ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ದಾಂಪತ್ಯ ಜೀವನ ಸುಖಿಯಾಗಿರಲಿ

By Staff
|
Google Oneindia Kannada News

Gowrishankara Rudrakha for peace and comfort
ಶಿವ ಪಾರ್ವತಿಯ ಸಂಕೇತವಾಗಿರುವ ಈ ರುದ್ರಾಕ್ಷಿ ಅತ್ಯಂತ ಪವಿತ್ರವಾದದ್ದು. ಜೋಡಿಯಾಗಿರುವ ಈ ಎರಡು ಮಣಿಗಳು ತಂತಾನೆ ಸ್ವಾಭಾವಿಕವಾಗಿ ಸೇರ್ಪಡೆಗೊಂಡಿರುವ ರುದ್ರಾಕ್ಷಿಗಳಾಗಿವೆ. ಶಿವ ಪಾರ್ವತಿಯರು ಬೇರೆಬೇರೇಯಲ್ಲ, ಅವರಿಬ್ಬರೂ ಒಂದೇ ಎಂಬುದರ ಸಂಕೇತವೂ ಆಗಿದೆ. ಇದರ ಹೆಸರು ಗೌರಿಶಂಕರ ರುದ್ರಾಕ್ಷಿ. ಮಾನವ ಪ್ರಜ್ಞೆಯ ಪರಿಧಿಯನ್ನು ವಿಸ್ತರಿಸುವ ಶಕ್ತಿ ಈ ರುದ್ರಾಕ್ಷಿಗಿರುತ್ತದೆ.

ದಾಂಪತ್ಯದ ಅರಿವು ಮತ್ತು ಮಹತ್ವವನ್ನು ಬಿಂಬಿಸುವುದು ಈ ಮಣಿಜೋಡಣೆಯ ಅರ್ಥ ಮತ್ತು ಸಂಕೇತವಾಗಿದೆ. ಗಂಡ ಹಂಡತಿ ತಮ್ಮನ್ನು ತಾವು ಅರಿತುಕೊಳ್ಳುವುದರ ಜತೆಗೆ ಕುಟುಂಬದಲ್ಲಿ ಸುಖ ಮತ್ತು ಶಾಂತಿಯನ್ನು ರುದ್ರಾಕ್ಷಿ ದಯಪಾಲಿಸುತ್ತದೆ. ಗೌರಿಶಂಕರ ರುದ್ರಾಕ್ಷಿಯನ್ನು ಪೂಜಿಸುವುದರಿಂದ ದುಖಃ , ನೋವುಗಳು ಶಮನವಾಗಿ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹಾಗೂ ಸಂತೋಷ ವೃದ್ಧಿಯಾಗುತ್ತದೆ. ಇದನ್ನು ತಮ್ಮದಾಗಿ ಮಾಡಿಕೊಂಡು ಪಾವನರಾಗಿರಿ.

ಪರಿಣಾಮಗಳು

1) ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಹಕಾರಿ.
2) ಸಂಸಾರದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.
3) ನೋವಿನ ಪರಿಹಾರ, ನಲಿವಿನ ವೃದ್ಧಿ.

(ದಟ್ಸ್ ಕನ್ನಡ ಅಂಗಡಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X