ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ

By ಡಾ. ಆಜಾದ್ ಐ.ಎಸ್. ಕುವೈತ್
|
Google Oneindia Kannada News

ಈ ಸೈಬರ್ ಯುಗದೋಳ್ ಹೊರನಾಡು, ವಿದೇಶ, ಗಡಿಯಾಚೆ ಎಲ್ಲಾ ಅಗಣ್ಯ, ಎಲ್ಲರೂ ಕನ್ನಡ ದೇಶದೋಳ್ ಎನ್ನುವುದು ಮಾತ್ರ ಗಣನೆಗೆ ಯೋಗ್ಯ. ಅನಿವಾಸಿ ಕನ್ನಡಿಗರು 'ಎಲ್ಲಾದರೂ ಇರು ಎಂಥಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಎಂಬ ರಸಋಷಿಯ ವಾಕ್ಯದಂತೆ ತಾವು ನೆಲೆಕಂಡು ಕೊಂಡಿರುವ ದೇಶಗಳಲ್ಲಿ ಕೂಡಾ ಕನ್ನಡ ಕಂಪನ್ನು ಬೀರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕನ್ನಡಕ್ಕಾಗಿ ಮಿಡಿಯುವ ಇಂಥ ಕನ್ನಡ ಮನಸುಗಳ ಬಗ್ಗೆ ಪರಿಚಯಾತ್ಮಕ ಲೇಖನ ಸರಣಿ ಇದಾಗಿದೆ. ಮೊದಲಿಗೆ ಕುವೈತ್ ಕನ್ನಡ ಕೂಟ.

ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ಆಹ್ವಾನಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ಆಹ್ವಾನ

ಕುವೈತ್ ಕನ್ನಡ ಕೂಟ ಕುವೈತಿನಲ್ಲಿ ನೆಲಸಿರುವ ಅನಿವಾಸಿ ಭಾರತೀಯರ ಸಂಘಗಳಲ್ಲಿ ಹಳೆಯ ಮತ್ತು ಪ್ರಬುದ್ಧ ಸಂಘಗಳಲ್ಲಿ ಗಣನೆಗೆ ಬರುತ್ತದೆ. ಕೆಲವೇ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದ ಪುಟ್ಟ ಸಮಾವೇಶವಾಗಿ ಉದಯಿಸಿದ ಕುವೈತ್ ಕನ್ನಡ ಕೂಟ ಇಂದು 200 ಕ್ಕೂ ಹೆಚ್ಚು ಸದಸ್ಯಕುಟುಂಬಗಳ ಬಲವುಳ್ಳ 33 ವರ್ಷ ಹಳೆಯ ಮಹತ್ತರ ಸಂಘಟನೆಯಾಗಿ ಬೆಳೆದಿದೆ.

ಕುವೈತಿನ ಜಿಎಸ್ ಬಿ ಸಭಾದಿಂದ ಶಾಸಕ ವೇದವ್ಯಾಸ ಕಾಮತ್ ಗೆ ಸನ್ಮಾನ ಕುವೈತಿನ ಜಿಎಸ್ ಬಿ ಸಭಾದಿಂದ ಶಾಸಕ ವೇದವ್ಯಾಸ ಕಾಮತ್ ಗೆ ಸನ್ಮಾನ

ತನ್ನ ಸದಸ್ಯರ, ಕುಟುಂಬಗಳ ಮಕ್ಕಳ ಸಕಲ ಕಲೆಗಳ ಅನಾವರಣ ವೇದಿಕೆಯನ್ನು ಒದಗಿಸುವ, ಕನ್ನಡ ನಾಡಿನ ಸಂಸ್ಕೃತಿ ಸೃಜನ ಸಿರಿಯನ್ನು ಕುವೈತಿನಲ್ಲಿರುವ ಅನಿವಾಸಿ ಭಾರತೀಯರಿಗೆ ಪರಿಚಯಿಸುವ ಗುರುತರ ಧ್ಯೇಯಗಳನ್ನು ನಿರ್ವಹಿಸುತ್ತಿದೆ. ತನ್ಮೂಲಕ ಕನ್ನಡ ನಾಡಿನಲ್ಲಿ ಸಮಾಜಪರ ಕಾಳಜಿಯ ದತ್ತಿ ದೇಣಿಗೆಗಳನ್ನೂ ನೀಡುವುದರೊಂದಿಗೆ ನಾಡಿನ ಬೆಳವಣಿಗೆಗೂ ತನ್ನ ಅಳಿಲು ಕಾಣಿಕೆ ನೀಡುತ್ತಾ ಬಂದಿದೆ.

ಪ್ರತಿ ವರ್ಷ 'ದಾಸೋತ್ಸವ' ಎಂಬ ಕಾರ್ಯಕ್ರಮ

ಪ್ರತಿ ವರ್ಷ 'ದಾಸೋತ್ಸವ' ಎಂಬ ಕಾರ್ಯಕ್ರಮ

ಪ್ರತಿ ವರ್ಷ "ದಾಸೋತ್ಸವ" ಎಂಬ ಭಕ್ತಿ ಆರಾಧನೆಯ ಕಾರ್ಯಕ್ರಮದೊಂದಿಗೆ ಚಟುವಟಿಕೆಗಳ ಸರಣಿಯನ್ನು ಪ್ರಾರಂಭಿಸುತ್ತದೆ.

ರಾಜ್ಯೋತ್ಸವ ಕಾರ್ಯಕ್ರಮ ಕೂಟದ ಪ್ರಮುಖ ಕಾರ್ಯಕ್ರಮ. ಆಟೋಟಗಳ ಸ್ಪರ್ಧೆಗಳು, ಹೊರಾಂಗಣ ಮತ್ತು ಒಳಾಂಗಣ ಕ್ರೀಡಾ ಆಯೋಜನೆಗಳ ಮೂಲಕ ಕೂಟವು ಸದಸ್ಯರ ದೇಹಾರೋಗ್ಯ ಮತ್ತು ಸಹಬಾಳ್ವೆಯ ಉಲ್ಲಾಸಮಯ ವಾತವರಣಕ್ಕೆ ನಾಂದಿಹಾಡಿದರೆ, ತನ್ನದೇ ರೀತಿಯ ಸೃಜನ ಸಾಮರ್ಥ್ಯದ ಅನಾವರಣಕ್ಕೆಂದೇ ಹೊರತರುವ "ಮರಳ ಮಲ್ಲಿಗೆ" ಸಂಚಿಕೆಯ "ಮರಳ ಮಲ್ಲಿಗೆ" ದಿನಾಚರಣೆ ಕೂಟದ ಚಟಿವಟಿಕೆಗಳ ವೈವಿಧ್ಯಕ್ಕೆ ಸಾಕ್ಷಿ.

ಏರ್‌ಇಂಡಿಯಾ ವಿಮಾನ ವೇಳಾಪಟ್ಟಿ ಬದಲಾಯಿಸಲು ಕುವೈತ್‌ ತುಳುಕೂಟ ಮನವಿಏರ್‌ಇಂಡಿಯಾ ವಿಮಾನ ವೇಳಾಪಟ್ಟಿ ಬದಲಾಯಿಸಲು ಕುವೈತ್‌ ತುಳುಕೂಟ ಮನವಿ

ವರ್ಷದ ಕೊನೆಯ ಕಾರ್ಯಕ್ರಮದಲ್ಲಿ ಹೊಸವರ್ಷ

ವರ್ಷದ ಕೊನೆಯ ಕಾರ್ಯಕ್ರಮದಲ್ಲಿ ಹೊಸವರ್ಷ

ವರ್ಷದ ಕೊನೆಯ ಕಾರ್ಯಕ್ರಮದಲ್ಲಿ ಹೊಸವರ್ಷ, ಕ್ರಿಸ್ಮಸ್ ಮತ್ತು ಸಂಕ್ರಾಂತಿಗಳ ಸಮ್ಮಿಶ್ರ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಸರ್ವ ಸಮ್ಮತಿಯಿಂದ ಆಯ್ಕೆಯಾಗುವ ಹೊಸ ಕಾರ್ಯಕಾರಿ ಸಮಿತಿ ಕೂಟದ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿ.

ಮೂವತ್ಮೂರು ವರ್ಷಗಳ ಹಿಂದೆ ಕೆಲವೇ ಕನ್ನಡ ಮನಗಳ ಮನೆಗಳಲ್ಲಿ ಹಬ್ಬ ಹರಿದಿನಗಳ ಕೂಟವಾಗಿ ಹುಟ್ಟಿದ ಕುವೈತ್ ಕನ್ನಡ ಕೂಟ ನಿಧಾನವಾಗಿ ಒಂದು ಪರಿಪಕ್ವ ಸಂಘಟನೆಯಾಗಿ ಬೆಳೆಯುತ್ತ ಬಂದಿತು. ಪ್ರತಿ ವರ್ಷ ದಾಸೋತ್ಸವದಿಂದ ಮೊದಲುಗೊಂಡು ರಾಜ್ಯೋತ್ಸವ ಮತ್ತು ಸೃಜನ ಪ್ರತಿಭೆಗಳ ನಾವರಣಕ್ಕೆಂದೇ ರೂಪುಗೊಂಡ "ಮರಳಮಲ್ಲಿಗೆ ದಿನಾಚರಣೆ" ಮತ್ತು ವರ್ಷಾಂತ್ಯ ಸರ್ವ ಸದಸ್ಯ ಸಭೆಯನ್ನು ಹೊಸವರ್ಷ,

ನಾಡಿನ ಗಣ್ಯರು ಕುವೈತಿಗೆ ಆಗಮಿಸಿ ಹರಿಸಿದ್ದಾರೆ

ನಾಡಿನ ಗಣ್ಯರು ಕುವೈತಿಗೆ ಆಗಮಿಸಿ ಹರಿಸಿದ್ದಾರೆ

ರಾಷ್ಟ್ರಕವಿ ಪ್ರೊ.ಜಿ.ಎಸ್.ಶಿವರುದ್ರಪ್ಪ, ನಟ ಸಿ ಆರ್ ಸಿಂಹ, ನಾಡೋಜ ಡಾ. ನಿಸಾರ್ ಅಹ್ಮದ್, ಸಿನಿಮಾ ದಿಗ್ಗಜ ಶ್ರೀ ಗಿರೀಶ್ ಕಾಸರವಳ್ಳಿ, ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿಯವರಲ್ಲದೇ ಮಾಹಿತಿ ತಂತ್ರಜ್ಞಾನ ದಿಗ್ಗಜ ಡಾ. ನಾರಾಯಣ ಮೂರ್ತಿ, ಶ್ರೀಮತಿ ಸುಧಾಮೂರ್ತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಸ್ಯ ಮಾತುಗಾರ್ತಿ ಶ್ರೀಮತಿ ಸುಧಾ ಬರಗೂರ್ ಹೀಗೆ ಹತ್ತು ಹಲವು ನಾಡಿನ ಗಣ್ಯರು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಹಬ್ಬದ ಮೆರುಗನ್ನು ಹೆಚ್ಚಿಸಿದ್ದಾರೆ,

 ನವಂಬರ್ 17ರಂದು ಈ ಬಾರಿ ರಾಜ್ಯೋತ್ಸವ

ನವಂಬರ್ 17ರಂದು ಈ ಬಾರಿ ರಾಜ್ಯೋತ್ಸವ

ವರ್ಷ 2017 ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅರುಣ್ ಕುಮಾರ್ ಬಾಪು, ಉಪಾಧ್ಯಕ್ಷರಾಗಿ ಡಾ. ಆಜಾದ್ ಇಸ್ಮಾಯಿಲ್ ಸಾಹೇಬ್, ಕಾರ್ಯದರ್ಶಿಗಳಾಗಿ ಜಿತೇಂದ್ರ ರಾವ್ ಮತ್ತು ಖಜಾಂಚಿಗಳಾಗಿ ಮಹೇಶ್ ಶೀರಾಮಗೊಂಡ್ ಅಯ್ಕೆಯಾಗಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಹೆಮ್ಮೆಯ ರಾಜ್ಯೋತ್ಸವವನ್ನು ನವಂಬರ್ 17ರಂದು Kuwait College of Science and Technology ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಾಡಿನ ಹೆಸರಾಂತ ಪರಿಸರವಿಜ್ಞಾನಿ, ವನ್ಯಜೀವಿ ಸಂರಕ್ಷಕ, ರಾಷ್ಟ್ರೀಯ ಹುಲಿ ಪರಿಯೋಜನೆಯ ಮಹತ್ತರ ಸಾಧನೆಗಳ ಕರ್ತೃ ಡಾ. ಉಲ್ಲಾಸ್ ಕಾರಂತರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಲೆ, ಸಂಸ್ಕೃತಿಗೆ ಇಲ್ಲಿ ನೀಡಲಾಗುತ್ತೆ ಬೆಲೆ

ಕಲೆ, ಸಂಸ್ಕೃತಿಗೆ ಇಲ್ಲಿ ನೀಡಲಾಗುತ್ತೆ ಬೆಲೆ

ಅಲ್ಲದೇ ಕರ್ನಾಟಕದ ಉಡುಪಿಯ "ನೃತ್ಯನಿಕೇತನ ಕೊಡವೂರು" ಕಲಾ ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದೂಷಿ ಶ್ರೀಮತಿ ಮಾನಸಿ ಸುಧೀರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇವರು ತಾವೇ ಪರಿಕಲ್ಪಿಸಿ ನಿರ್ದೇಶಿಸಲಿರುವ "ಮಳೆಬಂತು ಮಳೆ" ಎಂಬ ನೃತ್ಯ ರೂಪಕವನ್ನು ಕೂಟದ ಮಕ್ಕಳಿಗೆ ಮತ್ತು ಸದಸ್ಯರಿಗೆ ತರಬೇತಿ ನೀಡಿ ಅಣಿಗೊಳಿಸುವ ಮೂಲಕ ಪ್ರಸ್ತುತಪಡಿಸಲಿದ್ದಾರೆ.

ಕರುನಾಡ ಕಣ್ಮಣಿಗಳು ಎಂಬ ಕಾರ್ಯಕ್ರಮ

ಕರುನಾಡ ಕಣ್ಮಣಿಗಳು ಎಂಬ ಕಾರ್ಯಕ್ರಮ

ವಿವಿಧ ಕ್ಷೇತ್ರಗಳಲ್ಲಿ ಕನ್ನಡನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವ ಕರ್ನಾಟಕದ "ಕರುನಾಡ ಕಣ್ಮಣಿಗಳು" ಎಂಬ ಕಾರ್ಯಕ್ರಮ ಘೋಷವಾಕ್ಯದೊಂದಿಗೆ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕರ್ನಾಟಕದ ಇತ್ತೀಚಿನ ಸಾಧಕರ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ದೇಶದ ಮತ್ತು ನಾಡಿನ ಅನಿವಾಸಿ ಜನತೆಗೆ ಮಾಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ನೃತ್ಯ, ರೂಪಕ, ವ್ಯಕ್ತಿ ಪರಿಚಯ ಮುಂತದುವುಗಳನ್ನು ದರ್ಶಿಸುವ ಪ್ರಯತ್ನವನ್ನು ಕನ್ನಡ ಕೂಟದ ಮಕ್ಕಳು ಮತ್ತು ಹಿರಿಯರು ಮಾಡಲಿದ್ದಾರೆ.
ರಾಜ್ಯೋತ್ಸವ ರಾತ್ರಿಯ ಔತಣ

ರಾಜ್ಯೋತ್ಸವ ರಾತ್ರಿಯ ಔತಣ

ಎರಡನೇ ಹಂತದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನ ಆಗಮಿತ ಅತಿಥಿಗಳಿಗೆ ಗೌರವಾರ್ಪಣೆ, ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ಎಲ್ಲಾ ಸಹೃದಯಿ ಸಂಸ್ಥೆ/ವ್ಯಕ್ತಿಗಳಿಗೆ ಕೃತಜ್ಞತಾಪೂರ್ವಕ ನೆನಪಿನ ಕಾಣಿಕೆಯ ಅರ್ಪಣೆ ನಡೆಯುತ್ತವೆ. ಮೂರನೇ ಹಂತದಲ್ಲಿ ಶ್ರೀಮತಿ ಮಾನಸಿಯವರು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳು, ಇರುತ್ತವೆ. ಕೊನೆಯದಾಗಿ ವಂದನಾರ್ಪಣೆ ಮತ್ತು ರಾಜ್ಯೋತ್ಸವ ರಾತ್ರಿಯ ಔತಣದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.

English summary
Kuwait Kannada Koota(KKK) is a non-profit socio-cultural organization registered with the Indian Embassy Kuwait. KKK now consists of more than 200 active members. Dasothsava, Rajyotsava, Maralu Mallige magazine, Indian festival celebration and many more activities are part of event calendar says Dr Azad I.S. a prominant member of KKK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X