ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Makar Sankranti 2022: ಸಂಕ್ರಾಂತಿ ಹಬ್ಬ ಯಾವಾಗ ಜ.14 ಅಥವಾ 15; ಗೊಂದಲಗಳಿಗೆ ಇಲ್ಲಿದೆ ಉತ್ತರ

|
Google Oneindia Kannada News

ನಮ್ಮ ದೇಶದಲ್ಲಿ ಸೂರ್ಯದೇವನ ಆರಾಧನೆಗೆ ತುಂಬಾ ಮಹತ್ವವಿದೆ. ಹೀಗಾಗಿ ಸೂರ್ಯದೇವನ ಆರಾಧನೆಗೆ ಸಂಬಂಧಿಸಿದ ಹಬ್ಬಗಳನ್ನು ಅತ್ಯಂತ ಶ್ರದ್ದೆ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಹಬ್ಬಗಳಲ್ಲಿ ಮಕರ ಸಂಕ್ರಾತಿ ಕೂಡ ಒಂದಾಗಿದೆ. ಆದರೆ ಈ ವರ್ಷ ಮಕರ ಸಂಕ್ರಾತಿ ಹಬ್ಬದ ದಿನಾಂಕ ಗೊಂದಲವನ್ನು ಸೃಷ್ಟಿ ಮಾಡಿದೆ. ಕೆಲವರು ಈ ವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ ಎಂದರೆ ಇನ್ನೂ ಕೆಲವರು ಜನವರಿ 15 ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಹಬ್ಬವನ್ನು ಯಾವ ದಿನದಂದು ಆಚರಿಸಬೇಕು ಎನ್ನುವ ಗೊಂದಲ ಮೂಡಿದೆ. ಈ ಗೊಂದಲಕ್ಕೆ ಪರಿಹಾರ ಇಲ್ಲಿದೆ.

29 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ, ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ29 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ, ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ

ಈ ದಿನದಿಂದ ಸೂರ್ಯದೇವನು ಉತ್ತರಾಯಣದತ್ತ ತನ್ನ ಸಂಚಾರವನ್ನು ಪ್ರಾರಂಭಿಸುತ್ತಾನೆ. ಈ ದಿನದಿಂದ ವಾತಾವರಣದಲ್ಲಿ ತಂಪು ಕಡಿಮೆಯಾಗಿ ಬಿಸಿಲು ಹೆಚ್ಚಾಗಲು ಪ್ರಾರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮಕರ ಸಂಕ್ರಾಂತಿಯಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯಿಂದ ಕರ್ಮಗಳ ಅಂತ್ಯವಾಗುವುದು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನದಿಂದ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.

ಈ ಚಳಿಗಾಲದ ಧಾನ್ಯ ಸಂಕ್ರಾಂತಿ ತನಕ ಅಡುಗೆ ಮನೆ ಸಂಗಾತಿ ಈ ಚಳಿಗಾಲದ ಧಾನ್ಯ ಸಂಕ್ರಾಂತಿ ತನಕ ಅಡುಗೆ ಮನೆ ಸಂಗಾತಿ

ಮಕರ ಸಂಕ್ರಾಂತಿ ದಿನದಿಂದ ಶುಭ ಕಾರ್ಯಗಳು

ಮಕರ ಸಂಕ್ರಾಂತಿ ದಿನದಿಂದ ಶುಭ ಕಾರ್ಯಗಳು

ಮಕರ ಸಂಕ್ರಾಂತಿಯ ಮಂಗಳಕರ ಹಬ್ಬವು ಸೂರ್ಯನು ತನ್ನ ಆಕಾಶ ಮಾರ್ಗದಲ್ಲಿ ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುತ್ತದೆ. ಈ ವರ್ಷ ಅದರ ದಿನಾಂಕ ಮತ್ತು ಆಚರಣೆ ಭಕ್ತರನ್ನು ಗೊಂದಲಕ್ಕೀಡು ಮಾಡಿದೆ. ಮಕರ ಸಂಕ್ರಾಂತಿಯನ್ನು ಜನವರಿ 14 ಆಚರಿಸಬೇಕೋ ಅಥವಾ ಜನವರಿ 15ರಂದು ಆಚರಿಸಬೇಕೋ ಎಂಬುದು ಭಕ್ತರಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ. ಅಲ್ಲದೆ, 29 ಸುದೀರ್ಘ ವರ್ಷಗಳ ನಂತರ ಶನಿ ಮತ್ತು ಸೂರ್ಯ ಗ್ರಹಗಳು ಮಕರ ರಾಶಿಯನ್ನು (ರಾಶಿಚಕ್ರ ಚಿಹ್ನೆ) ಪ್ರವೇಶಿಸುತ್ತವೆ. ಒಂದು ತಿಂಗಳ ಕಾಲ ಸೂರ್ಯ ಗ್ರಹವು ಅಲ್ಲಿಯೇ ಇರುತ್ತವೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ. ಜನವರಿ 14 ರಂದು, ಸೂರ್ಯ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಶನಿ-ಸೂರ್ಯ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತವೆ. 29 ವರ್ಷಗಳ ನಂತರ ಈ ಅಪರೂಪದ ಸಂಯೋಗ ಮಕರ ಸಂಕ್ರಾಂತಿಯಂದು ನಡೆಯಲಿದೆ.

ಮಕರ ಸಂಕ್ರಾಂತಿ ಆಚರಣೆ ದಿನ

ಮಕರ ಸಂಕ್ರಾಂತಿ ಆಚರಣೆ ದಿನ

ಜ್ಯೋತಿಷಿಗಳ ಪ್ರಕಾರ ಎರಡೂ ದಿನಗಳು ಆಚರಣೆಗೆ ಒಳ್ಳೆಯ ಸಮಯವಾಗಿದೆ. ದೃಗ್ ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿ ಆಚರಣೆಯು ಜನವರಿ 14 ರಂದು ನಡೆಯಲಿದೆ. ಆದಾಗ್ಯೂ ಕೆಲವು ಸ್ಥಳಗಳಲ್ಲಿ ಇದು ಜನವರಿ 15 ರಂದು ಮುಂದುವರೆಯುತ್ತದೆ. ಜ್ಯೋತಿಷಿಯ ಪ್ರಕಾರ ಜನವರಿ 14 ರ ಶುಕ್ರವಾರದಂದು ಸೂರ್ಯ ರಾತ್ರಿ 08:49 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಿರುವುದರಿಂದ ಮಕರ ಸಂಕ್ರಾಂತಿಯ ಪುಣ್ಯಕಾಲವು ಜನವರಿ 15 ರ ಶನಿವಾರ ಮಧ್ಯಾಹ್ನ 12:49 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಮಕರ ಸಂಕ್ರಾಂತಿ ಜನವರಿ 15 ರಂದು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಗೆ ನಾನಾ ಹೆಸರುಗಳು

ಮಕರ ಸಂಕ್ರಾಂತಿಗೆ ನಾನಾ ಹೆಸರುಗಳು

ಈ ದಿನ ಸೂರ್ಯ ದೇವ್ ಅಥವಾ ಸೂರ್ಯ ದೇವರನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಭಾರತದ ಕಡೆ ಇದನ್ನು ಮಕರ ಸಂಕ್ರಾಂತಿ ಅಥವಾ ಮಾಘಿ ಎಂದು ಕರೆದರೆ, ಆಂಧ್ರಪ್ರದೇಶದಲ್ಲಿ ಇದನ್ನು ಪೆದ್ದ ಪಂಡಗ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ ಮಾಗ್ ಬಿಹು, ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಕ್ರಾಂತಿ ಮತ್ತು ತಮಿಳುನಾಡಿನ ಪೊಂಗಲ್ (ತೈ ಪೊಂಗಲ್), ಗುಜರಾತ್‌ನಲ್ಲಿ ಉತ್ತರಾಯಣ ಎಂದು ಕರೆಯಲಾಗುತ್ತದೆ.

ಮಕರ ಸಂಕ್ರಾಂತಿಯ ಮಹತ್ವ

ಮಕರ ಸಂಕ್ರಾಂತಿಯ ಮಹತ್ವ

ಮಕರ ಸಂಕ್ರಾಂತಿಯಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಹಲವಾರು ಜಾತ್ರೆಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳು ಗಾಳಿಪಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ದೀಪೋತ್ಸವಗಳು ಮತ್ತು ರುಚಿಕರವಾದ ಆಹಾರ ಮಳಿಗೆಗಳು ಹಬ್ಬದಲ್ಲಿ ಪ್ರಾಬಲ್ಯ ಹೊಂದಿರುತ್ತವೆ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಸೂರ್ಯ ಸ್ಥಾನದ ಪರಿವರ್ತನೆಯಿಂದಾಗಿ, ಇದು ಒಂದು ದಿನದ ನಂತರ ಆಚರಿಸಲಾಗುತ್ತದೆ. ಇದರಿಂದ ಕೆಲವೊಮ್ಮೆ ಗೊಂದಲಕ್ಕೆ ಕಾರಣವಾಗುತ್ತದೆ.

Recommended Video

KL Rahul ನಾಯಕತ್ವದ ಏಕದಿನ ಸರಣಿಗೆ ಆಟಗಾರರೇ‌ ಇಲ್ಲ | Oneindia Kannada

English summary
When is Makar Sankranti January 14 or January 15: The festival of Makar Sankranti will be celebrated in India on January 15. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X