ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಣ ಜಾಣೆಯರ ಜಾಗರಣೆ : ಶಿವರಾತ್ರಿಯಿಡೀ ನಗೆಯ ಒಗ್ಗರಣೆ !

By Super
|
Google Oneindia Kannada News

ಬೆಂಗಳೂರು: ಇದು ಶಿವರಾತ್ರಿ ವಿಶೇಷ! ರಾತ್ರಿಯೆಲ್ಲ ಜಾಗರಣೆ ಮಾಡುವವರಿಗೆ ನಗೆಯ ಊಟ. ಅಕಾಡೆಮಿ ಆಫ್‌ ಮ್ಯೂಸಿಕ್‌ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮಾರ್ಚ್‌ 12 ರಂದು, ಜಾಣ ಜಾಣೆಯರ ನಗೆ ಜಾಗರಣೆ- ಶಿವರಾತ್ರಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದೆ. ಶಿವರಾತ್ರಿ ಸಂಜೆ 6 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮ ಮರುದಿನದ ಮುಂಜಾವಿನವರೆಗೂ ಇರುತ್ತದೆ.

ನಗೆ ಜಾಗರಣೆಗೆ ಪ್ರವೇಶ ಉಚಿತ. ಅಕಾಡೆಮಿ ಆಫ್‌ ಮ್ಯೂಸಿಕ್‌ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದು ಸತತ ಮೂರನೇ ವರ್ಷ. ಅಕಾಡೆಮಿಯ ಈ ವಿಶೇಷ ಕಾರ್ಯಕ್ರಮದ ಕುರಿತು ಹಾಸ್ಯ ಸಾಹಿತಿ ಅ.ರಾ.ಮಿತ್ರ ಹಾಗೂ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಕೆ. ಪ್ರಸನ್ನ ಕುಮಾರ್‌ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಶಿವರಾತ್ರಿ ಜಾಗರಣೆಗೆ ನಗೆಯ ಒಗ್ಗರಣೆ ನೀಡುವ ತಂಡ ವಿಶೇಷವಾಗೆ ಇದೆ. ನಗೆಯ ಕಲೆಯಲ್ಲಿ ಬಲ್ಲಿದರಾದ ಮಾಸ್ಟರ್‌ ಹಿರಣ್ಣಯ್ಯ, ಎ.ಎಸ್‌.ಮೂರ್ತಿ, ಹಿರೇಮಗಳೂರು ಕಣ್ಣನ್‌, ಎಸ್‌.ಷಡಕ್ಷರಿ ಹಾಗೂ ಪ್ರೊ.ಕೃಷ್ಣೇಗೌಡ ಕಾರ್ಯಕ್ರಮ ನಡೆಸಿಕೊಡುವರು. ಜಾಗರಣೆ ವಿಶೇಷ ಕಾರ್ಯಕ್ರಮಗಳು-

ಡಾ।ಮಂಜುಳಾ ಶ್ರೀರಾಮ್‌ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ
ಪ್ರಹ್ಲಾದಾಚಾರ್ಯ ಅವರಿಂದ ಮಾತನಾಡುವ ಗೊಂಬೆಯ ಮ್ಯಾಜಿಕ್‌
ಮಿಮಿಕ್ರಿಯನ್ನೇ ವೃತ್ತಿಯಾಗಿಸಿಕೊಂಡಿರುವ ಮಿಮಿಕ್ರಿ ದಯಾನಂದ್‌ ಅವರಿಂದ ಶಿವ- ಸಂದರ್ಶನ
ಸೀನು- ಸುಬ್ಬು ಸಹೋದರರಿಂದ ಲಘು ಸಂಗೀತ

ಯಶವಂತ ಹಳಿಬಂಡಿ ಅವರಿಂದ ಸುಗಮ ಸಂಗೀತ.(ಇನ್ಫೋ ವಾರ್ತೆ)

English summary
Shivaratbri Jagarana programs in Bangalore follows humor, music, mimicry..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X