ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮುದ್ದು ಕೃಷ್ಣರಿಗೆ ಸಾಟಿ ಯಾರು ಹೇಳಿ..?

|
Google Oneindia Kannada News

ಧರ್ಮ ಸಂಸ್ಥಾಪನೆಗಾಗಿ ಮತ್ತೆ ಮತ್ತೆ ಅವತರಿಸುತ್ತೇನೆಂದ ಭಗವಾನ್ ಶ್ರೀಕೃಷ್ಣ ಭೂಮಿಗೆ ಅವತರಿಸಿದ ದಿನ ಇಂದು(ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ, ಈ ವರ್ಷ ಆಗಸ್ಟ್ 14). ಜಗತ್ತಿನಾದ್ಯಂತ ಇರುವ ಹಿಂದುಗಳು ಶ್ರಿಕೃಷ್ಣ ಜನ್ಮಾಷ್ಟಮಿಯನ್ನು ಇಂದು ಶ್ರದ್ಧೆ-ಭಕ್ತಿಯಿಂದ ಆಚರಿಸುತ್ತಿದ್ದಾರೆ.

ಸಾಮಾನ್ಯವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ರಾತ್ರಿ ಆಚರಿಸುತ್ತಾರೆ. ಕೃಷ್ಣ ರಾತ್ರಿ ಜನಿಸಿದ ಕಾರಣಕ್ಕೆ ಈ ಆಚರಣೆ. ಅಂದು ಬೆಳಿಗ್ಗೆಯೆಲ್ಲ ನೀರು, ಫಳಾರವನ್ನಷ್ಟೇ ಸೇವಿಸಿ ಉಪವಾಸ ಮಾಡುವ ಜನರು ಬೆಳಗ್ಗಿನಿಂದ ಸಂಜೆಯವರೆಗೂ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತ ಕಾಲಕಳೆಯುತ್ತಾರೆ.

ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?

ಮಧ್ಯರಾತ್ರಿಯಲ್ಲಿ ಪೂಜೆ ನಿಷಿದ್ಧವಾದರೂ ಶ್ರೀಕೃಷ್ಣ ಜನಿಸಿದ್ದು ಮಧ್ಯರಾತ್ರಿಯಲ್ಲಿ ಎಂಬ ಕಾರಣಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಾತ್ರ ರಾತ್ರಿ ಪೂಜೆ ಮಾಡಲಾಗುತ್ತದೆ. ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ, ಬೆಣ್ಣೆಗಳನ್ನಿಟ್ಟು ಅಂದು ನೈವೇದ್ಯ ಮಾಡಲಾಗುತ್ತದೆ. ಮರುದಿನ ಮೊಸರು ಕುಡಿಕೆ ಎಂಬ ಹೆಸರಿನಲ್ಲಿ ಸಂಭ್ರಮ ಆಚರಿಸುವ ಪದ್ಧತಿಯೂ ಹಲವೆಡೆ ಇದೆ.

ಫೋಟೋಗೆ ಸಖತ್ ಪೋಸ್ ಕೊಡುವ ಕಿಲಾಡಿ ಕಿಟ್ಟುಗಳುಫೋಟೋಗೆ ಸಖತ್ ಪೋಸ್ ಕೊಡುವ ಕಿಲಾಡಿ ಕಿಟ್ಟುಗಳು

ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣ ವೇಷ ತೊಟ್ಟ ನಿಮ್ಮ ಮಕ್ಕಳ ಚಿತ್ರವನ್ನು ನಮಗೆ ಕಳಿಸುವಂತೆ 'ಒನ್ ಇಂಡಿಯಾ' ಓದುಗರಲ್ಲಿ ಮನವಿಮಾಡಿಕೊಳ್ಳಲಾಗಿತ್ತು. ಆ ಮನವಿ ಆಲಿಸಿ ಹಲವರು ತಮ್ಮ ಮುದ್ದು ಮಕ್ಕಳ ಚಿತ್ರವನ್ನು ಕಳಿಸಿಕೊಟ್ಟಿದ್ದಾರೆ. ಅದಕ್ಕಾಗಿ ಧನ್ಯವಾದಗಳು.

ಆ ಎಲ್ಲ ಮುದ್ದು ಕಿಟ್ಟಪ್ಪಗಳ ಚಿತ್ರಗಳು ಇಲ್ಲಿವೆ...

ನನ್ ಕೊಳಲು, ಯಾರ್ಗೂ ಕೊಡಲ್ಲಪ್ಪ!

ನನ್ ಕೊಳಲು, ಯಾರ್ಗೂ ಕೊಡಲ್ಲಪ್ಪ!

ಅಯ್ಯೋ, ನನ್ ಕೊಳಲು. ಯಾರಿಗೂ ಕೊಡಲ್ಲಪ್ಪ ಅಂತಿರೋ ಈ ಮುದ್ದು ಕಿಟ್ಟಪ್ಪ ಧಾರವಾಡದ ಅಂಶು ಹಿಟ್ಟನಹಳ್ಳಿ.
ತಂದೆ: ಮಲ್ಲಿಕಾರ್ಜುನ ಹಿಟ್ಟನಹಳ್ಳಿ, ತಾಯಿ: ನೀಲಾಂಬಿಕಾ ಮಲ್ಲಿಕಾರ್ಜುನ ಹಿಟ್ಟನಹಳ್ಳಿ

ಯಾರೂ ನೋಡ್ತಿನಲ್ಲ ತಾನೇ..?!

ಯಾರೂ ನೋಡ್ತಿನಲ್ಲ ತಾನೇ..?!

ಚೆಲ್ಲಿರೋ ಬೆಣ್ಣೆ ಆದ್ರೂ ಪರ್ವಾಗಿಲ್ಲ, ತಿಂದ್ಬಿಡ್ತೀನಿ! ಯಾರೂ ನೋಡ್ತಿಲ್ಲ ತಾನೇ..? ಅಂತಿರ ಈ ಕ್ಯೂಟ್ ಪುಟಾಣಿ ಹರಪನಹಳ್ಳಿಯ ಸೋನಂ.
ತಂದೆ: ಲಕ್ಷ್ಮಣ್, ತಾಯಿ ಕೋಮಲ್

ಅಂಬೆಗಾಲಿನ ಕೃಷ್ಣ

ಅಂಬೆಗಾಲಿನ ಕೃಷ್ಣ

ಎಲ್ಲಿದೀಯಮ್ಮ, ನಾನು ನಿದ್ದೆಯಿಂದ ಎದ್ದಾಯ್ತು... ಎನ್ನುತ್ತ ಮುದ್ದು ಮುದ್ದಾಗಿ ಅಂಬೆಗಾಲಿಡ್ತಿರೋ ಈ ಕೃಷ್ಣ ಮಂಗಳೂರಿನ ಆರುಷಿ ಉದಯ್.
ತಂದೆ: ಉದಯ್, ತಾಯಿ: ಸುಜಿತಾ

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್...

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್...

ಬೆಣ್ಣೆ ಅಂತ ಅಮ್ಮ ಪಾಪ್ ಕಾರ್ನ್ ಹಾಕ್ಬಿಟ್ಟಿದ್ದಾಳೆ ಮಡಿಕೆಗೆ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ ಅಂತಿದ್ದಾನೆ ಮಣಿಪಾಲದ ಸಾನ್ವಿ ಪಳನ್.
ತಂದೆ: ನವೀನ್ ಕುಮಾರ್, ತಾಯಿ: ಸೌಮ್ಯ

ಬೇಗ ಕ್ಲಿಕ್ ಮಾಡೀಪ್ಪಾ...

ಬೇಗ ಕ್ಲಿಕ್ ಮಾಡೀಪ್ಪಾ...

ಈ ಡ್ರೆಸ್ಸಲ್ಲಿ ಜಾಸ್ತಿ ಹೊತ್ತು ನಿಲ್ಲೋಕಾಗಲ್ಲ, ಬೇಗ ಕ್ಲಿಕ್ ಮಾಡೀಪ್ಪಾ... ಅಂತಿದ್ದಾನೆ ಸುಯೋದ್ ಕರಣ್ವಿ

ಕೊಳಲು ನುಡ್ಸೋದು ಕಷ್ಟ ಕಣ್ರಿ...

ಕೊಳಲು ನುಡ್ಸೋದು ಕಷ್ಟ ಕಣ್ರಿ...

ಅಯ್ಯೋ ಈ ಕೊಳಲು ನುಡಿಸೋದು ಕಷ್ಟಪ್ಪಾ, ಆದ್ರೂ ಕಲೀತಿನಿ ಬಿಡಲ್ಲ ಅಂತಿದ್ದಾಳೆ ಬಳ್ಳಾರಿಯ ಕೊಟ್ಟೂರಿನ ಪ್ರಣತಿ ಕೆ.ವಿ. .
ತಂದೆ: ವೀರಪ್ಪ, ತಾಯಿ: ಶಿಲ್ಪಾ ಕೆ.

ನಾ ಕೊಳಲು ನುಡ್ಸಿದ್ರೆ ಎಲ್ರೂ ಫಿದಾ..!

ನಾ ಕೊಳಲು ನುಡ್ಸಿದ್ರೆ ಎಲ್ರೂ ಫಿದಾ..!

ನಾನು ಕೊಳಲು ನುಡ್ಸೋಕೆ ಶುರು ಮಾಡಿದ್ರೆ ಎಲ್ರೂ ಫಿದಾ ಆಗ್ಬಿಡ್ತಾರೆ... ಒಂದ್ಸಾರಿ ನುಡಿಸ್ಲಾ ಅಂತ ಕೇಳ್ತಿದ್ದಾನೆ ಯಲಹಂಕದ ಪುಟ್ಟ ಕೃಷ್ಣ ಹಿತೇಶ್.

ನಾನು ಅರ್ಜುನ್, ಆದ್ರೂ ಇವತ್ತು ಕೃಷ್ಣ!

ನಾನು ಅರ್ಜುನ್, ಆದ್ರೂ ಇವತ್ತು ಕೃಷ್ಣ!

ನನ್ ಹೆಸರು ಅರ್ಜುನ್, ಆದ್ರೂ ಇವತ್ತು ನಾನು ಕೃಷ್ಣ ಆಗ್ಬಿಟ್ಟಿದೀನಿ ನೋಡಿ ಅಂತಿರೋ ಈ ಪುಟಾಣಿ ಕಿಟ್ಟಪ್ಪ ರಾಯಚೂರಿನ ಜವಳಗೇರೆಯಅರ್ಜುನ್ ಕೇಸರಿ.
ತಂದೆ: ಶರಣು, ತಾಯಿ ಪ್ರಿಯಾಂಕ

ಯಸ್...! ಬೆಣ್ಣೆ ಕಂಡ್ಬಿಡ್ತು...!

ಯಸ್...! ಬೆಣ್ಣೆ ಕಂಡ್ಬಿಡ್ತು...!

ಯಸ್, ಅಮ್ಮ ನಂಗೆ ಕಾಣ್ಬಾರ್ದು ಅಂತ ಅವಿತಿಟ್ಟಿರೋ ಬೆಣ್ಣೆ ಕಾಣಿಸ್ಬಿಡ್ತು ಅಂತ ಖುಷಿಪಡ್ತಿರೋ ಈ ಮುದ್ದು ಕೃಷ್ಣ, ಬೆಂಗಳೂರಿನ ಕೀರ್ತನಾ.
ತಂದೆ: ಸತೀಶ್ , ತಾಯಿ ರಮ್ಯಾ

ನೆಮ್ಮದಿಯಿಂದ ನಿದ್ದೆ ಮಾಡೋಕೂ ಬಿಡಲ್ಲ!

ನೆಮ್ಮದಿಯಿಂದ ನಿದ್ದೆ ಮಾಡೋಕೂ ಬಿಡಲ್ಲ!

ನೋಡ್ರಿ, ನೆಮ್ಮದಿಯಿಂದ ನಿದ್ದೆ ಮಾಡೋಣಂದ್ರೂ ಬಿಡಲ್ಲ. ಕೊಳಲು ನುಡ್ಸು ಅಂತಾರೆ... ಅಂತಿದ್ದಾನೆ ಮಂಡ್ಯದ ಮಡಚಕನಹಳ್ಳಿಯ ರಿಥಿಜ್ಞ.
ತಂದೆ: ಕುಮಾರ್, ತಾಯಿ: ವಿದ್ಯಾಶ್ರೀ

ನಾನು ಕೊಳಲು ನುಡಿಸ್ತೀನಿ ನವಿಲು ಡಾನ್ಸ್ ಮಾಡತ್ತೆ!

ನಾನು ಕೊಳಲು ನುಡಿಸ್ತೀನಿ ನವಿಲು ಡಾನ್ಸ್ ಮಾಡತ್ತೆ!

ಆನು ಕೊಳಲು ನುಡ್ಸೋಕೆ ಶುರು ಮಾಡಿದ್ರೆ ಸಾಕು ಕಣ್ರೀ, ಈ ನವಿಲುಗಳು ಡಾನ್ಸ್ ಮಾಡೋಕೆ ಶುರು ಮಾಡ್ಬಿಡುತ್ವೆ ಅಂತಿದ್ದಾನೆ ಚಿಕ್ಕಬಳ್ಳಾಪುರದ ನಿಶ್ಚಲ್ ಆರ್.ರೆಡ್ಡಿ.
ತಾಯಿ: ಮುನಿರತ್ನ ಸಿ.ಆರ್, ತಂದೆ: ರಮೇಶ್ ಜಿ.ವಿ.

ಈ ಪೋಸ್ ಓಕೆನಾ?

ಈ ಪೋಸ್ ಓಕೆನಾ?

ಅಯ್ಯೋ, ನಾನ್ ಬಿಡಿ, ಹೆಂಗ್ ಪೋಸ್ ಕೊಟ್ರೋ ಚೆಂದಾನೆ! ಈ ಪೋಸ್ ಓಕೆನಾ? ಅಂತಿರೋ ಕ್ಯೂಟ್ ಕೃಷ್ಣ ಬೆಂಗಳೂರಿನ ಲೇಖಕ್.
ತಂದೆ: ಉಮೇಶ್, ತಾಯಿ: ಸುರಬಿ

ಅಮ್ಮ ನನ್ನ ಹುಡುಕ್ತಿದ್ದಾರಾ..?

ಅಮ್ಮ ನನ್ನ ಹುಡುಕ್ತಿದ್ದಾರಾ..?

ಶ್...! ನಾನಿಲ್ಲಿ ಮನೆ ಹಿಂದೆ, ಹಿತ್ತಲಿಗೆ ಬಂದು ಬೆಣ್ಣೆ ತಿಂತಿದ್ದೀನಿ. ಅಮ್ಮ ನನ್ ಹುಡುಕ್ತಾ ಇದ್ರೆ, ಎಲ್ಲಿದಾನೋ ಗೊತ್ತಿಲ್ಲ ಅಂದ್ಬಿಡಿ ಆಯ್ತಾ? ಅಂತಿದ್ದಾನೆ ಬೆಂಗಳುರಿನ ವಿಶಾಂಕ್!
ತಂದೆ: ವೇಣುಗೋಪಾಲ್, ಮದುಸ್ಮಿತಾ

ಸೊಳ್ಳೆ ಕಾಟದಲ್ಲಿ ಪೋಸ್ ಕೊಡೋದು ಹೆಂಗಪ್ಪ?!

ಸೊಳ್ಳೆ ಕಾಟದಲ್ಲಿ ಪೋಸ್ ಕೊಡೋದು ಹೆಂಗಪ್ಪ?!

ಈ ಸೊಳ್ಳೆ ಕಾಟದಲ್ಲಿ ಪೋಸ್ ಕೊಡೋಕೂ ಆಗ್ತಿಲ್ಲಪ್ಪ ಅಂತಿದ್ದಾನೆ ಶಿವಮೊಗ್ಗದ ಕೃಷ್ಣ, ವಿವೇಕ್!
ತಂದೆ: ಹರೀಶ್ ಎಚ್.ಎಸ್., ಶೈಲಜಾ ಬಿ.

ರಾಧೆ ಎಲ್ಲಿ, ಇನ್ನೂ ಪತ್ತೆಯಿಲ್ಲ!

ರಾಧೆ ಎಲ್ಲಿ, ಇನ್ನೂ ಪತ್ತೆಯಿಲ್ಲ!

ರಾಧೆ ಬರ್ತಾಳೇನೋ ಅಂತ ಕೊಳಲು ನುಡಿಸ್ತಾ ಇದೀನಿ ಆಗ್ಲಿಂದ..? ಎಲ್ಲೋದ್ಲು ಇವ್ಳು? ಇನ್ನೂ ಪತ್ತೆ ಇಲ್ಲ ಅಂತಿದ್ದಾನೆ ಬೀದರ್ ಬಸವಕಲ್ಯಾಣದ ಚಿನ್ಮಯ ಮಂಡಿ. ತಂದೆ: ರವಿಚಂದ್ರ ಮಂಡಿ, ತಾಯಿ: ಅರ್ಚನಾ ಮಂಡಿ

ಯಾವ ಕಡೆಯಿಂದ ಓಡ್ಲಿ?

ಯಾವ ಕಡೆಯಿಂದ ಓಡ್ಲಿ?

ಅಮ್ಮಾ ಬರೋದ್ರೊಳಗೆ ಎಸ್ಕೇಪ್ ಆಗ್ಬೇಕು. ಗೋಪಿಕೆಯರು ಕಾಯ್ತಿದ್ದಾರೆ. ಯಾವ ದಿಕ್ಕಿಂದ ಓಡ್ಲಿ ಅಂತ ಯೋಚಿಸ್ತಿದಾನೆ ದಾವಣಗೆರು ಸುಂದರ ಕೃಷ್ಣ ರಜತ್ ಎಂ.

English summary
Hindus across the world will be celebrating Shri Krishna Janmashtami on 14th Aug. Oneindia had requested it's readers to send Photos of their child dressed as little Krishna. Many parents have sent their little Krishn's cute pictures. Here are those photos. Happy Krishna Janmashtami to all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X