ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಶಿವರಾತ್ರಿ; ಕಾಶಿ ವಿಶ್ವನಾಥ ದೇಗುಲದಿಂದ ನೇರ ಪ್ರಸಾರ

|
Google Oneindia Kannada News

ವಾರಾಣಸಿ, ಮಾರ್ಚ್ 11: ಫಲ್ಗುಣ ಮಾಸದಲ್ಲಿ ಬರುವ ಮಹಾಶಿವರಾತ್ರಿ, ಶಿವನ ಆರಾಧಕರಿಗೆ ವಿಶೇಷ ಹಬ್ಬ. ಶಿವ ಹಾಗೂ ಪಾರ್ವತಿ ವಿವಾಹವಾದ ಈ ದಿನವನ್ನು ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯಂದು ಶಿವನ ದರ್ಶನ ಪಡೆಯಲೆಂದೇ ಕಾಶಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಗಂಗಾ ನದಿಯ ತಟದಲ್ಲಿರುವ ಕಾಶಿ ವಿಶ್ವನಾಥನ ದೇವಸ್ಥಾನ ಭಾರತದ ಅತಿ ಪ್ರಸಿದ್ಧ ದೇಗುಲಗಳಲ್ಲಿ ಒಂದು. ಮಹಾಶಿವರಾತ್ರಿಯಂದು ವಾರಾಣಸಿಯಲ್ಲಿ ಲಕ್ಷಾಂತರ ಭಕ್ತರು ಸೇರಿ ಹಬ್ಬದ ವಾತಾವರಣವೇ ತುಂಬಿರುತ್ತದೆ.

Mahashivratri Celebration Live From Kashi Vishwanath Temple

ಭಾರತದೆಲ್ಲೆಡೆಯಿಂದ ಹಾಗೂ ವಿಶ್ವದ ಹಲವು ಕಡೆಯಿಂದಲೂ ಇಲ್ಲಿಗೆ ಶಿವ ಭಕ್ತರು ಶಿವರಾತ್ರಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉಪವಾಸ, ಜಾಗರಣೆ ಇದ್ದು ಶಿವನನ್ನು ಆರಾಧಿಸುತ್ತಾರೆ.

ಹಲವು ಕಾರಣಗಳಿಂದ ಕಾಶಿಗೆ ಬರಲು ಸಾಧ್ಯವಾಗದವರಿಂದೇ ಶಿವನ ದರ್ಶನ ಪಡೆಯಲು ಪ್ರತಿ ಬಾರಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಈ ಬಾರಿಯೂ ಶಿವಭಕ್ತರಿಗೆ ನೇರದರ್ಶನ ಪಡೆಯಲು ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಭಕ್ತರು ಮನೆಯಲ್ಲಿಯೇ ಕುಳಿತು ಕಾಶಿ ವಿಶ್ವನಾಥನ ದರ್ಶನವನ್ನು ಪಡೆಯಬಹುದಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿ ರಾತ್ರಿ 11ರವರೆಗೂ ಲೈವ್ ದರ್ಶನ ಲಭ್ಯವಿರುತ್ತದೆ.

English summary
Here is live streaming of Maha Shivratri Celebrations From Kashi Vishwanath Temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X