ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sankranti Special: ಈ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬವನ್ನೇ ಆಚರಿಸುವುದಿಲ್ಲ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ 10: ಸುಗ್ಗಿ ಕಾಲದಲ್ಲಿ ಆಚರಿಸುವ ಹಬ್ಬ ಅಂದರೆ ಸಂಕ್ರಾಂತಿ. ಪ್ರತಿಯೊಬ್ಬರು ಅಂದು ಎಳ್ಳು ಬೆಲ್ಲ ಹಂಚಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ತಮಗಾಗಿ ದುಡಿದ ಎತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ, ಕಿಚ್ಚು ಹಾಯಿಸುತ್ತಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮ ನಗರಕ್ಕಿಂತ ಹಳ್ಳಿಗಳಲ್ಲಿ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಮನೆಯನ್ನು ಶುಭ್ರಗೊಳಿಸಿ, ಜಾನುವಾರು, ಕುರಿಗಳಿಗೆ ಮೈ ತೊಳೆದು ಸಿಂಗಾರಗೊಳಿಸಿ ಆಕಷ೯ಣೆಯಾಗಿ ಸಿಂಗಾರಗೊಳಿಸುತ್ತಾರೆ. ಸಂಜೆ ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ.

Sankranti Special: ಮಕರ ಸಂಕ್ರಾಂತಿ ಹಬ್ಬದ ಮಹತ್ವವೇನು? Sankranti Special: ಮಕರ ಸಂಕ್ರಾಂತಿ ಹಬ್ಬದ ಮಹತ್ವವೇನು?

ಇಲ್ಲೊಂದು ಊರು ಇದೆ. ಸಂಕ್ರಾಂತಿ ಅಂದರೆ ಸಾಕು ಈ ಊರಿನ ಜನರು ಭಯ ಬೀಳುತ್ತಾರೆ. ಇಲ್ಲಿನ ಗ್ರಾಮಸ್ಥರು ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿ ಸುಮಾರು 300 ವರ್ಷಗಳು ಕಳೆದಿದೆ. ಅಚ್ಚರಿಯಾದರೂ ಇದು ಸತ್ಯ.

ಸಂಕ್ರಾಂತಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಬಂತು ಸಿಹಿ ಸುದ್ದಿಸಂಕ್ರಾಂತಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಬಂತು ಸಿಹಿ ಸುದ್ದಿ

ಈ ಊರಲ್ಲಿ ಸಂಕ್ರಾಂತಿ ಅಂದರೆ ಭಯ. ಸಂಕ್ರಾಂತಿ ಬಂತು ಅಂದರೆ ಆ ಹಳ್ಳಿಯ ಜನ ಸೂತಕದ ರೀತಿ ಹಬ್ಬ ಆಚರಣೆ ಮಾಡ್ತಾರೆ. ಅಕಸ್ಮಾತ್ ಹಬ್ಬ ಮಾಡಿದರೆ ಊರಿಗೇ ಕೇಡಾಗುತ್ತದೆ. ದನ-ಕರುಗಳು ಒಂದೊಂದಾಗಿ ಸಾಯುತ್ತವೆ ಎಂದು ಸಂಕ್ರಾಂತಿ ಹಬ್ಬ ಮಾಡುವುದನ್ನೇ ಬಿಟ್ಟು ನೂರಾರು ವರ್ಷಗಳೇ ಕಳೆದಿದೆ.

ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ

ಕೋಲಾರ ಜಿಲ್ಲೆಯಲ್ಲಿರುವ ಊರು

ಕೋಲಾರ ಜಿಲ್ಲೆಯಲ್ಲಿರುವ ಊರು

ಈ ಊರು ಇರುವುದು ಕರ್ನಾಟಕದಲ್ಲಿಯೇ ಅನ್ನೋದು ವಿಶೇಷ. ಕೋಲಾರ ನಗರದಿಂದ ಕೇವಲ 7 ಕಿ. ಮೀ. ದೂರದಲ್ಲಿರುವ ಅರಾಭಿಕೊತ್ತನೂರು ಗ್ರಾಮದ ಜನರು ಸಂಕ್ರಾಂತಿ ಹಬ್ಬ ಆಚರಣೆಯಿಂದ ದೂರವುಳಿದಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ವಿದ್ಯಾವಂತರು ಮತ್ತು ಒಳ್ಳೆಯ ಸರ್ಕಾರಿ ಕೆಲಸಗಳಲ್ಲಿರುವ ಜನರು ಹೆಚ್ಚಾಗಿದ್ದಾರೆ. ಆದರೆ, ಇವರು ಸಹ ಹಳೆಯ ಸಂಪ್ರದಾಯವನ್ನು ಪಾಲನೆ ಮಾಡುತ್ತಿದ್ದಾರೆ.

ಆಧಾರವಿಲ್ಲದ ನಿಷೇಧ

ಆಧಾರವಿಲ್ಲದ ನಿಷೇಧ

ಸಂಕ್ರಾಂತಿ ಹಬ್ಬವನ್ನು ಮಾಡಿದರೆ ಊರಿಗೆ ಕೆಟ್ಟದಾಗುತ್ತದೆ ಅಂತಾ ಹಿಂದಿನವರು ಹೇಳಿರೋ ರೀತಿ ಆಧಾರವಿಲ್ಲದ ನಿಷೇಧವನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡುವುದೇ ಇಲ್ಲ. ಸಂಕ್ರಾಂತಿ ಹಬ್ಬ ಬಂತು ಅಂದರೆ ಈ ಗ್ರಾಮಕ್ಕೆ ಗ್ರಾಮವೇ ಭಯದ ವಾತಾವರಣದಲ್ಲಿ ಮುಳುಗಿಬಿಡುತ್ತದೆ. ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡಿದರೂ ಅರಾಬಿಕೊತ್ತನೂರಲ್ಲಿ ಮಾತ್ರ ಅವತ್ತು ಯಾವುದೇ ವಿಶೇಷವಿಲ್ಲದೆ ಗ್ರಾಮವೆಲ್ಲಾ ಸೂತಕದ ಛಾಯೆಯಲ್ಲಿ ಮುಳಗಿರುತ್ತದೆ.

ದನ ಕರುಗಳ ಸಾವು

ದನ ಕರುಗಳ ಸಾವು

ಸುಮಾರು 300 ವಷ೯ಗಳ ಹಿಂದೆ ರಾಜರ ಕಾಲದಲ್ಲಿ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ಬಂದಿತ್ತು. ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾಯೋದಿಕ್ಕೆ ಶುರುವಾಗಿತ್ತಂತೆ. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡಿತೀರೋ ಅನಾಹುತವನ್ನು ನಿಲ್ಲಿಸುವಂತೆ ಬಸವನಲ್ಲಿ ಕೋರಿಕೆ ಸಲ್ಲಿಸಿದರಂತೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡೋ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡ್ತೀವಿ ಅಂತ ಪ್ರಾರ್ಥನೆ ಮಾಡಿಕೊಂಡರಂತೆ. ಆಗ ರಾಸುಗಳ ಸಾವು ನಿಂತಿತು, ಆಗ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ನಿಯಮವೂ ಜಾರಿಗೆ ಬಂದಿತು. ಸಂಕ್ರಾಂತಿ ಆದ ಮೇಲೆ ಬಸವ ಜಯಂತಿ ದಿನ ಊರಿನಲ್ಲಿರೋ ದೇವಾಲಯಗಳಿಗೆ ಪೂಜೆ ಮಾಡಿ, ರಾಸುಗಳಿಗೆ ಅಲಂಕಾರ ಮಾಡಿ, ಮೆರವಣಿಗೆ ಮಾಡಲಾಗುತ್ತದೆ.

ಊರಿಗೆ ಕೇಡು ಬರುತ್ತದೆ

ಊರಿಗೆ ಕೇಡು ಬರುತ್ತದೆ

ಇನ್ನೂ ಗ್ರಾಮಸ್ಥರು ಹೇಳುವು ಪ್ರಕಾರ ಸಂಕ್ರಾಂತಿ ಹಬ್ಬ ಆಚರಣೆ ಮಾಡದೆ ಇರೋದಕ್ಕೆ ಮತ್ತೊಂದು ಕಾರಣವಿದೆ. ಸಂಕ್ರಾಂತಿ ಹಬ್ಬದ ದಿನದಂದು ಎತ್ತುಗಳಿಗೆ ಬೆಂಕಿಯನ್ನು ದಾಟಿಸುತ್ತಾರೆ. ಒಮ್ಮೆ ಊರಿನಲ್ಲಿ ಎತ್ತುಗಳನ್ನು ಸಿಂಗಾರ ಮಾಡಿ, ಮೆರವಣಿಗೆ ಮಾಡಿಕೊಂಡು ಬೆಂಕಿ ದಾಟಿಸುವ ವೇಳೆ ಒಂದು ಎತ್ತು ಸತ್ತು ಹೋಗಿತ್ತು. ಈ ಕಾರಣದಿಂದ ಹಬ್ಬ ಮಾಡಿದರೆ ಊರಿಗೆ ಕೇಡು ಬರುತ್ತೆ ಅಂತ ನಂಬಿ ಸಂಕ್ರಾಂತಿ ಹಬ್ಬವನ್ನು ಮಾಡುವುದಿಲ್ಲ.

ಬಸವ ಜಯಂತಿದಿನ ಹಬ್ಬ

ಬಸವ ಜಯಂತಿದಿನ ಹಬ್ಬ

ಬಸವ ಜಯಂತಿ ದಿನದಂದು ಈ ಊರಿನಲ್ಲಿ ಈಗಲೂ ಸಂಕ್ರಾಂತಿ ರೀತಿಯಲ್ಲಿಯೇ ವಿಶೇಷ ಪೂಜೆ ಮಾಡಲಾಗುತ್ತದೆ. ದನ-ಕರುಗಳನ್ನು ತೊಳೆದು ಸಿಂಗಾರಗೊಳಿಸಿ ಗ್ರಾಮದಲ್ಲಿ ಇರೋ ಈಶ್ವರನ ದೇವಾಲಯ ಬಳಿ ಕರೆತಂದು ಪೂಜೆ ಮಾಡಿಸಲಾಗುತ್ತದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಗ್ರಾಮದಲ್ಲಿ ಈಶ್ವರನ ರಥೋತ್ಸವ, ಜಾತ್ರೆ ನಡೆಸಲಾಗುತ್ತದೆ. ಸುತ್ತಮುತ್ತಲಿನ ಊರುಗಳ ಜನರು ಸಹ ಆಗ ಗ್ರಾಮಕ್ಕೆ ಬರುತ್ತಾರೆ. ಅರಾಭಿಕೊತ್ತನೂರಿನ ಹಿರಿಯರು ಆ ಕಾಲಕ್ಕೆ ಮಾಡಿದ್ದ ಸಂಕ್ರಾಂತಿ ಆಚರಣೆಯ ನಿಷೇಧ ಇಂದಿಗೂ ಮುಂದುವರೆದುಕೊಂಡು ಬಂದಿದ್ದು, ಈಗಿನ ಕಾಲದ ಯುವಕರೂ ಅದನ್ನು ಪಾಲಿಸುತ್ತಿದ್ದಾರೆ.

English summary
Arabikothanur village is in Kolar district of Karnataka. In this village people will not celebrate Sankranthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X