• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ ವಿಶೇಷ: ಮನಕ್ಕೆ ಮುದ ನೀಡುವ ಮಂಡಲ ಕಲೆ ಸುತ್ತಾ

By ಸೌಮ್ಯ, ಸಾಗರ
|

ವರ್ಷದ ಪ್ರಾರಂಭ. ಹಬ್ಬದ ತಯಾರಿಯಲ್ಲಿರುತ್ತೀರಿ. ಒಂದು ವಿಷಯ ಗಮನಿಸಿದ್ದೀರಾ? ಯಾವುದೇ ಹಬ್ಬದ ಸಂಭ್ರಮಗಳಲ್ಲೂ ಹಾಕುವ ಮನೆಯ ಮುಂದೊಂದು ಸುಂದರವಾದ ಬಣ್ಣದ ರಂಗೋಲಿಯೋ, ದೇವರ ಪೂಜೆಗೆಂದು ಇಟ್ಟ ಆರತಿ ತಟ್ಟೆಯೋ ಹೀಗೆ ಸಾಕಷ್ಟು ವರ್ತುಲಾಕಾರದ ಚಿತ್ತಾರಗಳು ನಮ್ಮ ಸಂಪ್ರದಾಯ ಮತ್ತು ಅಲಂಕಾರದ ಭಾಗವಾಗಿ ನಮ್ಮನ್ನು ಆಕರ್ಷಿಸುತ್ತದೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತದೆ.

ಗೋಲಾಕಾರದ ಚಿತ್ರಗಳನ್ನು ಕಂಡೊಡನೆ ಮನಸ್ಸು ಕ್ಷಣಮಾತ್ರಕ್ಕಾದರೂ ಅಲ್ಲಿಯೇ ನೆಟ್ಟು, ನಮಗರಿವಿಲ್ಲದಂತೆ ಹಿತವಾದ ಭಾವನೆಯನ್ನು, ಸಂತೋಷವನ್ನುತಂದುಕೊಳ್ಳುತ್ತದೆ. ಇಂತಹದ್ದೇ ರೀತಿಯಲ್ಲಿ, ಚಿತ್ರಗಳ ರೂಪದಲ್ಲಿಯೇ ಮನಸ್ಸಿಗೆ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಒಂದು ಆಧ್ಯಾತ್ಮಿಕ ಕಲೆ ಮಂಡಲ!

ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ

ಮಂಡಲ ಎಂದರೇನು?

ಸಂಸ್ಕೃತದಲ್ಲಿ ''ಮಂಡ' ಎಂದರೆ ಅಲಂಕರಿಸುವುದು ಅಥವಾ ಸಿದ್ಧಗೊಳಿಸುವುದು. 'ಲ' ಎಂಬ ಅಂತ್ಯಪ್ರತ್ಯಯ ದೊಂದಿಗೆ, ಮಂಡಲ ವೆಂದರೆ ಒಂದು ಪವಿತ್ರವಾದ ವರ್ತುಲ ಅಥವಾ ಕೇಂದ್ರಬಿಂದು ಎಂದು ಅರ್ಥ. ಮಂಡಲ ಒಂದು ಸಂಕೀರ್ಣವಾದ, ಅಮೂರ್ತವಾದ, ಸಾಮಾನ್ಯವಾಗಿ ವೃತ್ತಾಕಾರದಲ್ಲಿ ರಚಿಸಲ್ಪಡುವ ಚಿತ್ರ. ಮಂಡಲ ನಮ್ಮ ಸುತ್ತಲಿನ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ, ಎಲ್ಲೆಡೆ ತನ್ನಿಂದಲೇ ಹೊರಹೊಮ್ಮಿಸುವ ಒಂದು ಅಗಾಧ ಶಕ್ತಿಯ ವ್ಯೂಹ ಎಂದು ನಂಬಲಾಗಿದೆ.

ಮಂಡಲ ಕಲೆಯ ಐತಿಹಾಸಿಕ ಮಹತ್ವ

ಮಂಡಲ ಕಲೆಯ ಐತಿಹಾಸಿಕ ಮಹತ್ವ

ಧಾರ್ಮಿಕ ಕಲೆ ಈ ಮಂಡಲ: ಮಂಡಲ ಮುಖ್ಯವಾಗಿ ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿರುವ ಒಂದು ಶದ್ಧಾಪೂರ್ವ ಧಾರ್ಮಿಕ ಚಿತ್ರಣ. ಕ್ರಿಶ್ಚಿಯನ್ನರು,

ಅಮೆರಿಕನ್ನರಲ್ಲೂ ಕೂಡ ಈ ಕಲೆ ಪೂರ್ವಜರ ಕಾಲದಿಂದಲೂ ಆರಾಧನೆಯ ಬಳಕೆಯಲ್ಲಿತ್ತು. 4ನೇ ಶತಮಾನದಿಂದಲೇ ಟಿಬೆಟ್, ಇಂಡಿಯಾ, ಚೀನಾ, ಜಪಾನ್, ನೇಪಾಳ ಮೊದಲಾಗಿ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂದು ಹಲವು ಮೂಲಗಳಿಂದ ದೊರಕಿದ ಮಾಹಿತಿಯಿದೆ.

ಈ ಸಮಸ್ತ ವಿಶ್ವವೇ ಒಂದು ಕೇಂದ್ರೀಕೃತವಾದ ಶಕ್ತಿಯ ಸ್ವರೂಪ ಎಂದು ಮಂಡಲಗಳ ಮೂಲಕ ಪ್ರತಿಬಿಂಬಿಸಲಾಗುತ್ತದೆ. ಇಂಡೋನೇಷ್ಯಾ ಮತ್ತು ಕ್ಯಾಂಬೋಡಿಯಾದಲ್ಲಿ 3-ಡಿ ಮಾದರಿಯ ಸಾವಿರಾರು ವರ್ಷಗಳ ಇತಿಹಾಸವಿರುವ ಬೌದ್ಧ ದೇವಾಲಯಗಳು ಈ ಮಂಡಲಗಳ ಭೌತಿಕ ಅನುಭೂತಿಯನ್ನು ನೀಡುತ್ತದೆ.

ಸಂಕ್ರಾಂತಿ ಹಬ್ಬದ ದಾನ ವೈಶಿಷ್ಟ್ಯ, ಪಿತೃ ದೋಷ ನಿವಾರಣೆಯ ದಾರಿ

ಪ್ರತಿ ರಚನೆಗೂ ಅದರದ್ದೇ ಉದ್ದೇಶವಿರುತ್ತದೆ

ಪ್ರತಿ ರಚನೆಗೂ ಅದರದ್ದೇ ಉದ್ದೇಶವಿರುತ್ತದೆ

ಮಂಡಲಗಳ ಮೂಲ ಧಾತುಗಳಾದ ಧನಾತ್ಮಕ ಶಕ್ತಿಯ ಕೇಂದ್ರೀಕರಣ ಮತ್ತು ದೇವರುಗಳ ಸ್ಥಳದ ಪಾವಿತ್ರ್ಯತೆಯ ಮನ್ನಣೆ, ನಮ್ಮ ದೇಶದಲ್ಲಿನ ಅನೇಕ ಹಿಂದೂ ಮತ್ತು ಬೌದ್ಧ ದೇವಾಲಯಗಳ ಛಾವಣಿಗಳಲ್ಲಿ ರೂಪಿಸಲ್ಪಟ್ಟ ಕೆತ್ತನೆ ಮತ್ತು ವಾಸ್ತುಶಾಸ್ತ್ರ ಸಹಿತ ಅಲಂಕಾರಗಳಲ್ಲಿಯೂ ಕೂಡ ಕಾಣಬಹುದಾಗಿದೆ.

ಜಾತಿ ಮತಗಳ ಹಂಗಿಲ್ಲದೆ, ಸಾಮಾನ್ಯವಾಗಿ ಎಲ್ಲ ಸಂಸ್ಕೃತಿಗಳಲ್ಲೂ ವೃತ್ತವನ್ನು ಅದ್ಭುತ ಶಕ್ತಿಯ ಸ್ವರೂಪವಾಗಿ ಆರಾಧಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಚಿಸುವ ಕೆಲವು ಸಾಂಪ್ರದಾಯಿಕ ಮಂಡಲಗಳಿಗೆ ಅದರದ್ದೇ ಆದ ರಚನೆಯ ಉದ್ದೇಶವಿರುತ್ತವೆ. ಅದಕ್ಕಾಗಿ ಅಗತ್ಯವಾದ ದಿಕ್ಕು, ಸಾಮಾಗ್ರಿ ಮತ್ತು ನಿಯಮ-ನಿಷ್ಠೆಗಳನ್ನು ಅನುಸರಿಸಬೇಕಾಗುತ್ತದೆ.

ಆರಾಧನಾ ಸ್ಥಳವನ್ನು ಜಪ-ಮಂತ್ರಗಳ ಜೊತೆಯಲ್ಲಿ, ಮಂಡಲ ರಚಿಸಿ, ಧ್ಯಾನ ವಾತಾವರಣವನ್ನು ನಿರ್ಮಿಸಲು ಮತ್ತು ದೇವತಾ ಶಕ್ತಿಯನ್ನು ಒಂದೆಡೆ ಆವಾಹಿಸಲೆಂಬ ಕಾರಣಕ್ಕಾಗಿ ಒಂದು ಬಳಸುವ ಪ್ರತೀತಿಯಿದೆ. ಈ ಮೂಲಕ ಜನರ ಭೌತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕಶಕ್ತಿಗಳ ಒಟ್ಟುಗೂಡುವಿಕೆಯನ್ನುಸಾಧಿಸುವ ಶಕ್ತಿ ಮಂಡಲಗಳಿಗಿವೆ ಎಂಬುದು ನಮ್ಮ ಪೂರ್ವಜರ, ಅನೇಕ ಸಾಂಪ್ರದಾಯಿಕ ಮಂಡಲಗಳ ರಚನಕಾರ ಅಂಬೋಣ.

ಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿ

ವೈಜ್ಞಾನಿಕ ಕ್ಷೇತ್ರದಲ್ಲೂ ಮಂಡಲಗಳಿಗಿದೆ ಚಿಕಿತ್ಸಕ ಮನ್ನಣೆ

ವೈಜ್ಞಾನಿಕ ಕ್ಷೇತ್ರದಲ್ಲೂ ಮಂಡಲಗಳಿಗಿದೆ ಚಿಕಿತ್ಸಕ ಮನ್ನಣೆ

ಸಾವಿರಾರು ವರ್ಷಗಳ ಇತಿಹಾಸವಿರುವ ಮಂಡಲಗಳ ರಚನೆ ಕೇವಲ ಧಾರ್ಮಿಕ ವಸ್ತು ವಿಷಯವಲ್ಲ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಸಮಪಾರ್ಶ್ವ ರೇಖಾಚಿತ್ರಗಳನ್ನು ಬಿಡಿಸುವುದು ಮತ್ತು ಬಣ್ಣ ತುಂಬುವ ಕ್ರಿಯೆಯಿಂದ ನಮ್ಮ ದೇಹದಲ್ಲಿ ಮೇಲಾಟನಿನ್ ಎಂಬ ಹಾರ್ಮೋನ್ ಗಳ ಬಿಡುಗಡೆಯಾಗುತ್ತದೆ. ಇದು ನಿದ್ರೆ ಹೆಚ್ಚಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅತ್ಯಂತ ಅನುಕೂಲಕಾರಿ.

ವರ್ಣಮಯ ಚಿತ್ರಗಳನ್ನು ಕಣ್ಣಿನಿಂದ ನೋಡುವುದು, ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಅವುಗಳ ಅನುಭಾವ ಪಡೆಯುವುದು ಇತ್ಯಾದಿ ರೂಡಿಗಳಿಂದ ಮನುಷ್ಯನ ದೇಹದ ಉಲ್ಲಾಸ ಹೆಚ್ಚುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಮಂಡಲ ಚಿತ್ರ ಬರೆಯಲು ಹೆಣ್ಣು ಗಂಡು ಎಂಬ ಬೇಧ ಭಾವವಿಲ್ಲ.ಮಕ್ಕಳು ಹಿರಿಯರು ಎಂಬ ವಯಸ್ಸಿನ ಮಿತಿಯಿಲ್ಲ. ಮನಸ್ಸನ್ನು ತಿಳಿಯಾಗಿಸಲು, ಮನಸ್ಸಿಗೆ ಕಿರಿಕಿರಿ ಉಂಟಾದಾಗ ಒಂದಷ್ಟು ಚಿತ್ರ ಬರೆದು ಆ ಒತ್ತಡವನ್ನು ಹೊರಹಾಕಲು, ಋಣಾತ್ಮಕ ಆಲೋಚನೆಗಳನ್ನು ದೂರವಾಗಿಸಲು ಮಂಡಲಗಳು ಒಂದು ಉತ್ತಮ ಮಾಧ್ಯಮ.

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮಂಡಲ ಚಿತ್ರಿಸುವುದು ಅಥವಾ ಬಣ್ಣಗಳಿಂದ ಅಲಂಕರಿಸುವುದು ಒಂದು ಉತ್ತಮ ಹವ್ಯಾಸ. ಇದೇ ಕಾರಣಕ್ಕಾಗಿ ಮಂಡಲಗಳ ರಚನೆ ಮತ್ತು ಬಳಕೆ ವೈದ್ಯಕೀಯ, ಯೋಗಭ್ಯಾಸ ಕ್ಷೇತ್ರಗಳಲ್ಲಿ, ಮಕ್ಕಳ ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿವೆ. ಯೋಗ ಶಾಲೆಗಳಲ್ಲಿ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಮಂಡಲ ಚಿತ್ರಗಳನ್ನು ವೀಕ್ಷಣೆಗೆಂದೇ ಬಳಸುವ ಕ್ರಮ ಈಗೀಗ ಹೆಚ್ಚಾಗುತ್ತಿದೆ.

ಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲ

ಮಂಡಲ ರಚನೆ ಮತ್ತು ಬಳಕೆ ಹೇಗೆ?

ಮಂಡಲ ರಚನೆ ಮತ್ತು ಬಳಕೆ ಹೇಗೆ?

ಕೆಲವು ನಿಯಮ ನಿಷ್ಠೆ ಗಳಿರುವ ಸಾಂಪ್ರದಾಯಿಕ, ಆಧ್ಯಾತ್ಮಿಕ ಮಂಡಲಗಳ ಹೊರತಾಗಿ, ಎಂತವರೂ ಕೂಡ ಸಾಮಾನ್ಯ ವರ್ತುಲಾಕಾರದ ಮಂಡಲ ಚಿತ್ರಗಳ ರಚನೆ ಮಾಡಬಹುದು. ಪೆನ್ಸಿಲ್, ಪೆನ್ನು, ಡ್ರಾಯಿಂಗ್, ಕೈವಾರ, ಕೋನಮಾಪಕ, ಕುಂಚ-ಪೇಂಟಿಂಗ್ ಬಣ್ಣಗಳು, ರಂಗೋಲಿ, ಬಣ್ಣದ ಪುಡಿಗಳು ಹೀಗೆ ಹತ್ತು ಹಲವು ಮಾಧ್ಯಮಗಳನ್ನು ಬಳಸಿ ಮಂಡಲ ಚಿತ್ರಗಳನ್ನು ಬರೆಯಬಹುದು.

ಚಿತ್ರ ಬರೆಯುವ ಐಡಿಯಾ ಇಲ್ಲವೇ ಇಲ್ಲ ಎನ್ನುವರರಿಗಾಗಿ ಬಣ್ಣ ತುಂಬಬಹುದಾದಂತಹ ಮಂಡಲ ಚಿತ್ರಗಳಿರುವ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ.

ಸರ್ವಂ ಮೊಬೈಲ್ ಮಯಂ ಎಂಬ ಕಾಲವಾದ್ದರಿಂದ ಸಾಕಷ್ಟು ಮಂಡಲ ಆಪ್ ಗಳು ಲಭ್ಯವಿದ್ದರೂ, ಚಿತ್ರಗಳನ್ನು ಬರೆಯುವ ಕೈಗಳ ಭೌತಿಕ ಚಲನೆಯೇ ಹೆಚ್ಚು ಪರಿಣಾಮಕಾರಿಯಾದ್ದರಿಂದ, ನಿತ್ಯದ ಮಂಡಲ ಬಿಡಿಸುವ ಆಸಕ್ತಿ ಇದ್ದವರು ಆದಷ್ಟು ಮೊಬೈಲ್ ಅಪ್ ಗಳ ಮೊರೆ ಹೋಗದಿರುವುದು ಉತ್ತಮ.

ಅದಮ್ಯ ಶಕ್ತಿ ಹೊರಹೊಮ್ಮಲು ಅತ್ಯಂತ ಸಹಕಾರಿ

ಅದಮ್ಯ ಶಕ್ತಿ ಹೊರಹೊಮ್ಮಲು ಅತ್ಯಂತ ಸಹಕಾರಿ

ಮಂಡಲ ಡಿಸೈನ್ ಗಳು ನಮ್ಮಲ್ಲಿ ಹುಟ್ಟುತ್ತಾ ಹೋದಂತೆ, ಅನಾವಶ್ಯಕ ಚಿಂತೆ ಗಳನ್ನು ಆ ಕ್ಷಣಕ್ಕೆ ಮರೆಸಿ, ನಮ್ಮಲ್ಲಿನ ಕ್ರಿಯಾಶೀಲತೆ ಮತ್ತು ಅದಮ್ಯ ಶಕ್ತಿ ಹೊರಹೊಮ್ಮಲು ಅತ್ಯಂತ ಸಹಕಾರಿ.

ಅತ್ಯಂತ ಸರಳವಾದ ವರ್ತುಲ, ಚೌಕ, ತ್ರಿಕೋನ ಮಾದರಿಯ ರೇಖಾಚಿತ್ರಗಳಿಂದ ಒಂದೇ ಮಾದರಿಯಲ್ಲಿ ಪ್ರಾರಂಭಿಸಿ ಅಭ್ಯಸಿಸಿದರೆ ಅಥವಾ ಬಣ್ಣಗಳನ್ನು ತುಂಬುವ ರೂಡಿ ಮಾಡಿಕೊಂಡರೆ ಎಂತವರಿಗೂ ಕ್ರಮೇಣ ಮಂಡಲಗಳ ಹುಚ್ಚು ಹಿಡಿಯಲು ಎಷ್ಟು ಸಮಯವೂ ಬೇಕಾಗಿಲ್ಲ.

ಮಾನಸಿಕ ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯ ಮೌಲ್ಯವನ್ನು ಹೊಂದಿರುವ ಈ ಮಂಡಲಗಳಿಗೆ ಅಲಂಕಾರಿಕ ವಸ್ತುಗಳ ನಿರ್ಮಾಣ ಕ್ಷೇತ್ರದಲ್ಲಿ ಎಲ್ಲಿಲ್ಲದ ಬೇಡಿಕೆ. ಆಫೀಸು, ಆಸ್ಪತ್ರೆ, ಹೋಟೆಲು ಮನೆಗಳ ಗೋಡೆಗಳು ಸುಂದರವಾದ ಮಂಡಲಗಳಿಂದ ಅಲಂಕೃತಗೊಳ್ಳುತ್ತಿವೆ.

ಮಂಡಲ ಚಿತ್ರಕಾರರಿಗೆ ಬೇಡಿಕೆಯಿದೆ

ಮಂಡಲ ಚಿತ್ರಕಾರರಿಗೆ ಬೇಡಿಕೆಯಿದೆ

ಅತ್ಯಂತ ಸೂಕ್ಷ್ಮ ಕುಶಲತೆಯಿಂದ ಒಂದೇ ಹದಕ್ಕೆ ಸಮಾನವಾಗಿ ಚಿತ್ರಿಸುವಂತಹ ಇಂತಹ ಮಂಡಲಗಳ ಚಿತ್ರಗಳನ್ನು ಬಿಡಿಸಲು ಅಷ್ಟೇ ತಾಳ್ಮೆಯ ಅಗತ್ಯತೆ ಅವಶ್ಯಕ. ಹ್ಯಾಂಡ್ಮೇಡ್ ವಸ್ತುಗಳ ಮೌಲ್ಯಭರಿತ ಮಾರುಕಟ್ಟೆಯಲ್ಲಿ ಮಂಡಲ ಚಿತ್ರಕಾರರಿಗೆ ಬೇಡಿಕೆಯಿದೆ.

ನೋಡಿದಾಕ್ಷಣ ಮನಸ್ಸು ಪ್ರಫುಲ್ಲಗೊಳ್ಳುವಂತಹ ಚಿಕಿತ್ಸಕ ಮಂಡಲ ಡಿಸೈನ್ಗಳು, ವಾಲ್ ಹ್ಯಾಂಗಿಗ್ ಗಿಫ್ಟ್ಗಳು, ಬಟ್ಟೆ, ಹ್ಯಾಂಡ್ ಬ್ಯಾಗ್, ಹೆಣ್ಣುಮಕ್ಕಳ ಅಲಂಕಾರಿಕವಸ್ತುಗಳು, ಮೊಬೈಲ್ ಕವರ್, ಪೆನ್ ಸ್ಟಾಂಡ್, ಬಾಲ್ಕನಿ ಪಾಟ್ ಇತ್ಯಾದಿ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಹ್ಯಾಂಡ್ ಮೇಡ್ ಮತ್ತು ಪ್ರಿಂಟೆಡ್ ಡಿಸೈನ್ಗಳಾಗಿ ತನ್ನ ಛಾಪನ್ನು ಮೂಡಿಸುತ್ತಿವೆ.

English summary
Makara Sankranti Special : Significance of Mandala Art during Festivals. Mandala in Sanskrit means “magic circle”. Nearly every culture uses mandalas or circular image in their cultural or spiritual practices. Here is article about basic essence of Mandala art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X