• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Kumbh Mela 2021; ಕುಂಭಮೇಳದ ಮಹತ್ವ, ಸಂಪೂರ್ಣ ಮಾಹಿತಿ...

|

ವಿಶ್ವದ ಬೃಹತ್ ಧಾರ್ಮಿಕ ಸಮಾಗಮ ಎಂದೇ ಖ್ಯಾತಿಯಾಗಿರುವ "ಕುಂಭಮೇಳ" ಈ ಬಾರಿ ಸಂಕ್ರಾಂತಿಯ ಶುಭ ದಿನದಂದು (ಜ.14)ರಿಂದ ಆರಂಭಗೊಳ್ಳುತ್ತಿದೆ. ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಗೆ ಸಂಚಾರ ಮಾಡಿದ ನಂತರ ಮಹಾ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಈ ವರ್ಷ ಮಹಾ ಕುಂಭಮೇಳವು ಹರಿದ್ವಾರದಲ್ಲಿ ಜನವರಿ 14ರಿಂದ ಆರಂಭಗೊಂಡು ಏಪ್ರಿಲ್ 27ರವರೆಗೂ ನಡೆಯಲಿದೆ.

ಡಿಸೆಂಬರ್ 2017ರಲ್ಲಿ ಯುನೆಸ್ಕೊ ಈ ಮೇಳವನ್ನು ತನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಶ್ಲಾಘಿಸಿತ್ತು. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಈ ಮೇಳದ ವಿಶೇಷ. ಈ ಮೇಳಕ್ಕೆ ದೇಶ, ವಿದೇಶಗಳೆಲ್ಲೆಡೆಯಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. 2020ರಲ್ಲಿ ಪ್ರಯಾಗ್ ರಾಜ್ ನಲ್ಲಿ ಅರ್ಧ ಕುಂಭ ನಡೆದಿದ್ದು, ಈ ಬಾರಿ ಪೂರ್ಣ ಕುಂಭ ಹರಿದ್ವಾರದಲ್ಲಿ ನಡೆಯುತ್ತಿದೆ. ಮುಂದೆ ಓದಿ...

ಕುಂಭಮೇಳ: ಸಂಭ್ರಮಕ್ಕಿಲ್ಲ ಎಲ್ಲೆ... ಸಾಧು-ಸಂತರಿಗೆ ಸ್ವರ್ಗ ಇಲ್ಲೇ!"

 ಕುಂಭಮೇಳದ ಮಹತ್ವ

ಕುಂಭಮೇಳದ ಮಹತ್ವ

ಹಿಂದೂ ಸಂಸ್ಕೃತಿಯಲ್ಲಿ ಕುಂಭಮೇಳಕ್ಕೆ ವಿಶೇಷ ಸ್ಥಾನ. ಮಕರ ಸಂಕ್ರಾಂತಿಯಂದು ನಡೆಯುವ ಈ ಮೇಳಕ್ಕೆ ತಿಂಗಳ ಮುನ್ನವೇ ತಯಾರಿ ನಡೆಯುತ್ತದೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ, ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ , ಮಹಾ ಕುಂಭ ಮೇಳ 12 'ಪೂರ್ಣ ಕುಂಭ ಮೇಳ'ಗಳ ನಂತರ, ಅಂದರೆ 144 ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ. ನಾಸಿಕ್ ನ ಗೋದಾವರಿ ನದಿ ತಟದಲ್ಲಿ, ಉಜ್ಜೈನಿಯ ಶಿಪ್ರಾ ನದಿಯಲ್ಲಿ, ಹರಿದ್ವಾರದ ಗಂಗಾ, ಪ್ರಯಾಗದ ಗಂಗಾ, ಯಮುನಾ ಹಾಗೂ ಸರಸ್ವತಿ ನದಿ ಸಂಗಮದಲ್ಲಿ ಈ ಕುಂಭಮೇಳ ನಡೆಯುತ್ತದೆ. ಇಲ್ಲಿ ಪುಣ್ಯ ಸ್ನಾನ ಮಾಡುವುದರಿಂದ ಪಾಪಡಗಳು ತೊಡೆದು ಹೋಗುತ್ತದೆ ಎಂಬ ನಂಬಿಕೆ.

 ಕುಂಭ ಮೇಳ ವಿಶೇಷ

ಕುಂಭ ಮೇಳ ವಿಶೇಷ

ಆದಿ ಶಂಕರರು ಕುಂಭ ಮೇಳವನ್ನು ಆರಂಭಿಸಿದರು ಎನ್ನಲಾಗಿದೆ. ಪುರಾತನ ನಂಬಿಕೆಗಳ ಪ್ರಕಾರ, ದೇವರು, ಅಸುರರು ಒಟ್ಟಾಗಿ ಸಮುದ್ರ ಮಂಥನ ನಡೆಸುವಾಗ ಅಮೃತ ಬರಲು ಆರಂಭವಾಯಿತು. ಅಮೃತಕ್ಕಾಗಿ ಅಸುರರು ಹಾಗೂ ದೇವರ ನಡುವೆ ನಡೆದ ಜಗಳದಲ್ಲಿ ಗರುಡ ಪಕ್ಷಿ ಅಮೃತವಿದ್ದ ಕುಂಭವನ್ನು ತೆಗೆದುಕೊಂಡು ಹೋಗುವಾಗ ಕುಂಭದಲ್ಲಿದ್ದ ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವು. ಎಲ್ಲಿ ಅಮೃತದ ಹನಿಗಳು ಬಿದ್ದಿತೋ ಅಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಪ್ರಯಾಗ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನಿಗಳಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ.

ಹಿಂದು ಧರ್ಮಕ್ಕೆ ಮತಾಂತರವಾದ ಈ ವ್ಯಕ್ತಿ ಕುಂಭಮೇಳದ ಕೇಂದ್ರಬಿಂದು!

 ಈ ಬಾರಿ ಕುಂಭ ಮೇಳದ ಪ್ರಮುಖ ದಿನಾಂಕಗಳು

ಈ ಬಾರಿ ಕುಂಭ ಮೇಳದ ಪ್ರಮುಖ ದಿನಾಂಕಗಳು

ಜನವರಿ 14, 2021: ಮಕರ ಸಂಕ್ರಾಂತಿ

ಫೆಬ್ರುವರಿ 11, 2021: ಮೌನಿ ಅಮಾವಾಸ್ಯೆ

ಫೆಬ್ರುವರಿ 16, 2021: ವಸಂತ ಪಂಚಮಿ

ಫೆಬ್ರುವರಿ 27, 2021: ಮಾಗಿ ಪೂರ್ಣಿಮಾ

ಮಾರ್ಚ್ 11, 2021: ಮಹಾ ಶಿವರಾತ್ರಿ (ಮೊದಲ ಶಾಹಿ ಸ್ನಾನ)

ಏಪ್ರಿಲ್ 12, 2021: ಸೋಮವತಿ ಅಮಾವಾಸ್ಯೆ

ಏಪ್ರಿಲ್ 14, 2021: ಮೂರನೇ ಶಾಹಿ ಸ್ನಾನ

ಏಪ್ರಿಲ್ 27, 2021: ಚೈತ್ರ ಪೂರ್ಣಿಮಾ

 ಗ್ರಹಗಳ ಸಂಯೋಜನೆಯಂತೆ ಮಹಾ ಕುಂಭ

ಗ್ರಹಗಳ ಸಂಯೋಜನೆಯಂತೆ ಮಹಾ ಕುಂಭ

ಸಮುದ್ರ ಮಂಥನದ ಸಮಯದಲ್ಲಿ ಚಂದ್ರನು ಅಮೃತವನ್ನು ಹರಿಯದಂತೆ ಕಾಪಾಡಿದ ಹಾಗೂ ಸೂರ್ಯದೇವ ಕುಂಭ ಸ್ಫೋಟಿಸದಂತೆ ರಕ್ಷಿಸಿದ ಹಾಗೂ ಶನಿದೇವ ಇಂದ್ರನ ಕೋಪ ನಿಯಂತ್ರಿಸಿದ. ಹೀಗಾಗಿ ಈ ಗ್ರಹಗಳ ಸಂಯೋಜನೆ ರಾಶಿ ಚಕ್ರದಲ್ಲಿದ್ದಾಗ ಮಹಾ ಕುಂಭ ಆಯೋಜಿಸಲಾಗುತ್ತದೆ. ಬೃಹಸ್ಪತಿ ಹಾಗೂ ಗುರು ಇನ್ನೊಂದು ರಾಶಿ ಚಕ್ರಕ್ಕೆ ಪ್ರಯಾಣಿಸಲು ಹನ್ನೆರಡು ವರ್ಷಗಳು ಹಿಡಿಯುವುದರಿಂದ 12 ವರ್ಷಗಳ ನಂತರ ಕುಂಭಮೇಳ ಆಯೋಜಿಸಲಾಗುತ್ತದೆ.

 ಈ ಬಾರಿ ಕೊರೊನಾ ಸೋಂಕಿನ ನಿರ್ಬಂಧ

ಈ ಬಾರಿ ಕೊರೊನಾ ಸೋಂಕಿನ ನಿರ್ಬಂಧ

ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳ ಮುಕ್ತಾಯವಾಗುತ್ತದೆ. ಈ ಬಾರಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ. 800 ಹೋಟೆಲ್ ಗಳು ಹಾಗೂ 350 ಆಶ್ರಮಗಳು ಸಿದ್ಧವಾಗಿವೆ. ಕೊರೊನಾ ಸೋಂಕಿನ ಸವಾಲು ಈ ಬಾರಿಯ ಕುಂಭಮೇಳಕ್ಕೆ ಎದುರಾಗಿದೆ. ಹೆಚ್ಚಿನ ಜನರು ಸೇರದಂತೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಮುಂಚೆಯೇ ಆನ್ ಲೈನ್ ಬುಕಿಂಗ್ ಅಥವಾ ಇ ಪಾಸ್ ತೆಗೆದುಕೊರ್ಳಳುವ ಅವಶ್ಯಕತೆ ಇದೆ.

English summary
Kumbh Mela pilgrimage happens once every 12 years. This year Maha Kumbh Mela will begin on january 14 and continue till april 27 in Haridwar. Here is detail about Kumbha Mela 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X