• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಯಿ ಪ್ರೀತಿ : ಮನುಜನಿಗಿಂತ ಪ್ರಾಣಿಗಳೇ ಗುಣದಲಿ ಮೇಲು!

By ಸುಪ್ರೀತ್ ಕೆ ಎನ್
|

ಕೆಲವರಿಗೆ ಈ ಲೇಖನದ ಶೀರ್ಷಿಕೆ ನೋಡಿಯೇ ಸಿಟ್ಟು ಬಂದಿರುತ್ತೆ. 'ತಾಯಿ' ಎಂಬ ಶಬ್ಧ ಕೇಳಿದೊಡನೆ ಅಥವಾ ಆ ಪದ ಕಣ್ಣಿಗೆ ಬಿದ್ದೊಡನೆ ನಮ್ಮಲ್ಲಿನ ಭಾವುಕತೆ ಜಾಗೃತ ಆಗುವುದೆ ಇದಕ್ಕೆ ಕಾರಣ. ಆದರೆ ಕೆಲವೊಮ್ಮೆ ಆ ಭಾವುಕತೆಯನ್ನು ಮೀರಿ ವಾಸ್ತವವನ್ನು ಪರಿಗಣಿಸಬೇಕಾಗುತ್ತದೆ.

ತಾಯಿಯ ಋಣ ತೀರಿಸಲು ಸಾದ್ಯವಿಲ್ಲ. ಆಕೆ ಒಂಭತ್ತು ತಿಂಗಳು ನಮ್ಮನ್ನು ಹೊತ್ತಿದ್ದಾಳೆ, ನಮಗೆ ಜನ್ಮ ನೀಡಿದ್ದಾಳೆ; ಇವ್ಯಾವುದನ್ನು ತೆಗೆದು ಹಾಕುವ ಹಾಗಿಲ್ಲ. ತಾಯಿ ಖಂಡಿತಾ ಇವೆಲ್ಲ ಮಾಡಿರುತ್ತಾಳೆ. ಆದರೆ ಜನ್ಮ ನೀಡಿ ಕೆಲವು ತಿಂಗಳು ಎದೆ ಹಾಲು ಕುಡಿಸಿಬಿಟ್ಟರೆ ತಾಯಿಯ ಕೆಲಸ ಮುಗಿಯಿತೆ?

'ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?

ಎಷ್ಟೋ ಮನೆಗಳಲ್ಲಿ ತಾಯಿ ಮಾಡಬೇಕಿರುವ ಕೆಲಸವನ್ನು ಮನೆ ಕೆಲಸದವಳು ಮಾಡುತ್ತಿರುತ್ತಾಳೆ. ತಾಯಿಗಿಂತ ಹೆಚ್ಚಾಗಿ ಮಗು ಮನೆ ಕೆಲಸದ ಹೆಂಗಸನ್ನು ಹಚ್ಚಿಕೊಂಡಿರುತ್ತದೆ. ಅದು ಯಾವ ಮಟ್ಟಕ್ಕೆ ಎಂದರೆ, ಆ ಮಗು ತಾಯಿಯನ್ನು ಬೇಕಾದರೂ ಬಿಟ್ಟಿರುತ್ತದೆ. ಆದರೆ ಕೆಲಸದ ಹೆಂಗಸನ್ನು ಬಿಟ್ಟು ಮಗು ಇರಲ್ಲ!

ಇದೇ ರೀತಿ, ಎಷ್ಟೋ ಮನೆಗಳಲ್ಲಿ ಮಕ್ಕಳನ್ನು ಶಾಲೆಗೆ ಅಟ್ಟಿ, ಕೆಲಸಕ್ಕೆ ಹೋಗುವ ಪೋಷಕರು, ಮಕ್ಕಳು ಮನೆಗೆ ಬಂದ ಮೇಲೆ ನೋಡಿಕೊಳ್ಳಲು ಅಜ್ಜ-ಅಜ್ಜಿಯರನ್ನು ಇಟ್ಟಿರುತ್ತಾರೆ. ಕಷ್ಟವೋ ಸುಖವೋ ಅಜ್ಜಅಜ್ಜಿಯರು ಮೊಮ್ಮಕ್ಕಳನ್ನು ನೋಡಿಕೊಂಡಿರುತ್ತಾರೆ.

ಕೆಲವು ಮನೆಗಳಲ್ಲಿ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸುತ್ತಾರೆ. ಆ ಮಗು ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾಗುತ್ತದೆ. ಇವೆಲ್ಲವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಬದಲಾದ ಕಾಲಮಾನದ ಅನಿವಾರ್ಯತೆ ಎಂದು ಸಮರ್ತಿಸಿಕೊಳ್ಳಬಹುದು.

ಬದುಕಿನಲ್ಲಿ ಅಮ್ಮನಂತಹ ವಿಶ್ವಸುಂದರಿ ಇರಲು ಸಾಧ್ಯವೇ?

ಆದರೆ ಆಗಾಗ ದಿನ ಪತ್ರಿಕೆಗಳಲ್ಲಿ ಟಿವಿಗಳಲ್ಲಿ 'ಅಕ್ರಮ ಸಂಬಂಧ ಬಯಲಾಗಬಾರದೆಂದು ತನ್ನ ಮಗನನ್ನೇ ಕೊಂದ ತಾಯಿ' ಎಂಬ ಸುದ್ದಿಗಳು ಬರುತ್ತಲ್ಲ, ಅದಕ್ಕೆ ಏನು ಹೇಳುವುದು? ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾದ್ಯವೇ ಇಲ್ಲ ಎನ್ನುವ ಪರಿಕಲ್ಪನೆಯಿಂದ ನಾವು ಎಷ್ಟು ದೂರ ಬಂದಿದ್ದೀವಿ ಅನಿಸೋಲ್ವಾ?

ಇದ್ದಕ್ಕೆ ನಾನು ಹೇಳಿದ್ದು 'ತಾಯಿ' ಎನ್ನುವ ಪದಕ್ಕೆ ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳೆ ಅರ್ಥ ತುಂಬುತ್ತವೆ ಎಂದು. ಉದಾಹರಣೆಯಾಗಿ ಒಂದು ನಾಯಿಯನ್ನೇ ತೆಗೆದುಕ್ಕೊಳ್ಳಿ, ಅದು ತನ್ನ ಮರಿಗಳನ್ನು ಎಷ್ಟು ಜೋಪಾನ ಮಾಡುತ್ತೆ. ಮರಿಗಳು ದೊಡ್ಡದಾಗುವ ತನಕ ಬೇರೆ ಯಾರಿಂದಲೂ ಅದನ್ನು ಮುಟ್ಟಿಸಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ತನ್ನ ಮರಿಗಳನ್ನು ಕಾಪಾಡಿದ ಉದಾಹರಣೆಗಳು ಪ್ರಾಣಿಗಳ ಪ್ರಪಂಚದಲ್ಲಿ ಸಾಕಷ್ಟು ಸಿಗುತ್ತದೆ. ಆದರೆ ಅಂಥ ಉದಾಹರಣೆಗಳು ಮಾನವ ಪ್ರಪಂಚದಲ್ಲಿ ಕಮ್ಮಿ!

ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!

ಈಗ ನಾನು ನನ್ನ ಮಗುನ ಚೆನ್ನಾಗಿ ನೋಡಿಕೊಂಡರೆ, ಮುಂದೆ ಅದು ನನ್ನ ಚೆನ್ನಾಗಿ ನೋಡಿಕೊಳ್ಳುತ್ತೆ ಎಂದು ಎಷ್ಟೋ ತಾಯಂದಿರು ಲೆಕ್ಕ ಹಾಕುತ್ತಾರೆ. ಆದರೆ ಯಾವ ಪ್ರಾಣಿಯೂ, ತನ್ನ ಮರಿ ತನ್ನನ್ನು ನೋಡಿಕೊಳ್ಳಲಿ ಎಂದು ಬಯಸುವುದೇ ಇಲ್ಲ. ಮಕ್ಕಳು ಏನಾದರೂ ಸಾಧಿಸಿದ ಕೂಡಲೇ, ಕೆಲವು ತಾಯಂದಿರಿಗೆ ಇದ್ದಕ್ಕಿದ್ದಂತೆ ಪ್ರೀತಿ ಹೆಚ್ಚಾಗಬಹುದು. ಆದರೆ ಪ್ರಾಣಿಗಳು ಇಂಥ ಅಸಹಜ ಭಾವವನ್ನು ಹೊಂದಿರುವುದಿಲ್ಲ.

ನೀ ದುಡಿವ ಹಾದಿಯಲ್ಲಿ ನೂರೆಂಟು ಮುಳ್ಳುಗಳು!

'ತಾಯಿ' ಎನ್ನುವ ಪದಕ್ಕೆ ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳೆ ಅರ್ಥ ತುಂಬುವುದು ಈ ಕಾರಣಗಳಿಗಾಗಿಯೇ. ಆಧುನಿಕ ಬದುಕಿನ ಅನಿವಾರ್ಯತೆಗಳಿಂದ, ಪ್ರಕೃತಿ ಸಹಜವಾದ ಗುಣಗಳಿಗೆ ವಿರುದ್ಧವಾಗಿ ನಾವು ಬದುಕುತ್ತಿರುವುದೇ ಇದಕ್ಕೆ ಕಾರಣ! ಪ್ರಾಣಿಗಳೇ, ಮನುಷ್ಯರಿಗಿಂತ ಹೆಚ್ಚಾಗಿ 'ತಾಯಿ' ಪದಕ್ಕೆ ಅರ್ಥ ತುಂಬುತ್ತಿರುವ ನಿಮಗೆ ಎರಡು ದಿನಗಳ ಮೊದಲೇ, 'ಹ್ಯಾಪಿ ಮದರ್ಸ್ ಡೇ'.

English summary
Why some kids are missing the love of mother? Is it enough to give birth and leave children grow on their own or with the help of some other people? Working Mothers have to think about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more