ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯ ಭಗವಂತ ಪಥ ಬದಲಿಸುವ ಪರ್ವಕಾಲ ಮಕರ ಸಂಕ್ರಾಂತಿ

By ಕಮಲಾಕರ ಭಟ್
|
Google Oneindia Kannada News

ಪ್ರತಿ ಸೌರಮಾನ ಮಾಸದಲ್ಲಿ ಸಂಕ್ರಾಂತಿ ಬಂದರೂ ಸೂರ್ಯ ಭಗವಂತ ದಕ್ಷಿಣಾಯಣ ಪಥದಿಂದ ಉತ್ತರಾಯಣ ಪಥಕ್ಕೆ ಸಂಚರಿಸುವ ಕಾರಣ ಮಕರ ಸಂಕ್ರಾಂತಿಗೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವಿದೆ.

ದೃಗ್ ಸಿದ್ಧಾಂತ ಮತ್ತು ಸೌರ ಸಿದ್ಧಾಂತ ಎಂಬ ಎರಡು ಸಿದ್ಧಾಂತದ ಆಧಾರದ ಮೇಲೆ ಜೋತಿಷ್ಯದ ಆಚರಣೆ ನಡೆಯುತ್ತದೆ.

ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?! ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!

ಈ ಹಬ್ಬವನ್ನು ಜನವರಿ 14ಕ್ಕೆ ಆಚರಿಸಬೇಕೋ ಅಥವಾ 15 ಕ್ಕೋ ಎಂಬ ಗೊಂದಲ ಯಾವತ್ತಿಗೂ ಇದೆ. ಆದರೆ ಮಕರ ಪುರುಷ ಮಕರ ರಾಶಿಗೆ ಪ್ರವೇಶಿಸೋದು ಜನವರಿ 14 ಕ್ಕೆ. ಇನ್ನು ಕೆಲವು ಕಡೆ ದೃಗ್ ಸಿದ್ಧಾಂತದ ಆಧಾರದ ಮೇಲೆ ದಿನವನ್ನು ಅಳೆಯುವ ಮಾಪನದಲ್ಲಿ ವ್ಯತ್ಯಾಸವಿರುವುದರಿಂದ ಕೆಲವೆಡೆ ಜನವರಿ 15ಕ್ಕೆ ಆಚರಿಸಲಾಗುತ್ತದೆ. ರಥವೇರುವ ಸೂರ್ಯ ತನ್ನ ಪ್ರಖರ ಪ್ರಭೇಯನ್ನು ಬೀರುವುದರಿಂದ ಮಕರ ಸಂಕ್ರಮಣದ ನಂತರ ಬೇಸಿಗೆ ಕಾಲ ಆರಂಭವಾಗುತ್ತದೆ.

Makarasankranti: Importance of the fisrt festival of the year

ತಾನು ಸಂಗ್ರಹಿಸಿದ ಧಾನ್ಯಾದಿಗಳನ್ನು ವಿಕ್ರಯಿಸಿ ಮದುವೆ ಮುಂಜಿಗೂ, ಅಥವಾ ಇನ್ಯಾವುದೇ ಶುಭಕಾರ್ಯಕ್ಕೆ ವಿನಿಯೋಗಿಸುವ ಕಾಲ ಇದಾಗಿರುವುದರಿಂದ ಇದು ಒಂದರ್ಥದಲ್ಲಿ ಪುಣ್ಯಕಾಲವೇ.

ಭೂ ಸಿರಿ-ಸೂರ್ಯನೊಲವು ಬೆಸೆವ ಘಳಿಗೆ ಸಂಕ್ರಾಂತಿ!ಭೂ ಸಿರಿ-ಸೂರ್ಯನೊಲವು ಬೆಸೆವ ಘಳಿಗೆ ಸಂಕ್ರಾಂತಿ!

ಇಚ್ಛಾಮರಣಿ ಭೀಷ್ಮಾಚಾರ್ಯರು ಉತ್ತರಾಯಣಕ್ಕಾಗಿ ಕಾಯುತ್ತ, ಉತ್ತರಾಯಣದ ಶುಭಕಾರ್ಯ ಆಗಮಿಸುತ್ತಿದ್ದಂತೆಯೇ ದೇಹತ್ಯಜಿಸಿದರು. ಕಾರಣ ಉತ್ತರಾಯಣ ಶುಭಕಾರ್ಯದಲ್ಲಿ ಮರಣಿಸಿದರೆ ಸಾಕ್ಷಾತ್ ಮೋಕ್ಷ ದೊರಕುತ್ತದೆ ಎಂಬುದು ನಂಬಿಕೆ. ಆದರೆ ಇದನ್ನು ಯಾರೂ ಅಪಾರ್ಥ ಭಾವಿಸಬಾರದು. ಈ ಸಾವು ಸಹಜ ಸಾವಾಗಿದ್ದರೆ ಮಾತ್ರವೇ ಮೋಕ್ಷಪ್ರಾಪ್ತಿಯಾಗುತ್ತದೆ.

ವಿಷ್ಣು ಪೂಜೆ ಶುಭಪ್ರದ
ಮಕರ ಸಂಕ್ರಮಣದಂದು ವಿಷ್ಣುವನ್ನು ಪೂಜಿಸಿದರೆ ದ್ವಾದಶ ಸಂಕ್ರಮಣದಲ್ಲೂ ಪೂಜೆ ಮಾಡಿದ ಫಲ ಲಭಿಸುತ್ತದೆ. ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ ಇತ್ಯಾದಿ ಅರಿಷಡ್ವರ್ಗಗಳನ್ನು ಸೋಲಿಸಲು ಇದು ಪುಣ್ಯಕಾಲ. ಎಲ್ಲರೂ ಒಂದಾಗಿ, ಯಾವಭೇದವಿಲ್ಲದೆ ಸಂಭ್ರಮಿಸುವುದೇ ಸನಾತನ ಪರಂಪರೆಯ ಗುರಿ. ಸಂಕ್ರಾಂತಿಯೂ ಅದೇ ನೀತಿಯನ್ನು ಸ್ಫುರಿಸುತ್ತದೆ.

ಯಾವ ಪೂಜೆಗೇ ಆದರೂ ದೇಹಕ್ಕೆ ಶಕ್ತಿಬೇಕು. ಎಳ್ಳು, ಬೆಲ್ಲು ಮತ್ತು ಕಬ್ಬು ಈ ಸಮಯದಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದಲೇ ಹಬ್ಬದ ಆಚರಣೆಯ ಸಮಯದಲ್ಲಿ ಇವುಗಳನ್ನು ಉಪಯೋಗಿಸುವ ಪರಿಪಾಠವಿದೆ.

ಈ ಬಾಂಧವ್ಯ ಬೆಸೆವ ಹಬ್ಬ ಎಲ್ಲರನ್ನೂ ಒಂದಾಗಿಸಲಿ. ಎಳ್ಳು ಬೆಲ್ಲವ ತಿಂದು ಎಲ್ಲರೂ ಒಳ್ಳೊಳ್ಳೆ ಮಾತನಾಡೋಣ.

English summary
People of India are celebrating 1st festival of 2018, Makara sankranti on Jan 14th and on Jan 15th in some places. Here is a write up on importance of Makara Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X