ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಹುಗ್ಗಿ

|
Google Oneindia Kannada News

Sweet Huggi, ellu, sakkare acchu for Sankranti
ಸಂಕ್ರಾಂತಿ ಎಳ್ಳು ಬೆಲ್ಲ

ಬೇಕಾಗುವ ಸಾಮಗ್ರಿ : ಒಂದು ಬಟ್ಟಲು ಎಳ್ಳು, ಒಂದು ಹಿಡಿ ಹುರಿಗಡಲೆ, ಮುಕ್ಕಾಲು ಬಟ್ಟಲು ಶೇಂಗಾ ಬೀಜ, ಅರ್ಧ ಬಟ್ಟಲು ಬೆಲ್ಲದ ಚೂರು, ಕಾಲು ಬಟ್ಟಲು ಕೊಬ್ಬರಿ ಚೂರು ಹಾಗೂ ಒಂದು ಹಿಡಿ ಕುಸುರೆಳ್ಳು.

ಮಾಡುವ ವಿಧಾನ :
ಎಳ್ಳನ್ನು ಕೆಂಪಾಗದಂತೆ ಒಂದೇ ಹದಕ್ಕೆ ಹುರಿಯಿರಿ. ಶೇಂಗಾ ಬೀಜಗಳನ್ನು ಕಪ್ಪಾಗದಂತೆ ಹುರಿದು, ಆರಿದ ನಂತರ ಸಿಪ್ಪೆ ತೆಗೆದು ಹೋಳು ಮಾಡಿ. ಕೊಬ್ಬರಿ ಮೇಲಿನ ಕಪ್ಪು ಸಿಪ್ಪೆ ತೆಗೆದು ಸೀಳು ಮಾಡಿ ಗೋಧಿ ಗಾತ್ರದ ತುಂಡು ಮಾಡಿ. ಬೆಲ್ಲವನ್ನು ಹೆಚ್ಚಿ ಚಿಕ್ಕ ಚಿಕ್ಕ ಚೂರು ಮಾಡಿ ಕುಸುರೆಳ್ಳು ಹಾಗೂ ಇತರೆ ಎಲ್ಲ ಸಾಮಗ್ರಿಗಳನ್ನು ಬೆರೆಸಿ. ಎಳ್ಳು ಬೆಲ್ಲ ಮಾಡುವಾಗ ಮತ್ತು ನೀಡುವಾಗ ಒಳ್ಳೆಯ ಮಾತಾಡಬೇಕಾದುದು ಕಡ್ಡಾಯ!

ಆರ್‌. ಸವಿತಾ, ದಾವಣಗೆರೆ

***

ಬಣ್ಣ ಬಣ್ಣದ ಸಕ್ಕರೆ ಅಚ್ಚು

ಬೇಕಾಗುವ ಸಾಮಾನು : ಅರ್ಧ ಕೆ.ಜಿ. ಸಕ್ಕರೆ, ಕಾಲು ಲೀಟರ್‌ ಹಾಲು, ಒಂದು ನಿಂಬೆಹಣ್ಣು, ಕೇಸರಿ, ಹಳದಿ ಹಾಗೂ ಕೆಂಪು ಬಣ್ಣ, ಅಚ್ಚು ಮಣೆ, ಎಣ್ಣೆ.

ಮಾಡುವ ವಿಧಾನ :
ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಸೇರಿಸಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸಕ್ಕರೆ ಪಾಕ ಬಂದಾಗ ಹಾಲು ಸೇರಿಸಿ ಕಲಕಿ. ನಿಂಬೆರಸ, ಬಣ್ಣ ಸೇರಿಸಿ ಬಟ್ಟೆಯಲ್ಲಿ ಸೋಸಿ ಸಕ್ಕರೆ ಪಾಕಕ್ಕೆ ಹಾಕಿ ಕುದಿಸಿ. ಸಕ್ಕರೆ ಪಾಕ ಹದಕ್ಕೆ ಬಂದ ಮೇಲೆ ಅಚ್ಚುಮಣೆಗೆ ಸುರಿಯಿರಿ. ಅಚ್ಚುಗಳಿಗೆ ಮೊದಲೇ ಎಣ್ಣೆ ಸವರಿಟ್ಟುಕೊಳ್ಳಿ. ಸ್ವಲ್ಪ ಆರಿದ ನಂತರ ತಟ್ಟೆಯಲ್ಲಿ ಜೋಡಿಸಿ. ಹೀಗೆ ಇನ್ನೊಂದು ಬಣ್ಣ ಸೇರಿಸಿ ಅಚ್ಚುಗಳನ್ನು ಮಾಡಬಹುದು. ತೇರು, ಗಣಪ, ಲಕ್ಷ್ಮಿ, ತೆಂಗಿನಕಾಯಿ, ಶಿವಲಿಂಗ, ಆಂಜಲೇಯ, ಹಡಗು, ಮನೆ ಮುಂತಾದ ಆಕೃತಿಗಳಲ್ಲಿ ಹೊರಹೊಮ್ಮುವ ಸಕ್ಕರೆ ಅಚ್ಚು.

ಸಿಹಿ ಹುಗ್ಗಿ

ಬೇಕಾಗುವ ಸಾಮಗ್ರಿ :
ದ್ರಾಕ್ಷಿ, ಗೋಡಂಬಿ, ಬೇಯಿಸಿದ ಹೆಸರು ಬೇಳೆ ಒಂದು ಕಪ್‌, ಬೆಲ್ಲ , ಕೊಬ್ಬರಿ ತುರಿ, ಒಂದು ಚಮಚ ಗಸಗಸೆ, ತುಪ್ಪ , ಅಕ್ಕಿ ಮತ್ತು ಗೋಧಿಹಿಟ್ಟು.

ಮಾಡುವ ವಿಧಾನ : ಪಾತ್ರೆಗೆ ಒಂದು ಟೀ ಸ್ಪೂನ್‌ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದುಕೊಂಡು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ತುಪ್ಪದ ಪಾತ್ರೆಯಲ್ಲಿ ಹೆಸರಬೇಳೆ ಹಾಕಿ ಚೆನ್ನಾಗಿ ಹುರಿದು, ನೆನೆಸಿರುವ ಅಕ್ಕಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಲ್ಲದ ಪಾಕ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ, ಒಂದು ಬಟ್ಟಲು ಕೊಬ್ಬರಿ ಹಾಕಿ. ಬೆಂದಿರುವ ಅನ್ನವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿದರೆ ಸಿಹಿ ಪೊಂಗಲ್‌ ಸಿದ್ಧ.

ಲಕ್ಷ್ಮಿ , ಕೊಳ್ಳೇಗಾಲ

ಸೂಚನೆ : ಸಂಕ್ರಾಂತಿಗೆ ಸಿಹಿಯೂ ಅಲ್ಲದ, ಖಾರವೂ ಅಲ್ಲದ ಬರೀ ಹುಗ್ಗಿಯನ್ನು ಮಾಡಿ ಗೊಡಸಾರು, ಅಂದರೆ ಸಿಹಿ ಹುಳಿ ಮಿಶ್ರಿತ ತಿಳಿ ಸಾರಿನೊಂದಿಗೆ ಮೆಲ್ಲುವ ಪರಿಪಾಠ ಉತ್ತರ ಕರ್ನಾಟಕದಲ್ಲಿದೆ. ಇವುಗಳೊಂದಿಗೆ ಸಜ್ಜಿ ರೊಟ್ಟಿ, ರಾಗಿ ರೊಟ್ಟಿ ಮಾಡಿ ಎಣ್ಣೆಗಾಯಿ ಪಲ್ಯದೊಂದಿಗೆ ಮೆಲ್ಲುತ್ತಾರೆ. ಜೊತೆಗೆ ಬಣ್ಣೆ ಇದ್ದರಂತೂ ಮತ್ತೂ ರುಚಿ. ಈ ಗೊಡಸಾರು, ಸಜ್ಜಿ ರೊಟ್ಟಿ ಮಾಡುವುದು ಹೇಗೆಂದು ಯಾರಾದರೂ ತಿಳಿಸಿ ಪುಣ್ಯಕಟ್ಟಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X