• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ; ನಮ್ಮ ಬದುಕನ್ನು ಒಳಿತಿನ ಕಡೆಗೆ ನಡೆಸುವ ಹಬ್ಬ

By ಸುಮ ಜಿ. ಬತ್ತಿಕೊಪ್ಪ (ಆನಂದಪುರ)
|

ನಮ್ಮ ದಿವ್ಯ ಭಾರತದ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿ ಪ್ರಮುಖವಾದ ಹಬ್ಬ. ವಿಷೇಶವಾಗಿ ರೈತಾಪಿ ಬಂಧುಗಳಿಗೆ, ಕೃಷಿಕರಿಗೆ ಇದು ತುಂಬ ಮಹತ್ವದ ಹಬ್ಬ. ಹೊಲ ಗದ್ದೆಗಳ ಬೆಳೆ ಫಸಲಾಗಿ, ದವಸ ಧಾನ್ಯಗಳು ಮನೆ ಸೇರಿ ಸುಗ್ಗಿಯ ಸಡಗರದಲ್ಲಿ ಹರ್ಷೋಲ್ಲಾಸ ಗರಿಗೆದರಿ ನಲಿವೇರಿ ನರ್ತಿಸುವ ಸಂಭ್ರಮದ ಹಬ್ಬವೇ ಸಂಕ್ರಾಂತಿ.

ಸಂಕ್ರಾಂತಿ ಹಬ್ಬ ಎಂದರೆ ಹಳ್ಳಿ ಸಂಸ್ಕೃತಿ, ಸಂಭ್ರಮಾಚರಣೆಗೆ ಸಾಕ್ಷಿಯಾಗಿ ಸಡಗರ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ವಿವಿಧ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳಿಗೆ ಸಾಕ್ಷಿ ಆಗಿದೆ ಸಂಕ್ರಾಂತಿ ಹಬ್ಬ.

ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ.

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಈ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ಭಾಗದಲ್ಲಿ ಹಲವು ಹೆಸರುಗಳಿಂದ ಆಚರಿಸಲ್ಪಡುತ್ತದೆ. ಗಾಳಿ ಪಟ ಹಾರಿಸುವ ಹಬ್ಬ ಎಂಬ ಹೆಸರು ಇದೆ. ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿಯೆಂದೂ ತಮಿಳುನಾಡಿನಲ್ಲಿ ಮನೆ ಮನೆಗಳಲ್ಲಿ ಹಾಲನ್ನು ಉಕ್ಕಿಸುವುದರ ಮೂಲಕ ಪೊಂಗಲ್ ಹಬ್ಬವೆಂದೂ, ಕೇರಳದಲ್ಲಿ ಮಕರ ಉಳಕ್ಕ್ ಉತ್ಸವವಾಗಿಯೂ ಆಚರಣೆ ಮಾಡಲಾಗುತ್ತದೆ.

ಸೂರ್ಯನ ರಾಶಿ ಪ್ರವೇಶ

ಸೂರ್ಯನ ರಾಶಿ ಪ್ರವೇಶ

ಮಕರ ಸಂಕ್ರಾಂತಿ ಎಂದರೆ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ, ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.

ಸೂರ್ಯನ ಪಥ ಬದಲಾವಣೆ

ಸೂರ್ಯನ ಪಥ ಬದಲಾವಣೆ

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಮಕರ ಸಂಕ್ರಾಂತಿ ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಹೆಸರೇ ಸೂಚಿಸುವುಂತೆ ಒಳಿತನ್ನುಂಟು ಮಾಡುವಂಥ ಹೊಸ ಬದಲಾವಣೆ, ಧನಾತ್ಮಕ ಪರಿವರ್ತನೆಗೆ ನಾಂದಿ ಹಾಡುವ ಈ ಹಬ್ಬದಲ್ಲಿ ಸೂರ್ಯನನ್ನು ಆರಾಧಿಸಲಾಗುತ್ತದೆ.

ದನ-ಕರುಗಳನ್ನು ಗೌರವಿಸುವ ಹಬ್ಬ

ದನ-ಕರುಗಳನ್ನು ಗೌರವಿಸುವ ಹಬ್ಬ

ಮೈಕೊರೆವ ಚಳಿಯಿಂದ ತತ್ತರಿಸಿ ಹೊಲ ಗದ್ದೆಗಳ ಕೆಲಸಗಳತ್ತ ಮುಖ ಮಾಡಲು ಹಿಂಜರಿಯತ್ತಿರುವವರಿಗೆ ಸೂರ್ಯನ ಪ್ರಖರ ಕಿರಣಗಳು ಮೈಗೆ ಸೋಕಿ ಹೊಸ ಹುರುಪು ನೀಡುತ್ತವೆ. ಆ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ನೀಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ.

ದೇಶಾದ್ಯಂತ ಆಚರಣೆ

ದೇಶಾದ್ಯಂತ ಆಚರಣೆ

ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಗಳ ಮೂಲಕ ಆಚರಿಸಲಾಗುವುದು. ಹೆಸರು ಬೆಳೆ, ಅಕ್ಕಿ ಮತು ಬೆಲ್ಲವನ್ನು ಸೇರಿಸಿ ತಯಾರಿಸುವ ತಿಂಡಿ (ಪೊಂಗಲ್) ಈ ದಿನದ ವಿಶೇಷ. ಮಕರ ಸಂಕ್ರಾಂತಿಯು ಭಾರತದೆಲ್ಲೆಡೆಗಳಲ್ಲಿ ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ.

ಎಳ್ಳುಬೆಲ್ಲತಿಂದು ಒಳ್ಳೆ ಮಾತಾಡಿ

ಎಳ್ಳುಬೆಲ್ಲತಿಂದು ಒಳ್ಳೆ ಮಾತಾಡಿ

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದಂದು ಮುಖ್ಯವಾಗಿ ಕಂಡು ಬರುವುದು ಎಳ್ಳು ಬೆಲ್ಲ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿ ಗಡಲೆ, ಸಿಪ್ಪೆ ತೆಗೆದ ಕಡಲೇ ಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಮನೆಯಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ ಎಳ್ಳು ಹಂಚುವುದು. ಸಂಕ್ರಾಂತಿಯ ಸಂಪ್ರದಾಯ 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ' ಎಂದು ಹೇಳಿಕೊಳ್ಳುತ್ತಾರೆ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಇರುತ್ತದೆ.

ರೈತರಿಗೆ ಸುಗ್ಗಿ ಹಬ್ಬ

ರೈತರಿಗೆ ಸುಗ್ಗಿ ಹಬ್ಬ

ಕರ್ನಾಟಕದ ರೈತರಿಗೆ ಇದು ಸುಗ್ಗಿಯ ಹಬ್ಬವಾಗಿದೆ. ಉತ್ತರ ಕರ್ನಾಟಕದಲ್ಲಿ ಸಮುದಾಯದ ಸದಸ್ಯರೊಂದಿಗೆ ಗಾಳಿ ಪಟ ಹಾರಿಸುವ ಸಂಪ್ರದಾಯವಿದೆ. ಗೋವುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಸಂಪ್ರದಾಯವೂ ಕೆಲವೆಡೆ ಈಗಲೂ ಇದ್ದು, ಕಾಮಧೇನು ಎಂದೇ ಕರೆಯಲ್ಪಡುವ ರಾಸುಗಳಿಗೆ ಸಂಕ್ರಾಂತಿಯಂದು ವಿಶೇಷ ಗೌರವ.

English summary
Makara Sankranti is a festival day in hindu calendar. It's first festival of the new year of English calendar. Festival marks the first day of the sun's transit into Makara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X