ರಕ್ಷಿಸಲು ಮಾತ್ರವಲ್ಲ, ಪ್ರಾಣಿ ಸಂಕುಲವನ್ನು ಸೃಷ್ಟಿಯನ್ನು ರಕ್ಷಿಸುವುದರ ಕುರಿತು ಜ್ಞಾನವನ್ನು ಮೂಡಿಸುತ್ತದೆ.

ಪ್ರಾಚೀನ ಕಾಲದಿಂದಲೂ ನಾಗಗಳನ್ನು ಆರಾಧಿಸಿಕೊಂಡು ಬರಲಾಗಿದ್ದು, ನಾಗರ ಪಂಚಮಿಯಂದು ನಾಗರನ್ನು ಪೂಜಿಸಲಾಗುತ್ತದೆ ಮತ್ತು ಹಸುವಿನ ಹಾಲಿನಿಂದ ನಾಗರ ಕಲ್ಲುಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ.

ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ತಿಳಿಸಲಾಗಿದೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ ಹಾಗೂ ಶಾಂತಿಗಳನ್ನು ಮಾಡುತ್ತಾರೆ.

 ಮನೆಯಲ್ಲಿಯೇ ನಾಗರಪಂಚಮಿ ಆಚರಣೆ

ಮನೆಯಲ್ಲಿಯೇ ನಾಗರಪಂಚಮಿ ಆಚರಣೆ

ಕೊರೊನಾ ವೈರಸ್ ಭೀತಿಯಿರುವುದರಿಂದ ಈ ಬಾರಿ ನಾಗರ ಪಂಚಮಿಗೆ ಮನೆಯಿಂದ ಹೊರ ಹೋಗಿ ಹುತ್ತದ ಬಳಿ ಅಥವಾ ದೇವಸ್ಥಾನಗಳಲ್ಲಿ ನಾಗ ಪ್ರತಿಮೆಗೆ ಪೂಜೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ನಾಗಪೂಜೆ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

*ನಾಗಪೂಜೆಗೆ ಜುಲೈ.25ರ ಶನಿವಾರ ಬೆಳಿಗ್ಗೆ 5.38ರಿಂದ 8 ಗಂಟೆ 22 ನಿಮಿಷದ ಒಳಗೆ ಪೂಜೆ ಮಾಡಲು ಒಳ್ಳೆಯ ಮುಹೂರ್ತವಿದೆ.
*ಶುಚಿರ್ಭೂತವಾಗಿ, ಮಡಿವಸ್ತ್ರ ಧರಿಸಿ, ಗರಿಕೆ, ಗಂಧ, ಅಕ್ಷತೆ, ಹೂವು, ಅರಿಶಿಣ, ಮೋದಕ ಅಥವಾ ನಾಗದೇವನಿಗೆ ನೈವೈದ್ಯಕ್ಕೆ ಇನ್ನಿತರ ಖಾದ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು.
*ದೇವರ ಕೋಣೆಯಲ್ಲಿ ಒಂದು ಬೆಳ್ಳಿ ಬಟ್ಟಲಿನಲ್ಲಿ ಬೆಳ್ಳಿಯ ನಾಗರ ಪ್ರತಿಮೆ ಅಥವಾ ಹಸುವಿನ ಸಗಣಿಯಿಂದಮಾಡಿದ ನಾಗರ ಪ್ರತಿಮೆಯನ್ನು ಇರಿಸಿಕೊಳ್ಳಿ. ನಂತರ ಓಂ ಭುಜಂಗೇಶಾಯ ವಿದ್ಮಹೇ ಸರ್ಪರಾಜಾಯ ಧೀಮಹ, ತನ್ನೇ ನಾಗಃ ಪ್ರಚೋದಯಾತ್ ಎಂದು ಮಂತ್ರ ಪಠಿಸುತ್ತಾ ಹಾಲಿನ ಅಭಿಷೇಕ ಮಾಡಬೇಕು.
*ನಂತರ ನಾಗ ಪ್ರತಿಮೆಗೆ ಗರಿಗೆ, ಗಂಧ ಹಾಗೂ ಅಕ್ಷತೆಯನ್ನು ಹಾಕಿ ಪೂಜೆ ಮುಂದುವರೆಸಬೇಕು. ನಂತರ ಗಂಧದ ಕಡ್ಡಿ ಹಚ್ಚಿ, ದೀಪ, ಬೆಳಗಿ, ತೆಂಗಿನಕಾಯಿ ಒಡೆದು ವಿವಿಧ ಖಾದ್ಯಗಳನ್ನು ನಾಗರಾಜನಿಗೆ ನೈವೇದ್ಯ ಮಾಡಬೇಕು.
*ಕರ್ಪೂರದಿಂದ ಮಂಗಳಾರತಿ ಮಾಡಿ. ನಂತರ ಕೈಲಿ ಹೂವು, ಅಕ್ಷತೆ ಹಾಗೂ ಅರಿಶಿಣವನ್ನು ಹಿಡಿದುಕೊಂಡು ನಾಗರಾಜನ ಮಂತ್ರವನ್ನು ಪಠಣ ಮಾಡಿ ಪಾರ್ಥನೆ ಮಾಡಬೇಕು. ನಂತರ ಮನೆ-ಮಂದಿಯೊಂದಿಗೆ ಪ್ರಸಾದ ಸೇವಿಸಿದರೆ, ನಾಗ ಪೂಜೆ ಪೂರ್ಣಗೊಳ್ಳುತ್ತದೆ.

 ಪಂಚಮಿ ಪೂಜಾ ವಿಧಾನ

ಪಂಚಮಿ ಪೂಜಾ ವಿಧಾನ

*ಹಸುವಿನ ಸಗಣಿಯಿಂದ ಎರಡು ನಾಗರ ಹಾವಿನ ಪ್ರತಿಮೆಯನ್ನು ಮಾಡಿ ಅದನ್ನು ನಿಮ್ಮ ಮನೆ ಬಾಗಿಲಿನ ಎರಡೂ ಬದಿಯಲ್ಲಿ ಇರಿಸಿ.
*ನೀವು ಹಸುವಿನ ಸಗಣಿಯಿಂದ ತಯಾರಿಸಿದ ಪ್ರತಿಮೆಗೆ ಮೊಸರು, ಗರಿಕೆ, ಗಂಧ, ದರ್ಬೆ, ಅಕ್ಷತೆ, ಹೂ, ಮೋದಕ ಮತ್ತು ಮಾಲ್ಪುವಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಅರ್ಪಿಸಿ.
*ಈ ದಿನ ಬ್ರಾಹ್ಮಣರಿಗೆ ಆಹಾರವನ್ನು ನೀಡಿ ಮತ್ತು ನೀವು ಉಪವಾಸವನ್ನು ಕೈಗೊಳ್ಳುವುದು ಉತ್ತಮ. ಕೊರೊನಾ ಸಮಯದಲ್ಲಿ ಬ್ರಾಹ್ಮರಿಗೆ ಆಹಾರವನ್ನು ನೀಡುವುದು ಅಸಾಧ್ಯವಾದುದ್ದರಿಂದ ನೀವು ಆಹಾರವನ್ನು ತೆಗೆದುಕೊಂಡು ಹೋಗಿ ದೇವಾಲಯದಲ್ಲಿ ದಾನ ಮಾಡಬಹುದು.
*ನಾಗರ ಪಂಚಮಿಯಂದು ದೇವಾಲಯಕ್ಕೆ ಹೋಗಿ ನಾಗಗಳಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು.
*ಸರ್ಪಗಳನ್ನು ಅಥವಾ ನಾಗರನ್ನು ಪೂಜಿಸುವಾಗ ಕಡ್ಡಾಯವಾಗಿ ಅರಶಿಣ ಅಥವಾ ಹಳದಿಯನ್ನು ಬಳಸಿ.
*ನಾಗರ ಪಂಚಮಿ ದಿನದಂದು ಗೋಡೆಯ ಮೇಲೆ ಅರಶಿಣ ಅಥವಾ ಗಂಧದಿಂದ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಾರ್ಕೋಟಕ, ಅಶ್ವ, ಧೃತರಾಷ್ಟ್ರ, ಶಂಕಪಾಲ, ಕಾಳಿ, ಮತ್ತು ತಕ್ಷಕ ಈ ಎಲ್ಲಾ ಸರ್ಪಗಳ ಹೆಸರುಗಳನ್ನು ಬರೆಯಬೇಕು.

 ನಾಗರ ಪಂಚಮಿಯ ಮಹತ್ವ ಏನು?

ನಾಗರ ಪಂಚಮಿಯ ಮಹತ್ವ ಏನು?

ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ.

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.

 ನಾಗರ ಪಂಚಮಿಯ ಆಚರಣೆಯ ಹಿಂದಿನ ಕಾರಣ

ನಾಗರ ಪಂಚಮಿಯ ಆಚರಣೆಯ ಹಿಂದಿನ ಕಾರಣ

ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದನು. ಆ ಕತೆ ಹೀಗಿದೆ;- ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು.

ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿದನು. ಸ್ವಲ್ಪ ಸಮಯದ ನಂತರ ಆ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಾಯಿತು. ಆಗ ಆ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಅಂಗಲಾಚಿತು. ಈ ಮಾತಿಗೆ ಒಪ್ಪಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಟ್ಟನು. ಹೀಗೆ ನಾಗರ ಪಂಚಮಿಯನ್ನು ಕೃಷ್ಣನು ಕಾಳಿಯಾ ಎಂಬ ಭಯಾನಕ ಸರ್ಪವನ್ನು ಗೆದ್ದ ಸಂತೋಷವನ್ನು ನೆನಪಿಸಿಕೊಳ್ಳುವ ಸಲುವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

English summary
Nag Panchami 2021: Here we talking about the details of Nag Panchami 2021 Date, Time, Muhurat, Puja Vidhi, Vrat Katha, Benefits and Significance in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X