ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ

|
Google Oneindia Kannada News

ಸತತವಾಗಿ ಎರಡನೇ ವರ್ಷ ಕೊರೊನಾ ವೈರಸ್ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಲೇ ಸಾಗುತ್ತಿದೆ. ಹೋದ ವರ್ಷವೂ ಕೊರೊನಾ ರಗಳೆಯಿಂದ ಯಾವುದೇ ಹಬ್ಬಗಳನ್ನು ವಿಜ್ರುಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯುವುದು ಬಹುತೇಕ ನಿಶ್ಚಿತ.

ಎರಡನೇ ವೈರಸ್ ಮತ್ತೆ ಬಾಲ ಬಿಚ್ಚಿತ್ತಿರುವುದರಿಂದ, ಸಾರ್ವಜನಿಕರಿಗೂ ಅಸಡ್ಡೆ ಹೆಚ್ಚಾಗಿರುವುದರಿಂದ, ರಾಜಕೀಯ ಸಭೆಗಳು ಎಗ್ಗಿಲ್ಲದೇ ಸಾಗುತ್ತಿರುವುದರಿಂದ, ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದೆ. ಆದರೂ, ಮೃತ ಪಡುತ್ತಿರುವವರ ಸಂಖ್ಯೆ ಹೆಚ್ಚಾಗದೇ ಇರುವುದು ಸಮಾಧಾನಕರ ವಿಷಯ.

ಗಣೇಶ ಹಬ್ಬದ ಸಂದರ್ಭದಲ್ಲಿ ಓಡಲಿವೆ 72 ವಿಶೇಷ ರೈಲು ಗಣೇಶ ಹಬ್ಬದ ಸಂದರ್ಭದಲ್ಲಿ ಓಡಲಿವೆ 72 ವಿಶೇಷ ರೈಲು

ಸರಕಾರವೇ ಅಧಿಕೃತವಾಗಿ ಮುಂಬರುವ ಸಾಲುಸಾಲು ಹಬ್ಬಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಚೈನ್ ಅನ್ನು ತಪ್ಪಿಸಲು ಸರಕಾರಕ್ಕೆ ಇದೊಂದೇ ದಾರಿಯಾಗಿರುವಂತೆ ಕಾಣುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬಗಳ ಸರದಿ ಆರಂಭವಾಗಲಿದೆ.

Shravana, Bhadrapada, Ashwayuja and Karthika Month Festivals List 2021.

ಆಗಸ್ಟ್ ಎಂಟರಂದು ಭೀಮನ ಅಮವಾಸ್ಯೆಯ ಮೂಲಕ ಶ್ರಾವಣ ಮಾಸ ಆರಂಭವಾಗಲಿದೆ. ಅಲ್ಲಿಂದ ಮೂರು ತಿಂಗಳ ಕಾಲದಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳು ಸಾಲಾಗಿ ಬರಲಿದೆ. ಕಳೆದ ಬಾರಿಯಂತೇ ಈ ಬಾರಿಯೂ ಸರಳ ಆಚರಣೆಯೋ ಅಥವಾ ಫುಲ್ ಜೋಷ್ ನಲ್ಲಿ ಹಬ್ಬದ ಆಚರಣೆಯೋ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

 ಗುರುಪೂರ್ಣಿಮಾ 2021: ಆಚರಣೆ, ಮಹತ್ವ, ಸಂದೇಶಗಳು ಗುರುಪೂರ್ಣಿಮಾ 2021: ಆಚರಣೆ, ಮಹತ್ವ, ಸಂದೇಶಗಳು

2021ರ ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುತ ಮಾಸದ ಹಬ್ಬಹರಿದಿನಗಳ ಪಟ್ಟಿ ಈ ರೀತಿಯಿದೆ:

ದಿನಾಂಕ ದಿನ ಹಬ್ಬ ರಜೆ:
ಆಗಸ್ಟ್ 8 ಭಾನುವಾರ ಭೀಮನ ಅಮಾವಾಸ್ಯಾ, ದೀವಿಗೆ ಅಮಾವಾಸ್ಯಾ, ಶ್ರಾವಣ ಮಾಸಾರಂಭ ಇಲ್ಲ
ಆಗಸ್ಟ್ 10 ಮಂಗಳವಾರ ಮಂಗಳಗೌರೀ ವ್ರತ, ಮೊಹರಂ ಪ್ರಾರಂಭ ಇಲ್ಲ
ಆಗಸ್ಟ್ 13 ಶುಕ್ರವಾರ ನಾಗರ ಪಂಚಮಿ, ಕಲ್ಕೀ ಜಯಂತಿ ಇಲ್ಲ
ಆಗಸ್ಟ್ 15 ಭಾನುವಾರ ಸ್ವಾತಂತ್ರ್ಯ ದಿನಾಚರಣೆ ಸಾರ್ವತ್ರಿಕ ರಜೆ
ಆಗಸ್ಟ್ 20 ಶುಕ್ರವಾರ ವರಮಹಾಲಕ್ಷ್ಮೀ ವ್ರತ, ಮೊಹರಂ ಕಡೇ ದಿನ ಸರಕಾರೀ ರಜೆ
ಆಗಸ್ಟ್ 21 ಶನಿವಾರ ಚಾಂದ್ರ/ಸೌರ ಯಗುಪಾಕರ್ಮ, ತಿರು ಓಣಂ ಇಲ್ಲ
ಆಗಸ್ಟ್ 22 ಭಾನುವಾರ ಯಜುರುಪಾರ್ಮ/ ರಕ್ಷಾ ಬಂಧನ -
ಆಗಸ್ಟ್ 24 ಮಂಗಳವಾರ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಇಲ್ಲ
ಆಗಸ್ಟ್ 30 ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿರ್ಬಂಧಿತ ರಜೆ
ಆಗಸ್ಟ್ 31 ಮಂಗಳವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ ಇಲ್ಲ
ಸೆಪ್ಟಂಬರ್ 5 ಭಾನುವಾರ ಡಾ.ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನಾಚರಣೆ -
ಸೆಪ್ಟಂಬರ್ 8 ಬುಧವಾರ ಕನ್ಯಾಮರಿಯಮ್ಮ ಜನ್ಮದಿನ, ನೇಟಿವಿಟಿ ಹಬ್ಬ ಇಲ್ಲ
ಸೆಪ್ಟಂಬರ್ 9 ಗುರುವಾರ ಗೌರೀ ತೃತೀಯಾ ನಿರ್ಬಂಧಿತ ರಜೆ
ಸೆಪ್ಟಂಬರ್ 10 ಶುಕ್ರವಾರ ಗಣೇಶ ಚತುರ್ಥಿ ರಜೆ
ಸೆಪ್ಟಂಬರ್ 19 ಭಾನುವಾರ ಅನಂತ ಚತುರ್ದಶೀ, ನೋಂಪು -
ಅಕ್ಟೋಬರ್ 2 ಶನಿವಾರ ಗಾಂಧಿ ಜಯಂತಿ ಸಾರ್ವತ್ರಿಕ ರಜೆ
ಅಕ್ಟೋಬರ್ 6 ಬುಧವಾರ ಮಹಾಲಯ ಅಮಾವಾಸ್ಯ ಸರಕಾರೀ ರಜೆ
ಅಕ್ಟೋಬರ್ 14 ಗುರುವಾರ ಮಹಾನವಮಿ, ಆಯುಧಪೂಜೆ ಸರಕಾರೀ ರಜೆ
ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ ಸರಕಾರೀ ರಜೆ
ಅಕ್ಟೋಬರ್ 20 ಬುಧವಾರ ವಾಲ್ಮೀಕಿ ಜಯಂತಿ/ಈದ್ ಮಿಲಾದ್/ಪೈಗಂಬರ್ ಜನ್ಮದಿನ ಸರಕಾರೀ ರಜೆ
ನವೆಂಬರ್ 1 ಸೋಮವಾರ ಕರ್ನಾಟಕ ರಾಜ್ಯೋತ್ಸವ ಸಾರ್ವತ್ರಿಕ ರಜೆ
ನವೆಂಬರ್ 3 ಬುಧವಾರ ನರಕ ಚತುರ್ದಶಿ ಸರಕಾರೀ ರಜೆ
ನವೆಂಬರ್ 4 ಗುರುವಾರ ದೀಪಾವಳಿ ನಿರ್ಬಂಧಿತ ರಜೆ
ನವೆಂಬರ್ 5 ಶುಕ್ರವಾರ ಬಲಿಪಾಡ್ಯಮಿ ಸರಕಾರೀ ರಜೆ
English summary
Shravana 2021: According to Hindu Calender, here is the list of festivals celebrated during the shravana, bhadrapada, ashwayuja and karthika masa. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X