ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನ ಸತ್ಯ ಪರಿಚಯ, ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ

By Prasad
|
Google Oneindia Kannada News

ಭಾರತ ಹಬ್ಬಗಳ ದೇಶ. ಅನೇಕ ಧರ್ಮಗಳ ಜನ್ಮಭೂಮಿ. ಹಲವು ಭಾಷೆಗಳ ಆಗರ. ಭಾರತವು ಆಧ್ಯಾತ್ಮದ ತವರೂರಾದ ಕಾರಣ ಪ್ರತಿಯೊಂದು ಹಬ್ಬಕ್ಕೂ ಇಲ್ಲಿ ತನ್ನದೇ ಆದ ಮಹತ್ವವಿದೆ, ವಿಶೇಷತೆ ಇದೆ, ಆಚರಣೆ ಇದೆ, ವಿಧಿ-ವಿಧಾನಗಳಿವೆ ಹಾಗೂ ಆಧ್ಯಾತ್ಮಿಕ ರಹಸ್ಯ ಅಥವಾ ಹಿನ್ನೆಲೆ ಇದೆ.

ಶಿವರಾತ್ರಿಯ ಹಬ್ಬವು ಪರಮಾತ್ಮ ಶಿವನ ಸತ್ಯ ಪರಿಚಯವನ್ನು ನಮಗೆ ತಿಳಿಸುತ್ತಾ ಶಿವರಾತ್ರಿಯ ವಾಸ್ತವಿಕ ಅರ್ಥವನ್ನು ನಮಗೆ ತಿಳಿಸುತ್ತದೆ. ಶಿವರಾತ್ರಿಯ ಅರ್ಥವನ್ನು ತಿಳಿದುಕೊಳ್ಳುವ ಮುನ್ನ ನಾವು ಶಿವ ಪರಮಾತ್ಮನ ಸತ್ಯ ಪರಿಚಯವನ್ನು ಸ್ವಲ್ಪ ತಿಳಿದುಕೊಳ್ಳೋಣ.

ಇಡೀ ಜಗತ್ತಿನಲ್ಲಿ ಪರಮಾತ್ಮ ಎಂಬ ಶಬ್ದವನ್ನು ಕೇಳದವರು ಬಹುಶ: ಯಾರೂ ಇರಲಿಕ್ಕಿಲ್ಲ. ಆದರೆ ಪರಮಾತ್ಮ ಶಿವನ ಸತ್ಯ ಪರಿಚಯ ಅಥವಾ ಯಥಾರ್ಥ ಜ್ಞಾನವನ್ನು ಅರಿಯದಿರುವವರು ಬಹಳಷ್ಟು ಜನರಿದ್ದಾರೆ.

ಪ್ರತಿಯೊಬ್ಬ ಮನುಷ್ಯನು ತನ್ನ ಶಾರೀರಿಕ ತಂದೆಯ ನಾಮ, ರೂಪ ಮತ್ತು ಕರ್ತವ್ಯ ಇತ್ಯಾದಿಯನ್ನು ಅರಿತಿದ್ದಾನೆ, ನಗರವಾಸಿಗಳು ತಮ್ಮ ಮಹಾಪೌರರ ಬಗ್ಗೆ ಮಾಹಿತಿಯನ್ನು ಇಟ್ಟುಕೊಂಡಿರುತ್ತಾರೆ. ರಾಜ್ಯವಾಸಿಗಳು ತಮ್ಮ ರಾಜ್ಯಪಾಲರನ್ನು ಅರಿತಿರುತ್ತಾನೆ. ದೇಶವಾಸಿಗಳು ತಮ್ಮ ರಾಷ್ಟ್ರಪತಿಯನ್ನೂ ಅರಿತಿರುತ್ತಾರೆ. ಆದರೆ ವಿಶ್ವದ ಅಧಿಪತಿ, ವಿಶ್ವನಾಥನ ಪರಿಚಯವನ್ನು ಯಾರೂ ಅರಿತುಕೊಂಡಿಲ್ಲ. ಹಾಗಾಗಿ ಈಗ ಅರಿತುಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಪರಮಾತ್ಮ ಶಿವನ ನಿಜವಾದ ಸ್ವರೂಪ

ಪರಮಾತ್ಮ ಶಿವನ ನಿಜವಾದ ಸ್ವರೂಪ

ಯಾವುದೇ ಒಂದು ವಸ್ತುವಿನ ರೂಪವು ನಮಗೆ ಕಾಣಿಸದೇ ಇರಬಹುದು, ಆದರೆ ಅದರ ಅಸ್ತಿತ್ವವನ್ನು ನಿರೂಪಿಸುವಂತಹ ಗುಣ, ಶಕ್ತಿಯ ಅನುಭವ ನಮಗೆ ಆದಾಗ ನಾವು ಅದನ್ನು ನಂಬುತ್ತೇವೆ. ಇದೇ ರೀತಿ ಪರಮಾತ್ಮನ ಆಕಾರವು ಅಥವಾ ರೂಪವು ನಮಗೆ ಕಾಣದೇ ಇರಬಹುದು, ಆದರೆ ಅವನ ಗುಣ-ಶಕ್ತಿಗಳಿಂದ ನಾವು ಅವನ ಅಸ್ತಿತ್ವವನ್ನು ನಂಬುತ್ತಲೇ ಬಂದಿದ್ದೇವೆ.

ಪರಮಾತ್ಮನು ದಿವ್ಯ ರೂಪವನ್ನು ಹೊಂದಿದ್ದಾನೆ. ಆ ರೂಪವು ಈ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ, ಆದ್ದರಿಂದಲೇ ಭಕ್ತರು ಅವನನ್ನು ನಿರಾಕಾರ, ನಿರ್ವಿಕಾರ ಮತ್ತು ನಿರಂಹಕಾರ ಎಂದು ಹಾಡಿ ಹೊಗಳಿದ್ದಾರೆ. ಆ ಸ್ವರೂಪವನ್ನು ನೋಡಲು ಜ್ಞಾನ-ಚಕ್ಷುಗಳ ಅವಶ್ಯಕತೆ ಇದೆ.

ನಿರಾಕಾರ ಎಂಬ ಶಬ್ದವು ಸಾಪೇಕ್ಷವಾಗಿದೆ

ನಿರಾಕಾರ ಎಂಬ ಶಬ್ದವು ಸಾಪೇಕ್ಷವಾಗಿದೆ

ಅನ್ಯ ಆತ್ಮರುಗಳ ದೈಹಿಕ ರೂಪದ ಹೋಲಿಕೆಯಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಆತ್ಮರು ಸ್ಥೂಲ ಅಥವಾ ಸೂಕ್ಷ್ಮ ಶರೀರವನ್ನು ಧರಿಸುತ್ತಾರೆ, ಆದರೆ ಪರಮಾತ್ಮನು ಜನ್ಮ-ಮರಣದಿಂದ ದೂರವಿದ್ದಾನೆ. ಪರಮಾತ್ಮನಿಗೆ ತನ್ನದೇ ಆದ ಯಾವ ಶರೀರವೂ ಇಲ್ಲ. ಹಾಗಾಗಿ ಅವನನ್ನು ನಿರಾಕಾರಿ ಎಂದು ಕರೆಯುತ್ತಾರೆ. ನಿರಾಕಾರನೆಂದರೆ ಅಕಾಯ, ಅವ್ಯಕ್ತ, ಅಶರೀರಿ. ಪರಮಾತ್ಮನು ರೂಪದಿಂದ ದೂರವಿಲ್ಲ, ಅವನ ರೂಪವಾಗಿದೆ 'ಜ್ಯೋತಿರ್ಬಿಂದು ಸ್ವರೂಪ'. ಅಂದರೆ ಅವನು ಜ್ಯೋತಿ ಆಕಾರದಲ್ಲಿದ್ದಾನೆ.

ಪರಮಾತ್ಮನ ನಾಮಕ್ಕೆ ಅಸ್ತಿತ್ವಕ್ಕೆ ಅಳಿವಿಲ್ಲ

ಪರಮಾತ್ಮನ ನಾಮಕ್ಕೆ ಅಸ್ತಿತ್ವಕ್ಕೆ ಅಳಿವಿಲ್ಲ

ಜಗತ್ತಿನಲ್ಲಿರುವ ದೇಹಧಾರಿ ಮನುಷ್ಯಾತ್ಮರ ದೇಹಗಳಿಗೆ ಹೆಸರನ್ನು ಇಡಲಾಗುತ್ತದೆ. ಪ್ರತಿಯೊಂದು ಜನ್ಮದಲ್ಲಿಯೂ ವಿಭಿನ್ನ ನಾಮ-ರೂಪಗಳನ್ನು ಹೊಂದುತ್ತಾರೆ. ಎಲ್ಲಾ ಮನುಷ್ಯರ ನಾಮಗಳು ವಿನಾಶಿಯಾಗಿವೆ, ದೇಹಗಳೂ ಸಹ ವಿನಾಶಿಯಾಗಿವೆ. ಆದರೆ ಪರಮಾತ್ಮನು ಅಶರೀರಿಯಾಗಿದ್ದಾನೆ. ಪುನರ್ಜನ್ಮದ ಚಕ್ರದಲ್ಲಿ ಬರದೇ ಅವಿನಾಶಿ, ಅಪರಿವರ್ತನೀಯ ಮತ್ತು ದಿವ್ಯನಾಗಿದ್ದಾನೆ. ಪರಮಾತ್ಮನ ದಿವ್ಯನಾಮವಾಗಿದೆ 'ಶಿವ'. ಶಿವ ಎಂಬುದು ಒಂದು ಸಂಸ್ಕೃತ ಶಬ್ದವಾಗಿದ್ದು, ಅದರ ಅರ್ಥವಾಗಿದೆ 'ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ, ಬೀಜ-ರೂಪ, ಬಿಂದು.

ಪರಮಾತ್ಮನ ಸ್ಮರಣ-ಚಿಹ್ನೆ ಶಿವಲಿಂಗವಾಗಿದೆ

ಪರಮಾತ್ಮನ ಸ್ಮರಣ-ಚಿಹ್ನೆ ಶಿವಲಿಂಗವಾಗಿದೆ

ಎಲ್ಲಾ ಮಹಾನ್ ವ್ಯಕ್ತಿಗಳ ಸ್ಮೃತಿಗಾಗಿ ಅವರ ಸ್ಮಾರಕಗಳನ್ನು, ಚಿಹ್ನೆಗಳನ್ನು, ಮೂರ್ತಿಗಳನ್ನು ಮತ್ತು ಮಂದಿರಗಳನ್ನು ನಿರ್ಮಿಸುತ್ತಾರೆ. ಆದರೆ ಜಗತ್ತಿನಲ್ಲಿ ಅತೀ ಹೆಚ್ಚು ಪೂಜೆ ಸಾಮಾನ್ಯವಾಗಿ ಶಿವಲಿಂಗಕ್ಕೆ ಆಗುತ್ತದೆ. ವಿಶ್ವದಲ್ಲಿ ಶಿವಲಿಂಗದ ಪೂಜೆ ನಡೆಯದ ಯಾವುದೇ ದೇಶವಿಲ್ಲ. ಶಿವ ಎಂಬ ಶಬ್ದದ ಅರ್ಥವಾಗಿದೆ ಕಲ್ಯಾಣಕಾರಿ' ಮತ್ತು 'ಲಿಂಗ'ದ ಅರ್ಥವಾಗಿದೆ 'ಪ್ರತಿಮೆ.' ಆದ್ದರಿಂದ ಶಿವಲಿಂಗದ ಅರ್ಥವಾಗಿದೆ 'ಪರಮಾತ್ಮ ಶಿವನ ಪ್ರತಿಮೆ.'

ಕೊಹಿನೂರ್ನಿಂದ ನಿರ್ಮಿಸಿದ ಶಿವಲಿಂಗ

ಕೊಹಿನೂರ್ನಿಂದ ನಿರ್ಮಿಸಿದ ಶಿವಲಿಂಗ

ಪ್ರಾಚೀನ ಕಾಲದಲ್ಲಿ ಶಿವಲಿಂಗಗಳನ್ನು ವಜ್ರಗಳಿಂದ ಮಾಡಲಾಗುತ್ತಿತ್ತು. ಏಕೆಂದರೆ ಪರಮಾತ್ಮನ ರೂಪ ಜ್ಯೋತಿರ್ಬಿಂದು ಆಗಿದೆ. ಪ್ರಸಿದ್ಧ ಸೋಮನಾಥ ಮಂದಿರದಲ್ಲಿ ಪ್ರಪ್ರಥಮವಾಗಿ ಜಗತ್ತಿನಲ್ಲಿಯೇ ಸರ್ವೋತ್ತಮ ವಜ್ರವಾದ ಕೊಹಿನೂರ್ನಿಂದ ನಿರ್ಮಿಸಿದ ಶಿವಲಿಂಗದ ಸ್ಥಾಪನೆಯಾಗಿತ್ತು. ವಿಭಿನ್ನ ಧರ್ಮಗಳಲ್ಲಿಯೂ ಸಹ ಪರಮಾತ್ಮನನ್ನು ಈ ಆಕಾರದಿಂದಲೇ ಪ್ರಾರ್ಥಿಸುತ್ತಾರೆ.

ಶಿವನ 12 ಅತಿ ಪ್ರಸಿದ್ಧ ಜ್ಯೋತಿರ್ಲಿಂಗ

ಶಿವನ 12 ಅತಿ ಪ್ರಸಿದ್ಧ ಜ್ಯೋತಿರ್ಲಿಂಗ

ಜ್ಯೋತಿ ಸ್ವರೂಪ ಪರಮಾತ್ಮನ ಪ್ರತೀಕವಾಗಿ ಮನೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಮಂದಿರಗಳಲ್ಲಿ ಮತ್ತು ಗುರುದ್ವಾರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಜ್ಯೋತಿಯನ್ನು ಬೆಳಗಿಸುತ್ತಾರೆ. ಭಾರತದಲ್ಲಿ ಶಿವನ 12 ಅತಿ ಪ್ರಸಿದ್ಧ ಜ್ಯೋತಿರ್ಲಿಂಗಗಳಿವೆ. ಇವುಗಳಲ್ಲಿ ಹಿಮಾಲಯದಲ್ಲಿರುವ ಕೇದಾರೇಶ್ವರ ಮತ್ತು ಸೌರಾಷ್ಟ್ರದ ಸೋಮನಾಥ ಮತ್ತು ಮಧ್ಯಪ್ರದೇಶದ ಉಜ್ಜೈನಿ ನಗರದಲ್ಲಿರುವ ಮಹಾಕಾಲೇಶ್ವರ ಮಂದಿರವು ಅತಿ ಪ್ರಸಿದ್ಧವಾಗಿವೆ.

ಕ್ರಿಶ್ಚಿಯನ್ನರು, ಮುಸಲ್ಮಾನರಿಂದಲೂ ಪೂಜೆ

ಕ್ರಿಶ್ಚಿಯನ್ನರು, ಮುಸಲ್ಮಾನರಿಂದಲೂ ಪೂಜೆ

ಭಾರತದ ಹೊರಗೂ ಸಹ ಅನ್ಯ ಧರ್ಮೀಯರೂ ಶಿವಲಿಂಗಕ್ಕೆ ಬಹಳ ಗೌರವವನ್ನು ನೀಡುತ್ತಿದ್ದಾರೆ. ಕ್ರಿಶ್ಚಿಯನ್ನರು, ಮುಸಲ್ಮಾನರು, ಬೌದ್ಧರು ಮತ್ತು ಅನ್ಯ ಧರ್ಮೀಯರೂ ಕೂಡ ಪರಮಾತ್ಮನನ್ನು ಜ್ಯೋತಿರ್ಬಿಂದು ಸ್ವರೂಪನೆಂದು ಒಪ್ಪುತ್ತಾರೆ. ಉದಾಹರಣೆಗಾಗಿ ಕ್ರಿಶ್ಚಿಯನ್ ಧರ್ಮದ ರೋಮನ್ ಕ್ಯಾಥೋಲಿಕ್ನವರು ಅಂಡಾಕಾರದ ಕಲ್ಲನ್ನು ಇಂದಿಗೂ ಪೂಜಿಸುತ್ತಾರೆ. ಇದೇ ಆಕಾರದ ಕಲ್ಲನ್ನು ಸಂಗ್-ಏ-ಅಸ್ವದ್ ಅಥವಾ ಮಕ್ಕೇಶ್ವರ ಎಂದು ಕರೆಯಲಾಗುತ್ತದೆ.

ಜಪಾನ್ನಲ್ಲಿಯೂ ಬೌದ್ಧ ಧರ್ಮದ ಅನುಯಾಯಿಗಳು ಆಧ್ಯಾತ್ಮಿಕ ಸಾಧನೆಯನ್ನು ಮಾಡುವಾಗ ತಮ್ಮ ಎದುರಿಗೆ ಶಿವಲಿಂಗದ ಆಕಾರವುಳ್ಳ ಒಂದು ಕಲ್ಲನ್ನು 3 ಅಡಿ ದೂರ ಮತ್ತು ಎತ್ತರದಲ್ಲಿ ಇಟ್ಟು ಧ್ಯಾನವನ್ನು ಮಾಡುತ್ತಾರೆ. ಇಸ್ರೈಲ್ ಮತ್ತು ಯಹೂದಿಗಳ ದೇಶಗಳಲ್ಲಿಯೂ ಯಹೂದಿಗಳು ಶಪಥಗೈಯುವಾಗ ಇಂತಹ ಕಲ್ಲನ್ನು ಸ್ಪರ್ಶಿಸುತ್ತಾರೆ.

ಸುಮಾತ್ರ ಮತ್ತು ಜಾವ ದ್ವೀಪಗಳಲ್ಲಿ

ಸುಮಾತ್ರ ಮತ್ತು ಜಾವ ದ್ವೀಪಗಳಲ್ಲಿ

ಇದಲ್ಲದೇ ಪ್ರಾಚೀನ ಮತ್ತು ಪ್ರಸಿದ್ಧ ದೇಶವಾದ ಈಜಿಪ್ಟ್ನ ಫನೇಶಿಯಾ ನಗರದಲ್ಲಿ, ಇರಾನ್‌ನ ಸಿರಿಯಾ ನಗರದಲ್ಲಿ, ಹ್ಯಾತಿ ದ್ವೀಪದಲ್ಲಿ, ಸುಮಾತ್ರ ಮತ್ತು ಜಾವ ದ್ವೀಪಗಳಲ್ಲಿ ಶಿವನ ಈ ಸ್ಥೂಲ ಸ್ಮಾರಕಗಳು ಕಂಡು ಬರುತ್ತವೆ. ಇಷ್ಟೇ ಅಲ್ಲದೇ ಸ್ಕಾಟ್ಲ್ಯಾಂಡ್ನ ಪ್ರಮುಖ ನಗರವಾದ ಗ್ಲಾಸಗೋದಲ್ಲಿ, ಟರ್ಕಿಯ ಟಾಸ್ಕಂಟ್ನಲ್ಲಿ, ವೆಸ್ಟ್ಇಂಡೀಸ್ನ ಗಿಯಾನಾದಲ್ಲಿ ಮತ್ತು ಶ್ರೀಲಂಕಾ ಮತ್ತು ಮಾರಿಷಿಯಸ್ ಮತ್ತು ಮಡಗಾಸ್ಕರ್ನಲ್ಲಿ ಶಿವಲಿಂಗದ ಪೂಜೆಯಾಗುತ್ತದೆ.

ಶಿವನು ಸರ್ವ ಆತ್ಮರ ಪರಮಪಿತ

ಶಿವನು ಸರ್ವ ಆತ್ಮರ ಪರಮಪಿತ

ಅನೇಕ ಧರ್ಮಗಳಲ್ಲಿ ಉಂಟಾದ ಮತಭೇದದ ಕಾರಣ ಇಂದು ಶಿವಲಿಂಗದ ಪೂಜೆಯು ಅನ್ಯ ದೇಶಗಳಲ್ಲಿ ಆಗದೇ ಇರಬಹುದು. ಆದರೆ ಭಾರತದಲ್ಲಿ ಶಿವನ ಪೂಜೆಯು ಅತಿಪ್ರಿಯವಾದುದಾಗಿದೆ. ಶ್ರೀರಾಮಚಂದ್ರನು ರಾಮೇಶ್ವರದಲ್ಲಿ, ಶ್ರೀಕೃಷ್ಣನು ಗೋಪೇಶ್ವರದಲ್ಲಿ ಮತ್ತು ಅನ್ಯ ದೇವಿ-ದೇವತೆಗಳು ಪರಮಪೂಜ್ಯ ಈಶ್ವರ-ಶಿವನನ್ನು ಆರಾಧಿಸಿರುವಂತೆ ತೋರಿಸಲಾಗಿದೆ. ಆದ್ದರಿಂದ ಪರಮಾತ್ಮ ಶಿವನು ಸರ್ವ ಆತ್ಮರ ಪರಮಪಿತನಾಗಿದ್ದು, ಜ್ಯೋತಿರ್ಬಿಂದು ಸ್ವರೂಪನಾಗಿದ್ದಾನೆ.

English summary
Significance of Shivaratri. Truth behind Lord Shiva. In Hinduism, Lord Shiva is considered as the Supreme Truth. People all over the world worship him on the occasion of Shivaratri, the night of the dark and to overcome darkness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X