ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲೊಂದು ಕನ್ನಡ ಶಾಲೆ!

By Prasad
|
Google Oneindia Kannada News

A kannada school in Connecticut, USA
ಕನ್ನಡ ನಾಡು ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಒಂದೊಂದಾಗಿ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಅಮೆರಿಕಾದಲ್ಲೊಂದು ಕನ್ನಡ ಶಾಲೆ ಇರುವುದು ಆಶ್ಚರ್ಯವಾದರೂ ಸತ್ಯ ಸಂಗತಿ. ಇಂದಿನ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಇರಬೇಕಾದದ್ದೆ. ಆದರೆ, ಆರಂಭಿಕ ಶಿಕ್ಷಣ ಕನ್ನಡದಲ್ಲೇ ಇರಬೇಕಾದದ್ದು ಮಕ್ಕಳ ಜ್ಞಾನಾರ್ಜನೆಗೆ ಸಹಾಯಕ ಕೂಡ.

* ನಾಗರಾಜ ಮಲ್ಲೇಶ್ವರಪ್ಪ, ನ್ಯೂಯಾರ್ಕ್

ಇದೇನಪ್ಪ ಬೆಳಿಗ್ಗೆ ಬೆಳಿಗ್ಗೆನೆ ಏಪ್ರಿಲ್ ಪೂಲ್ ಮಾಡ್ತಾ ಇದಾರಲ್ಲ... ಇವತ್ತು ಏನು ಏಪ್ರಿಲ್ 1st? ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ ದೂರದ ಅಮೇರಿಕಾದಲ್ಲಿ ಕನ್ನಡ ಶಾಲೆನಾ? ಎಂದು ಮೂಗಿನ ಮೇಲೆ ಬೆರಳಿಡಬೇಡಿ... ಇದು ಅಪ್ಪಟ ಸತ್ಯ!

ನ್ಯೂಯಾರ್ಕ್ ಸ್ಟೇಟ್ ಪಕ್ಕದಲ್ಲೇ ಇರುವ ಕನೆಕ್ಟಿಕಟ್ ನಲ್ಲಿ ಕನ್ನಡ ಕೂಟದ ಸಹಾಯದಿಂದ ಪ್ರತಿ ಶನಿವಾರ ಮದ್ಯಾನ್ಹ 3 ಗಂಟೆಯಿಂದ ಸುಮಾರು ಒಂದೂವರೆ ಗಂಟೆಕಾಲ ಸೌತ್ ವಿಂಡ್ಸರ್ ಲೈಬ್ರರಿಯಲ್ಲಿ ಕನ್ನಡ ಶಾಲೆ ನಡೆಯುತ್ತದೆ. 3 ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಉತ್ಸಾಹದಿಂದ ಅ-ಆ-ಇ-ಈ, ವ್ಯಾಕರಣ ಅಭ್ಯಾಸ ಮಾಡಿ ಕನ್ನಡದಲ್ಲಿ ಮುದ್ದು ಮುದ್ದಾಗಿ ಮಾತನಾಡುವುದನ್ನು ಕೇಳಿದರೆ ಆಗುವ ಸಂತೋಷ ವರ್ಣಿಸಲು ಅಸಾದ್ಯ! [ಗ್ಯಾಲರಿ ನೋಡಿರಿ]

ಪೋಷಕರೂ ಸಹ ತಮ್ಮ ತಮ್ಮ ಬ್ಯುಸಿ ಕಾರ್ಯಕ್ರಮದಲ್ಲೂ ಪುರುಸೊತ್ತು ಮಾಡಿಕೊಂಡು 20-30 ಮೈಲಿ ಡ್ರೈವ್ ಮಾಡಿಕೊಂಡು ಮಕ್ಕಳನ್ನು ಅಷ್ಟೇ ಉತ್ಸಾಹದಿಂದ ಕನ್ನಡ ಶಾಲೆಗೆ ಕರೆತಂದು, ಎಲ್ಲರ ಜೊತೆಯಲ್ಲಿ ಕನ್ನಡದಲ್ಲೇ ಮಾತನಾಡುವುದು ನಿಜಕ್ಕೂ ಮೆಚ್ಹತಕ್ಕದ್ದೇ. ಅಷ್ಟೇ ಶ್ರದ್ದೆಯಿಂದ, ಪ್ರೀತಿಯಿಂದ ಬಿಡುವು ಮಾಡಿಕೊಂಡು ಕನ್ನಡ ಕಲಿಸಿ ವಿದ್ಯಾದಾನ ಮಾಡುತ್ತಿರುವ ಕನ್ನಡ ಗುರುಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.

ಇತ್ತೀಚೆಗೆ ಬೆಂಗಳೂರಿಗೆ ಬಂದು ಇಳಿದಾಕ್ಷಣ ಯಾವುದೋ ಪರದೇಶಕ್ಕೆ ಬಂದಿದ್ದೇವೆ ಎನಿಸುವಂಥಹ ವಾತಾವರಣವಿತ್ತು. ಅಮೆರಿಕಾದಲ್ಲಿ ಕನ್ನಡದ ಕಂಪನ್ನು ಹರಡುತ್ತಿರುವ, ಕನ್ನಡ ಭಾಷೆ - ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಗುರುಗಳಿಗೂ, ಪೋಷಕರಿಗೂ ಎಲ್ಲರಿಗೂ ಹೃದಯ ಪೂರ್ವಕ ವಂದನೆಗಳು. ಜೈ ಕರ್ನಾಟಕ ಮಾತೆ!

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X