ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮಾಷ್ಟಮಿ ವಿಶೇಷ: ಉಡುಪಿ ಪುತ್ತಿಗೆ ಶ್ರೀಗಳ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

ನಾಡಿನೆಲ್ಲಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ, ಜೊತೆಗೆ ಜನ್ಮಾಷ್ಟಮಿ ಬುಧವಾರವೋ ಗುರುವಾರವೋ ಎನ್ನುವ ಗೊಂದಲ.

ಕೃಷ್ಣನ ನಾಡು ಉಡುಪಿಯಲ್ಲಿ ಬುಧವಾರ (ಆ 24) ವೈಭವದ ಜನ್ಮಾಷ್ಟಮಿ ಕಾರ್ಯಕ್ರಮ ಆರಂಭವಾಗಿದೆ. ಬುಧವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆದಿದೆ. ಅರ್ಘ್ಯ ಪ್ರಧಾನ ಗುರುವಾರ ರಾತ್ರಿಯೂ ನಡೆಯಲಿದೆ. (ಪುತ್ತಿಗೆ ಶ್ರೀಗಳ ಸಂದರ್ಶನದ ವಿಡಿಯೋ)

An exclusive interview with Sugunendra Theertha Swamiji of Udupi Puttige Math

ಜನ್ಮಾಷ್ಟಮಿಯ ಸಂದರ್ಭದಲ್ಲಿ ಬೆಂಗಳೂರು ಬಸವನಗುಡಿಯ ಗೋವರ್ಧನಗಿರಿ ಶಾಖಾಮಠದಲ್ಲಿ ಚಾತುರ್ಮಾಸ ವೃತದಲ್ಲಿರುವ ಉಡುಪಿ ಅಷ್ಟ ಮಠಗಳಲ್ಲೊಂದಾದ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳ ಜೊತೆ 'ಒನ್ ಇಂಡಿಯಾ ಕನ್ನಡ' ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ಪ್ರ: ಜನ್ಮಾಷ್ಟಮಿ ಆಚರಣೆಯ ವಿಚಾರದಲ್ಲಿ ವರ್ಷ ವರ್ಷ ಈ ಗೊಂದಲ ಏಕೆ?
ಪುತ್ತಿಗೆ ಶ್ರೀ : ವರ್ಷ ವರ್ಷ ಗೊಂದಲವಿರುವುದಿಲ್ಲ, ಕೆಲವು ವರ್ಷ ಮಾತ್ರ. ಗಣಿತ ವ್ಯತ್ಯಾಸ ಬರುವುದರಿಂದ ಎರಡೆರಡು ಜನ್ಮಾಷ್ಟಮಿ ಆಚರಿಸಲಾಗುತ್ತದೆ.

ಪ್ರ: ಹಿಂದೂ, ಹಿಂದೂ ಪೂಜಾ ಪದ್ದತಿಯ ಬಗ್ಗೆ ವಿರೋಧ, ಅಪಹ್ಯಾಸ ಹೆಚ್ಚಾಗುತ್ತಿರುವುದಕ್ಕೆ ಕಾರಣ?
ಪುತ್ತಿಗೆ ಶ್ರೀ : ಹಿಂದೂಗಳಲ್ಲಿನ ಒಗ್ಗಟ್ಟಿನ ಕೊರತೆ ಒಂದೆಡೆಯಾದರೆ, ಹಿಂದೂ ಧರ್ಮ ಒಂದೇ ಮುಕ್ತ ಧರ್ಮ. ವೈಚಾರಿಕ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ಹೆಚ್ಚಿದೆ. ಹಿಂದೂ ಧರ್ಮದಲ್ಲಿ ನಾಸ್ತಿಕರು ಇರುವುದರಿಂದ ನಮ್ಮ ಧರ್ಮದ ಬಗ್ಗೆ ಅಪಹ್ಯಾಸ ಹೆಚ್ಚಾಗುತ್ತಿರುವುದಕ್ಕೆ ಮತ್ತೊಂದು ಕಾರಣ. (ಉಡುಪಿಯಲ್ಲಿ ಜನ್ಮಾಷ್ಟಮಿ ಗ್ಯಾಲರಿ)

An exclusive interview with Sugunendra Theertha Swamiji of Udupi Puttige Math

ಪ್ರ: ಮೌಢ್ಯ ನಿಷೇಧ ಕಾಯ್ದೆ ಬಗ್ಗೆ ನಿಮ್ಮ ಅಭಿಪ್ರಾಯ?
ಪುತ್ತಿಗೆ ಶ್ರೀ : ಸರಕಾರಗಳು ಜನರ ಸೆಂಟಿಮೆಂಟ್ ವಿಚಾರದಲ್ಲಿ ಕೈಹಾಕಬಾರದು ಎನ್ನುವುದು ನಮ್ಮ ಅಭಿಪ್ರಾಯ. ಮೌಢ್ಯಗಳು ಸರಿಯೋ, ತಪ್ಪೋ ಅದನ್ನು ಸರಕಾರ ತೀರ್ಮಾನಿಸಬಾರದು. ಇದರಿಂದ ಹಿಂಸೆಯಾಗುತ್ತಿದ್ದರೆ, ಅದಕ್ಕೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು. ಪೀಠಾಧಿಪತಿಗಳ ಅಭಿಪ್ರಾಯವನ್ನೂ ಪಡೆಯಬೇಕು. ಮೌಢ್ಯ ನಿಷೇಧ ಕಾನೂನು ಜಾರಿಗೆ ತಂದರೆ ಜೇನುಗೂಡಿಗೆ ಕೈಹಾಕಿದಂತೆ.

ಪ್ರ: ಭವಿಷ್ಯ ಮುಂತಾದವು ಜನರನ್ನು ದಾರಿತಪ್ಪಿಸುವ ವಿಧಾನವಾಗಬಹುದಲ್ಲವೇ?
ಪುತ್ತಿಗೆ ಶ್ರೀ : ಜನರು ಸ್ವಂತ ವಿಮರ್ಶೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಆಗ ಯಾರನ್ನೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಸರಕಾರ ಎಲ್ಲರಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಜ್ಯೋಷಿಗಳು ಹೇಳಿದ್ದು ಸುಳ್ಳಾದಲ್ಲಿ ಜನರೇ ಅಂತವರನ್ನು ದೂರವಿಡುತ್ತಾರೆ. ಪ್ರಮುಖವಾಗಿ ವಾಹಿನಿಗಳು ಸರಿಯಾದ ಜ್ಯೋಷಿಗಳನ್ನು ಕರೆಸಿಕೊಳ್ಳಬೇಕು. (ಪುತ್ತಿಗೆ ಮಠದಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ)

ಪ್ರ: ನಕಲಿ ಗೋರಕ್ಷಕರ ಬಗ್ಗೆ?
ಪುತ್ತಿಗೆ ಶ್ರೀ: ನಕಲಿ ಏನಿದ್ದರೂ ಅದು ತಪ್ಪೇ, ಅವರಿಂದ ಗೋರಕ್ಷಣೆ ಮಾಡಲೇಬೇಕು.

ಪ್ರ: ಅಮೆರಿಕಾ ಮುಂತಾದ ಕಡೆ ನಿಮ್ಮ ಧರ್ಮಪ್ರಚಾರ ಹೇಗೆ ನಡೆಯುತ್ತಿದೆ?
ಪುತ್ತಿಗೆ ಶ್ರೀ : ನಾವು ಸಾಕಷ್ಟು ಶ್ರಮ ವಹಿಸಿ ಈ ಕೆಲಸದಲ್ಲಿ ತೊಡಗಿದ್ದೇವೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಕೆಲಸಗಳು ನಡೆಯುತ್ತಿದೆ. ಇದು ನಮಗೆ ತೃಪ್ತಿ ತಂದಿದೆ.

ಪ್ರ: ನಾಡಿನ ಜನಗೆ ನಿಮ್ಮ ಜನ್ಮಾಷ್ಟಮಿಯ ಸಂದೇಶ?
ಪುತ್ತಿಗೆ ಶ್ರೀ : ಕೃಷ್ಣ ಜನ್ಮಾಷ್ಟಮಿ ಆಚರಣೆ ಎಲ್ಲಾ ಭಕ್ತರ ಕರ್ತವ್ಯ. ಭಗವಂತ ಲೋಕವನ್ನು ಉದ್ದಾರ ಮಾಡಲು ಬಂದಿದ್ದಾನೆ. ಭಗವಂತನನ್ನು ಸ್ಮರಿಸಿದರೆ, ಲೋಕೋದ್ದಾರ ಮಾಡಿದ ಪುಣ್ಯ ನಮಗೂ ಬರುತ್ತದೆ. ಭಗವದ್ಗೀತೆಯನ್ನು ಉಪದೇಶಿಸಿ ಎಲ್ಲರಿಗೂ ದಾರಿ ಮತ್ತು ಸ್ಪೂರ್ತಿಯನ್ನು ತೋರಿಸಿದ್ದಾನೆ. ಭಗವಂತನ ಕೃಷ್ಣಾವತಾರವನ್ನು ನೆನೆಸಿಕೊಳ್ಳುವುದು, ಪೂಜಿಸುವುದು ನಮ್ಮ ಕರ್ತವ್ಯ. ಎಲ್ಲರಿಗೂ ಒಳ್ಳೆದಾಗಲಿ.

English summary
On eve of Sri Krishna Janmashthami, an exclusive interview with Sugunendra Theertha Swamiji of Udupi Puttige Math. Swamiji has given Janmashthami message to all devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X