ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲ್ಲ ಕೊಬ್ಬರಿ ಹೋಳಿಗೆ ಮಾಡುವ ವಿಧಾನ

By ವಾಣಿ ನಾಯಿಕ, ಬೆಂಗಳೂರು
|
Google Oneindia Kannada News

ಹಬ್ಬ ಯಾವುದೇ ಇರಲಿ ಒಬ್ಬಟ್ಟು ಅಥವಾ ಹೋಳಿಗೆಯಿಲ್ಲದಿದ್ದರೆ ಹಬ್ಬಕ್ಕೆ ಹಬ್ಬದ ಕಳೆಯೇ ಇರುವುದಿಲ್ಲ. ಇನ್ನು ಯುಗಾದಿಗೆ ಯಾವ ಸಿಹಿ ಮಾಡಬೇಕೆಂದು ತಲೆಕೆಡಿಸಿಕೊಳ್ಳಲೇಬೇಡಿ. ಇಲ್ಲಿದೆ ನೋಡಿ ಎಲ್ಲರೂ ಇಷ್ಟಪಡುವಂತಹ ಸ್ಪೆಷಲ್ ಬೆಲ್ಲ ಕೊಬ್ಬರಿ ಹೋಳಿಗೆ. ಯುಗಾದಿಗೆ ರಜಾ ಇಲ್ವಾ? ಡೋಂಟ್ ವರಿ, ರಜಾ ಇಲ್ಲದಿದ್ದರೇನಾಯಿತು, ತಾಯಿ ಮಾಡಿಟ್ಟ ಹೋಳಿಗೆಯನ್ನು ಸಾಯಂಕಾಲ ಮನೆಗೆ ಹೋಗಿ ಹೊಟ್ಟೆಗೆ ಇಳಿಸಿ. ಬಿಸಿಬಿಸಿ ಬೇಕಿದ್ದರೆ ಸಾಯಂಕಾಲವೇ ಮಾಡಿಸಿಕೊಂಡು ತಿನ್ನಿರಿ. ಕಡಲೆಬೇಳೆ ಬೆಲ್ಲ ಹೂರಣದ ಹೋಳಿಗೆ ಇಷ್ಟಪಡದವರು ಕೂಡ ಬೆಲ್ಲ ಕೊಬ್ಬರಿ ಹೋಳಿಗೆಯನ್ನು ಖಂಡಿತ ಇಷ್ಟಪಟ್ಟೇ ಪಡುತ್ತಾರೆ. ಬೇಕಿದ್ದರೆ ಚಾಲೇಂಜ್.

Bella Kobbari Holige

ಬನ್ನಿ ಬೆಲ್ಲ ಕೊಬ್ಬರಿ ಹೋಳಿಗೆಯನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು 2 ಬಟ್ಟಲು
ಮೈದಾ ಹಿಟ್ಟು 1 ಸ್ಪೂನಿನಷ್ಟು
ಬೆಲ್ಲ 1 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಏಲಕ್ಕಿ ಪುಡಿ ಚಿಟಿಕೆಯಷ್ಟು
ತುಪ್ಪ ಅಥವಾ ಕುಕಿಂಗ್ ಮೀಡಿಯಂ

ಮಾಡುವ ವಿಧಾನ

ಮೊದಲಿಗೆ ಪುಡಿ ಮಾಡಿದ ಬೆಲ್ಲ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು. ಇದರಲ್ಲೇ ಏಲಕ್ಕಿ ಪುಡಿ ಹಾಕಿದರೆ ಉತ್ತಮ. ಸತತ ಕೈಯಾಡಿಸುತ್ತ ಬೆಲ್ಲ ಕಾದು ನೀರಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ತಾರಾಗುತ್ತದೆ. ಎರಡೂ ಸಮನಾಗಿ ಮಿಶ್ರಣವಾದನಂತರ ಸ್ಟೌ ಆರಿಸಿ ಕೆಳಗಿಳಿಸಿಕೊಳ್ಳಬೇಕು.

ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಅಳಕಾಗುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಹುದು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬಾರದು. ಇಲ್ಲದಿದ್ದರೆ ಹೋಳಿಗೆ ಕೆಟ್ಟುಹೋದೀತು ಹುಷಾರು.

ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ತಟ್ಟಿ ಅದರಲ್ಲಿ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಎಲ್ಲ ತುದಿಯಿಂದ ಮುಚ್ಚಿ ಮತ್ತೆ ಹೋಳಿಗೆ ಆಕಾರದಲ್ಲಿ ತಟ್ಟಬೇಕು. ಇದನ್ನು ಲಟ್ಟಿಸಿದರೂ ಆದೀತು. ಹೂರಣವನ್ನು ಜಾಸ್ತಿ ತುಂಬಬೇಡಿ. ಹೋಳಿಗೆ ವಿಪರೀತ ಸಿಹಿಯಾಗದಂತೆ ಮತ್ತು ತಟ್ಟುವಾಗ ಕೆಡದಂತೆ ಮಾಡಲು ಹೂರಣ ಸ್ವಲ್ಪ ಕಡಿಮೆ ಹಾಕುವುದು ಒಳಿತು.

ತಟ್ಟಿಕೊಂಡ ಹೋಳಿಗೆ ಅಥವಾ ಒಬ್ಬಟ್ಟಿಗೆ ಮತ್ತೆ ಎಣ್ಣೆ ಹಚ್ಚಿ ಹೆಂಚಿನ ಮೇಲೆ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿರಿ. ತಿರುವಿ ಹಾಕುವಾಗ ಹೋಳಿಗೆ ಹರಿಯದಂತೆ ಎಚ್ಚರವಹಿಸಿ. ಅನುಭವಿ ಕೈಗಳಿಗೆ ಇದು ಸಲೀಸು. ಬಿಸಿಬಿಸಿಯಿರುವಾಗಲೇ ತುಪ್ಪ ಸುರಿದುಕೊಂಡು ಹೊಟ್ಟೆಗೆ ಇಳಿಸಿ. ಬಾಯಿಚಪ್ಪರಿಸದಿದ್ದರೆ ಕೇಳಿ.

English summary
Bella kobbari holige or obbattu is specially prepared for any festival. Recipe by Vani Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X