• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವರಾತ್ರಿ : ಉಗ್ರರೂಪಿ ಉಜ್ಜಯಿನಿ ಮಹಾಕಾಲೇಶ್ವರ

By ನಾಗನೂರಮಠ ಎಸ್.ಎಸ್.
|

ಈ ಹಿಂದೆ ಹೇಳಿದಂತೆ ನಮ್ಮ ಧರ್ಮ ಹಾಗೂ ದೇವಾಲಯಗಳನ್ನು ಹಾಳು ಮಾಡಲು ಬಂದವರು ಈಗಲೂ ರಾಕ್ಷಸರಂತೆಯೇ ತಮ್ಮ ವರ್ತನೆಯನ್ನು ಮುಂದುವರೆಸಿದ್ದಾರೆ. ಅವರಾರು? ಎಲ್ಲಿದ್ದಾರೆ? ಎಂದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಆದರೆ ಅವರಿಗೆ ನಮ್ಮಲ್ಲಿನ ದೈವತ್ವವನ್ನು ಹಾಳು ಮಾಡಲು ಸಾಧ್ಯವಾಗಲಿಲ್ಲ.

ನಾವು ಪೂಜಿಸುವ ದೈವದ ಸ್ವರೂಪವೇ ಹಾಗಿದೆ. ಲೂಟಿಕಾರರು ನಮ್ಮ ದೇಶದ ವಜ್ರ, ವೈಢೂರ್ಯ, ಮುತ್ತು, ರತ್ನ, ಬಂಗಾರ ದೋಚಿಕೊಂಡು ಹೋಗಿದ್ದಾರೆಯೇ ಹೊರತು ನಮ್ಮ ಸಂಪ್ರದಾಯ, ಸಂಸ್ಕೃತಿ, ನಮ್ಮಲ್ಲಿನ ದೈವಭಕ್ತಿಯನ್ನು ಕದ್ದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.

ಏಕೆಂದರೆ ಸಾಕಷ್ಟು ತಾಳ್ಮೆ, ಸಹನೆಯ ಶಕ್ತಿಯನ್ನು ನಮ್ಮೆಲ್ಲರಿಗೂ ನಾವು ನಂಬಿರುವ ದೇವರು ನೀಡಿದ್ದಾನೆ ಎಂಬುದನ್ನು ನಮ್ಮ ಹಿಂದೂ ಧರ್ಮದಲ್ಲಿಯೇ ಹುಟ್ಟಿರುವ ಹಿಂದೂ ಧರ್ಮವಿರೋಧಿಗಳು ಮನಗಾಣಬೇಕು. ಇಂತಹ ವಿಷಯವೇನಾದರೂ ಇವರಿಗೆ ಹೇಳುತ್ತ ಹೋದರೆ ಮತ್ತೆ ಬಾಲ ಬಿಚ್ಚಲಾರಂಭಿಸುತ್ತಾರೆ.

ಇರಲಿ, ಈಗೆಲ್ಲೋ ಬಾಲ ಮುದುಡಿಕೊಂಡು ಬಿದ್ದಿರುವ ಇಂಥವರ ಬಗ್ಗೆ ಮಾತನಾಡುವುದಕ್ಕಿಂತ ಮೂರನೇ ಜ್ಯೋತಿರ್ಲಿಂಗದ ಬಗ್ಗೆ ತಿಳಿದುಕೊಳ್ಳೋಣ. ಮಧ್ಯಪ್ರದೇಶದ ಉಜ್ಜಯಿನಿ ಪಟ್ಟಣದಲ್ಲಿರುವ ಲಿಂಗರೂಪಿ ಮಹಾಕಾಲೇಶ್ವರ ಜ್ಯೋತಿರ್ಲಿಂಗದಲ್ಲಿ ಮೂರನೇಯದಾಗಿದೆ. ಈ ಪಟ್ಟಣವು ಸಾಕಷ್ಟು ಪೌರಾಣಿಕ ಹಿನ್ನೆಲೆ ಹೊಂದಿದೆ. ಸುಮಾರು ಐದು ಸಾವಿರ ವರ್ಷಗಳ ಹಿಂದಿನಿಂದಲೂ ಈ ಪಟ್ಟಣವು ಅಸ್ತಿತ್ವದಲ್ಲಿದೆ ಎಂಬ ಕುರುಹುಗಳು ಇತಿಹಾಸ ಸಂಶೋಧಕರಿಗೆ ಸಿಕ್ಕಿವೆ.

ಶ್ರೀರಾಮಚಂದ್ರನು ಬಂದು ಇಲ್ಲಿನ ನದಿ ತೀರದಲ್ಲಿ ವಿರಮಿಸಿದ್ದನೆಂಬ ಪ್ರತೀತಿ ಇದೆ. ಸೀತಾಪಹರಣವಾದ ಸಂದರ್ಭದಲ್ಲಿ ರಾಮನು ಸೀತೆಯನ್ನು ಹುಡುಕುತ್ತ ಈ ಪಟ್ಟಣಕ್ಕೆ ಬಂದಿದ್ದನಂತೆ. ಕೃಷ್ಣ-ಬಲರಾಮರು ಈ ಪಟ್ಟಣದಲ್ಲಿಯೇ ವಿದ್ಯಾರ್ಜನೆ ಆರಂಭಿಸಿದ್ದರಂತೆ. ಈ ಮಾತಿಗೆ ಇಲ್ಲಿರುವ ಹಲವಾರು ಅವಶೇಷಗಳು ಇಂದಿಗೂ ಸಾಕ್ಷಿಯಾಗಿ ನಿಲ್ಲುತ್ತವೆ. ಇಂಥಹ ಪುಣ್ಯಸ್ಥಳವೆನಿಸಿಕೊಂಡ ಉಜ್ಜಯಿನಿಯ ಬಗ್ಗೆ ರಾಮಾಯಣ, ಮಹಾಭಾರತ ಹಾಗೂ ವಿವಿಧ ವೇದ, ಪುರಾಣಗಳಲ್ಲಿ ಉಲ್ಲೇಖವಿದೆ.

ಕವಿರತ್ನ ಕಾಳಿದಾಸ ಉಜ್ಜಯಿನಿಯ ಸೌಂದರ್ಯದ ಬಗ್ಗೇನೆ ಸಾಕಷ್ಟು ಬರೆದಿದ್ದಾನೆ. ಇಲ್ಲಿನ ನದಿ ತೀರ, ಗುಹೆಗಳು ಇಲ್ಲಿ ಆಗಿ ಹೋದ ಗತಇತಿಹಾಸವನ್ನು ಕಣ್ಣಿಗೆ ಕಟ್ಟುಕೊಡುವಂತೆ ಬಣ್ಣಿಸುತ್ತವೆ ತಾವೇ ಮೂಕವಾಗಿ ನಿಂತುಕೊಂಡು.

ಇಂತಹ ಹಿನ್ನೆಲೆಯುಳ್ಳ ಪಟ್ಟಣವು ಆ ಸಮಯದಲ್ಲಿ ಅಪ್ರತಿಮ ಸೌಂದರ್ಯ, ಸಂಪತ್ತುಗಳಿಂದ ರಾರಾಜಿಸುತ್ತಿತ್ತು. ಹಲವಾರು ವಿದ್ವಾಂಸರು, ಶಾಸ್ತ್ರಿಗಳು, ಪಂಡಿತರು ಅಲ್ಲಿ ವಾಸವಾಗಿ ಪೂಜೆ, ಪುನಸ್ಕಾರ ಮಾಡುತ್ತ ತಮ್ಮ ಜೀವನ ಸಾಗಿಸುತ್ತಿದ್ದರು. ಈ ಪಟ್ಟಣದಲ್ಲಿ ವಾಸವಾಗಿದ್ದ ವೇದಪ್ರಿಯನೆಂಬುವನು ಮಹಾನ್ ಶಿವಭಕ್ತನಾಗಿದ್ದನು. ಆದರೆ ವಯಸ್ಸಾಗಿ ಮುದುಕನಾಗುತ್ತ ಬಂದರೂ ಇವನಿಗೆ ಸಂತಾನ ಭಾಗ್ಯವಾಗಿರಲಿಲ್ಲ. ಶಿವನನ್ನು ಅಪರಿಮಿತವಾಗಿ ಏಕಾಗ್ರತೆಯಿಂದ ಧ್ಯಾನಿಸುತ್ತಿದ್ದ ವೇದಪ್ರಿಯನಿಗೆ ಕಡೆಗೂ ಪುತ್ರ ಸಂತಾನವಾಯಿತು. ಮುತ್ತಿನಂಥ ನಾಲ್ಕು ಮಕ್ಕಳು ಜನಿಸಿದರು. ಶಿವಾನುಗ್ರಹದಿಂದ ಜನಿಸಿದ ಆ ಮಕ್ಕಳು ತುಂಬಾ ಸಂಸ್ಕಾರವಂತರಾಗಿ ಬೆಳೆದರು. ವೇದಾಧ್ಯಯನದಲ್ಲೇ ಮುಪ್ಪಿನ ಸಮಯವನ್ನು ಕಳೆಯುತ್ತ ಶಿಸ್ತುಬದ್ಧ ಸಂಸಾರವಾಗಿಸಿಕೊಂಡಿದ್ದ ವೇದಪ್ರಿಯನು ತನ್ನೆಲ್ಲ ಮಕ್ಕಳ ಮದುವೆಯನ್ನು ಮಾಡಿದನು.

ಈ ಪಟ್ಟಣಕ್ಕೆ ಒಮ್ಮೆ ದ್ವೇಷಣನೆಂಬ ರಾಕ್ಷಸನು ದಾಳಿ ಮಾಡಿದನು. ಅಲ್ಲಿದ್ದ ಎಲ್ಲರನ್ನೂ ತನ್ನ ರಾಕ್ಷಸತನದಿಂದ ಕೊಚ್ಚಿ ಹಾಕಲಾರಂಭಿಸಿದನು. ಬಲಿಷ್ಠ ರಾಕ್ಷಸ ಸೇನೆಯೊಂದಿಗೆ ಬಂದ ದ್ವೇಷಣನು ಪಟ್ಟಣದಲ್ಲಿದ್ದ ಮಹಿಳೆಯರ ಶೀಲ ಕೆಡಿಸಲು ಮುಂದಾಗಿದ್ದನು. ಇಡೀ ಊರನ್ನೇ ಸ್ಮಶಾನವನ್ನಾಗಿಸಿಬಿಟ್ಟನು. ಇವನ ರಾಕ್ಷಸತನಕ್ಕೆ ಹೆದರಿ ಜನರು ಜೀವಭಯದಿಂದ ಊರಿಂದ ಓಟ ಕಿತ್ತರು. ವೇದಪ್ರಿಯನಿಗೆ ರಾಕ್ಷಸನ ವಿಷಯ ತಿಳಿಸಿದರು ಎಲ್ಲರೂ. ಹೆಂಗಸರ ಮೇಲೆ ಮಾಡುತ್ತಿರುವ ಅನಾಚಾರವನ್ನು ಹೇಗಾದರೂ ಮಾಡಿ ತಪ್ಪಿಸಿ ನಮ್ಮವರ ಮಾನ ಉಳಿಸಿ ಎಂದು ಬೇಡಿಕೊಂಡರು. ಆಗ ವೇದಪ್ರಿಯನು ತನ್ನ ಮಕ್ಕಳು ಮತ್ತು ಜನರೊಂದಿಗೆ ಸೇರಿಕೊಂಡು ಮಹಾಶಿವನನ್ನು ಕುರಿತು ಶಿವಲಿಂಗ ಪೂಜೆ ಆರಂಭಿಸಿದನು.

ಏಕೆಂದರೆ ದುಷ್ಟರು ಯಾವಾಗಲೂ ಶಿವನಿಂದಲೇ ಹತರಾಗುವುದು. ಅವರಿಗೆ ಬೇರಾವ ದೇವರ ವರವಿದ್ದರೂ ಉಪಯೋಗವಿಲ್ಲ. ಮಹಾಶಿವನ ಮುಂದೆ ಎಲ್ಲರೂ ತಲೆಬಾಗಲೇ ಬೇಕು. ಏಕೆಂದರೆ ಶಿವನಿಗೆ ಎದುರಾಡಿದರೆ ಅವರಂತ್ಯ ಬಂದಂಗೇನೆ. ವೇದಪ್ರಿಯ ಮತ್ತು ಅವನ ಮಕ್ಕಳು ರುದ್ರಪಠಣ ಮಾಡಲಾರಂಭಿಸಿದರು. ಇವರು ಮಾಡುತ್ತಿರುವ ಶಿವಲಿಂಗ ಪೂಜೆಯ ಕುರಿತು ರಕ್ಕಸ ದ್ವೇಷಣಗೆ ಗೊತ್ತಾಯಿತು. ಅಲ್ಲಿಗೂ ದಾಳಿಯಿಟ್ಟನು. ಆದರೆ ಇವರು ಮಾಡುತ್ತಿದ್ದ ಶಿವಪೂಜೆಗೆ ಏನೂ ತೊಂದರೆಯಾಗಲಿಲ್ಲ. ಇದರಿಂದ ಉಗ್ರನಾದ ರಕ್ಕಸ ದ್ವೇಷಣನು ವೇದಪ್ರಿಯ ಮತ್ತು ಅವನ ಮಕ್ಕಳನ್ನು ಕೊಲ್ಲಲು ಮುಂದಾದನು.

ಆ ಕೂಡಲೇ ಉಗ್ರರೂಪಿಯಾಗಿ ಲಿಂಗದಿಂದ ಹೊರಬಂದ ಮಹಾಶಿವನು ತನ್ನ ಮುಕ್ಕಣ್ಣಿನಿಂದ ರಾಕ್ಷಸನ ಸೇನೆಯನ್ನು ಸುಟ್ಟು ಭಸ್ಮ ಮಾಡಿದನು. ಬರೀ ಹೂಂಕಾರದಿಂದಲೇ ದ್ವೇಷಣನನ್ನು ಕೊಂದ ಮಹಾಕಾಲನ ಇನ್ನೊಂದು ರೂಪ ನೋಡಿದ ಜನರು ಶಿವನ ಮಹಿಮೆಯನ್ನು ಕೊಂಡಾಡತೊಡಗಿದರು. ಮಹಾಶಿವನು ಮಹಾಕಾಲನಾಗಿ ಬಂದ ರೂಪವನ್ನು ನೋಡಿ ಭಕ್ತಿಯಿಂದ ನಮಿಸಿದ ಎಲ್ಲರೂ ಲಿಂಗದಿಂದ ಉದ್ಭವಿಸಿದ ನೀನು ಇಲ್ಲಿಯೇ ನೆಲೆಸಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸಯ್ಯ ಶಂಭೋಲಿಂಗನೇ ಎಂದು ಕೇಳಿಕೊಂಡರು.

ಭಕ್ತರಿಗೆ ಬೇಗನೊಲಿಯುವ ಮಹಾಶಿವನು ಮಹಾಕಾಲನಾಗಿ ಈ ಸ್ಥಳಲ್ಲಿಯೇ ನೆಲೆಸಿದ್ದಾನೆಂದು ಪುರಾಣಗಳಲ್ಲಿದೆ. ಇದನ್ನೇ ಜ್ಯೋತಿರ್ಲಿಂಗವಾಗಿ ನಾವೆಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೇವೆ.

"ಓಂಕಾರ ಮಮಲೇಶ್ವರ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಹಲವಾರು ರೋಗ-ರುಜಿನಗಳಿಂದ ಬಳಲುತ್ತಿರುವವರು ಅಂದು ಮಹಾಶಿವನನ್ನು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಬೇಕು.

ಶಿವಕೃಪೆಗೆ : ಬ್ರಾಹ್ಮಿ ಮುಹೂರ್ತದಲ್ಲಿ ಶಿವಪೂಜೆ ಮಾಡುವುದು ತುಂಬಾ ಶ್ರೇಯಸ್ಕರ.

English summary
Mahashivaratri will be celebrated all over Karnataka and India by devotees of Lord Shiva. Shivaratri is considered as Shiva's birthday. Astrologer S.S. Naganurmath writes about Mahakal temple in Ujjain, Madhya Pradesh. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more