ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪಾರ್ಶ್ವವಾಯು ದಿನಾಚರಣೆ ನಿಮಿತ್ತ ವಿಶೇಷ ಲೇಖನ

By ಡಾ|| ವಿನೋದ ಕುಲಕರ್ಣಿ, ಮನೋರೋಗ ತಜ್ಞ, ಹುಬ್ಬಳ್ಳಿ
|
Google Oneindia Kannada News

ಮಾನವನ ಮೆದುಳಿನ ಅಂಗ ರಚನೆ, ಕಾರ್ಯ ತತ್ಪರತೆ ಇಂದಿಗೂ, ಎಂದೆಂದಿಗೂ, ಅತ್ಯಂತ ನಿಗೂಢ ಎಂದರೆ, ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ಈ ಮಿದುಳಿಗೆ ಆಘಾತ ಆಗಿ ಲಕ್ವಾ ಅಥವಾ ಪಾರ್ಶ್ವವಾಯು ತರಬಲ್ಲ ರೋಗಗಳೆಂದರೆ, ಸಕ್ಕರೆ ರೋಗ ಹಾಗೂ ಎಲ್ಲೆ ಮೀರಿದ ರಕ್ತದ ಒತ್ತಡ.

ಪ್ರತಿ ವರುಷದ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು (ಸ್ಟ್ರೋಕ್) ದಿನಾಚರಣೆ ಎಂದು ವಿಶ್ವದ್ಯಾಂತ ಆಚರಿಸಲಾಗುತ್ತದೆ. ಈ ದಿವಸ ಸ್ಟ್ರೋಕ್ ಬಗ್ಗೆ ತಿಳಿವಳಿಕೆ, ಅರಿವು, ಜಾಗೃತೆ ಮೂಡಿಸುವುದು ವೈದ್ಯರ ಹಾಗೂ ಮಾಧ್ಯಮಗಳ ಆದ್ಯ ಕರ್ತವ್ಯ. ಈ ವರ್ಷದ ಆಚರಣೆಯ ಘೋಷಣೆ ಹೀಗಿದೆ, "ನಾನು ಕಾಳಜಿ ಮಾಡುತ್ತೇನೆ. ಆದ್ದರಿಂದ ಈ ಆಚರಣೆ ಬರೀ ಅಕ್ಟೋಬರ್ 29ಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಈ ಇಡೀ ಮುಂದಿನ ವಾರ ಈ ಆಚರಣೆ ಮಾಡಲಾಗುವುದು."

ಕುಟುಂಬದ ಮುಖ್ಯಸ್ಥನಾದವನು ತನ್ನ ಹೆಂಡತಿ ಹಾಗೂ ಮಕ್ಕಳ ಬಗ್ಗೆ, ಸಂಬಂಧಿಕರ ಬಗ್ಗೆ ಹಾಗೂ ಸ್ನೇಹಿತರ ಬಗ್ಗೆ ಕಾಳಜಿ ಮಾಡುವದಾದರೆ, ತನ್ನ ಮಿದುಳನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬೇಕೆಂದೇ ಇದರ ತಾತ್ಪರ್ಯ. ನಮ್ಮ ದೇಹದ ಅತ್ಯಂತ ಸುಸಜ್ಜಿತ ಕಂಪ್ಯೂಟರ್ ಅಂದರೆ ನಮ್ಮ ಮಿದುಳು. ಈ ಮಿದುಳಿನಿಂದಲೇ ಇತರ ಅಂಗಾಂಗಳು ಹಾಗೂ ಅಯವಯಗಳು ಕಾರ್ಯ ನಿರ್ವಹಿಸುವುದು. [ಪುರುಷರ ಮೆದುಳೇ ಬೇರೆ ಮಹಿಳೆಯ ಮೆದುಳು ಬೇರೆ]

World Stroke Day : Symptoms, causes and health tips

ಈ ಮಿದುಳಿಗೆ ಆಘಾತ ಅಥವಾ ಸ್ಟ್ರೋಕ್ ಎರಗಿದಾಗ ರೋಗಿಯು ಹಠಾತ್ ಸಾವನ್ನೇ ಅಪ್ಪಿಯಾನು. ಸ್ವಲ್ಪ ಅವನ ಅದೃಷ್ಟ ಚೆನ್ನಾಗಿ ಇದ್ದರೆ ಮರಣಶೈಯೆಯಿಂದ ಪಾರಾಗಿ, ಬರೀ ಕೈಕಾಲುಗಳು ಊನ, ಲಖವಾ, ಬಾಯಿ ಸೊಟ್ಟ ಆಗುವುದು ಇವೇ ಮೊದಲಾದ ಲಕ್ಷಣಗಳಿಂದ ಬಳಲಿಯಾನು.

ಈ ಮಿದುಳಿನ ಸ್ಟ್ರೋಕ್‌ಗೆ ಮುಖ್ಯ ಕಾರಣಗಳೆಂದರೆ 1) ಸಕ್ಕರೆ ರೋಗ 2) ಬ್ಲಡ್ ಪ್ರೆಶರ್ 3) ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ 4) ಮದ್ಯಪಾನ ಹಾಗೂ 5) ಸೀಗರೇಟು ಸೇದುವಿಕೆ. ಈ ಎಲ್ಲಾ ಕಾರಣಗಳಿಂದ ಅಥವಾ ಮೇಲೆ ತಿಳಿಸಿದ ಒಂದೆರಡು ಕಾರಣಗಳಿಂದ ಕೂಡಾ ಮಿದುಳಿನ ಸ್ಟ್ರೋಕ್ ಹಠಾತ್ತಾಗಿ ಕಾಣಿಸಿಕೊಳ್ಳುವುದು. ದೈಹಿಕ ಸಮಸ್ಯೆಗಳಾದ ಸಕ್ಕರೆ ರೋಗ, ಬ್ಲಡ್ ಪ್ರೆಶರ್ ಹಾಗೂ ಮದ್ಯಪಾನ ಅವಲಂಬನೆಗೆ ಮುಖ್ಯ ಕಾರಣವೇನೆಂದರೆ, ಮಾನವನ ನಿಯಂತ್ರಣದಲ್ಲಿರದ ಒತ್ತಡ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಮಿದುಳಿನ ಸ್ಟ್ರೋಕ್ ಲಕ್ಷಣಗಳು

* ಒಂದು ಕ್ಕೆ ಅಥವಾ ಕಾಲಿನಲ್ಲಿ ನಿಶ್ಯಕ್ತಿ, ನಿತ್ರಾಣ, ಕೈಕಾಲು ಅಲ್ಲಾಡಿಸಲು ಸಾಧ್ಯವಾಗದಿರುವಿಕೆ.
* ತೀವ್ರವಾಗಿ ಒಂದೇ ಕೈಯಲ್ಲಿ ಅಥವಾ ಕಾಲಲ್ಲಿ ಕಾಣಿಸಿಕೊಳ್ಳುವ ಮರಗಟ್ಟುವಿಕೆ.
* ಚಿತ್ರವಿಚಿತ್ರವಾದ ವರ್ತನೆ.
* ಹಠಾತ್ತನೆ ಕಾಣಿಸಿಕೊಳ್ಳುವ ದೃಷ್ಟಿದೋಷ ಅಥವಾ ಎರಡೆರಡು ಕಾಣಿಸುವಿಕೆ. ದೇಹದ ಮೇಲೆ ಬ್ಯಾಲನ್ಸ್ ಅಥವಾ ನಿಯಂತ್ರಣ ತಪ್ಪುವುದು. ತೀವ್ರ ತೆರನಾದ ತಲೆಶೂಲೆ, ಹಲವು ಬಾರಿ ವಾಂತಿ.

ಹಲವು ಜನರಲ್ಲಿ ಈ ಮೇಲೆ ಕಾಣಿಸಿದ ಲಕ್ಷಣಗಳು ಸ್ವಲ್ಪ ಸಮಯದವರೆಗೆ ಮಾತ್ರ ಕಂಡು ಬಂದು, ನಂತರ ಹಠಾತ್ತನೆ ಮಾಯವಾಗಬಲ್ಲವು. ಇದಕ್ಕೆ ತಾತ್ಪೂರ್ತಿಕ ರಕ್ತದ ಕೊರತೆ ಅಥವಾ ಟ್ರಾನ್ಸಿಯಂಟ್ ಇಶ್ಕೀಮೀಕ್ ಅಟ್ಯಾಕ್ ಎಂದು ಸಂಬೋಧಿಸುವರು. ಇದಕ್ಕೆ ಅಲ್ಪ ಪ್ರಮಾಣದ ಸ್ಟ್ರೋಕ್ ಎಂದೂ ಕರೆಯುವರು.

ಇದು ಒಂದು ತರಹದ ಎಚ್ಚರಕೆಯ ಘಂಟೆ ಇದ್ದಂತೆ. ಇನ್ನು ನೀನು ಜಾಗರೂಕನಾಗಿರು, ನಿನ್ನ ಸಕ್ಕರೆ ಪ್ರಮಾಣ, ರಕ್ತದ ಒತ್ತಡ, ಮನಸ್ಸಿನ ಒತ್ತಡವನ್ನು ನಿಯಂತ್ರಣದಲ್ಲಿರಿಸಿಕೋ ಎಂದು ಡಂಗುರವನ್ನು ಸಾರಿದಂತೆ!

ಈ ವಿಶ್ವ ಸ್ಟ್ರೋಕ್ ದಿನಾಚರಣೆಯಂದು, ಎಲ್ಲರೂ ಜಾಗೃತೆಯಿಂದ ತಮ್ಮ ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದೇ ಈ ಲೇಖನದ ಮೂಲ ಉದ್ದೇಶ. ಇಂದೇ ಮದ್ಯ, ಸೀಗರೇಟು, ಗುಟಕಾ ವರ್ಜಿಸಿರಿ, ಪ್ರತಿನಿತ್ಯ ಒಂದು ಘಂಟೆ ರಭಸವಾದ ಶಾರೀರಿಕ ವಾಯಾಮದಲ್ಲಿ ತೊಡಗಿಸಿಕೊಳ್ಳಿರಿ. ಚಿಂತೆಯಿಂದ ದೂರ ಇರಿ. ವಾಸ್ತವಿಕತೆಯನ್ನು ಧೈರ್ಯದಿಂದ ಎದುರಿಸಿರಿ.

ಬ್ಲಡ್ ಪ್ರೆಶರ್, ಡಯಾಬಿಟಿಸ್ ಎರಗದಂತೆ ಎಚ್ಚರವಹಿಸಿರಿ. ಹೆಚ್ಚು ಹೆಚ್ಚು ತರಕಾರಿ ಹಾಗೂ ಹಣ್ಣುಗಳನ್ನು ಭುಂಜಿಸಿರಿ. ಮಾಂಸಹಾರಿ ಆಹಾರಕ್ಕೆ ತಿಲಾಂಜಲಿ ಇಡಿರಿ. ಆವಾಗ ಆಗದಿರುವುದು ನಿಮ್ಮ ಮಿದುಳು ಹೋಳು ಹೋಳು!

English summary
October 29 is observed as World Stroke Day. Here is special story from Dr Vinod Kulkarni, senior psychiatrist from Hubballi. The specialist doctor explains what causes stroke. Everyone have to have awareness about health of brain. Regular check up and timely treatment can prevent severe ailments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X