ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಳ್ಳಿನಲ್ಲೇನಿದೆ ?ತಿನ್ನುವುದರಿಂದ ಏನು ಲಾಭ?

|
Google Oneindia Kannada News

Sesame plant
ಆಯುರ್ವೇದದ ಪ್ರಕಾರ ಎಳ್ಳು ಉಷ್ಣಗುಣವುಳ್ಳದ್ದು, ವಾತ, ವೃಣ ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ಎಲ್ಲಕ್ಕಿಂತ ಮಿಗಿಲಾಗಿ ರಕ್ತವೃದ್ಧಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಪ್ರಥಮವಾಗಿ ರಜಸ್ವಲೆಯಾದಾಗ ಎಳ್ಳಿನ ಚಿಗುಳಿ ಕೊಡಲಾಗುತ್ತದೆ. ಖಗೋಲ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯು ಪುಷ್ಯ ಮಾಸದಲ್ಲಿ ಬರುತ್ತದೆ. ಪೂರ್ಣಿಮಾ ದಿನ ಚಂದ್ರನು ಪುಷ್ಯ ನಕ್ಷತ್ರದಲ್ಲಿರುತ್ತಾನೆ. ಪುಷ್ಯ ಮಾಸವು ಶನಿಯ ಮಾಸ. ಈ ಮಾಸದಲ್ಲಿ ಶನಿಯ ಪ್ರಭಾವವಿರುತ್ತದೆ.

ಜ್ಯೋತಿಷ ಶಾಸ್ತ್ರದ ಪ್ರಕಾರ ಶನಿ ಶರೀರದಲ್ಲಿರುವ ಜೀವನಾಡಿಗೆ ಕಾರಕ. ಈ ಜೀವನಾಡಿಯ ಒಂದು ಶಾಖೆಯು ಹೃದಯ ಬಡಿತ ಮತ್ತು ರಕ್ತಚಲನೆಗಳನ್ನು ನಿಯಂತ್ರಿಸುತ್ತದೆ. ವೈದ್ಯ ಶಾಸ್ತ್ರದ ಪ್ರಕಾರ ಧನುರ್ಮಾಸದ ಚಳಿ ಮುಗಿಯುವ ವೇಳೆಗೆ ಶರೀರದ ಕೊಬ್ಬಿನ ಅಂಶವು ಕಮ್ಮಿಯಾಗಿರುವುದರಿಂದ ಮಕರ ಮಾಸ ಶುರುವಾಗುವಾಗಲೇ ಈ ಕೊಬ್ಬಿನ ಕೊರತೆಯನ್ನು ಸರಿದೂಗಿಸಬೇಕು. ಇದರಿಂದ ಸೂರ್ಯನ ಪ್ರಭಾವವನ್ನು ಮುಂದೆ ಎದುರಿಸಲು ಶರೀರದಲ್ಲಿ ಮುಖ್ಯವಾದ ಜೀವನಾಡಿಯು ಸುಗಮವಾಗಿ ಕೆಲಸ ಮಾಡುವುದರ ಮೂಲಕ ಹೃದಯದ ಕ್ರಿಯೆಯೂ
ಸರಿಯಾಗಿರುವಂತೆ ಮಾಡುವ ಎಳ್ಳು ಬೆಲ್ಲವನ್ನು ಸೇವನೆ ಮಾಡುವಂತೆ ನಿಯಮ ಮಾಡಿದ್ದಾರೆ.

ಪುಷ್ಯ ನಕ್ಷತ್ರವು ಶನಿಯ ನಕ್ಷತ್ರ. ಶನಿಗೆ ಯಮ ಅಧಿದೇವತೆ. ಯಮ ಎಂದರೆ ಸಂಯಮ ಎಂದರ್ಥ. ಇದು ಜೀವನಾಡಿಯ ಮೂಲಕ ಮಾತ್ರ ಹತೋಟಿ ಸಾಧ್ಯ. ಜೀವನಾಡಿಯ ಈ ಕೆಲಸಕ್ಕೆ ಕೊಬ್ಬಿನ ಅಂಶ ಕಮ್ಮಿಯಾದರೆ ನಿಶ್ಯಕ್ತಿ, ಅನಾರೋಗ್ಯ ಇತ್ಯಾದಿಗಳು ಉಂಟಾಗುತ್ತವೆ. ಇದನ್ನು ನಿವಾರಿಸುವುದೇ ಎಳ್ಳು ಬೆಲ್ಲದ ಸೇವನೆ ಉದ್ದೇಶ. ಗರುಡ ಪುರಾಣದಲ್ಲಿ ನಾಭಿಸ್ಥಾನವು ಶನಿ ಸ್ಥಾನವೆಂದು ಹೇಳಲ್ಪಟ್ಟಿದೆ. ನಾಭಿ ಕಮಲದಿಂದ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟಿದನೆಂದು ಪುರಾಣ ಸಾರಿದೆ. ಯಾವಾಗ ಶರೀರದ ಈ ಪ್ರದೇಶವನ್ನು ಶನಿ ಪ್ರದೇಶವೆಂದು ಹೇಳಿದರೋ ಆಗ ಈ ಪ್ರದೇಶಕ್ಕೆಲ್ಲ ಮಹತ್ವಕ್ಕೆ ಶನಿಕಾರಕನೆಂದಾಯಿತು. ಈ ತಿಂಗಳಿನಲ್ಲಿ ಎಳ್ಳು ತಿಂದರೆ ಶನಿಯ ಉಪದ್ರವ ಶಮನವಾಗುತ್ತದೆಂಬ ತಾತ್ಪರ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X