ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Makar Sankranti 2022: ಈ ಜನಪ್ರಿಯ ಪಾಕವಿಧಾನಗಳೊಂದಿಗೆ ಹಬ್ಬವನ್ನು ಆಚರಿಸಿ

|
Google Oneindia Kannada News

2022 ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ವರ್ಷವಿಡಿ ಸುಖ, ಶಾಂತಿ, ಸಂತೋಷ ನೆಲೆಸಲೆಂದು ಸೂರ್ಯದೇವರನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ಬಾರಿ ಸೂರ್ಯ ಹಾಗೂ ಶನಿ ಗ್ರಹಗಳು ಮಕರ ರಾಶಿಯಲ್ಲಿ ಸಂಯೋಗವಾಗುವ ವಿಶೇಷ ದಿನವಾಗಿದೆ. ಕಳೆದ 29 ವರ್ಷಗಳ ಹಿಂದೆ ಈ ಸಂಯೋಗ ನಡೆದಿತ್ತು ಎನ್ನಲಾಗುತ್ತದೆ. ಸೂರ್ಯ ಮತ್ತು ಶನಿ ಗ್ರಹಗಳು ಮಕರರಾಶಿಯಲ್ಲಿ ಒಂದು ತಿಂಗಳುಗಳ ಕಾಲ ಇರಲಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಂದಹಾಗೆ ಇದನ್ನು ಸುಗ್ಗಿಯ ಹಬ್ಬ ಎಂತಲೂ ಕರೆಯಲಾಗುತ್ತದೆ.

ದೇಶಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಎಂದರೆ ಬೆಳೆ ಕೈಗೆ ಬರುವ ಸಮಯವಾಗಿದೆ. ಭಾರತದ ಆದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಲೋಹ್ರಿ ಎಂದು ಕರೆದರೆ ತಮಿಳುನಾಡಿನಲ್ಲಿ ಪೊಂಗಲ್ ಎಂದೂ ಕರ್ನಾಟಕ ಸಹಿತ ಇತರ ಕೆಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಬೆಳೆ ಎಂದರೆ ಸಮೃದ್ಧಿ. ಭಾರತದ ಜೀವಾಳ ಕೃಷಿ. ಇದು ಥಟ್ಟನೇ ಫಲ ಕೊಡುವ ಉದ್ಯೋಗವಲ್ಲ, ಬದಲಿಗೆ ಒಂದು ಬಗೆಯ ತಪಸ್ಸು. ಕೆಲವಾರು ತಿಂಗಳ ಸತತ ಶ್ರಮ, ಕಾಡುಪ್ರಾಣಿಗಳಿಂದ ಪಕ್ಷಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಂಡು ಬೆಳೆದ ಫಲ ಮನೆಗೆ ಬಂದಾಗ ಎದುರಾಗುವ ಸಂತೋಷವನ್ನು ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಈ ಮಂಗಳಕರ ಸಮಯದಲ್ಲಿ ಮನೆಯಲ್ಲಿ ಬಗೆ ಬಗೆಯ ಸಿಹಿ ಖಾದ್ಯಗಳನ್ನು ಮಾಡುವ ಮೂಲಕ ಸಂಭ್ರಮಿಸಲಾಗುತ್ತದೆ. ಹಾಗಾದರೆ ಯಾವೆಲ್ಲಾ ಖಾದ್ಯಗಳನ್ನು ಮಕರ ಸಂಕ್ರಾಂತಿಯಂದು ತಯಾರಿಸಲಾಗುತ್ತದೆ ಎನ್ನುವ ಬಗ್ಗೆ ನೋಡೋಣ.

ಖಿಚಡಿ

ಸಂಪ್ರದಾಯದ ಭಾಗವಾಗಿ ಖಿಚಡಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಾಡುವ ಪ್ರಮುಖ ಭಕ್ಷ್ಯಗಳಲ್ಲಿ ಒಂದಾಗಿದೆ. ಇದನ್ನು ಭುನಿ ದಾಲ್ ಖಿಚಡಿ ಎಂದೂ ಕರೆಯಲಾಗುತ್ತದೆ. ಇದನ್ನು ಅಕ್ಕಿಯೊಂದಿಗೆ ನಾನಾ ಬೇಳೆಕಾಳುಗಳನ್ನು ಬಳಸಿ ತಯಾರಿಸಲಾಗುತ್ತದೆ. ಬೇಳೆಕಾಳುಗಳನ್ನು ಅಕ್ಕಿಯೊಂದಿಗೆ ಕುದಿಸಿ ಇದಕ್ಕೆ ಜೀರಿಗೆ ಸಾಸಿವೆಯಿಂದ ಒಗ್ಗರಣೆ ಕೊಟ್ಟು ತಯಾರಿಸಲಾಗುತ್ತದೆ. ರುಚಿಗೆ ತಕ್ಕಂತೆ ತುಪ್ಪ, ಉಪ್ಪಿನಕಾಯಿ, ಮೊಸರು ಮತ್ತು ಪಾಪಡ್‌ನೊಂದಿಗೆ ಬಡಿಸಲಾಗುತ್ತದೆ.

 Makar Sankranti 2022: Celebrate The Festival With These Popular Recipes

ಟಿಲ್ ಚಿಕ್ಕಿ ಅಥವಾ ಲಡ್ಡೂಸ್

ಇದು ಮಕರ ಸಂಕ್ರಾಂತಿಗೆ ಬಹಳ ಮುಖ್ಯವಾದ ಖಾದ್ಯವಾಗಿದೆ. ಇದನ್ನು ಮನೆಗೆ ಭೇಟಿ ನೀಡುವವರಿಗೆ ಪ್ರಸಾದವಾಗಿ ನೀಡಲಾಗುತ್ತದೆ ಮತ್ತು ಸಂಕ್ರಾಂತಿಯಂದು ಪ್ರತಿಯೊಬ್ಬರ ಮನಸ್ಸಿಗೆ ಬರುವ ಮೊದಲ ಖಾದ್ಯ ಅಂದರೆ ಅದು ಲಡ್ಡೂ ಮತ್ತು ಚಿಕ್ಕಿಯಾಗಿದೆ. ಇದನ್ನು ಬೆಲ್ಲ ಮತ್ತು ಎಳ್ಳುಗಳಿಂದ ತಯಾರಿಸುವುದರಿಂದ ಚಿಕ್ಕವರಿಂದ ದೊಡ್ಡವರವರೆಗೆ ಇಷ್ಟವಾಗುತ್ತದೆ.

 Makar Sankranti 2022: Celebrate The Festival With These Popular Recipes

ದಹಿ ಚೂಡಾ

ಇದು ಮಕರ ಸಂಕ್ರಾಂತಿಯ ವಿಶೇಷ ಖಾದ್ಯವಾಗಿದ್ದು, ಬಿಹಾರದಲ್ಲಿ ಹೆಚ್ಚು ತಯಾರಿಸಲಾಗುತ್ತದೆ. ಶ್ರೀಮಂತ ವ್ಯಕ್ತಿಯಿಂದ ಹಿಡಿದು ಸಾಮಾನ್ಯ ಮನುಷ್ಯನವರೆಗೆ ಪ್ರತಿಯೊಬ್ಬರೂ ಇದನ್ನು ಪ್ರೀತಿಸುತ್ತಾರೆ. ಇದು ಬಿಹಾರದ ವಿಶೇಷತೆ ಆಹಾರವಾಗಿದ್ದು ಇದನ್ನು ಅವಲಕ್ಕಿಗೆ ಮೊಸರನ್ನು ಬೆರೆಸಿ ಸ್ವಲ್ಪ ಜೇನುತುಪ್ಪದೊಂದಿಗೆ ಸವಿಯಲಾಗುತ್ತದೆ. ಈ ಸಂದರ್ಭದಲ್ಲಿ ಇದು ಅತ್ಯಂತ ಪರಿಶುದ್ಧವಾದ ಆಹಾರ ಎಂದು ಪರಿಗಣಿಸಲಾಗಿದೆ.

 Makar Sankranti 2022: Celebrate The Festival With These Popular Recipes

ಪಾಪಡ್ ಖಿಚಡಿ

ಇದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮಾಡುವ ಮತ್ತೊಂದು ರೀತಿಯ ಖಿಚಡಿಯಾಗಿದ್ದು, ಇದನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಈ ವಿಶೇಷ ರೀತಿಯ ಖಿಚಡಿಯಲ್ಲಿ, ಪಾಪಡ್ ಅನ್ನು ಹುರಿದ ನಂತರ ಆಹಾರ ಪದಾರ್ಥಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ.

 Makar Sankranti 2022: Celebrate The Festival With These Popular Recipes

ಗುರ್ ಕಿ ಗಜಕ್(ಎಲ್ಲಾ ರೀತಿಯ ಸಿಹಿ ಖಾದ್ಯ)

ಊಟವನ್ನು ಮಾಡಿದ ನಂತರ, ಅತಿಥಿಗಳು ಮತ್ತು ಕುಟುಂಬದ ಸದಸ್ಯರಿಗೆ ಗುರ್ ಕಿ ಗಜಕ್ ಅನ್ನು ಬಡಿಸಲಾಗುತ್ತದೆ, ಇದು ಹಬ್ಬದ ಸಿಹಿ ಆಚರಣೆಗಳಲ್ಲಿ ಒಂದಾಗಿದೆ. ಇದು ಎಲ್ಲಾ ರೀತಿಯ ಸಿಹಿ ಖಾದ್ಯಗಳನ್ನು ಒಳಗೊಂಡಿರುತ್ತದೆ.

English summary
Makar Sankranti Recipes in Kannada: We have curated a list of recipes that would surely appeal to your taste buds this Makar Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X