ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ಹುಗ್ಗಿಯೊಡನೆ ಬೆಲ್ಲ ಹುಣಿಸೆ ಗೊಜ್ಜು

By * ಆದಿತ್ಯ ನಾಡಿಗ್, ನೀಚಡಿ, ಸಾಗರ
|
Google Oneindia Kannada News

Aditya Nadig, Sagar
ಅನೇಕತೆಯಲ್ಲಿಯೂ ಏಕತೆ ಅನ್ನುವಂತೆ ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿಯೂ ಒಂದೊಂದು ಬಗೆಯ ಸಂಸ್ಕೃತಿ, ವಿಭಿನ್ನ ಅಭಿರುಚಿ. ಹಾಗೆಯೇ ತಿಂಡಿ ತಿನಿಸು ಕೂಡ ಒಂದೇ ಬಗೆಯದಾದರೂ ಕರೆಯುವ ನಾಮಾವಳಿಗಳು ಹಲವು, ಮಾಡುವ ರೀತಿಗಳು ವಿಭಿನ್ನ. ಸಂಕ್ರಾಂತಿಯಂದು ಹುಗ್ಗಿಯೊಡನೆ ಬೆರೆಸಿ ತಿನ್ನಲು ಮಾಡಿ ನೋಡಿ ಬೆಲ್ಲ ಹುಣಿಸೆ ಗೊಜ್ಜು ಅರ್ಥಾತ್ ಗೊಡ್ಡು ಸಾರು.

ಸಂಕ್ರಾಂತಿ ಹಬ್ಬಕ್ಕೆ ತಯಾರಿಸುವ ತಿನಿಸುಗಳಿಗೆ ಸಂಬಂಧಿಸಿದಂತೆ ಪ್ರಕಟವಾದ ಲೇಖನದ ಕೆಳಗಡೆ ಹುಗ್ಗಿಯೊಡನೆ ಸೇರಿಸಿಕೊಂಡು ಮೆಲ್ಲಲು ಗೊಡ್ಡಸಾರನ್ನು ಉತ್ತರ ಕರ್ನಾಟಕದ ಕಡೆ ತಯಾರಿಸುತ್ತಾರೆಂದು ಟಿಪ್ಪಣಿ ಕೊಡಲಾಗಿದೆ. ಹಾಗೆಯೇ, ಅದನ್ನು ಮಾಡುವುದು ಹೇಗೆಂದು ಕೋರಲಾಗಿತ್ತು. ಇಲ್ಲಿದೆ ನೋಡಿ ಅದನ್ನು ಮಾಡುವ ರೀತಿ. ಆದರೆ, ನಮ್ಮ ಕಡೆ ಅದಕ್ಕೆ ಗೊಡ್ಡು ಸಾರು ಅಂತ ಹೇಳಲ್ಲ ಆದ್ರೆ ಅದಕ್ಕೆ ಬೆಲ್ಲ ಹುಣಿಸೆಹಣ್ಣಿನ ಗೊಜ್ಜು ಅಂತ ಹೇಳ್ತಾರೆ.

ಬೇಕಾಗುವ ಸಾಮಗ್ರಿಗಳು:

ಬೆಲ್ಲದ ಪುಡಿ 1/2 ಬಟ್ಟಲು
ಹುಣಿಸೆ ಹಣ್ಣು - ನಿಂಬೆ ಗಾತ್ರದ್ದು
ಸಾರಿನ ಪುಡಿ- 2 ಚಮಚ
ತುಪ್ಪ- 1 ಚಮಚ
ಸಾಸಿವೆ- 1/2 ಚಮಚ
ಜೀರಿಗೆ - 1/2 ಚಮಚ

ಮಾಡುವ ವಿಧಾನ :

ಮೊದಲು ಹುಣಿಸೆಹಣ್ಣನ್ನು 3 ಬಟ್ಟಲು ನೀರಿನಲ್ಲಿ ನೆನೆಸಿ, ಚೆನ್ನಾಗಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿ ಕಲೆಸಿಕೊಳ್ಳಿ. ಒಂದು ಪಾತ್ರೆಯಲ್ಲಿ 1 ಚಮಚ ತುಪ್ಪ ಹಾಕಿ ಕಾಯಿಸಿಕೊಳ್ಳಿ. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಸಾಸಿವೆ ಜೀರಿಗೆ ಸಿಡಿಯುತ್ತಿರುವಾಗ ಅದಕ್ಕೆ ಮೊದಲು ಮಾಡಿಟ್ಟ ಬೆಲ್ಲ ಹುಣಿಸೆ ಮಿಷ್ರಣವನ್ನು ಸೇರಿಸಿ 5 ನಿಮಿಷ ಕುದಿಸಿ. ಇದು ಸ್ವಲ್ಪ ಮಂದವಾಗಿ ಇದ್ದರೆ ಹುಗ್ಗಿಯ ಜೊತೆ ಹಚ್ಚಿಕೊಂಡು ತಿನ್ನಲು ಚೆನ್ನಾಗಿರುತ್ತದೆ.

ಓದಲು ಮರೆಯದಿರಿ

ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಹುಗ್ಗಿ</a><br><a href=ಉಳುವ ಯೋಗಿಯ ನೋಡಲ್ಲಿ!" title="ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಹುಗ್ಗಿ
ಉಳುವ ಯೋಗಿಯ ನೋಡಲ್ಲಿ!" />ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಹುಗ್ಗಿ
ಉಳುವ ಯೋಗಿಯ ನೋಡಲ್ಲಿ!

English summary
Bella Hunise Gojju or Jaggery Tamerind Gojju is prepared on Sankranti to eat with Huggi. Recipe by Aditya Nadig, Nichadi, Sagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X