• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

|

ಹಿಂದೂ ಶಾಸ್ತ್ರ, ಪಂಚಾಂಗದ ಪ್ರಕಾರ, ಇದೇ ಮಂಗಳವಾರದಿಂದ (ಜುಲೈ 21) ಶ್ರಾವಣ ಮಾಸ ಆರಂಭ. ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ, ಇನ್ನು, ಸಾಲುಸಾಲು ಹಬ್ಬಗಳ ಗೌಜಿ, ಗದ್ದಲ.

   Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

   ಆದರೆ, ಪ್ರತೀ ವರ್ಷದಿಂದ ಈ ವರ್ಷವಲ್ಲ. ಕೊರೊನಾ ಎನ್ನುವ ಮಹಾಮಾರಿ, ಜಗತ್ತಿನ ನೆಮ್ಮದಿಯನ್ನು ಕಸಿದುಕೊಂಡಿದೆ. ಕಂಡು ಕೇಳರಿಯದ ಈ ಆರೋಗ್ಯ ಎಮರ್ಜೆನ್ಸಿ, ಕಾರ್ತಿಕ ಮಾಸದ ಹೊತ್ತಿಗಾದರೂ, ಸರಿದಾರಿಗೆ ಬರಬಹುದು ಎನ್ನುವ ಆಶಾಭಾವನೆ ಎಲ್ಲರಲ್ಲಿ.

   ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ

   ದೀವಿಗೆ ಅಮವಾಸ್ಯೆಯಿಂದ ಹಿಡಿದು ಬಲಿಪಾಡ್ಯಮಿಯವರೆಗೆ ಹಬ್ಬಹರಿದಿನಗಳ ಸರಮಾಲೆಯೇ ಒಂದಾದ ನಂತರ ಇನ್ನೊಂದು ಬರುತ್ತದೆ. ಸರಳವಾಗಿ, ಸಾಮಾಜಿಕ ಅಂತರಕ್ಕೆ ಧಕ್ಕೆ ಬರದಂತೆ, ಹಬ್ಬ ಆಚರಿಸುವ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿದೆ.

   ಹಬ್ಬಗಳ ದಿನದ ವಿಶೇಷ ಪೂಜೆಯಿಂದ ದೇವರು ಸಂಪ್ರೀತನಾಗುತ್ತಾನೆ ಎನ್ನುವುದು ಎಲ್ಲರ ನಂಬಿಕೆ. ವಿಶ್ವಕ್ಕೆ ಎದುರಾಗಿರುವ ಕಂಟಕ, ಆದಷ್ಟು ಬೇಗ ದೂರವಾಗಿ, ಎಲ್ಲರ ಜೀವನ ಮತ್ತೆ ಎಂದಿನಂತಾಗಲಿ ಎಂದು ಪ್ರಾರ್ಥಿಸಿಕೊಳ್ಳೋಣ.

   ಮಂತ್ರಾಲಯದಲ್ಲಿ ಪ್ರತಿ ಬಾರಿಯಂತೆ ನಡೆಯುವುದೇ ಆರಾಧನೆ?

   ಎಂದಿನಂತೆ 'ಒನ್ ಇಂಡಿಯಾ' ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳ ಪಟ್ಟಿಯನ್ನು (ಜಾತ್ಯಾತೀತವಾಗಿ) ನಿಮ್ಮ ಮುಂದೆ ಇಡುತ್ತಿದ್ದೇವೆ. ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ ಅಥವಾ ಬುಕ್ ಮಾರ್ಕ್ ಮಾಡಿಕೊಳ್ಳಿ. ಹ್ಯಾಪ್ಪೀ ಹಾಲಿಡೇಸ್ ಇನ್ ಅಡ್ವಾನ್ಸ್:

   ಶಾಲಿವಾಹನ ಶಕ 1943 ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ

   ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ
   ಕ್ರ. ಸಂಖ್ಯೆ ದಿನಾಂಕ ದಿನ ಹಬ್ಬ
   1 ಜುಲೈ 20 ಸೋಮವಾರ ದೀವಿಗೆ ಅಮಾವಾಸ್ಯ, ಭೀಮನ ಅಮಾವಾಸ್ಯ
   2 ಜುಲೈ 21 ಮಂಗಳವಾರ ಶ್ರಾವಣ ಮಾಸಾರಂಭ, ಮಂಗಳಗೌರೀ ವ್ರತ
   3 ಜುಲೈ 25 ಶನಿವಾರ ನಾಗರಪಂಚಮಿ, ಕಲ್ಕಿ ಜಯಂತಿ
   4 ಜುಲೈ 31 ಶುಕ್ರವಾರ ವರಮಹಾಲಕ್ಷ್ಮೀ ವ್ರತ, ನಿರ್ಬಂಧಿತ ರಜೆ
   5 ಆಗಸ್ಟ್ 1 ಶನಿವಾರ ಈದ್-ಉಲ್-ಜುಹಾ, ಬಕ್ರೀದ್, ಸರಕಾರೀ ರಜೆ
   6 ಆಗಸ್ಟ್ 3 ಸೋಮವಾರ ಯಜರ್ ಉಪಕರ್ಮ, ರಕ್ಷಾ ಬಂಧನ
   7 ಆಗಸ್ಟ್ 4 ಮಂಗಳವಾರ ಖುಗ್ ಉಪಕರ್ಮ
   8 ಆಗಸ್ಟ್ 5 ಬುಧವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ
   9 ಆಗಸ್ಟ್ 11 ಮಂಗಳವಾರ
   10 ಆಗಸ್ಟ್ 15 ಶನಿವಾರ ಸ್ವಾತಂತ್ರ್ಯ ದಿನಾಚರಣೆ, ಸಾರ್ವತ್ರಿಕ ರಜೆ
   11 ಆಗಸ್ಟ್ 21 ಶುಕ್ರವಾರ ಗೌರೀ ತೃತೀಯಾ, ನಿರ್ಬಂಧಿತ ರಜೆ
   12 ಆಗಸ್ಟ್ 22 ಶನಿವಾರ ಗಣೇಶ ಚತುರ್ಥಿ, ಸರಕಾರೀ ರಜೆ
   13 ಆಗಸ್ಟ್ 31 ಸೋಮವಾರ ತಿರು ಓಣಂ
   14 ಸೆಪ್ಟಂಬರ್ 5 ಶನಿವಾರ ಶಿಕ್ಷಕರ ದಿನ, ಡಾ.ರಾಧಾಕೃಷ್ಣನ್ ಜನ್ಮದಿನ
   15 ಸೆಪ್ಟಂಬರ್ 11 ಶುಕ್ರವಾರ ಉಡುಪಿ ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ
   16 ಸೆಪ್ಟಂಬರ್ 15 ಮಂಗಳವಾರ ಇಂಜಿನಿಯರ್ಸ್ ಡೇ, ಸರ್.ಎಂ.ವಿಶ್ವೇಶ್ವರಯ್ಯ ದಿನ
   17 ಸೆಪ್ಟಂಬರ್ 17 ಗುರುವಾರ ಸರ್ವಪಿತೃ, ಮಹಾಲಾಯ ಅಮಾವಾಸ್ಯ, ಸರಕಾರೀ ರಜೆ
   18 ಅಕ್ಟೋಬರ್ 2 ಶುಕ್ರವಾರ ಗಾಂಧೀ ಜಯಂತಿ, ಸಾರ್ವತ್ರಿಕ ರಜೆ
   19 ಅಕ್ಟೋಬರ್ 24, 25 ಶನಿವಾರ, ಭಾನುವಾರ ಮಹಾನವಮಿ, ಆಯುಧಪೂಜೆ, ಸರಕಾರೀ ರಜೆ
   20 ಅಕ್ಟೋಬರ್ 26 ಸೋಮವಾರ ವಿಜಯದಶಮಿ, ಬುದ್ದ, ಮಧ್ವ ಜಯಂತಿ, ಸರಕಾರೀ ರಜೆ
   21 ಅಕ್ಟೋಬರ್ 30 ಶುಕ್ರವಾರ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನ, ಈದ್ ಮಿಲಾದ್, ಸರಕಾರೀ ರಜೆ
   22 ಅಕ್ಟೋಬರ್ 31 ಶನಿವಾರ ವಾಲ್ಮೀಕಿ ಜಯಂತಿ, ಸರಕಾರೀ ರಜೆ
   23 ನವೆಂಬರ್ 1 ಭಾನುವಾರ ಕರ್ನಾಟಕ ರಾಜ್ಯೋತ್ಸವ
   24 ನವೆಂಬರ್ 14 ಶನಿವಾರ ನರಕ ಚತುರ್ದಶಿ, ಸರಕಾರೀ ರಜೆ
   25 ನವೆಂಬರ್ 15 ಭಾನುವಾರ ದೀಪಾವಳಿ
   26 ನವೆಂಬರ್ 16 ಸೋಮವಾರ ಬಲಿಪಾಡ್ಯ, ಸರಕಾರೀ ರಜೆ

   English summary
   Season of Festivals : List of all the Karnataka and Indian festivals and Government holidays for August, September, October and November 2020 during Shravana, Bhadrapada and Karthika masa. May your heart be filled with joy and peace.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X