ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲಿ ಸುಕಾರತಿ, ಒಡಿಸ್ಸಾದಲಿ ಮಕರ‍್ಮೇಳ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Makara Sankranti celebration in India
ತಮಿಳುನಾಡಿನಲಿ ಮೂರು ದಿನದ ಹಬ್ಬ. ಮಾಟ್ಟು ಪೊಂಗಲ್ ಹಾಲು-ಹೈನುಗಳನು ನೀಡುವ ಗೋಪೂಜೆ, ಸಂಕ್ರಾಂತಿಯ ಮಾರನೆಯ ದಿನ ಕನು. ಸಂಕ್ರಾಂತಿ ಹಬ್ಬದಂದು ಮಾಡಿದ ಅಡುಗೆಯ ಉಳಿದ ಭಾಗವನ್ನು (ತಂಗಳು) ಕೆಂಪು, ಹಳದಿ ಮುಂತಾದ ಬೇರೆ ಬೇರೆ ಬಣ್ಣದ ಅನ್ನದ ಜೊತೆ, ಹಣ್ಣುಗಳು, ಕಬ್ಬಿನ ಚೂರು ಸೇರಿಸಿ, ಮನೆಯ ಹೊರಗೆ ಎಲೆಗಳ ಮೇಲೆ ಇರಿಸಿ ಭೂತಗಳಿಗೆ ಸಮರ್ಪಿಸುವರು. ಬೆಳಗಿನ ಕಾಲದಲ್ಲಿ ಇದನ್ನು ಸಮರ್ಪಿಸಿ ನಂತರ ಸ್ನಾನ ಮಾಡುವರು. ಒಡಹುಟ್ಟಿದವರು ತಂಪಾಗಿರಲಿ ಎಂಬುದು ಈ ಕನು ಇಡುವ ಸಂಕೇತ. ಅರಿಶಿನ, ಸುಣ್ಣ, ಹಾಗೂ ಅಕ್ಷತೆ ಕಾಳಿನಿಂದ ಅಣ್ಣ ತಮ್ಮಂದಿರಿಗೆ ಆರತಿಯನ್ನು ಮಾಡಿ ಮನೆಯ ಮುಂಬಾಗಿಲಲ್ಲಿ ಇಟ್ಟಿರುವ ರಂಗೋಲಿಯ ಮೇಲೆ ಚೆಲ್ಲುವುದು ವಾಡಿಕೆ.

ಕೇರಳದ ಮಕರ ವಿಳಕ್ಕು ವಿಷೇಷತೆಯ ಎಲ್ಲರಿಗೂ ಗೊತ್ತಿರುವ ವಿಷಯ. ಆಂಧ್ರದಲಿ ಪೆದ್ದ ಪಂಡುಗ ಸಂಕ್ರಾಂತಿ, ಅಸ್ಸಾಂ‍ನಲ್ಲಿ ಬೋಗಾಲಿ ಬಿಹು, ಪಂಜಾಬ್, ಜಮ್ಮು ಹಿಮಾಚಲ ಪ್ರದೇಶಗಳಲಿ ಲೋಹ್ರಿ, ಮಧ್ಯಪ್ರದೇಶದಲಿ ಸುಕಾರತಿ, ಒಡಿಸ್ಸಾದಲಿ ಮಕರ‍್ಮೇಳ ಎಂದು ಕರೆಯುವ ಸಂಕ್ರಾಂತಿ ಒಂದು ರಾಷ್ಟ್ರೀಯ ಹಬ್ಬ.

ಸಂಕ್ರಾಂತಿಯ ಪುರುಷ : ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿಗಳು, ಮೂರು ಕಣ್ಣುಗಳು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಕೆಂಪು ಹಲ್ಲು, ಉದ್ದವಾದ ಮೂಗು, ಎಂಟು ತೋಳುಗಳು, ಎರಡು ಕಾಲುಗಳು, ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪ ಇರುವುದು. ಅದು ಬಂದಿರುವ ವಾರದ ಫಲ, ಪಕ್ಷದ ಫಲ, ತಿಥಿಯ ಫಲ, ನಕ್ಷತ್ರದ ಫಲ, ಯೋಗಕರಣಗಳ ಫಲ, ಅದರ ದೃಷ್ಟಿ ಮತ್ತು ಪ್ರಯಾಣದ ದಿಕ್ಕು, ಕಾಲ, ಅದರ ಸ್ನಾನ ತೀರ್ಥದ ಫಲ, ವಸ್ತ್ರಲೇಪನ, ಧರಿಸಿರುವ ಹೂ, ಅಲಂಕಾರ, ಆಹಾರ, ಏರಿರುವ ವಾಹನ, ಹೊಂದಿರುವ ಆಯುಧಗಳು, ಇತ್ಯಾದಿಗಳ ಫಲಗಳೇನೆಂಬುದನ್ನು ರೈತಾಪಿಗಳು ಜ್ಯೋತಿಷಿಗಳಿಂದ ಓದಿಸಿ, ತಿಳಿಯುವ ಪದ್ದತಿಯು ಅನೇಕೆಡೆಗಳಲ್ಲಿ ಉಂಟು.

ನಾವಿಂದು ದೂರವನ್ನು ಸನಿಹವಾಗಿಸಿಕೊಂಡಿದ್ದೇವೆ. ಜಾಗೃತರಾಗುತ್ತಿದ್ದೇವೆ, ಬಹುತೇಕ ವಿಷಯಗಳಲ್ಲಿ ಬಹಳ ಮುಂದುವರೆದಿದ್ದೇವೆ, ಆದರೆ ನಮ್ಮ ಸಂಬಂಧಗಳ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ಮಾತ್ರ ಹಿಂದೆ ಬೀಳುತ್ತಿದ್ದೇವೆ. ಎಲ್ಲದರಲ್ಲೂ ಮುನ್ನುಗ್ಗಬೇಕು, ಸಿದ್ಧಹಸ್ತರು ಎನಿಸಿಕೊಳ್ಳಬೇಕೆಂಬ ಭರದಲ್ಲಿ ಸಂಬಂಧಗಳ ನಡುವಿನ ಆಪ್ತತೆಯನು ಉಳಿಸಿಕೊಳ್ಳುವುದನು ಮರೆಯುತ್ತಿದ್ದೇವೆ. ಬನ್ನಿ, ಹೊಸ ಜೀವನೋತ್ಸಾಹದಿಂದ ಎಳ್ಳು-ಬೆಲ್ಲದ ಸ್ನೇಹ ಸೌಹಾರ್ದತೆಗಳನ್ನು ಹಂಚಿ ಬಾಂಧವ್ಯಗಳ ಆಪ್ತತೆಯನು ಉಳಿಸೋಣ, ಬೆಳೆಸೋಣ. ಅದುವೆ ಕನ್ನಡದ ಸಮಸ್ತ ಓದುಗರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

English summary
Makara Sankranti, the festival of happiness, prosperity and togetherness, is celebrated all over Karnataka and many parts of India in the month of January. It is harvesting time for the farmers. Everyone worships Sun, earth, bullocks, crops when the Sun god changes his trajectory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X