ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭ್ರಮದ ಸುಗ್ಗಿ ಸಂಕ್ರಾಂತಿ: ಆಚರಣೆ ಹೇಗೆ?

|
Google Oneindia Kannada News

Recommended Video

Makar Sankranti 2019 : ಮಕರ ಸಂಕ್ರಾಂತಿ ಹಬ್ಬದ ಮಹತ್ವ ಹಾಗು ವಿಶೇಷತೆಗಳು | ಪೂಜಾ ಮುಹೂರ್ತ ಸಮಯ

ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಪರ್ವಕಾಲವಾದ ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ.

12 ಸೌರಮಾನ ಮಾಸಗಳಾದ ಮೇಷ ದಿಂದ ಹಿಡಿದು, ಮೀನದವರೆಗೂ ಸೂರ್ಯ ತನ್ನ ಪಥ ಬದಲಿಸುತ್ತಾನಾದರೂ ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುವ ಪರ್ವಕಾಲವನ್ನು ಮಕರಸಂಕ್ರಾಂತಿಯೆಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಮಕರ ಸಂಕ್ರಾಂತಿಯಿಂದ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತದೆ. ಉತ್ತರಾಯಣದಲ್ಲಿ ಮರಣಿಸಿದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!

ಇದು ಸುಗ್ಗಿಕಾಲವೂ ಆಗಿರುವುದರಿಂದ ವರ್ಷಪೂರ್ತಿ ಬೆಸವರು ಸುರಿಸಿ ಅನ್ನದಾತ ಬೆಳೆದ ಬೆಳೆಗೆ ಬೆಲೆ ಸಿಕ್ಕುವ ಕಾಲ!

ಈ ವರ್ಷ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು, ಮಂಗಳವಾರ ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಹಬ್ಬದ ಆಚರಣೆ ಏಕೆ ಮತ್ತು ಹೇಗೆ ಎಂಬ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಧನಾತ್ಮಕ ಪರಿವರ್ತನೆಗೆ ನಾಂದಿ

ಧನಾತ್ಮಕ ಪರಿವರ್ತನೆಗೆ ನಾಂದಿ

ಮೈಕೊರೆವ ಚಳಿಯಿಂದಾಗಿ ಕೆಲಸ ಮಾಡುವುದಕ್ಕೇ ಸೋಮಾರಿತನ ತೋರುತ್ತಿದ್ದ ದೇಹ, ಮತ್ತೆ ಹೊಲ-ಗದ್ದೆಗಳ ಕೆಲಸಗಳತ್ತ ಮುಖಮಾಡುವ ಕಾಲ ಇದು. ಸೂರ್ಯನ ಪ್ರಖರ ಕಿರಣಗಳು ಮೈಗೆ ಸೋಂಕಿ ಹೊಸ ಹುರುಪು ಪಡೆವ ಸಮಯ.

ನಮ್ ಸಂಕ್ರಾಂತಿ ಸಕತ್, ಆಚರಣೆ ಸೂಪರ್, ನಿಮ್ಮೂರಿನಲ್ಲಿ ಹೇಗಿತ್ತು?ನಮ್ ಸಂಕ್ರಾಂತಿ ಸಕತ್, ಆಚರಣೆ ಸೂಪರ್, ನಿಮ್ಮೂರಿನಲ್ಲಿ ಹೇಗಿತ್ತು?

ಮಂಗಳಕಾರ್ಯಗಳಿಗೆ ಮುಹೂರ್ತ

ಮಂಗಳಕಾರ್ಯಗಳಿಗೆ ಮುಹೂರ್ತ

ಧನುರ್ಮಾಸದ ಸಮಯದಲ್ಲಿ ಹಿಂದು ಸಂಸ್ಕೃತಿಯಲ್ಲಿ ಯಾವ ಶುಭಕಾರ್ಯವನ್ನೂ ಮಾಡುವಂತಿಲ್ಲ. ಆದರೆ ಮಕರ ಮಾಸ ಆರಂಭವಾಗುತ್ತಿದ್ದಂತೆಯೇ ಮತ್ತೆ ಮದುವೆ, ಮುಂಜಿಗಳ ಆಚರಣೆ ಆರಂಭವಾಗುತ್ತದೆ. ಇದು ಮಂಗಳ ಕಾರ್ಯ ಆರಂಭಿಸಲು ಸೂಚನೆಯೂ ಹೌದು.

ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿಯ ಸಂಭ್ರಮ ! ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿಯ ಸಂಭ್ರಮ !

ಆಚರಣೆ ಹೇಗೆ?

ಆಚರಣೆ ಹೇಗೆ?

ಸಂಕ್ರಾಂತಿ ಹಬ್ಬ ಜನವರಿಯಲ್ಲಿ ನಡೆಯುವುದರಿಂದ ಈ ಸಮಯದಲ್ಲಿ ಚಳಿ ಹೆಚ್ಚಿರುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸುವ ಎಳ್ಳು ಮತ್ತು ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದಲೇ ಎಳ್ಳುಬೀರುವ ಶಾಸ್ತ್ರ ಮಾಡಲಾಗುತ್ತದೆ. ಇದರೊಟ್ಟಿಗೆ ಹುರಿಗಡಲೆ, ಕೊಬ್ಬರಿ, ಸಕ್ಕರೆ ಅಚ್ಚುಗಳನ್ನೂ ಸೇರಿಸಿ ತಿನ್ನುವ ರೂಢಿ ಇದೆ. ಸುಗ್ಗಿಯ ಸಂಕೇತವಾಗಿ ಕಬ್ಬನ್ನೂ ಹಂಚಲಾಗುತ್ತದೆ.

ಪವಿತ್ರ ನದಿಯಲ್ಲಿ ಪುಣ್ಯಸ್ನಾನ

ಪವಿತ್ರ ನದಿಯಲ್ಲಿ ಪುಣ್ಯಸ್ನಾನ

ಈ ಹಬ್ಬದಂದು ದೇಹ ಮತ್ತು ಮನಸ್ಸಿನ ಕಲ್ಮಶಗಳನ್ನು ಕಳೆದುಕೊಳ್ಳುವ ಪಣತೊಟ್ಟು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪ್ರಪರಂಪರೆಯೂ ಕೆಲವೆಡೆ ರೂಡಿಯಲ್ಲಿದೆ. ಈ ಸಮಯದಲ್ಲಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ.

ದಕ್ಷಿಣ ಭಾರತದಲ್ಲೇ ಹೆಚ್ಚು ಆಚರಣೆ

ದಕ್ಷಿಣ ಭಾರತದಲ್ಲೇ ಹೆಚ್ಚು ಆಚರಣೆ

ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಗಳಲ್ಲೂ ಈ ಹಬ್ಬ ಆಚರಿಸಲಾಗುತ್ತದೆ. ಪೊಂಗಲ್ ಎಂದೂ ಈ ಹಬ್ಬಕ್ಕೆ ಕರೆಯಲಾಗುತ್ತದೆ. ಇದೇ ದಿನ ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಯಂತೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಗಾಳಿಪಟ ಹಾರಿಬಿಡುವ ಮೂಲಕ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಎಂಬ ಹೆಸರಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.

English summary
Makar Sankranti refers to a specific solar day in the Hindu calendar and a Hindu festival in reference to deity Sun. The festival is observed on January 14th or 15th every year. Here are some facts about why and how to celebrate Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X