ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರ ಸಂಕ್ರಾಂತಿ 2022: ದಿನಾಂಕ, ಮಹತ್ವ, ಆಚರಣೆ

|
Google Oneindia Kannada News

ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ, ಆದರೆ ಓಮಿಕ್ರಾನ್ ಭಯದಿಂದಾಗಿ ಯಾರಲ್ಲೂ ಅಷ್ಟು ಉತ್ಸಾಹವಿಲ್ಲ. ಆದರೂ ಹಬ್ಬವೆಂದ ಮೇಲೆ ವಿಜೃಂಭಣೆ ಇಲ್ಲದಿದ್ದರೂ ಆಚರಣೆಯಂತೂ ಮಾಡಲೇಬೇಕಲ್ಲವೇ?, ಸಂಕ್ರಾಂತಿ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ, ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತವಾಗಿರುತ್ತದೆ.

ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಕೂಡ ಒಂದಾಗಿದೆ.

ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ.

Makar Sankranti 2022 Date, Puja Vidhi, History, Puja Samagri, Mantra and Significance in Kannada

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ.

ಮಕರ ಸಂಕ್ರಾಂತಿ ಮಹತ್ವ: ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.

ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದುಎಳ್ಳು. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ ಎಳ್ಳು ಬೀರುವುದು ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
ಭೋಗಿ: ಹೊಸ ಬಟ್ಟೆಗಳು
ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
ಮಾಟ್ಟು ಪೊಂಗಲ್: ಗೋಪೂಜೆ
ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
ಕಾಣುಮ್ ಪೊಂಗಲ್

ಸಂಕ್ರಾಂತಿಯ ಪುಣ್ಯಕಾಲ: ನಮ್ಮಲ್ಲಿ ಸೌರಮಾನ ಹಾಗೂ ಚಾಂದ್ರಮಾನ ಎಂದು ಪರಂಪರೆಯಿದೆ. ಸಂಕ್ರಾಂತಿ ಸೌರಮಾನದ ಪರ್ವ. ಮಕರ ಮಾಸದ ಪ್ರಾರಂಭದ ದಿನವೇ ಮಕರ ಸಂಕ್ರಾಂತಿಯ ಆಚರಣೆ. ಈ ಸಂಕ್ರಾಂತಿಯನ್ನು ಯಾವ ನಿರ್ದಿಷ್ಟ ಸಮಯದಲ್ಲಿ ಆಚರಿಸಬೇಕೆಂಬುದು ಕ್ಲಿಷ್ಟವಾದ ವಿಷಯ. ಏಕೆಂದರೆ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ನಿರ್ದಿಷ್ಟ ಕಾಲವು ಅತ್ಯಂತ ಸೂಕ್ಷ್ಮವಾಗಿದೆ. ಅದು 'ತ್ರುಟಿ' ಎಂಬ ಸೂಕ್ಷ್ಮಕಾಲಕ್ಕಿಂತಲೂ ಸಾವಿರದ ಒಂದು ಭಾಗದಷ್ಟು ಸೂಕ್ಷ್ಮವಾಗಿದೆ.

ಈ ಕಾಲ ಯೋಗಿಗಳಿಗೆ ತಿಳಿಯಬಹುದಾದ್ದಾಗಿದೆ. ಜನಸಾಮಾನ್ಯರಿಗೆ ಅದರ ಅರಿವು ಅಸಂಭವ. ಹಾಗಾಗಿ ಆ ಕಾಲಕ್ಕೆ ಹತ್ತಿರವಿರುವ ಹಿಂದು ಮುಂದಿನ ಕಾಲ ಪುಣ್ಯಕಾಲವೆಂದು ಪರಿಗಣಿತವಾಗುತ್ತದೆ. ಅಂದರೆ ಹಿಂದೆ ಹಾಗೂ ಮುಂದಿನ ಮೂವತ್ತು ನಾಡಿಗಳು ಪವಿತ್ರ. ಅತ್ಯಂತ ಪುಣ್ಯಕಾಲವೆಂದರೆ ಸಂಕ್ರಾಂತಿ ಬಿಂದುವಿಗೆ ಹತ್ತಿರವಾದ 12 ಘಳಿಗೆಗಳು ಎನ್ನಬಹುದು. ಈ ಕಾಲದಲ್ಲಿ ಸತ್ಕರ್ಮಗಳಿಗೆ ಅನಂತ ಪುಣ್ಯವಿದೆ.

ದಿನಾಂಕ ಮತ್ತು ಆಚರಣೆ: ಈ ಬಾರಿ ಮಕರ ಸಂಕ್ರಾಂತಿ ಜನವರಿ 14 ರಂದು ಆಚರಿಸಲಾಗುತ್ತದೆ. ಪುಣ್ಯತೀರ್ಥಗಳಲ್ಲಿ ಅಂದರೆ ನದಿಸಂಗಮ, ಸಮುದ್ರ ಮುಂತಾದವುಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಸಂಪ್ರದಾಯವಾಗಿದೆ. ಶರೀರದ ಕೊಳೆಯನ್ನು ನಿವಾರಿಸುವ ಜತೆಗೆ ಮಾನಸಿಕ ಕೊಳೆಯನ್ನು ನಾಶ ಮಾಡುವುದು ಈ ಸ್ನಾನದ ಉದ್ದೇಶ.

ಸಂಕಲ್ಪ ಪೂರ್ವಕವಾಗಿ ಅಂದರೆ ಸರ್ವರೋಗ ನಿವೃತ್ತಿಗಾಗಿ, ಎಲ್ಲ ಅಭೀಷ್ಟೆಯ ಸಿದ್ಧಿಗಾಗಿ ಸ್ನಾನವನ್ನು ಮಾಡಬೇಕು. ಇದು ಪರಮಾತ್ಮನ ಅಭಿಮುಖಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಪರಮಾತ್ಮನ ಧ್ಯಾನ ಮಾಡುವುದು ವಿಶೇಷ ಫಲದಾಯಕ. ಮಂತ್ರ-ಧ್ಯಾನಾದಿಗಳ ಉಪದೇಶ ದೀಕ್ಷೆಯನ್ನೂ ಈ ಕಾಲದಲ್ಲಿ ಪಡೆಯಬಹುದು. ಮಕರ ಸಂಕ್ರಾಂತಿ ಎಳ್ಳಿನ ಹಬ್ಬವೆಂದು ಪ್ರಸಿದ್ಧವಾಗಿದೆ.

ಸಂಕ್ರಾಂತಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ಭಕ್ಷ್ಯ ಭೋಜ್ಯಗಳನ್ನು ಪರಸ್ಪರ ಹಂಚುವ ಮೂಲಕ, ನಮ್ಮೆಲ್ಲರ ಸುಖ ದುಃಖಗಳನ್ನೂ ಪರಸ್ಪರ ಹಂಚಿಕೊಳ್ಳುವುದು ವಾಡಿಕೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಚರಿಸಲಾಗುವ ವಿಶಿಷ್ಟ ಉಲ್ಲಾಸದಾಯಕ ಹಬ್ಬ ಸಂಕ್ರಾಂತಿ.

ತಮಿಳುನಾಡಿನಲ್ಲಿ 'ಪೊಂಗಲ್' ಎಂದು ಆಚರಿಸುತ್ತಾರೆ. ನಮಗೆ ಪ್ರಿಯರಾದವರಿಗೆ ಶುಭಾಶಯ ಪತ್ರ ಕಳಿಸುವುದು, ಸಂಕ್ರಾಂತಿಯ ವಿಶಿಷ್ಟ ಕಜ್ಜಾಯವಾದ ಎಳ್ಳು ಬೆಲ್ಲದ ಮಿಶ್ರಣದ ತಿಂಡಿಯನ್ನು ಹಂಚುವುದಂತೂ ಎಲ್ಲೆಡೆ ಪ್ರಸಿದ್ಧ.

ಒಟ್ಟಿನಲ್ಲಿ ಮಕರ ಸಂಕ್ರಮಣದಂದು ಸೂರ್ಯ ನಾರಾಯಣನನ್ನು ಅರ್ಚಿಸುವುದರ ಮೂಲಕ ಆಯುಷ್ಯ, ಆರೋಗ್ಯ, ಸಂಪತ್ತನ್ನು ಪಡೆಯಬಹುದು ಎಂಬುದು ಸಂಪ್ರದಾಯ.

ಎಳ್ಳನ್ನು ಈ ಹಬ್ಬದಲ್ಲಿ ವಿಶೇಷವಾಗಿ ಬಳಸುತ್ತಾರೆ. ಎಳ್ಳಿನ ನೀರಿನಿಂದ ಸ್ನಾನ ಮಾಡುತ್ತಾರೆ. ಎಳ್ಳು ನೀರಿನಿಂದ ತರ್ಪಣ ಕೊಡುತ್ತಾರೆ. ಎಳ್ಳಿನ ಗೋವನ್ನು ದಾನ ಮಾಡುವುದೂ ಶ್ರೇಯಸ್ಕರ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚಬೇಕು. ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆಂಬ ನಂಬಿಕೆಯಿದೆ.

ವಿಶೇಷವಾಗಿ ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಇವುಗಳಿಂದ ಆಯುಷ್ಯ ಆರೋಗ್ಯವೃದ್ಧಿಯಾಗುವುದು. ಹಲವರು ಅಂದು 'ಆದಿತ್ಯ ಹೃದಯ' ಸ್ತೋತ್ರದ ಪಾರಾಯಣ ಮಾಡುತ್ತಾರೆ.

English summary
The time of harvest festivals is here. People across all the states in India have started preparations for festivities to mark their respect for the earth's bounty and celebrate the end of winters. Makar Sankranti 2022 Date, Puja Vidhi, History, Puja Samagri, Mantra and Significance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X