ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಕಾನ್ ನಲ್ಲಿ ದೇವಕಿಸುತನ ಜನ್ಮಾಷ್ಟಮಿ

By Mahesh
|
Google Oneindia Kannada News

ಹರೇ ರಾಮ ಹರೇ ಕೃಷ್ಣ ಮಂತ್ರ ಪಠಣದ ನಿನಾದದೊಂದಿಗೆ ಇಂದು ಇಸ್ಕಾನ್ ಆವರಣ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮದಿಂದ ತುಂಬಿ ಹೋಗಿದೆ. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಸ್ಕಾನ್ ದೇವಾಲಯದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು,ಇದಕ್ಕಾಗಿ ಕೆಲವು ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಮಾರ್ಪಾಡು ಮಾಡಲಾಗಿದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ ಸೂದ್ ತಿಳಿಸಿದ್ದಾರೆ.

ಮೆಟ್ರೋ ನಿಂದ ಸಂಚಾರಕ್ಕೆ ತೊಂದರೆ: ಸೆಪ್ಟೆಂಬರ್ 1ಮತ್ತು 2 ರಂದು ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಇಸ್ಕಾನ್ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು,ಬೇರೆ ರಾಜ್ಯಗಳಿಂದ ಭಕ್ತರು ಬರಲಿದ್ದಾರೆ. ಜೊತೆಗೆ ಇಸ್ಕಾನ್ ದೇವಾಲಯ ಸುತ್ತಮುತ್ತ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಭಕ್ತಾದಿಗಳಿಗೆ ತೊಂದರೆಯಾಗಲಿದೆ.ಈ ಹಿನ್ನಲೆಯಲ್ಲಿ ಕೆಲವು ರಸ್ತೆಗಳ ಮಾರ್ಗವನ್ನು ಬದಲಿಸಲಾಗಿದೆ.

ಪರ್ಯಾಯ ಮಾರ್ಗಗಳು: ತುಮಕೂರು ರಸ್ತೆ ಕಡೆಯಿಂದ ಬರುವ ವಾಹನಗಳು ಡಾ.ರಾಜಕುಮಾರ್ ರಸ್ತೆ ಮೂಲಕ ಸಾಬೂನು ಕಾರ್ಖಾನೆ ವೃತ್ತದ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಸೇರಿಕೊಳ್ಳಬಹುದು. ನವರಂಗ್ ಕಡೆಯಿಂದ ಬರುವ ವಾಹನಗಳು ಡಾ.ರಾಜಕುಮಾರ್ ರಸ್ತೆ ಮೂಲಕ ಬಲತಿರುವು ಪಡೆದುಕೊಂಡು ಸಾಬೂನು ಕಾರ್ಖಾನೆ ವೃತ್ತದ ಮೂಲಕ ತುಮಕೂರು ರಸ್ತೆ ತಲುಪಬಹುದಾಗಿದೆ.

ವಾಹನ ನಿಲುಗಡೆ ವ್ಯವಸ್ಥೆ: ಇಸ್ಕಾನ್ ದೇವಾಲಯಕ್ಕೆ ಬರುವ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ತುಮಕೂರು ರಸ್ತೆಯಿಂದ ಬರುವ ವಾಹನಗಳು ಸಿ.ಕೆ.ಡಬ್ಲೂ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬೇಕು. ಮತ್ತು ನವರಂಗ್ ಕಡೆಯಿಂದ ಬರುವ ವಾಹನಗಳು ಮಹಾಲಕ್ಷ್ಮೀ ಲೇಔಟ್ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ. ಸೆ.1 ಮತ್ತು 2 ರಂದು ಇಸ್ಕಾನ್ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಬೆಳಿಗ್ಗೆ 7ಗಂಟೆಯಿಂದ ರಾತ್ರಿ 11ಗಂಟೆಗಳವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ

ಕಾರ್ಯಕ್ರಮಗಳ ವಿವರ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಇಸ್ಕಾನ್ ನ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ವಿಶೇಷ ಅಭಿಷೇಕ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರ ಬೆಳಗ್ಗೆ 6.30,9 ಗಂಟೆ ಸಂಜೆ 7ಹಾಗೂ ರಾತ್ರಿ 10 ಕ್ಕೆ ಅಭಿಷೇಕ, ಮಧ್ಯರಾತ್ರಿ 12 ಕ್ಕೆ ಮಧ್ಯರಾತ್ರಿ ಆರತಿ, ನೈವೇದ್ಯ ಸೇವೆ, ಪುಷ್ಪಾಂಜಲಿ ಸೇವೆ ಸೇರಿದಂತೆ ವಿಶೇಷ ಅಭಿಷೇಕಗಳು ನಡೆಯಲಿವೆ.

ಗುರುವಾರ ಬೆಳಗ್ಗೆ 6, 9, ಸಂಜೆ 7 ಹಾಗೂ ರಾತ್ರಿ 10ಕ್ಕೆ ಮಧ್ಯರಾತ್ರಿ ಮಹಾ ಅಭಿಷೇಕ, ರಾತ್ರಿ 12.30 ಕ್ಕೆ 108 ಬಗೆಯ ತಿಂಡಿಗಳ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ. ಸೆ.3ರಂದು ಸಂಜೆ 6.30ಕ್ಕೆ ಇಸ್ಕಾನ್ ಸಂಸ್ಥಾಪಕ ಆಚಾರ್ಯ ಎ.ಸಿ.ಭಕ್ತಿ ವೇದಾಂತ ಸ್ವಾಮೀಜಿ ಪ್ರಭುಪಾದರ ಸ್ಮರಣಾರ್ಥ ನಂದೋತ್ಸವ ನಡೆಯಲಿದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

ಬಗೆ ಬಗೆ ಭಕ್ಷ್ಯಗಳು, ವಿವಿಧ ಸೇವೆಗಳು: ಬಾಲಕೃಷ್ಣ ಚಪ್ಪನ್(56) ಭೋಗ್ ಹಾಗೂ ಝುಲನ್ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಭಕ್ತಾದಿಗಳು ಆಚರಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ 093423 12510/093791 56083 ಸಂಖ್ಯೆಯನ್ನು ಸಂಪರ್ಕಿಸಬಹುದು.

ಗ್ಯಾಲರಿ:
ಜಗದ್ಗುರು ಶ್ರೀಕೃಷ್ಣನ ನಾನಾ ಭಂಗಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X