ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣದ ಮಹಾಬಲೇಶ್ವರ : ಆತ್ಮಲಿಂಗ ರೂಪಿಗೆ ಭಕ್ತಕೋಟಿಯ ನಮನ

By Super
|
Google Oneindia Kannada News

ಓಂ ನಮಃ ಶಿವಾಯ!
ಉಡುಪಿಯಿಂದ 180 ಕಿಮೀ ದೂರದಲ್ಲಿರುವ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲೀಗ ಶಿವರಾತ್ರಿ ಸಂಭ್ರಮ. ಮಹಾಬಲೇಶ್ವರ ದೇಗುಲದಲ್ಲಿ ಶಿವನೊಲುಮೆಗೆ ಬೇಡಿ ನಿಲ್ಲುವ ಭಕ್ತರ ಸಾಲು. ಸಾವಿರಾರು ಭಕ್ತರಿಂದ ಶಿವನಾಮ ಸ್ಮರಣೆ.

ಉಳಿದ ಕಡೆಗಳಲ್ಲಿ ಶಿವರಾತ್ರಿ ಒಂದು ದಿನದ ಸಂಭ್ರಮವಾದರೆ, ಮಹಾಬಲೇಶ್ವರನದು ನವರಾತ್ರಿಯಂತೆ 9 ದಿನಗಳ ಹಬ್ಬ. ತಾಯಿಯ ಪೂಜೆಗಾಗಿ ಶಿವನಿಂದ ರಾವಣ ಪಡೆದ ಆತ್ಮಲಿಂಗ ನೆಲೆಸಿರುವ ಪುರಾಣ ಪ್ರಸಿದ್ಧ ಕ್ಷೇತ್ರವಿದು. ಗಣಪನ ಬುದ್ಧಿವಂತಿಕೆಯಿಂದ ರಾವಣನ ಕೈ ತಪ್ಪಿದ ಲಿಂಗ ಗೋಕರ್ಣದ ಕಡಲ ತಡಿಯಲ್ಲಿಯಲೇ ನೆಲೆಗೊಂಡಿತು. ಗೋಕರ್ಣ ದಕ್ಷಿಣ ಕಾಶಿಯೆಂದೇ ಪ್ರಸಿದ್ಧ . ಆ ಕಾರಣದಿಂದಲೇ ಗೋಕರ್ಣದಲ್ಲಿ ಶಿವರಾತ್ರಿ ಶಿವನ ಉತ್ಸವವಾಗಿ ಮಾತ್ರ ಉಳಿಯುವುದಿಲ್ಲ . ಗಣಪನಿಗೂ ಪೂಜೆ ಸಲ್ಲಬೇಕು.

ಮಾರ್ಚ್‌ 8 ರಿಂದಲೇ ಗಣೇಶ ಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಶಿವರಾತ್ರಿಯ ಪೂಜಾ ಕಾರ್ಯಗಳು ಗೋಕರ್ಣದಲ್ಲಿ ಆರಂಭವಾಗಿವೆ. ಮಾ.15 ರವರೆಗೂ ಪೂಜಾ ಕಾರ್ಯ, ಭಕ್ತರ ಸಂಭ್ರಮ ಮುಂದುವರಿಯಲಿದೆ.

ಮಾರ್ಚ್‌ 12 ರ ಮಂಗಳವಾರ- ಶಿವರಾತ್ರಿಯಂದು ಆಗಮ ಶಾಸ್ತ್ರದ ಪ್ರಕಾರ ಮಹಾಬಲೇಶ್ವರ ದೇಗುಲದಲ್ಲಿ ಶಿವರಾತ್ರಿ ಆಚರಣೆ ನಡೆಯಲಿದೆ. ಆದರೆ, ಮಾರ್ಚ್‌ 14 ರ ಅಮಾವಾಸ್ಯೆ ಹಾಗೂ 15 ರಂದೂ ಮಹಾಬಲೇಶ್ವರನಿಗೆ ವಿಶೇಷ ಪೂಜೆಗಳಿವೆ. ಮೂರೂ ದಿನಗಳ ಕಾಲ ಸಾವಿರಾರು ಭಕ್ತರು ಆತ್ಮಲಿಂಗವನ್ನು ದರ್ಶಿಸುವ ಮೂಲಕ ಶಿವಪ್ಪನ ಕಾರುಣ್ಯಕ್ಕೆ ಭಾಜನರಾಗುವ ಪುಳಕ ಪಡೆಯುತ್ತಾರೆ. ಮಾರ್ಚ್‌ 15 ರಂದು ಮಹಾರಾಷ್ಟ್ರೋತ್ಸವ.

ಶಿವರಾತ್ರಿ ಆಚರಣೆ ಸುಗಮವಾಗಿ ನಡೆಯುವಂತೆ ಜಿಲ್ಲಾ ಹಾಗೂ ಸ್ಥಳೀಯ ಆಡಳಿತಗಳು ವ್ಯಾಪಕ ಸಿದ್ಧತೆ ನಡೆಸಿವೆ. ಉತ್ತರ ಕನ್ನಡದ ಜಿಲ್ಲಾಧಿಕಾರಿ ನಿಲಯ ಮಿತಾಷ್‌, ಜಿಲ್ಲಾ ಪೊಲೀಸ್‌ ವರಿಷ್ಠ ರಮೇಶ್‌ ಹರಿಹರ್‌, ಕುಮಟಾ ಅಸಿಸ್ಟೆಂಟ್‌ ಕಮೀಷನರ್‌ ವಿಜಯಕುಮಾರಿ ಶೆಣೈ, ತಹಸಿಲ್ದಾರ್‌ ಆರ್‌.ಆರ್‌.ಭಾಗವಾಲ್‌ ಅವರು, ಮಹಾಬಲೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಡಳಿತ ಮಂಡಳಿಯಾಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ಸವ ಯಶಸ್ವಿಯಾಗಲು ಸಿದ್ಧತೆಗಳ ಉಸ್ತುವಾರಿ ನಡೆಸಿದ್ದಾರೆ.(ಇನ್ಫೋ ವಾರ್ತೆ)

English summary
Its not just shivaratri, but a navaratri in colour at Gokarna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X