• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?

By ವಿಶ್ವಾಸ ಸೋಹೋನಿ
|

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ 'ಶಿವರಾತ್ರಿಯೇ ಸರ್ವಶ್ರೇಷ್ಠ'. ಈ ವರ್ಷ ಶಿವರಾತ್ರಿಯನ್ನು ಮಾರ್ಚ್ 4, ಸೋಮವಾರದಂದು ಆಚರಿಸಲಾಗುತ್ತಿದೆ.

ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನೂ ಆದ 'ಸದಾಶಿವನು ಬಂದು' ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸುತ್ತಾನೆ. ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೈಶ್ವರ್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ಧ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ ಇದೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿ ಅಜ್ಞಾನವೆಂಬ ಕತ್ತಲು ಕವಿದಿರುವ ರಾತ್ರಿ ಇದಾಗಿರುತ್ತದೆ.

ಮಹಾಶಿವರಾತ್ರಿಯಂದು ಜಗದೊಡೆಯ ಈಶ್ವರಗೆ ಗಣ್ಯರ ನಮನ

ಯಾವಾಗ ಎಲ್ಲ ಮಾನವರೂ ಅಧರ್ಮ, ಅನ್ಯಾಯ, ಅನೈತಿಕತೆ, ಅರಾಜಕತ್ವ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ.

ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿತುಳುಕುತ್ತಿವೆಯೋ, ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಸುಳ್ಳುಗ್ರಂಥಗಳ ಮಾರ್ಗದರ್ಶನ, ಆಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೆ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ.

ಯಾವಾಗ "ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೇ" ಎಂದು ಜನ ಸಾಮಾನ್ಯರು, ಸಾಧು ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ, ಅದೇ ಘೋರರಾತ್ರಿಯಲ್ಲಿ ಶಿವ ಪರಮಾತ್ಮನ ಅವತರಣೆ ಆಗುತ್ತದೆ. ಅದೇ ಶಿವರಾತ್ರಿ.

ಎಲ್ಲೆಡೆಯೂ ಶಿವಪೂಜೆ

ಎಲ್ಲೆಡೆಯೂ ಶಿವಪೂಜೆ

ಭಾರತದ ಹಾಗೂ ವಿಶ್ವದಾದ್ಯಂತ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯಲ್ಲಿ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜೈನಲ್ಲಿ ಮಹಾಕಾಳೆಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೆಶ್ವರ ಮುಂತಾದವು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರರಾಷ್ಟ್ರಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ಸೇಪಾಳದಲ್ಲಿ ಪಶುಪತಿನಾಥ, ಬೆಬಿಲೋನನಲ್ಲಿ ಶಿವನಿಗೆ `ಶಿವೂನ' ಎಂದು ಹೇಳಲಾಗುತ್ತದೆ. ಮಿಶ್ರದಲ್ಲಿ `ಸೇವಾ' ನಾಮದಿಂದ ಪೂಜೆಯು ನಡೆಯುತ್ತದೆ. ರೊಮದಲ್ಲಿ `ಪ್ರಿಯಪ್ಸ್' ಎಂದು ಹೇಳಲಾಗುತ್ತದೆ.

ಇಟಲಿಯ ಚರ್ಚ್ ಗಳಲ್ಲಿ ಇಂದಿಗೂ ಶಿವನ ಪ್ರತಿಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ `ಹೂವೆಡ್ ಹಿಪೂಹ' ಎಂದು ಕರೆಯಲಾಗುತ್ತದೆ. ಯುನಾನದಲ್ಲಿ `ಫಲ್ಲೂಸ', ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ `ಶಿವೂ' ಎಂದು ಹೇಳುತ್ತಾರೆ. ಕಾಬಾದಲ್ಲಿ ಶಿವನ ಪ್ರತಿಮೆ ಇತ್ತು ಆದರಿಂದಲೆ ಸಂಶೋಧಕರು `ಕಾಬಾ'ನುಸಹ ಶಿವಾಲಯ ಇತ್ತು ಎಂದು ನಂಬುತ್ತಾರೆ. ಇದರಿಂದಲೆ ಶಿವಪರಮಾತ್ಮನು ಅವತರಿಸಿ ವಿಶ್ವ ಪರಿವರ್ತನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂದು ಸ್ಪಷ್ಟವಾಗುತ್ತದೆ.

ನೇಪಾಳದ ಪಶುಪತಿನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರ

ಶಿವನ ಬೃಹತ್ ವಿಗ್ರಹಕ್ಕೆ ಪೂಜೆ

ಶಿವನ ಬೃಹತ್ ವಿಗ್ರಹಕ್ಕೆ ಪೂಜೆ

ಶಿವನ ಸತ್ಯ ಸಂದೇಶವನ್ನು ಸಾರುವ ಬೃಹತ ಲಿಂಗಾಕಾರದ ಶಿವಾಲಯಗಳನ್ನು ಈಶ್ವರೀಯ ವಿಶ್ವವಿದ್ಯಾಲಯದಿಂದ, ಗುಜರಾತಿನ ಸೋಮನಾಥದಲ್ಲಿ, ಬೆಂಗಳೂರಿನ ಗೊಟ್ಟಿಗೆರೆಯಲ್ಲಿ, ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿ, ಯಲ್ಲಾಪೂರದ ತಪೋವನದಲ್ಲಿ, ಹಾವೇರಿ, ಹೊಸಪೇಟೆ, ಹಾಗೂ ಗೋಕರ್ಣದಲ್ಲಿಯೂ ಸಹ ನಿರ್ಮಿಸಲಾಗಿದೆ.

ದಾವಣಗೆರೆಯಲ್ಲಿ ಇರುವ ಬೃಹದಾಕಾರದ 52 ಅಡಿ ಎತ್ತರದ ಶ್ವೇತ ವರ್ಣದಿಂದ ಕಂಗೊಳಿಸುತ್ತಿರುವ ಶಿವಲಿಂಗವು ಪ್ರತಿಯೊಬ್ಬರಿಗೂ ಕೈಬೀಸಿ ಕರೆಯುತ್ತಿದೆ. ಇದರ ಸುತ್ತಳತೆಯು 50 ಅಡಿಗಳು. ಎದುರುಗಡೆ ಶಿವನ ಧ್ಯಾನದಲ್ಲಿ ಮಗ್ನರಾಗಿರುವ 18 ಅಡಿ ಎತ್ತರದ ಬಸವಣ್ಣನ ಸುಂದರ ಮೂರ್ತಿ ಇದೆ. ಈ ಶಿವಮಂದಿರದ ನಿರ್ಮಾಣಕಾರ್ಯವು 1991 ರಲ್ಲಿ ಆರಂಭವಾಗಿ 1999, ಜನವರಿ 27 ರಂದು ಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿಣಿ ದಾದಿ ಪ್ರಕಾಶಮಣಿಯವರಿಂದ ಉದ್ಗಾಟನೆಗೊಂಡಿತು. ಒಳಗಡೆ ನೀರಾಕಾರ ಪರಮಾತ್ಮ ಶಿವನ ಸತ್ಯ ಜ್ಞಾನವನ್ನು ತಿಳಿಸುವ ಎಳು ಮಂಟಪಗಳ ಆಧ್ಯಾತ್ಮಿಕ ಸಂಗ್ರಹಾಲಯವಿದೆ.

ಶಿವರಾತ್ರಿ ಜಾತ್ರೆ:ಮಾಚೋಹಳ್ಳಿಯಲ್ಲಿ ಬೃಹತ್ ಶಿವನ ಮೂರ್ತಿ ಲೋಕಾರ್ಪಣೆ

ಏಳು ಮಂಟಪಗಳ ಮಹತ್ವ

ಏಳು ಮಂಟಪಗಳ ಮಹತ್ವ

ಮೊದಲನೆಯ ಮಂಟಪ ಆತ್ಮದರ್ಶನ ಎಂದರೆ ಸ್ವಪರಿಚಯ. ನಾನು ಈ ಶರೀರರೂಪಿ ಪಂಚ ಕರ್ಮೇಂದ್ರಿಯಗಳ ರಾಜ, ಪಂಚ ತತ್ವಗಳ ಕುದರೆಯ ಸಾರಥಿ ನಾನು ಆತ್ಮ, ಚೈತನ್ಯ ಶಕ್ತಿ. ಎಂದು ತೋರಿಸಲಾಗಿದೆ. ಎರಡನೆಯ ಮಂಟಪದಲ್ಲಿ ಭಾರತದ ಉತ್ಥಾನ ಮತ್ತು ಪತನದ ಬಗ್ಗೆ ಮಾದರಿ ಇದೆ. ಸೃಷ್ಟಿ ಚಕ್ರದ ಗೋಳದಲ್ಲಿ 4 ಯುಗಗಳಾದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳನ್ನು ತೋರಿಸಲಾಗಿದೆ, ಅದು ತಿರುಗುತ್ತ ತಿರುಗುತ್ತ ಮತ್ತೆ ಸತ್ಯಯುಗ ಬರುತ್ತದೆ. ಅಂದರೆ ಕಾಲಚಕ್ರವು ಪುನರಾವರ್ತಿಸುತ್ತದೆ. ಈಗ ಕಲಿಯುಗದ ಅಂತಿಮ ಸುಮಯವಾಗಿದೆ ಮತ್ತೆ ಸತ್ಯಯುಗ ಬಂದೇ ಬರುತ್ತದೆ. ಮೂರನೆ ಮಂಟಪದಲ್ಲಿ ಭಾರತೀಯರ ಭಕ್ತಿಯ ಪರಂಪರೆಯ ಬಗ್ಗೆ ಇದೆ. ಇದರಲ್ಲಿ ಪೂಜಾರಿಗಳ ಪೂಜಾರಿ ನಾವು ಹೇಗೆ ಆಗಿದ್ದೇವೆ ಎಂದು ಸುಂದರವಾಗಿ ತೋರಿಸಲಾಗಿದೆ. ಶಿವನನ್ನು ಗಣಪತಿ, ಗಣಪತಿಗೆ ಅವನ ಭಕ್ತ, ಆ ಭಕ್ತನಿಗೆ ಅವನ ಭಕ್ತ ಪೂಜಿಸುತ್ತಿರುವುದು.

ಶಿವರಾತ್ರಿಗೆ ದೇಗುಲಗಳು ಸಿದ್ಧ: ಅಷ್ಟಮುಖಿ ಪಶುಪತಿನಾಥ ಶಿವಲಿಂಗ ದರ್ಶನ!

ನಿರಾಕಾರ ಶಿವನೇ ಆತ್ಮನ ತಂದೆ

ನಿರಾಕಾರ ಶಿವನೇ ಆತ್ಮನ ತಂದೆ

ನಾಲ್ಕನೆ ಮಂಟಪದಲ್ಲಿ ಏಕದೇವೋಪಾಸನೆಯಿಂದ ವಿಶ್ವಏಕತೆ ಹೇಗೆ ಸಾಧ್ಯ ಎಂದು ತಿಳಿಸಿಕೊಡಲಾಗಿದೆ. "ಸರ್ವ ಆತ್ಮರ ತಂದೆಯೊಬ್ಬ, ಅವನೇ ನಿರಾಕಾರ ಶಿವನು, ಅವನೇ ಅಲ್ಲಾ, ಅವನೆ ಈಶ, ಅವನೇ ಗಾಡ್, ಓಂಕಾರನು, ದೇವನೊಬ್ಬ, ನಾಮ ಹಲವು ಭಕ್ತರೆನಿತೊ ಜಗದೋಳು. ಭಾವ ಒಂದೇ, ಭಾಷೆ ಹಲವು, ನಮ್ಮಲೇಕೆ ಭೇದವು?

ಐದನೆ ಮಂಟಪದಲ್ಲಿ ಪರಮಾತ್ಮ ಒಬ್ಬನೆ ಗೃಹಸ್ಥಿ ದೇವತೆಗಳು ಅನೇಕ ಎಂಬ ಬಗ್ಗೆ ದೃಷ್ಯಗಳು ಇವೆ. ಜೀವಾತ್ಮರು ಹಾಗೂ ನಿರಾಕಾರ ಶಿವ ಪರಮಾತ್ಮನಲ್ಲಿ ಇರುವ ವತ್ಯಾಸವನ್ನು ತೋರಿಸಲಾಗಿದೆ. ಆರನೆ ಮಂಟಪ ರಾಜಯೋಗದ ಶಿಕ್ಷಕ ಯಾರು ಎಂದು ಹೇಳುತ್ತದೆ. ಏಳನೆ ಮಂಟಪದಲ್ಲಿ ಕರ್ಮದಂತೆ ಫಲದ ಬಗ್ಗೆ ತೋರಿಸಲಾಗಿದೆ. ಶ್ರೆಷ್ಠಕರ್ಮಗಳಿಗೆ ಶ್ರೇಷ್ಠಫಲವು ಸಿಗುತ್ತದೆ.

ಶಿವರಾತ್ರಿಯ ಉಪವಾಸದ ಮಹತ್ವ

ಶಿವರಾತ್ರಿಯ ಉಪವಾಸದ ಮಹತ್ವ

ಶಿವರಾತ್ರಿಯಲ್ಲಿ ಉಪವಾಸದ ಅರ್ಥ `ಉಪ' ಎಂದರೆ `ಸಮೀಪ' ವಾಸ ಎಂದರೆ `ಇರುವುದು'. ವಾಸ್ತವಿಕವಾಗಿ ಬುದ್ಧಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಥೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಒಂದು ರಾತ್ರಿ ನಿದ್ರೆಕೆಟ್ಟು ಜಾಗರಣೆ ಮಾಡಿದರೆ ಸಾಲದು. ಈ ಅಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಎಚ್ಚರವಾಗಿದ್ದು ಮಾಯೆಯ ರೂಪವಾದ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.

English summary
Maha Shivaratri a Hindu festival celebrated annually in honour of Lord Shiva. Here is an atricle which explains importance of Shivaratri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X