• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನವರಿ 14ಕ್ಕೆ ಆಚರಿಸುತ್ತಿದ್ದ ಮಕರ ಸಂಕ್ರಾಂತಿ 15ಕ್ಕೆ ಏಕೆ? ಲೆಕ್ಕಾಚಾರ ಹೀಗೆ!

|
Google Oneindia Kannada News

ಮಕರ ಸಂಕ್ರಾಂತಿ, ಪೊಂಗಲ್, ಲೊಹ್ರಿ.. ಹೀಗೆ ಬೇರೆ ಬೇರೆ ಹೆಸರಿನಿಂದ ಆಚರಿಸಲ್ಪಡುವ ಸಂಕ್ರಾಂತಿ ಪುಣ್ಯಕಾಲದ ಹಬ್ಬವನ್ನು ಕಳೆದ ಕೆಲವು ವರ್ಷಗಳಿಂದ ಜನವರಿ ಹದಿನಾಲ್ಕರ ಬದಲು ಹದಿನೈದರಂದು ಆಚರಿಸಲಾಗುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖವಾಗಿ ಆಚರಿಸಲಾಗುವ ಮಕರ ಸಂಕ್ರಾಂತಿಯ ಹಬ್ಬದಂದು ಶಬರಿಮಲೆಯಲ್ಲಿ ಮಕರ ವಿಳಕ್ಕು ದರ್ಶನ ಮತ್ತು ಬೆಂಗಳೂರಿನ ಗವಿಗಂಗಾದೇಶ್ವರನಿಗೆ ಸೂರ್ಯ ರಶ್ಮಿಯ ಸ್ಪರ್ಶದ ಅಚ್ಚರಿಯೂ ನಡೆಯುತ್ತದೆ.

ವಿಶೇಷ ವರದಿ: ಕೊರೊನಾ ಆರ್ಭಟದಲ್ಲಿ ಕಳೆಗುಂದಿದ ಸಂಕ್ರಾಂತಿ ಹಬ್ಬವಿಶೇಷ ವರದಿ: ಕೊರೊನಾ ಆರ್ಭಟದಲ್ಲಿ ಕಳೆಗುಂದಿದ ಸಂಕ್ರಾಂತಿ ಹಬ್ಬ

ಸೂರ್ಯಾರಾಧನೆಯ ಹಬ್ಬವಾಗಿರುವ ಮಕರ ಸಂಕ್ರಾಂತಿಯು ಸುಗ್ಗಿಯ ಕಾಲದ ಹಬ್ಬವೆಂದೂ ಕರೆಯಲ್ಪಡುತ್ತದೆ. ಸಾಮಾನ್ಯವಾಗಿ, ಮಕರ ಸಂಕ್ರಾಂತಿ ಹಬ್ಬವು ಪ್ರತಿ ವರ್ಷ ಜನವರಿ 14ರಂದು ಬರಬೇಕು. ಹೆಚ್ಚಿನವರು, ಬಾಲ್ಯದಿಂದಲೂ, ಪ್ರತಿ ವರ್ಷ ಜನವರಿ 14ರಂದೇ ಆಚರಿಸುತ್ತಿರುವುದನ್ನು ನೋಡಿದ್ದೇವೆ.

ಆದರೆ, ಕಳೆದ ಕೆಲವು ವರ್ಷಗಳಿಂದ ಜನವರಿ ಹದಿನೈದರಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೊಂದು ಸಮಯದ ಲೆಕ್ಕಾಚಾರವಾಗಿರುವುದರಿಂದ ಖಗೋಳ ಶಾಸ್ತ್ರದ ಪ್ರಕಾರ ಯಾಕೆ ಒಂದು ದಿನ ತಡವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ? (ವಾಟ್ಸಾಪ್ ಕೃಪೆ).

Makar Sankranti 2022: ಸಂಕ್ರಾಂತಿ ಹಬ್ಬ ಯಾವಾಗ ಜ.14 ಅಥವಾ 15; ಗೊಂದಲಗಳಿಗೆ ಇಲ್ಲಿದೆ ಉತ್ತರ Makar Sankranti 2022: ಸಂಕ್ರಾಂತಿ ಹಬ್ಬ ಯಾವಾಗ ಜ.14 ಅಥವಾ 15; ಗೊಂದಲಗಳಿಗೆ ಇಲ್ಲಿದೆ ಉತ್ತರ

 ಪ್ರತಿ ವರ್ಷ ಜನವರಿ 15 ರಂದು ಸಂಕ್ರಾಂತಿ ಬರುತ್ತಿದೆ

ಪ್ರತಿ ವರ್ಷ ಜನವರಿ 15 ರಂದು ಸಂಕ್ರಾಂತಿ ಬರುತ್ತಿದೆ

ವಾಸ್ತವವಾಗಿ, 1935ರಿಂದ 2007ರವರೆಗೆ, ಪ್ರತೀ ವರ್ಷ ಜನವರಿ 14ರಂದು ಮಾತ್ರ ಸಂಕ್ರಾಂತಿ ಹಬ್ಬ ಬರುತ್ತಿತ್ತು. ಅದಕ್ಕಿಂತ ಮೊದಲು ಅಂದರೆ 1862 ರಿಂದ 1934ರವರೆಗೆ, ಅದು ಪ್ರತಿ ವರ್ಷ ಜನವರಿ 13 ರಂದು ಬೀಳುತ್ತಿತ್ತು. ಆದರೆ 2008 ರಿಂದ, ಪ್ರತಿ ವರ್ಷ ಜನವರಿ 15 ರಂದು ಸಂಕ್ರಾಂತಿ ಬರುತ್ತಿದೆ. 2080ರ ವರೆಗೆ, ಇದು ಪ್ರತಿ ವರ್ಷ ಜನವರಿ 15 ರಂದೇ ಬರುತ್ತದೆ. 2081ರಿಂದ ಮುಂದಿನ 72 ವರ್ಷಗಳವರೆಗೆ, ಅಂದರೆ 2153ರವರೆಗೆ ಪ್ರತಿ ವರ್ಷ ಜನವರಿ 16 ರಂದು ಮಕರ ಸಂಕ್ರಾಂತಿ ಬರಲಿದೆ.

 ಸೂರ್ಯನು ಒಂದು ಗಂಟೆ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ

ಸೂರ್ಯನು ಒಂದು ಗಂಟೆ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ

ಯಾಕೆ ಒಂದು ದಿನ ತಡವಾಗಿ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವುದಕ್ಕೆ ಒಂದು ಲೆಕ್ಕಾಚಾರ ಹೀಗಿದೆ. ಭಾರತೀಯ ಪಂಚಾಂಗದ ಸಮಯದ ಲೆಕ್ಕಾಚಾರದ ಪ್ರಕಾರ, ಸೂರ್ಯನು ಮಕರ ರಾಶಿಯ (ಧನುರ್ ರಾಶಿಯಿಂದ) ರಾಶಿಚಕ್ರದ ಚಿಹ್ನೆಯನ್ನು ಪ್ರವೇಶಿಸುತ್ತಾನೆ, ಪ್ರತಿ ವರ್ಷ ಇಂಗ್ಲಿಷ್ ಸಮಯ ಅಥವಾ ವಿಶ್ವ ಸಮಯಕ್ಕೆ ಹೋಲಿಸಿದರೆ 20 ನಿಮಿಷಗಳು ತಡವಾಗಿ. ಹೀಗೆ 3 ವರ್ಷಕ್ಕೊಮ್ಮೆ ಸೂರ್ಯನು ಒಂದು ಗಂಟೆ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅಂದರೆ, 72 ವರ್ಷಗಳ ಪ್ರತಿ ಚಕ್ರದಲ್ಲಿ, ಸೂರ್ಯನು ಒಂದು ದಿನ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.

 ಭಾರತೀಯ ಪಂಚಾಂಗದ ಸಮಯವು ಎಷ್ಟು ನಿಖರ

ಭಾರತೀಯ ಪಂಚಾಂಗದ ಸಮಯವು ಎಷ್ಟು ನಿಖರ

ಭಾರತೀಯ ಪಂಚಾಂಗದ ಸಮಯವು ಎಷ್ಟು ನಿಖರವಾಗಿದೆ ಎಂದರೆ, 5,000 ವರ್ಷಗಳ ನಂತರ ನಿಖರವಾಗಿ ಸೂರ್ಯ ಅಥವಾ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ ಎಂಬುದನ್ನು ಹೇಳಬಹುದಾಗಿದೆ. ಇದರರ್ಥ ಬ್ರಹ್ಮಾಂಡವು ನಿಖರವಾದ ಸಮಯದ ಪ್ರಕಾರ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತದೆ. ಸೂರ್ಯನ ಸಂಚಲನದ ಆಧಾರದ ಮೇಲೆ ಮಕರ ಸಂಕ್ರಾಂತಿಯ ದಿನವನ್ನು ನಿರ್ಧರಿಸಲಾಗುತ್ತದೆ. ಯಾಕೆಂದರೆ, ಈ ಹಬ್ಬ ಸೂರ್ಯನಿಗೆ ಪೂಜೆ ಸಲ್ಲಿಸುವ ಹಬ್ಬವಾಗಿದೆ. ಹಾಗಾಗಿ, ಈ ಹಬ್ಬವು ಒಂದು ದಿನವಾಗಿ ತಡವಾಗಿ ಆಚರಿಸಲ್ಪಡುತ್ತಿದೆ.

 ಸಂಪ್ರದಾಯಗಳ ಜೊತೆಗೆ ಆಚರಿಸಲ್ಪಡುವ ಸಂಕ್ರಾಂತಿ

ಸಂಪ್ರದಾಯಗಳ ಜೊತೆಗೆ ಆಚರಿಸಲ್ಪಡುವ ಸಂಕ್ರಾಂತಿ

ಸಂಪ್ರದಾಯಗಳ ಜೊತೆಗೆ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನಾದ ಆರ್ಭಟ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬಕ್ಕೆ ಈ ಬಾರಿ ವೀಕೆಂಡ್ ಕರ್ಫ್ಯೂ. ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯೂ ಈ ಸಂದರ್ಭದಲ್ಲಿ ನಡೆಯುತ್ತದೆ.

   AB De Villiers ಭಾರತೀಯರನ್ನು ಖುಷಿ ಪಡಿಸಲು ಹೀಗೆ ಮಾಡಿದ್ರಾ | Oneindia Kannada
   English summary
   Why Makara Sankrati Festival Celebrating On January 14th Instead Of Jan 14. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X