ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಜನ್ಮಾಷ್ಟಮಿ 2021: ಶುಭ ಮುಹೂರ್ತ, ಪೂಜಾ ವಿಧಿ ವಿಧಾನ

|
Google Oneindia Kannada News

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ದಿನಗಣನೆ ಆರಂಭವಾಗಿದೆ. ಈ ವರ್ಷ ಆಗಸ್ಟ್ 30ರಂದು ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ.

ಭಾದ್ರಪದ ಮಾಸದ ಕೃಷ್ಣ ಅಷ್ಟಮಿಯ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಶುಭ ದಿನದಂದು ಇಡೀ ದೇಶಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಜನ್ಮಾಷ್ಟಮೈಯನ್ನು ಆಚರಿಸಲಾಗುವುದು. ಎಲ್ಲಾ ಪೌರಾಣಿಕ ಹಬ್ಬಗಳಂತೆ, ಜನ್ಮಾಷ್ಟಮಿಯ ಹಿಂದೆಯೂ ಒಂದು ಕುತೂಹಲಕಾರಿ ಕಥೆ ಇದೆ. ದಂತಕಥೆಯ ಪ್ರಕಾರ, ಮಥುರಾ ಸಾಮ್ರಾಜ್ಯವು ಕಂಸ ರಾಜನ ಆಳ್ವಿಕೆಯಲ್ಲಿ ಸೊರಗಿಹೋಗಿತ್ತು. ಅವನು ಸಾಕಷ್ಟು ಕ್ರೂರನಾಗಿದ್ದನು.

Krishna Janmashtami 2021 Date, Shubh Muhurat, Puja Vidhi And Significance In kannada

ಇನ್ನು, ರಾಜನು ತನ್ನ ಸಹೋದರಿ ರಾಜಕುಮಾರಿ ದೇವಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಬಳಿಕ ದೇವಕಿ ವಾಸುದೇವನನ್ನು ಮದುವೆಯಾದಾಗ, ಪ್ರಬಲವಾದ ಮೋಡವು ಇದ್ದಕ್ಕಿದ್ದಂತೆ ಭವಿಷ್ಯಜ್ಞಾನದೊಂದಿಗೆ ಘರ್ಜಿಸಿ, ಇವರಿಬ್ಬರಿಗೆ ಜನಿಸಿದ ಎಂಟನೇ ಮಗ ರಾಜ ಕಂಸ ಸಾವಿಗೆ ಕಾರಣ ಎಂದು ಭವಿಷ್ಯ ನುಡಿಯಿತು.

ಇದನ್ನು ಕೇಳಿದ ಕಂಸ ಆಕ್ರೋಶಗೊಂಡನು. ದೇವಕಿ ಮತ್ತು ವಾಸುದೇವ ಅವರನ್ನು ತಕ್ಷಣ ಜೈಲಿಗೆ ಹಾಕುವಂತೆ ಆದೇಶಿಸಿದ್ದನು. ಅಲ್ಲದೆ, ದಂಪತಿಗೆ ಜನಿಸಿದ ಮೊದಲ ಆರು ಮಕ್ಕಳನ್ನು ಕೊಂದುಹಾಕಿದರು. ಅದೃಷ್ಟವಶಾತ್, ರಾಜಕುಮಾರಿ ದೇವಕಿಯ ಏಳನೇ ಮಗುವಾಗಿ ಬಲರಾಮ ಹುಟ್ಟಿದನು .ಆತ, ಗರ್ಭದಲ್ಲಿದ್ದಾಗಲೇ, ವೃಂದಾವನದ ರಾಜಕುಮಾರಿ ರೋಹಿಣಿಗೆ ಅತೀಂದ್ರಿಯವಾಗಿ ವರ್ಗಾಯಿಸಲಾಯಿತ್ತು.

ಇನ್ನು, ಎಂಟನೇ ಮಗುವಿನ (ಭಗವಾನ್ ಕೃಷ್ಣ) ಜನನದ ನಂತರ, ವೃಂದಾವನದಲ್ಲಿ ನಂದ ಮತ್ತು ಯಶೋಧರಿಗೆ ಮಗುವನ್ನು ನೀಡಲು ದೇವರುಗಳು ವಾಸುದೇವನಿಗೆ ಮಾರ್ಗದರ್ಶನ ನೀಡಿದರು. ವರ್ಷಗಳ ನಂತರ, ಶ್ರೀಕೃಷ್ಣನು ಕಂಸನನ್ನು ಕೊಂದು ಮಥುರಾ ಸಾಮ್ರಾಜ್ಯವನ್ನು ತನ್ನ ಕ್ರೌರ್ಯದ ಸಂಕೋಲೆಗಳಿಂದ ಮುಕ್ತಿಗೊಳಿಸಿದನು.

Krishna Janmashtami 2021 Date, Shubh Muhurat, Puja Vidhi And Significance In kannada

ಈ ಅವಧಿಯಲ್ಲಿ ಶ್ರೀ ಕೃಷ್ಣನ ದೇವಸ್ಥಾನಗಳನ್ನು ಸಿಂಗರಿಸಲಾಗುತ್ತದೆ ಮತ್ತು ಮನೆಗಳಲ್ಲಿಯೂ ಕೂಡ ತೊಟ್ಟಿಲನ್ನು ಸಿಂಗರಿಸಲಾಗುತ್ತದೆ. ಪಂಚ್ಯಖಾದ್ಯ ನೈವೇದ್ಯ ತಯಾರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ಶ್ರೀಕೃಷ್ಣನ ಜನ್ಮದಿನವನ್ನು ಈ ಹಬ್ಬವು ಸೂಚಿಸುತ್ತದೆ ಮತ್ತು ಪವಿತ್ರ ಶ್ರಾವಣ ಮಾಸದ ಆಚರಿಸಲಾಗುತ್ತದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಜನ್ಮಾಷ್ಟಮಿಯನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿಯನ್ನು ಹೆಚ್ಚಾಗಿ ಸತತವಾಗಿ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವನ್ನು ಸ್ಮಾರ್ಥ ಸಂಪದಕ್ಕಾಗಿ ಮತ್ತು ಎರಡನೆಯ ದಿನವನ್ನು ವೈಷ್ಣವ ಸಂಪ್ರದಾಯಕ್ಕಾಗಿ ಆಚರಿಸಲಾಗುತ್ತದೆ.

ಒಂದು ವೇಳೆ ಹಿಂದೂ ಕ್ಯಾಲೆಂಡರ್‌ನಲ್ಲಿ ಜನ್ಮಾಷ್ಟಮಿಗಾಗಿ ಒಂದೇ ದಿನಾಂಕವನ್ನು ಪಟ್ಟಿ ಮಾಡಿದ್ದರೆ, ಇದರರ್ಥ ಎರಡೂ ಸಂಪ್ರದಾಯದವರು ಒಂದೇ ದಿನದಂದು ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ ಎಂದು ಹೇಳಬಹುದಾಗಿದೆ.

ಜನ್ಮಾಷ್ಟಮಿಯ ಪೂಜೆ ಮುಹೂರ್ತ: ಈ ಬಾರಿ 29 ಆಗಸ್ಟ್ 2021ರಂದು ರಾತ್ರಿ 11.25 ರಿಂದ ಆಗಸ್ಟ್ 30, 2021 ರ ರಾತ್ರಿ 1.59 ಗಂಟೆಯವರೆಗೆ ಅಷ್ಟಮಿ ತಿಥಿ ಇರಲಿದೆ. ಶ್ರೀ ಕೃಷ್ಣನ ಜನ್ಮಾಷ್ಟಮಿಯ ಶುಭ ಮುಹೂರ್ತ ಆಗಸ್ಟ್ 30, 2021 ರಾತ್ರಿ 12.44 ರಿಂದ ತಡರಾತ್ರಿ 12.44ರವರೆಗೆ ಇರಲಿದೆ. ಪೂಜೆಗಾಗಿ ನಿಮ್ಮ ಬಳಿ ಕೇವಲ 45 ನಿಮಿಷಗಳು ಮಾತ್ರ ಇರಲಿವೆ. ಈ ಅವಧಿಯಲ್ಲಿ ಶ್ರೀ ಕೃಷ್ಣನಿಗೆ ಹೊಸ ವಸ್ತ್ರವನ್ನು ತೊಡಿಸಿ, ಸಿಂಗರಿಸಿ ತೊಟ್ಟಿಲಲ್ಲಿ ತೂಗಲಾಗುತ್ತದೆ.

ಜನ್ಮಾಷ್ಟಮಿಯ ಪೂಜಾ ವಿಧಿ: ಒಂದು ಶುಚಿಗೊಳಿಸಿದ ಚೌರಂಗದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ, ಒಂದು ತಟ್ಟೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿಡಬೇಕು. ದೇವರ ಮುಂದೆ ಧೂಪ-ದೀಪ ಬೆಳಗಿ ಹಾಗೂ ಪ್ರಾರ್ಥನೆ ಸಲ್ಲಿಸಿ. ಬಳಿಕ ಪಂಚಾಮೃತದಿಂದ ದೇವರಿಗೆ ಅಭಿಷೇಕ ಮಾಡಿ. ನಂತರ ಗಂಗಾ ಜಲದಿಂದ ಸ್ನಾನ ಮಾಡಿಸಿ.

ಈಗ ಶ್ರೀ ಕೃಷ್ಣನಿಗೆ ಹೊಸ ಬಟ್ಟೆಯನ್ನು ತೊಡಿಸಿ ಸಿಂಗರಿಸಿ, ಧೂಪ ದೀಪ ಮತ್ತೊಮ್ಮೆ ಬೆಳಗಿ ಆರತಿ ಮಾಡಿ. ಅಷ್ಟಗಂಧ, ಚಂದನ ಹಾಗೂ ಅಕ್ಷತೆಯ ತಿಲಕವನ್ನಿಡಿ. ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಹಾಗೂ ಪಂಚಖಾದ್ಯ ನೈವೇದ್ಯ ಅರ್ಪಿಸಿ. ಈ ಅವಧಿಯಲ್ಲಿ ಶ್ರೀ ಕ್ರಿಷ್ಣನಿಗೆ ತುಳಸಿ ಹಾಗೂ ಗಂಗಾಜಲ ಅರ್ಪಿಸಲು ಮರೆಯಬೇಡಿ. ದೇವರನ್ನು ಆರಾಧಿಸಿ. ಕೊನೆಯಲ್ಲಿ ಪುಷ್ಪ ಹಾಗೂ ಅಕ್ಕಿ ಅರ್ಪಿಸಿ ಪೂಜೆಗೆ ಬಂದು ಪೂಜೆ ಪೂಜೆ ಸ್ವೀಕರಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿ.

ಜನ್ಮಾಷ್ಟಮಿ ವ್ರತ: ಹಲವು ಭಕ್ತರು ಜನ್ಮಾಷ್ಟಮಿ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಜತೆಗೆ, ಹಿಂದಿನ ದಿನ ಸಹ ಒಂದೇ ಹೊತ್ತು ಊಟ ಮಾಡಲು ಅವಕಾಶವಿದೆ. ಇನ್ನು, ಏಕಾದಶಿ ಉಪವಾಸದ ಸಮಯದಲ್ಲಿ ಅನುಸರಿಸಿದ ನಿಯಮಗಳನ್ನು ಜನ್ಮಾಷ್ಟಮಿ ಉಪವಾಸದ ಸಮಯದಲ್ಲಿಯೂ ಅನುಸರಿಸಬೇಕು ಎಂದು ಅನೇಕ ಪಂಡಿತರು ನಂಬಿದ್ದಾರೆ.

ಉಪವಾಸ ಮಾಡುವವರಿಗೆ ಯಾವುದೇ ಧಾನ್ಯಗಳನ್ನು ಸೇವಿಸಲು ಅನುಮತಿ ಇಲ್ಲ. ಆದ್ದರಿಂದ ಹಲವರು ಫಲಾಹಾರ ಮಾಡುತ್ತಾರೆ. ಅಂದರೆ ಈ ವೇಳೆ ಹಣ್ಣುಗಳು ಮತ್ತು ನೀರನ್ನು ಮಾತ್ರ ಸೇವಿಸುತ್ತಾರೆ.

English summary
Krishna Janmashtami 2021 is one of the most important and auspicious festivals for all Hindus as it's a day when Lord Shree Krishna, the incarnation of Lord Vishnu, was born. Krishna Janmashtami is celebrated with various names such as Krishnashtami, Gokulashtami, Ashtami Rohini, Srikrishna Jayanti and Sree Jayanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X