• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳ್ಳ ಕೃಷ್ಣಂಗೆ ಜನ್ಮದಿನ... ಎಲ್ಲೆಲ್ಲೂ 'ಮೊಸರು ಕುಡಿಕೆ' ಸಂಭ್ರಮ

|

ಶ್ರೀಕೃಷ್ಣ ಅಂದ್ರೆ ದೇವರು ಅನ್ನೋದಕ್ಕಿಂತ ಹೆಚ್ಚಾಗಿ ಆತ್ಮೀಯ ಸ್ನೇಹಿತ ಎಂಬ ಭಾವ. ಬೇರೆಲ್ಲ ದೇವರ ಮೇಲಿರುವುದು ಗೌರವ ತುಂಬಿದ ಭಕ್ತಿಯಾದರೆ, ಶ್ರೀಕೃಷ್ಣನ ಮೇಲೆ ಗೌರವ, ಭಕ್ತಿಯೊಂದಿಗೆ ಸಲಿಗೆಯೂ ಸೇರಿದೆ. ಆ ಸಲಿಗೆ ಇಲ್ಲದಿದ್ದರೆ ಮುರಾರಿಯನ್ನು ಕಳ್ಳ, ತುಂಟ ಅಂತೆಲ್ಲ ಕರೆವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲವೇನೋ!

ಪವಾಡ, ಸಾಹಸಕ್ಕಿಂತ ಹೆಚ್ಚಾಗಿ ಬಾಲ್ಯದಲ್ಲಿ ತುಂಟಾಟದಿಂದಲೇ ಹೆಸರಾದವನು ಈ ಪಿಳ್ಳಂಗೋವಿ ಕೃಷ್ಣ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಲೌಕಿಕತೆಯಲ್ಲಿ ಮುಳುಗಿಯೂ, ಪಾರಮಾರ್ಥಿಕ ಅನುಭಾವ ಪಡೆದವನು ಕೃಷ್ಣ.

ಸೆ.2 ಜನ್ಮಾಷ್ಟಮಿ: ಶ್ರೀಕೃಷ್ಣನ ಈ 50 ಹೆಸರುಗಳು ನಿಮಗೆ ಗೊತ್ತೆ?

ಅಂಥ ಶ್ರೀಕೃಷ್ಣಂಗೆ ನಾಳೆ(ಸೆಪ್ಟೆಂಬರ್ 2) ಜನ್ಮದಿನ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಜನಿಸಿದ ಶ್ರೀಕೃಷ್ಣ ಅವತಾರ ಪುರುಷ. ಧರ್ಮ ಸಂಸ್ಥಾಪನೆಗಾಗಿ 'ಸಂಭವಾಮಿ ಯುಗೇ ಯುಗೇ' ಎಂದ ಶ್ರೀಕೃಷ್ಣನಿಗೆ ನಮಿಸುತ್ತಾ, ಕೃಷ್ಣ ಜನ್ಮಾಷ್ಟಮಿಯ ಒಂದಷ್ಟು ಸುಂದರ ಚಿತ್ರಗಳು ಇಲ್ಲಿವೆ.

ತುಂಟ ಕೃಷ್ಣನ ಬಾಲ್ಯ ನೆನಪಿಸುವ ಮೊಸರು ಕುಡಿಕೆ

ತುಂಟ ಕೃಷ್ಣನ ಬಾಲ್ಯ ನೆನಪಿಸುವ ಮೊಸರು ಕುಡಿಕೆ

ಶಾಲೆಯೊಂದರಲ್ಲಿ ಮಕ್ಕಳು ಮೊಸರು ಕುಡಿಕೆ ಆಟವಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮಿಸಿದರು. ಬೆಣ್ಣೆ ಪ್ರಿಯ ಮಾರಿ ಚಿಕ್ಕವನಿದ್ದಾಗ ತಾಯಿ ಯಶೋಧೆಗೆ ಕಾಣದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದನಂತೆ. ಚಿಕ್ಕವನಾಗಿದ್ದ ಆತನಿಗೆ ಬೆಣ್ಣೆ ಸಿಗದಂತೆ ಮೇಲಕ್ಕಿಟ್ಟರೂ ಸ್ನೇಹಿತರ ಮೇಲೆ ಹತ್ತಿ ಬೆಣ್ಣೆ ಕದ್ದು ತಿನ್ನುತ್ತಿದ್ದನಂತೆ. ಶ್ರೀಕೃಷ್ಣನ ತುಂಟ ಬಾಲ್ಯ ನೆನಪಿಸುವುದಕ್ಕೆ ಈ ಆಚರಣೆ.

ಕೃಷ್ಣನಿಂದ ಕಲಿಯಲೇಬೇಕಾದ 10 ಜೀವನ ಪಾಠಗಳು

ಕೃಷ್ಣ ಹಬ್ಬದ ಸಂಭ್ರಮದಲ್ಲಿ ವಿಕಲಚೇತನರು

ಕೃಷ್ಣ ಹಬ್ಬದ ಸಂಭ್ರಮದಲ್ಲಿ ವಿಕಲಚೇತನರು

ಶ್ರೀಕೃಷ್ಣ ಜನ್ಮಾಷ್ಟಮಿಗೂ ಮುನ್ನ ಮೊಸರು ಕುಡಿಕೆ ಹಬ್ಬದಲ್ಲಿ ನಿರತರಾದ ಮುಂಬೈಯ ವಿಕಲಚೇತನ ಶಾಲೆಯೊಂದರ ಮಕ್ಕಳು. ಶ್ರೀಕೃಷ್ಣ ಜಾತಿ, ಮತ ಎಲ್ಲವನ್ನು ಮೀರಿ ಎಲ್ಲರಿಗೂ ಪ್ರಿಯವಾದವನು. ತಮ್ಮ ನ್ಯೂನತೆಯನ್ನೆಲ್ಲ ಮರೆತು ಮುಗ್ಧ ಭಕ್ತಿಯಿಂದ ಕೃಷ್ಣ ಹಬ್ಬದ ಸಂಭ್ರಮ ಸವಿಯುತ್ತಿರುವ ಮಕ್ಕಳು.

ದ್ವಾರಕೆಯಲ್ಲಿದ್ದ ಕೃಷ್ಣ ವಿಗ್ರಹ ಉಡುಪಿಗೆ ಬಂದದ್ದು ಹೇಗೆ?

ಶ್ರೀಕೃಷ್ಣನ ಸುಂದರ ಚಿತ್ರ

ಶ್ರೀಕೃಷ್ಣನ ಸುಂದರ ಚಿತ್ರ

ಕೋಲ್ಕತ್ತದ ಕಲಾವಿದನೊಬ್ಬ ಕೃಷ್ಣಣ ಜನ್ಮಾಷ್ಟಮಿಯ ನಿಮಿತ್ತ ಕುಂಚದಲ್ಲಿ ಸುಂದರವಾಗಿ ಕೃಷ್ಣನನ್ನು ಬರೆದು ತನ್ನ ಭಕ್ತಿಯನ್ನು ಪ್ರದರ್ಶಿಸಿದ ರೀತಿ ಇದು. ಕೃಷ್ಣ ಜನ್ಮಾಷ್ಟಮಿಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಆಹಾ ಎಂಥ ಚೆಂದ ನೋಡಿ, ಈ ಜೋಡಿ!

ಆಹಾ ಎಂಥ ಚೆಂದ ನೋಡಿ, ಈ ಜೋಡಿ!

ಜನ್ಮಾಷ್ಟಮಿ ನಿಮಿತ್ತ ಕಲಾವಿದನೊಬ್ಬ ಆದರ್ಶ ಪ್ರೇಮದ ಸಂಕೇತವಾದ ಕೃಷ್ಣ ಮತ್ತು ರಾಧೆಯರ ಸುಂದರ ವಿಗ್ರಹವನ್ನು ನಿರ್ಮಿಸಿ, ಅದಕ್ಕೆ ತನ್ನ ಕುಂಚದಿಂದ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ. ಈ ಚಿತ್ರ ಕಂಡಿದ್ದು ಮಹರಾಷ್ಟ್ರದ ನಾಗ್ಪುರದಲ್ಲಿ.

ಯಶೋಧೆ ಜೊತೆ ಬಾಲಕೃಷ್ಣ

ಯಶೋಧೆ ಜೊತೆ ಬಾಲಕೃಷ್ಣ

ತಾಯಿ ಯಶೋಧೆ ಜೊತೆ ಮುದ್ದು ಕೃಷ್ಣ. ಶಾಲೆಯೊಂದರಲ್ಲಿ ತನ್ನ ಯಶೋಧೆ ವೇಷ ತೊಟ್ಟ ತನ್ನ ತಾಯಿಯೊಂದಿಗೆ ಶ್ರೀಕೃಷ್ಣನ ವೇಷ ತೊಟ್ಟ ಮಗು ಕಂಡಿದ್ದು ಹೀಗೆ.

ಜಾತಿ-ಮತದ ಹಂಗಿಲ್ಲ!

ಜಾತಿ-ಮತದ ಹಂಗಿಲ್ಲ!

ಮುಂಬೈಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗುವಿಗೆ ರಾಧೆಯ ವೇಷ ತೊಡಿಸಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಆಚರಿಸಿದರು. ಕೃಷ್ಣ ಜನ್ಮಾಷ್ಟಮಿಗೆ ಜಾತಿ, ಮತದ ಹಂಗಿಲ್ಲ ಎಂಬುದಕ್ಕೆ ಇದೊಂದು ಸಾಕ್ಷಿ!

English summary
Here are some Beautifil pictures of Shrikrishna Janmashtami. Sri Krishna Janmashthami, birth anniversary of lord Sri Krishna takes place on 8th new moon day of Shrava Month. This year it falls on September 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more