ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಿಯುಗಕ್ಕೆ ದ್ವಾಪರದ ತಾಲೀಮು

By *ಕೆ.ರಾಜಲಕ್ಷ್ಮಿ ರಾವ್‌
|
Google Oneindia Kannada News

ಕಲಿಯುಗಕ್ಕೆ ದ್ವಾಪರದ ತಾಲೀಮುಎಷ್ಟು ಅವತಾರಗಳೆತ್ತಿದರೇನು. ದೇವರೂ ಬದಲಾಗುವುದಿಲ್ಲ, ಮನುಷ್ಯರೂ ಬದಲಾಗುವುದಿಲ್ಲ .

ಕೃಷ್ಣ ಹುಟ್ಟಿದ್ದು ಜೈಲಿನಲ್ಲಿ ಅಂತ ಗೊತ್ತಲ್ಲ. ಕೃಷ್ಣ- ಹುಟ್ಟಿ-ದ್ದ-ರಿಂ-ದ-ಲೇ ಜೈಲಿ-ಗೆ ಕೃಷ್ಣ ಜನ್ಮ-ಸ್ಥಾ-ನ ಎನ್ನು-ವ ಹೆಸ-ರು ಬಂದ-ದ್ದು . ಕೃಷ್ಣ-ನ ಹುಟ್ಟಿ-ನ ಕತೆ- ಪತ್ತೆ-ದಾ-ರಿ ಕತೆ-ಯ-ಷ್ಟೇ ರೋಚ-ಕ.

ಕಂಸ ಮಹಾರಾಜ ತನ್ನ ತಂಗಿ ದೇವಕಿಯನ್ನು ಅತ್ಯಂತ ಮುತುವರ್ಜಿಯಿಂದ ವಸುದೇವನಿಗೆ ಧಾರೆಯೆರೆದು ಕೊಡುತ್ತಾನೆ. ಮ-ದು-ವೆ ಗಡಿ-ಬಿ-ಡಿ-ಯ ನಡುವೆ ನಾರದ ಸ್ವಾಮಿಗಳು ಬಂದು ಭಾರಿ ಅರ್ಜಂಟಲ್ಲಿ ಕಂಸ-ನಿ-ಗೆ ಒಂದು ಮಾರಣಾಂತಿಕ ಭವಿಷ್ಯ ಹೇಳುತ್ತಾರೆ. ನಿನ್ನ ತಂಗಿ ದೇವಕಿಯ ಹೊಟ್ಟೆಯಲ್ಲಿ ಹುಟ್ಟುವ ಎಂಟನೇ ಮಗು ನಿನ್ನನ್ನೇ ಕೊಲ್ಲುತ್ತದೆ ಮಾರಾಯಾ... ಅಂತ. ಕಂಸನಿಗೆ ಹೇಗಾಗಬೇಡ ? ನಿಂತಲ್ಲೇ ಒರೆಯಿಂದ ಕತ್ತಿ ಹಿರಿದು ತಂಗಿಯ ಕೊಲೆಗೆ ಸಿದ್ಧನಾದ. ಮತ್ತೆ ನಾರದರು, ನಿನ್ನಂ-ಥ ಶೂರ-ನಿ-ಗೆ ಸ್ತ್ರೀ ಹತ್ಯೆ ಶೋಭಿ-ಸು-ತ್ತ-ದಾ.. ಅಂತ ಒಂದು ಕಲ್ಲೆಸೆ-ದ-ರು.

ಸರಿ ಕಂಸನಿಗೊಂದು ಉಪಾಯ ಹೊಳೆಯಿತು. ತಕ್ಷಣ , ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಜೈಲಿಗೆ ತಳ್ಳಿದ. ಮದು-ವೆ-ಯ ನಂ-ತರ ದಂಪ-ತಿ-ಗ-ಳ ಸಂಸಾ-ರ ಜೈಲಿ-ನಲ್ಲೇ ಆರಂ-ಭ-ವಾ-ಯಿ-ತು. ಹುಟ್ಟಿ-ದ ಆರು ಮಕ್ಕಳನ್ನು ಕಂಸ ಕೊಂದು ಬಿಟ್ಟ . ಏ-ಳ-ನೇ ಮಗು ಜನ-ನ ಸಂದ-ರ್ಭ- ಮಹಾಶೇಷನೇ ದೇವ-ಕಿ-ಯ ಗರ್ಭ ತುಂಬಿ-ದ. ಕಂಸ-ನ ಭಯ-ದಿಂ-ದ ದುರ್ಗೆಯು ಶೇಷ ದೇವ-ರ-ನ್ನು ದೇವ-ಕಿ--ಯ ಉದ-ರ-ದಿಂ-ದ ಆಕ-ರ್ಷಿ-ಸಿ, ನಂ-ದ ಗೋಕು-ಲ-ದ ರೋಹಿ-ಣಿ ಎಂಬ-ವಳ ಗರ್ಭ-ದ-ಲ್ಲಿ ಬೆಳೆ-ಯು-ವಂ-ತೆ ಮಾಡು-ತ್ತಾ-ಳೆ. ತಾ-ನು ನಂದ-ಗೋಕು-ಲ-ದ ಯಶೋ-ಧೆ-ಯ ಗ-ರ್ಭದಲ್ಲಿ ಹು-ಟ್ಟು-ತ್ತಾ-ಳೆ. ಎಂಟನೇ ಮಗು ಕೃಷ್ಣ ಹುಟ್ಟುವಾಗ ವಸುದೇವ ಹುಟ್ಟಿದ ಹಸುಳೆಯನ್ನು ಗುಟ್ಟಾಗಿ ನಂದಗೋಕುಲಕ್ಕೆ ಕಳಿಸಿ ತನ್ನ ಸ್ನೇಹಿತ ನಂದಗೋಪನ ಮನೆಯಲ್ಲಿಟ್ಟ. ಅಲ್ಲಿ ಯಶೋ-ಧೆ-ಗೆ ಹುಟ್ಟಿ-ದ ಹೆಣ್ಣು-ಮ-ಗು ದುರ್ಗೆ-ಯ-ನ್ನು ತಂದು ದೇವ-ಕಿ-ಯ ಮಡಿ-ಲಿ-ನ-ಲ್ಲಿಡು-ತ್ತಾನೆ. ಕಂಸ ಮಗು-ವ-ನ್ನು- ಕೊಲ್ಲ-ಬೇ-ಕೆಂ-ದು ಬಂದಾ-ಗ ದು-ರ್ಗೆ ನಿ-ನ್ನ-ನ್ನು ಕೊಲ್ಲು-ವ ಮಗು ಬೇರೆ-ಡೆ ಬೆಳೆ-ಯು-ತ್ತಿ-ದೆ ಎಂದು ಹೇ-ಳಿ ಮಾಯ-ವಾ-ಗು-ತ್ತಾ-ಳೆ.

ಕಂಸನಿಗೆ -ನಂ-ದ-ಗೋ-ಕು-ಲ-ದ-ಲ್ಲಿ ಬೆಳೆ-ಯು-ತ್ತಿ-ರು-ವ ಕೃಷ್ಣ ನನ್ನು ಪತ್ತೆ ಹಚ್ಚು-ವುದು ಅಷ್ಟೇ-ನೂ ಕಷ್ಟ-ವಾ-ಗ-ಲಿ-ಲ್ಲ . ತನ್ನ ಆಸ್ಥಾನದಲ್ಲಿದ್ದ ರಾಕ್ಷಸರನ್ನೆಲ್ಲಾ ಕೃಷ್ಣನನ್ನು ಕೊಲ್ಲುವುದಕ್ಕೆ ಕಳುಹಿಸಿದ. ಆದರೆ ಕೃಷ್ಣ ಸಾಮಾ-ನ್ಯ-ನೇ.. ಪೂತ-ನಿ, -ಶ-ಕ-ಟ, ಚಾಣೂ-ರ, ಕಂಸ ಎಲ್ಲ-ರ-ನ್ನೂ ತರಿ ತರಿದು ಕೊಂದು ಮುಗಿಸುತ್ತಾನೆ. ಕೃಷ್ಣ-ನ ಬಗ-ಲಿ-ಗೆ ಅಸು-ರಾ-ರಿ ಎಂಬ ಹೆಸ-ರು ಬಿದ್ದದ್ದು ಹೀ-ಗೆ-.

ಕೃಷ್ಣ-ನಿ-ಗಿ-ರು-ವ ಎಂಟ-ರ ನಂಟು : ಈ ಶ್ರೀ ಕೃಷ್ಣ ದೇವ-ರಿ-ಗೂ ಎಂಟ-ಕ್ಕೂ ನಂಟಿ-ದೆ. ದೇವ-ಕಿ-ಗೆ ಕೃಷ್ಣ ಎಂಟ-ನೇ ಮಗು.

ಕೃಷ್ಣಾ-ವ-ತಾ-ರ, ಮಹಾ-ವಿ-ಷ್ಣು-ವಿ-ನ ಹತ್ತು ಅವ-ತಾ-ರ-ಗ-ಳಲ್ಲಿ ಎಂ-ಟ-ನೆಯದು. ಕೃ-ಷ್ಣ ಹುಟ್ಟಿ-ದ್ದು ಅಷ್ಟ-ಮೀ ತಿಥಿ-ಯ-ಲ್ಲಿ . ವರಿ-ಸಿ-ದ್ದು ಅಷ್ಟ ಮಹಿ-ಷಿ-ಯ-ರ-ನ್ನು .

ಕೃಷ್ಣ ತನ್ನ ಮಗನಿಗೆ ಮದು-ವೆ ಮಾಡಿ-ಸ-ಬೇ-ಕಾ-ದ ಸಂ-ದ--ರ್ಭ-ದ-ಲ್ಲಿ , ಇನ್ನೆಂ-ಟು ದಿನ-ಗ-ಳ-ಲ್ಲಿ ಮದು-ವೆ ಮಾಡಿ-ಸುತ್ತೇ-ನೆ ಎಂದು ಪ್ರತಿ-ಜ್ಞೆ ಮಾಡಿ ಪೇಚಿ-ಗೆ ಸಿಲುಕಿ--ದ್ದೂ ಉಂ-ಟು. ಕೊನೆ-ಗೆ ದ್ರೌಪ-ದಿಯ ಸಹಾ-ಯ-ದಿಂ-ದ ಪ್ರತಿ-ಜ್ಞೆ ಪೂರೈ-ಸು-ತ್ತಾ-ನೆ. ಇನ್ನು ಎಂಟ-ರ ಮಗ್ಗಿ ಪ್ರಕಾ-ರ ಹೋದ-ರೆ, ಕೃಷ್ಣ-ನಿ-ಗೆ ಹದಿ-ನಾ-ರು ಸಾವಿ-ರ ಹೆಂಡಿ-ರು. ಹೀಗೆ ಕೃಷ್ಣನಿ-ಗೂ ಎಂಟ-ಕ್ಕೂ ಅದೇ-ನೋ ಒಂದು ಗುಟ್ಟಿ-ನ ನಂಟು.

English summary
An endless incarnation of human behaviour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X