ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದಂದು ಜೆಪಿನಗರದಲ್ಲಿ ಸಂಗೀತ ಸಂಜೆ

By Prasad
|
Google Oneindia Kannada News

Mother Bhuvaneshwari
ನವೆಂಬರ್ 1 ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಜಾ ದಿನದಂದು ಸುಮಧುರವಾದ ಕನ್ನಡ ಗೀತೆಗಳನ್ನು, ಸುಶ್ರಾವ್ಯವಾದ ಕಂಠದಿಂದ ಕೇಳಿದರೆ ಎಂಥ ಹಿತ ಅಲ್ಲವೆ? ರಾಜ್ಯೋತ್ಸವ ದಿನಾಚರಣೆಯ ಸಂಜೆಯನ್ನು ಸಾರ್ಥಕವಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿ ಸಂಗೀತ ರಸಿಕರಿಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಾಸಸಾಹಿತ್ಯದಿಂದ ವಚನಗಳವೆರೆಗೂ; ತತ್ವಪದಗಳಿಂದ ಭಾವಗೀತೆಗಳವರೆಗೂ; ಜಾನಪದ ಗೀತೆಗಳಿಂದ ಚಲನಚಿತ್ರಗೀತೆಗಳವರೆಗೂ.... ಐದನೇ ಶತಮಾನದ ಶಾಸನ ಸಾಹಿತ್ಯದಿಂದ, ಇಪ್ಪತ್ತೊಂದನೆ ಶತಮಾನದ ಕಂಪ್ಯೂಟರ್ ಸಾಹಿತ್ಯದವರೆಗೂ ಆಯ್ದ ಗೀತೆಗಳ ರಸದೌತಣ ಸುಮಧುರ ಗಾಯಕ ಗಾಯಕಿಯರಿಂದ. ಎಲ್ಲರಿಗೂ ಸ್ವಾಗತ.

ಈ ಸಂಗೀತ ರಸಸಂಜೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳ, ದಿನ ಮತ್ತು ಸಮಯವನ್ನು ಇಂದೇ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿ.

ಸ್ಥಳ : ವುಡ್ರೋಸ್ ಕ್ಲಬ್, 7ನೇ ಹಂತ, ಜೆ.ಪಿ ನಗರ, ಬೆಂಗಳೂರು- 560 078.

ದಿನ : ನವೆಂಬರ್ 1, 2010

ಸಮಯ : ಸಂಜೆ 6.30

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X