ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಟಲ್ ರಾಖಿ ನೀಡಲಿ ಸ್ಫಟಿಕದಂಥ ಸಂಬಂಧ

|
Google Oneindia Kannada News

Rakhi
ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ರಕ್ಷಾ ಬಂಧನ ಹಬ್ಬಕ್ಕೆ ಭಾವನೆಯೇ ಬೆಂಬಲ. ಭಾವನೆಗಳನ್ನು ಬೆಸೆಯುವ ಈ ದಿನಕ್ಕೆ ನಿಮ್ಮ ಸೋದರನ ಕೈಗೆ ಈ ರಾಖಿಯನ್ನು ಕಟ್ಟಿ.

ಬ್ರೇಸ್ಲೆಟ್ ರಾಖಿ: ಬ್ರೇಸ್ಲೆಟ್ ರಾಖಿ ಮಾರ್ಡನ್ ಮತ್ತು ಸಾಂಪ್ರದಾಯಿಕ ವಿನ್ಯಾಸ ಎರಡರ ಮಿಶ್ರಣದಂತೆ. ಬೆಳ್ಳಿ ಬ್ಯಾಂಡ್ ನಂತೆ ಕಾಣುವ ಈ ರಾಖಿ ಹುಡುಗರಿಗೆ ಹೇಳಿ ಮಾಡಿಸಿದಂತೆ. ತಮ್ಮ ವಾಚ್ ನೊಂದಿಗೂ ಹೊಸ ಲುಕ್ ಕೊಡುವ ಈ ರಾಖಿಗಳನ್ನು ನಿಮ್ಮ ಅಣ್ಣ ತಮ್ಮಂದಿರು ಖುಷಿಯಿಂದ ಕಟ್ಟಿಸಿಕೊಳ್ಳುವುದಂತೂ ಗ್ಯಾರಂಟಿ.

;

ಮೆಟಲ್, ಹಿತ್ತಾಳೆ, ಬೆಳ್ಳಿ, ಚಿನ್ನದ ಬಣ್ಣದ ಲೇಪಿತವಿರುವ ಈ ಬ್ರೇಸ್ಲೆಟ್ ಗಳು ರಾಯಲ್ ಲುಕ್ ಕೊಡುವುದಲ್ಲದೆ ಇದು ನೋಡಿದ ತಕ್ಷಣ ಡೈಮಂಡ್
ಇರಬಹುದೇನೋ ಎಂದೂ ಅನಿಸುವುದುಂಟು. ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿ ಈ ಬ್ರೇಸ್ಲೆಟ್ ರಾಖಿ ಕಟ್ಟಿ ನಿಮ್ಮ ಅಣ್ಣನನ್ನು ಸಂತೋಷಪಡಿಸಿ.
ಸಾಂಪ್ರದಾಯಿಕವಾಗಿದ್ದ ರಾಖಿ ಹಬ್ಬ ಇದೀಗ ಫ್ಯಾಷನ್ ಆಗಿ ಬದಲಾಗುತ್ತಿದೆ.

ಕ್ರಿಸ್ಟೆಲ್ ಬ್ರೇಸ್ಲೆಟ್ ರಾಖಿ: ಹೊಳೆಯುವ ಬ್ರೇಸ್ಲೆಟ್ ರಾಖಿಗಳನ್ನ ಇಷ್ಟಪಡುವವರಿಗೆ ಈ ಕ್ರಿಸ್ಟಲ್ ರಾಖಿ ತುಂಬಾ ಅಚ್ಚುಮೆಚ್ಚಾಗುತ್ತೆ. ತಮ್ಮ ಚೆಂದದ ಬಟ್ಟೆಗೆ
ತಕ್ಕುದಾಗಿ ಈ ಕ್ರಿಸ್ಟಲ್ ಬ್ರೇಸ್ಲೆಟ್ ರಾಖಿ ತೊಟ್ಟರೆ ನಿಜಕ್ಕೂ ನಿಮ್ಮ ಅಣ್ಣ ಆಕರ್ಷಣೆಯ ಕೇಂದ್ರ ಬಿಂದು ಆಗುವುದರಲ್ಲಿ ಎರಡು ಮಾತಿಲ್ಲ. ತುಂಬಾ ಸೂಕ್ಷ್ಮವಾಗಿರುವ ಈ ಕ್ರಿಸ್ಟಲ್ ಬ್ರೇಸ್ಲೆಟ್ ಗಳು ಅನೇಕ ಡಿಸೈನ್ ಮತ್ತು ವಿವಿಧ ಬಣ್ಣಗಳಲ್ಲಿ ಸಿಗುತ್ತವೆ. ಇವುಗಳಲ್ಲಿ ನಿಮಗೊಪ್ಪುವ, ನಿಮ್ಮ ಅಣ್ಣನ ಮೆಚ್ಚುಗೆಗೆ ಅರ್ಹವಾಗುವ ರಾಖಿಯನ್ನು ಕಟ್ಟಿ ಅಣ್ಣನನ್ನು ಖುಷಿ ಪಡಿಸಿ ರಾಖಿ ಹಬ್ಬವನ್ನು ಸಂತೋಷದಿಂದ ಆಚರಿಸಿ.

English summary
Bracelet rakhi designs are a blend of the traditional and modern designs. The bracelet design looks sporty for men as they are made to look like the silver bands. For those who would like glittering bracelets here are crystal like bracelets. These bracelets are delicate and come in a variety of designs and matching colors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X