ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vishwakarma Puja 2022 : ವಿಶ್ವಕರ್ಮ ಪೂಜೆ- ಇತಿಹಾಸ, ಪೂಜೆ, ಮಂತ್ರ ಮಾಹಿತಿ

|
Google Oneindia Kannada News

ಪುರಾಣಗಳನ್ನು ಬಲ್ಲವರಿಗೆ ವಿಶ್ವಕರ್ಮ ಹೆಸರು ಗೊತ್ತಿರಬಹುದು. ಇವರು ನಮ್ಮ ದೇವತೆಗಳಿಗೆ ವಾಸ್ತುಶಿಲ್ಪಿ. ವಿಶ್ವಕರ್ಮರನ್ನು ಸ್ವಯಂಭು ಅವತಾರ ಎನ್ನುತ್ತಾರೆ. ಈ ವಿಶ್ವದ ಎಲ್ಲಾ ಭೌತಿಕ ವಸ್ತುಗಳ ಸೃಷ್ಟಿಕರ್ತ.

ದೇವ ದೇವತೆಯರ ರಥ, ಅರಮನೆ, ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಟ್ಟವರು. ರಾವಣನ ಸ್ವರ್ಣ ಲಂಕೆ ಎಂಬ ಅದ್ಭುತ ನಗರಿಯನ್ನು ಕಟ್ಟಿದ್ದೂ ವಿಶ್ವಕರ್ಮನೇ. ಪುಷ್ಪಕ ವಿಮಾನ ತಯಾರಕರೂ ಅವರೆಯೇ. ಶ್ರೀಕೃಷ್ಣ ದ್ವಾರಕಾ ನಗರಿ, ಪಾಂಡವರ ಇಂದ್ರಪ್ರಸ್ಥ ಇವೆಲ್ಲವೂ ವಿಶ್ವಕರ್ಮರಿಂದಲೇ ರಚನೆಯಾಗಿದ್ದು ಎಂದು ಹೇಳುತ್ತವೆ ಹಿಂದೂ ಶಾಸ್ತ್ರ ಗ್ರಂಥಗಳು.

ಅನಂತ ಚತುರ್ದಶಿ 2022: ವ್ರತಾಚರಣೆ ಮಹತ್ವ, ಪಾಂಡವರ ಕಥೆ, ಶ್ರೀಕೃಷ್ಣ ಹೇಳಿದ ಕಥೆಅನಂತ ಚತುರ್ದಶಿ 2022: ವ್ರತಾಚರಣೆ ಮಹತ್ವ, ಪಾಂಡವರ ಕಥೆ, ಶ್ರೀಕೃಷ್ಣ ಹೇಳಿದ ಕಥೆ

ವಾಸ್ತುಶಿಲ್ಪಿ ಎನಿಸಿದ್ದ ವಿಶ್ವಕರ್ಮನನ್ನು ಹಿಂದೂಗಳು ಭಕ್ತಿಯಿಂದ ಪೂಜಿಸುತ್ತಾರೆ. ಕನ್ಯಾ ಸಂಕ್ರಾಂತಿಯಂದು ವಿಶ್ವಕರ್ಮನನ್ನು ಪೂಜಿಸಿದರೆ ಲೌಕಿಕ ಭೋಗಗಳು ಬೇಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

Vishwakarma Puja 2022: Date, Shubh Muhurat, History, Puja Vidhi & Rituals and Significance in kannada

ಕನ್ಯಾ ಸಂಕ್ರಾಂತಿ ಸಾಮಾನ್ಯವಾಗಿ ಭಾದ್ರಪದ ಮಾಸದ ಕೊನೆಯ ದಿನದಂದು ಬೀಳುತ್ತದೆ. ಇಂಗ್ಲೀಷ್ ಕ್ಯಾಲೆಂಡರ್‌ನಲ್ಲಿ ಇದು ಸೆಪ್ಟೆಂಬರ್ 16ರಿಂದ 18ರಲ್ಲಿ ಒಂದು ದಿನ ಇರುತ್ತದೆ. ಈ ವರ್ಷ ಸೆಪ್ಟೆಂಬರ್ 17ರಂದು ಈ ದಿನ ಇದೆ.

ಪೂಜಾ ಸಮಯ: ಸೆಪ್ಟೆಂಬರ್ 17, ಬೆಳಗ್ಗೆ 7:36ರಿಂದ ರಾತ್ರಿ 9:38ರವರೆಗೆ. ಇಲ್ಲಿ ವಿಶೇಷ ಎಂದರೆ ವಿಶ್ವಕರ್ಮ ಪೂಜೆಯ ದಿನವನ್ನು ಸೌರಮಾನ ಕ್ಯಾಲೆಂಡರ್‌ ಮೂಲಕ ನಿರ್ಧರಿಸಲಾಗುತ್ತದೆ. ಅದೇ, ಇತರ ಹಿಂದೂ ಹಬ್ಬಗಳ ದಿನ ಚಾಂದ್ರಮಾನ ಪಂಚಾಂಗವನ್ನು ನೋಡಿ ನಿರ್ಧರಿಸಲಾಗುತ್ತದೆ.

Mahalaya Amavasya 2022: ಮಹಾಲಯ ಅಮಾವಾಸ್ಯೆ, ಪಿತೃ ಪಕ್ಷದ ಕೊನೆಯಲ್ಲಿ ಬರುವ ಇದರ ವಿಶೇಷತೆ ಏನು?Mahalaya Amavasya 2022: ಮಹಾಲಯ ಅಮಾವಾಸ್ಯೆ, ಪಿತೃ ಪಕ್ಷದ ಕೊನೆಯಲ್ಲಿ ಬರುವ ಇದರ ವಿಶೇಷತೆ ಏನು?

ಪೂಜೆ ಹೇಗೆ?: ದಸರಾ ವೇಳೆ ಆಯುಧ ಪೂಜೆಗೂ ವಿಶ್ವಕರ್ಮ ಪೂಜೆಗೂ ತುಸು ಹೋಲಿಕೆ ಇದೆ. ಆಯುಧ ಪೂಜೆಯಂದು ಮಾಡಲಾಗುವಂತೆ ವಿಶ್ವಕರ್ಮ ಪೂಜೆಯಲ್ಲೂ ಎಲ್ಲಾ ಸಲಕರಣೆಗಳನ್ನು ಸ್ವಚ್ಛಗೊಳಿಸಿ ವಿಶ್ವಕರ್ಮನ ವಿಗ್ರಹದ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ತ್ರಿಪುರಾ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಶ್ವಕರ್ಮ ಪೂಜೆ ಹೆಚ್ಚು ನಡೆಯುತ್ತದೆ.

Vishwakarma Puja 2022: Date, Shubh Muhurat, History, Puja Vidhi & Rituals and Significance in kannada

ವಿಶ್ವಕರ್ಮ ಪೂಜಾ ಮಂತ್ರಗಳು
ಮಂತ್ರ 1:
ಓಂ ವಿಶ್ವಕರ್ಮಾಯ ನಮಃ
ಶಿಲ್ಪಕಾರಿ ನಮೋ ನಮಃ
ಮಂಗಲಕಾರಿ ನಮೋ ನಮಃ
ಚಕ್ರಧಾರಿ ನಮೋ ನಮಃ

ಮಂತ್ರ 2:
ಓಂ ಆಧಾರ ಶಕ್ತಪೆ ನಮಃ
ಓಂ ಕುಮಾಯಿ ನಮಃ
ಓಂ ಅನಂತಂ ನಮಃ
ಓಂ ಪೃಥ್ವಿಯಾಯ ನಮಃ

(ಒನ್ಇಂಡಿಯಾ ಸುದ್ದಿ)

English summary
Lord Vishwakarma, the chief architect of this world, had said to have built several cities, weapons for the Gods. He is revered in Hinduism as a God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X